ಬಿಎಸ್-6 ಎಂಜಿನ್ ಆಧಾರಿತ ಹೋಂಡಾ ಆಕ್ಟಿವಾ 6ಜಿ ಹೇಗಿರಲಿದೆ ಗೊತ್ತಾ.?
ಹೋಂಡಾ ಆಕ್ಟೀವಾ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಸ್ಕೂಟರ್ ಆಗಿದ್ದು, ಪ್ರಸ್ತುತ ಮಾರಾಟವಾಗುತ್ತಿರುವ ಹೋಂಡಾ ಆಕ್ಟಿವಾ 5ಜಿ ಸ್ಕೂಟರ್ ಅನ್ನು 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಬಿಡುಗಡೆಗೊಳಿಸಲಾಗಿತ್ತು. ಹೋಂಡಾ ಸಂಸ್ಥೆಯು ಈಗಾಗಲೆ ಬಿಎಸ್-6 ಎಂಜಿನ್ ಆಧಾರಿತ ಆಕ್ಟೀವಾ 6ಜಿ ಸ್ಕೂಟರ್ ತಯಾರಿಯಲ್ಲಿದ್ದು, ಶೀಘ್ರವೇ ಮಾರುಕಟ್ಟೆಯಲ್ಲಿ ಎಂಟ್ರಿ ನೀಡಲು ಸಜ್ಜುಗೊಳುತ್ತಿದೆ.

ಇದೀಗ ಇಂಡಿಯನ್ ಆಟೋಸ್ ಬ್ಲಾಗ್‍ನ ಡಿಸೈನರ್ ಒಬ್ಬರು ಬಿಡುಗಡೆಗೊಳ್ಳಲಿರುವ ಹೋಂಡಾ ಆಕ್ಟೀವಾ 6ಜಿ ಸ್ಕೂಟರ್ ಹೇಗಿರಬಹುದು ಎಂದು ಒಂದು ರೆಂಡರ್ ಚಿತ್ರವನ್ನು ತಯಾರು ಮಾಡಲಾಗಿದೆ. ರೆಂಡರ್ ಮಾಡಿದ ಚಿತ್ರವನ್ನು ಗಮನಿಸಿದ್ದಲ್ಲಿ, ಈ ಬಾರಿ ಸ್ಕೂಟರ್‍ನಲ್ಲಿ ಹಲವಾರು ಗುರುತರ ಬದಲಾವಣೆಗಳನ್ನು ಕಾಣಬಹುದಾಗಿದ್ದು, ಈ ಕುರಿತಾಪ ಮಾಹಿತಿಯನ್ನು ತಿಳಿಯಲು ಮುಂದಕ್ಕೆ ಓದಿರಿ..

ಚಿತ್ರದ ವಿಷಯಕ್ಕೆ ಬಂದರೆ ಹೊಸ ಹೋಂಡಾ ಆಕ್ಟೀವಾ 6ಜಿ ಸ್ಕೂಟರ್ ಆಕ್ಟೀವಾ 110ಸಿಸಿ ಸ್ಕೂಟರ್‍ನಿಂದ ಪಡೆದ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್, ಸ್ಪ್ರಿಂಗ್ ಲೋಡೆಡ್ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್ ಅನ್ನು ನೀಡಲಾಗಿದ್ದು, ಮಾರುಕಟ್ಟೆಯಲ್ಲಿ ತನ್ನ ಎದುರಾಳಿಯಾದ ಟಿವಿಎಸ್ ಜುಪಿಟರ್ ಸ್ಕೀಟರ್‍ಗೆ ಟಾಂಗ್ ನೀಡಲು ಸಿದ್ಧವಾಗುವ ಹಾಗೆ ಕಾಣಿಸುತ್ತದೆ.

ಆದರೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೋಂಡಾ ಆಕ್ಟೀವಾ 6ಜಿ ಸ್ಕೂಟರ್‍ನಲ್ಲಿ ಈ ಬಾರಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಅನ್ನು ನೀಡಲಾಗಿದ್ದು, ಈ ಅಪ್ಡೇಟ್ ಅನ್ನು ಆಕ್ಟೀವಾ ಪ್ರಿಯರು ಬಹಳ ದಿನಗಳಿಂದ ಕಾಯುತ್ತಿದ್ದರು ಎಂದರೆ ತಪ್ಪಾಗುವುದಿಲ್ಲ. ಈ ಅಪ್ಡೇಟ್ ಕಳಪೆ ರಸ್ತೆಯಲ್ಲಿ ಹಾಗು ಬ್ರೇಕಿಂಗ್ ಸಿಸ್ಟಂಗಾಗಿ ಉತ್ತಮವೆಂದು ಹೇಳಬಹುದು.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಸ್ಕೂಟರ್ ಅನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಆದರೆ ಸಿಕ್ಕ ಮಾಹಿತಿಗಳ ಪ್ರಕಾರ ಈ ಬಾರಿ ಎಲ್ಇಡಿ ಲೈಟ್ಸ್ ಮತ್ತು ಎಲ್ಇಡಿ ಡಿಆರ್‍ಎಲ್, ಮುಂಭಾಗದಲ್ಲಿ ಡಿಸ್ಕ್ ಬ್ರೆಕ್, ಹಿಂಭಾಗದಲ್ಲಿ ಡ್ರಂ ಬ್ರೇಕ್ ಮತ್ತು ಸಿಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದೆ.

ಹೊಸದಾಗಿ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಸಹ ಒದಗಿಸಲಾಗಿದ್ದು, ಇದರಲ್ಲಿನ ದೊಡ್ಡ ಗಾತ್ರದ ಎಲ್‍ಸಿಡಿ ಡಿಜಿಟಲ್ ಡಿಸ್ಪ್ಲೇಯಲ್ಲಿ ಪ್ಯುಯಲ್ ಲೆವೆಲ್, ಟ್ರಿಪ್ ಮೀಟರ್ ಮತ್ತು ಚಾಲಕನಿಗೆ ಬೇಕಾದ ಎಲ್ಲಾ ಮಾಹಿತಿಯನ್ನು ನೀವಿಲ್ಲಿ ಹೊಸ ಆಕ್ಟೀವಾ 6ಜಿ ಸ್ಕೂಟರ್ ಪಡೆದುಕೊಂಡಿದೆ.
MOST READ: ಹೊಸ ವಾಹನ ಖರೀದಿದಾರರೇ ಇತ್ತ ಗಮನಿಸಿ- ದೇಶಾದ್ಯಂತ ವಾಹನಗಳ ನೋಂದಣಿಗೆ ಬಿದ್ದಿದೆ ಬ್ರೇಕ್..!

ಇದೀಗ ಮಾಲಿನ್ಯವನ್ನು ತಡೆಯುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೊಸ ನಿಯಮವನ್ನು ಅನುಷ್ಠಾನ ತರಲು ಮುಂದಾಗುತ್ತಿರುವ ಕೇಂದ್ರ ಸಾರಿಗೆ ಇಲಾಖೆಯು ಏಪ್ರಿಲ್ 1, 2019ರಿಂದ ಅನ್ವಯವಾಗುವಂತೆ ಬಿಎಸ್-4 ಎಂಜಿನ್‌ಗಳನ್ನು ಸಹ ನಿಷೇಧಗೊಳಿಸಿ ಸುಧಾರಿತ ಮಾದರಿಯ ಬಿಎಸ್-6 ಎಂಜಿನ್ ಜಾರಿಗೆ ತರಲು ಸಜ್ಜಾಗುತ್ತಿದೆ. ಹೀಗಾಗಿ ಹೊಸ ನಿಯಮಗಳಿಗೆ ಅನುಗುಣವಾಗಿ ಆಟೋ ಉತ್ಪಾದನಾ ಸಂಸ್ಥೆಗಳು ಸಹ ಭವಿಷ್ಯದ ವಾಹನಗಳನ್ನು ಬಿಎಸ್-6 ಪ್ರೇರಣೆಯೊಂದಿಗೆ ಅಭಿವೃದ್ಧಿಗೊಳಿಸುತ್ತಿವೆ.

ಹೋಂಡಾ ಇಂಡಿಯಾ ಸಹ ಇದೇ ನಿಟ್ಟಿನಲ್ಲಿ ತನ್ನ ಜನಪ್ರಿಯ ಸ್ಕೂಟರ್ ಮಾದರಿಯಾದ ಆಕ್ಟಿವಾ ಮಾದರಿಗಳನ್ನು ಉನ್ನತಿಕರಣ ಮಾಡುತ್ತಿದ್ದು, ಮುಂಬರುವ 2019ರ ವೇಳೆಗೆ ಬಿಡುಗಡೆಯಾಗಲಿರುವ ಆಕ್ಟಿವಾ 6ಜಿ ಸ್ಕೂಟರ್ ಅನ್ನು ಬಿಎಸ್-6 ಪ್ರೇರಿತ ಫ್ಯೂಲ್ ಇಂಜೆಕ್ಟೆಡ್ ಎಂಜಿನ್‌ನೊಂದಿಗೆ ಬಿಡುಗಡೆಗಾಗಿ ಸಜ್ಜುಗೊಳಿಸಿದೆ.
MOST READ: ಎರಡು ವರ್ಷದಲ್ಲಿ 300ಕ್ಕು ಹೆಚ್ಚು ಡೀಲರ್‍ಶಿಪ್‍ಗಳು ಬಂದ್..! ಇದಕ್ಕೆ ಕಾರಣ.?

ಇದರಿಂದ ಹೊಸ ಸ್ಕೂಟರ್ ಮೈಲೇಜ್ ಮತ್ತು ಎಂಜಿನ್ ಕಾರ್ಯಕ್ಷಮತೆ ಸಾಕಷ್ಟು ಸುಧಾರಣೆಯಾಗಿದ್ದು, ಮೂಲಗಳ ಪ್ರಕಾರ ಹೊಸ ಎಂಜಿನ್ ಜೋಡಣೆಯಿಂದಾಗಿ ಆಕ್ಟಿವಾ 6ಜಿ ಸ್ಕೂಟರ್ ಮೈಲೇಜ್ ಪ್ರಮಾಣವು ಆಕ್ಟಿವಾ 5ಜಿ ಸ್ಕೂಟರ್ ಮೈಲೇಜ್‌ಗಿಂತಲೂ ಶೇ.10ರಷ್ಟು ಹೆಚ್ಚಳವಾಗಲಿದೆ ಎನ್ನಲಾಗಿದೆ.


Click it and Unblock the Notifications








