ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಬಿಎಸ್-6 ಆಧಾರಿತ ಬಜಾಜ್ ಪಲ್ಸರ್ 150

ಬಜಾಜ್ ಸಂಸ್ಥೆಯಲ್ಲಿ ಮೋಟಾರ್‍‍ಸೈಕಲ್‍‍ಗಳಲ್ಲಿ ಪಲ್ಸರ್ ಬೈಕ್‍ಗಳು ಹೆಚ್ಚು ಜನಪ್ರೀಯತೆಯನ್ನು ಪಡೆಯುತ್ತಿದ್ದು, ಪ್ರತೀ ತಿಂಗಳ ಬೈಕ್ ಮಾರಾಟದಲ್ಲಿ ಸಂಸ್ಥೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬುಕ್ಕಿಂಗ್ ಪಡೆಯಲು ಸಹಾಯಾಕವಾಗಿದೆ. ಈ ನಿಟ್ಟಿನಲ್ಲಿ ಪಲ್ಸರ್ ಸರಣಿಯಲ್ಲಿನ ಎಂಟ್ರೀ ಲೆವೆಲ್ ಬೈಕ್ ಆದ ಪಲ್ಸರ್ 150 ಅನ್ನು ಬಿಎಸ್-6 ಎಂಜಿನ್ ಆಧಾರಿತ ಬೈಕ್ ಆಗಿ ಬಿಡುಗಡೆಗೊಳಿಸುವ ಯೊಜನೆಯಲಿದ್ದು, ಸಧ್ಯಕ್ಕೆ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಬಿಎಸ್-6 ಆಧಾರಿತ ಬಜಾಜ್ ಪಲ್ಸರ್ 150

ಮೇಲೆ ಹೇಳಿರುವ ಹಾಗೆ ಪಲ್ಸರ್ 150 ಬೈಕ್ ಸಂಸ್ಥೆಯಲ್ಲಿ ಹೆಚ್ಚಿನ ಜನಪ್ರೀಯತೆಯನ್ನು ಪಡೆದಿದ್ದು, ಕದಿಮೆ ಸಾಮರ್ಥ್ಯದ ಪರ್ಫಾರ್ಮೆನ್ಸ್ ಬೈಕ್‍ಗಳ ಮಾರಾಟದ ಹೊತ ದಾಖಲೆಯನ್ನು ಬರೆದಿತ್ತು. ಪಲ್ಸರ್ ಸರಣಿಯಲ್ಲಿ ಗ್ರಾಹಕರ ಬೇಡಿಕೆಯ ಅನುಸಾರ ಸಂಸ್ಥೆಯು ಕಾಲಕ್ಕೆ ತಕ್ಕ ಹಾಗೆ ಬದಲಾವಣೆಗಳನ್ನು ಮಾಡುತ್ತಿದ್ದು, ಇದೀಗ ಪಲ್ಸರ್ 150 ಬೈಕ್‍ಗೆ ಬಿಎಸ್-6 ಎಂಜಿನ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಬಿಎಸ್-6 ಆಧಾರಿತ ಬಜಾಜ್ ಪಲ್ಸರ್ 150

2020ರ ಹೊಸ ಬಜಾಜ್ ಪಲ್ಸರ್ 150 ಕಾರ್ಬ್ಯುರೇಟರ್‌ಗಳನ್ನು ಇಂಧನ-ಇಂಜೆಕ್ಷನ್ ಪರವಾಗಿ ಹೊರಹಾಕುವ ಕಾರ್ಯವನ್ನು ಮಾಡಲಿದ್ದು, ಇದು ಬಿಎಸ್-VI ಕಂಪ್ಲೈಂಟ್ ಆಗುವ ಸಾಮರ್ಥ್ಯವನ್ನು ನೀಡುತ್ತದೆ. ಜಿಗ್ ವ್ಹೀಲ್ಸ್ ವರದಿ ಪ್ರಕಾರ ಬಿಎಸ್-6 ಪಲ್ಸರ್ 150 ರೆಡ್ ಪೇಂಟ್ ಯೋಜನೆಯೊಂದಿಗೆ ನೀಡಲಾಗುವುದು.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಬಿಎಸ್-6 ಆಧಾರಿತ ಬಜಾಜ್ ಪಲ್ಸರ್ 150

ಹೊಸ ಬಿಎಸ್-6 ಎಂಜಿನ್ ಪಡೆಯುವುದಲ್ಲದೇ ಪಲ್ಸರ್ 150 ಬೈಕಿನಲ್ಲಿ ಮತ್ತಷ್ಟು ಬದಲಾವಣೆಗಳನ್ನು ಕಾಣಬಹುದಾಗಿದ್ದು, ಈ ಬಾರಿ ಮುಂಭಾಗದಲ್ಲಿ ಸ್ಟೀಲ್-ಬ್ರೈಡೆಡ್ ಫ್ರಂಟ್ ಬೆಕ್ ಲೈನ್ಸ್, ಗೋಲ್ಡ್ ಬಣ್ಣದಲ್ಲಿನ ಬ್ರೇಕ್ ಕ್ಯಾಲಿಪರ್‍‍ಗಳು ಮತ್ತು ಫೋರ್ಕ್‍ಗಳ ಮೇಲೆ ರಿಫ್ಲೆಕ್ಟರ್‍‍ಗಳನ್ನು ನೀಡಲಾಗಿದೆ. ಮತ್ತು ಇಂಜಿನ್‍ನ ಕೆಳಭಾಗದಲ್ಲಿಯೂ ಸಹ ಗುರುತರ ಬದಲಾವಣೆಗಳನ್ನು ಮಾಡಲಾಗಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಬಿಎಸ್-6 ಆಧಾರಿತ ಬಜಾಜ್ ಪಲ್ಸರ್ 150

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಬಜಾಜ್ ಪಲ್ಸರ್ 150 ಬೈಕ್ ಟಾಪ್ ಸ್ಪೆಕ್ ಮಾದರಿಯಲ್ಲವೆಂದು ಸಾಭೀತಾಗಿದ್ದು, ಈ ಬೈಕಿನ ಮುಂಭಾಗದ್ಲಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಂ ಬ್ರೇಕ್ ಅನ್ನು ಅಳವಡಿಸಲಾಗಿದೆ. ಹಾಗೆಯೆ ಮುಂಭಾಗದಲ್ಲಿ ಕನ್ವೆಷನಲ್ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಹಾಗು ಹಿಂಭಾಗದಲ್ಲಿ ಟ್ವಿನ್ ಗ್ಯಾಸ್-ಚಾರ್ಜ್ಡ್ ಶಾಕ್ ಅಬ್ಸಾರ್ಬರ್ ಅನ್ನು ನೀಡಲಾಗಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಬಿಎಸ್-6 ಆಧಾರಿತ ಬಜಾಜ್ ಪಲ್ಸರ್ 150

ಇಷ್ಟೆ ಅಲ್ಲದೆಯೆ ಬಜಾಜ್ ಸಂಸ್ಥೆಯು ತಮ್ಮ ಜನಪ್ರಿಯ ಪಲ್ಸರ್ 150 ಬೈಕಿಗೆ ಎಬಿಎಸ್ ಅನ್ನು ಕೂಡಾ ಅಳವಡಿಸಲಾಗಿದ್ದು, ಇದೀಗ ಅದೇ ಬೈಕಿಗೆ ಮತ್ತಷ್ಟು ಸುರಕ್ಷತೆಯನ್ನು ನೀಡಲು ಟ್ವಿನ್ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ. ಟ್ವಿನ್ ಡಿಸ್ಕ್ ಬ್ರೇಕ್ ಪಡೆದ ಹೊಸ ಬಜಾಜ್ ಪಲ್ಸರ್ 150 ಎಬಿಎಸ್ ಬೈಕ್ ಇದೀಗ ಡೀಲರ್‍‍ಗಳ ಬಳಿ ಕಾಣಿಸಿಕೊಂಡಿದ್ದು, ಶೀಘ್ರವೇ ಮಾರುಕಟ್ಟೆಯಲ್ಲಿ ಬಿಡಗಡೆಯಾಗಲಿದೆ ಎನ್ನಲಾಗಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಬಿಎಸ್-6 ಆಧಾರಿತ ಬಜಾಜ್ ಪಲ್ಸರ್ 150

ಬಜಾಜ್ ಪಲ್ಸರ್ 150, ಪಲ್ಸರ್ 220ಎಫ್ ಮತ್ತು ಅವೆಂಜರ್ ಕ್ರೂಸ್ ಬೈಕ್‍‍ಗಳಾ ಮಾದರಿಯಲ್ಲೆ, ಬಜಾಜ್ 150 ಬೈಕ್ ಸಿಂಗಲ್ ಚಾನಲ್ ಎಬಿಎಸ್ ಅನ್ನು ಪಡೆದುಕೊಂಡಿದೆ. ಹೊಸದಾಗಿ ಅಳವಡಿಸಲಾದ ಎಬಿಎಸ್ ಮತ್ತು ಟ್ವಿನ್ ಡಿಸ್ಕ್ ಬ್ರೇಕ್ ಅನ್ನು ಹೊರತು ಪಡಿಸಿ ಈ ಬೇರಾವ ಮಾರ್ಪಾಡುಗಳನ್ನು ಪಡೆದಿರುವುದಿಲ್ಲ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಬಿಎಸ್-6 ಆಧಾರಿತ ಬಜಾಜ್ ಪಲ್ಸರ್ 150

ಎಂಜಿನ್ ಸಾಮರ್ಥ್ಯ

ಹೊಸ ಬಜಾಜ್ ಪಲ್ಸರ್ 150 ಟ್ವಿನ್ ಡಿಸ್ಕ್ ಬ್ರೇಕ್, ಎಬಿಎಸ್ ಬೈಕ್ ಸಾಧಾರಣ ಬೈಕಿನಂತೆಯೆ 149ಸಿಸಿ, ಸಿಂಗಲ್ ಸಿಲೆಂಡರ್, ಏರ್ ಕೂಲ್ಡ್ ಎಂಜಿನ್ ಸಹಾಯದಿಂದ 14ಬಿಹೆಚ್‍ಪಿ ಮತ್ತು 13.4ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಬಿಎಸ್-6 ಆಧಾರಿತ ಬಜಾಜ್ ಪಲ್ಸರ್ 150

ಬಜಾಜ್ ಪಲ್ಸರ್ 150 ಎಬಿಎಸ್, ಟ್ವಿನ್ ಡಿಸ್ಕ್ ಬ್ರೇಕ್ ಬೈಕ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೋನೊಶಾಕ್ ಅನ್ನು ಅಳವಡಿಸಲಾಗಿದೆ. ಇಷ್ಟೆ ಅಲ್ಲದೇ ರೈಡರ್‍‍ಗಳ ಸುರಕ್ಷತೆಗಾಗಿ ಮುಂಭಾಗದಲ್ಲಿ 260ಎಂಎಂ ಹಿಂಭಾಗದಲ್ಲಿ 230ಎಂಎಂ ಡಿಸ್ಕ್ ಬ್ರೇಕ್, ಸಿಂಗಲ್ ಚಾನಲ್ ಎಬಿಎಸ್ ಟೆಕ್ನಾಲಜಿ ಮತ್ತು ರಿಯರ್ ಲಿಫ್ಟ್ ಪ್ರೊಟೆಕ್ಷನ್ ಅನ್ನು ನೀಡಲಾಗಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಬಿಎಸ್-6 ಆಧಾರಿತ ಬಜಾಜ್ ಪಲ್ಸರ್ 150

ಎಬಿಎಸ್ ಅನ್ನು ಅಳವಡಿಸಿದ ಕಾರಣ ಬಜಾಜ್ ಪಲ್ಸರ್ 150 ಬೈಕಿನ ಬೆಲೆಯಲ್ಲಿ ಸುಮಾರು ರೂ.2000 ರಿಂದ ರೂ.3000 ಬೆಲೆ ಹೆಚ್ಚಾಗಿರಲಿದ್ದು, ಪಲ್ಸರ್ 150 ಟ್ವಿನ್ ಡಿಸ್ಕ್ ಬ್ರೇಕ್ ವೇರಿಯಂಟ್ ಬೈಕಿನ ಬೆಲೆಯು ರೂ. 80,794 ಬೆಲೆಯನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

Most Read Articles

Kannada
English summary
Bajaj Working On BS-VI-Compliant Pulsar Range — New Pulsar 150 Spied Testing Ahead Of Launch. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X