ಹೊಸ ಬಣ್ಣದೊಂದಿಗೆ ಬಿಡುಗಡೆಯಾಗಲಿದೆ ಬಿಎಸ್-6 ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350
ರಾಯಲ್ ಎನ್‍ಫೀಲ್ಡ್ ಕಂಪನಿಯು ತನ್ನ ಹೊಸ ಕ್ಲಾಸಿಕ್ 350 ಬೈಕ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೊಸ ಬಣ್ಣವನ್ನು ಹೊಂದಿರುವ ಹೊಸ ಕ್ಲಾಸಿಕ್ 350 ಬೈಕಿನ ಸ್ಪೈ ಚಿತ್ರವನ್ನು ರಶ್‍ಲೇನ್ ಬಹಿರಂಗಪಡಿಸಿದೆ.

ರಾಯಲ್ ಎನ್‍ಫೀಲ್ಡ್ ಬುಲೆಟ್ ಕ್ಲಾಸಿಕ್ 350 ಬೈಕ್ ಬ್ರ್ಯಾಂಡ್‍ನ ಸರಣಿಯಲ್ಲಿ ಹೆಚ್ಚು ಮಾರಾಟವಾಗುವ ಬೈಕ್‍ಗಳಲ್ಲಿ ಒಂದಾಗಿದೆ. ಆದರೆ ಆಟೋಮೊಬೈಲ್ ಕ್ಷೇತ್ರದ ಕುಸಿತ ಕಂಡಿರುವ ಹಿನ್ನಲೆಯಲ್ಲಿ ಮಾರಾಟದಲ್ಲಿ ಕುಸಿತ ಕಂಡಿದೆ. ಫ್ಯೂಯಲ್ ಇಂಜೆಕ್ಷನ್ ತಂತ್ರಜ್ಞಾನದ ಸೇರ್ಪಡೆಯೊಂದಿಗೆ 350 ಸಿಸಿ ಸರಣಿಯಲ್ಲಿ ಬಿಎಸ್-6 ಎಂಜಿನ್ ಅನ್ನು ಬಿಡುಗಡೆಗೊಳಿಸಲು ಕಂಪನಿಯು ಸಜ್ಜಾಗಿದೆ.

ರಾಯಲ್ ಎನ್ಫೀಲ್ಡ್, ಕ್ಲಾಸಿಕ್ 350 ಬೈಕಿನಲ್ಲಿ ಹೊಸದಾಗಿ ಅಲಾಯ್ ವ್ಹೀಲ್‍ಗಳನ್ನು ಅಳವಡಿಸಲಿದೆ. ಇದರ ಜೊತೆಯಲ್ಲಿ ಕ್ಲಾಸಿಕ್ 350 ಬೈಕ್ ಅನ್ನು ಹೊಸ ಬಣ್ಣಗಳಗಳಲ್ಲಿ ಬಿಡುಗಡೆಗೊಳಿಸಲಿದೆ. ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಇನ್ನೂ ಮುಂದೆ ಕಲರ್‍ಫುಲ್ ಆಗಿರಲಿದೆ.

ಕ್ಲಾಸಿಕ್ 350 ಬೈಕಿನಲ್ಲಿ ಗನ್‍ಮೆಟಲ್ ಗ್ರೇ ಆವೃತ್ತಿಯಲ್ಲಿ ಅಲಾಯ್ ವ್ಹೀಲ್‍ಗಳನ್ನು ಅಳವಡಿಸಲಾಗುವುದು. ಸ್ಟೆಲ್ತ್ ಬ್ಲ್ಯಾಕ್ ಕ್ಲಾಸಿಕ್ 350 ಆವೃತ್ತಿಯಲ್ಲಿ ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಳಿಸಲಾಗುತ್ತದೆ.

ಇನ್ನೂ ಸ್ಟೆಲ್ತ್ ಬ್ಲ್ಯಾಕ್ 350 ಆವೃತ್ತಿಯಲ್ಲಿ ಅಲಾಯ್ ವ್ಹೀಲ್‍ನೊಂದಿಗೆ ಕೆಲವು ಸ್ಟಿಕ್ಕರ್ ಅಪ್‍ಡೇಟ್‍ಗಳನ್ನು ಮಾಡಲಾಗುವುದು. ಹೊಸ ಬೈಕಿನಲ್ಲಿ ಟ್ಯಾಕ್ ಸ್ಟ್ರೀಪ್ಸ್, ರಾಯಲ್ ಎನ್‍ಫೀಲ್ಡ್ ಲೋಗೋ ಮತ್ತು ರೆಡ್ ಬಣ್ಣದ ಸೆಂಟರ್ ಕೌಲ್ ಅನ್ನು ಹೊಂದಿರಲಿದೆ.

ರಾಯಲ್ ಎನ್‍ಫೀಲ್ಡ್ ಕಂಪನಿಯ ಬೈಕುಗಳ ಮಾರಾಟದಲ್ಲಿ ಕುಸಿತವಾಗಿದೆ. ಅತಿ ಹೆಚ್ಚು ಮಾರಾಟವಾಗುವ 350 ಸಿಸಿ ಸರಣಿಯ ಬೈಕುಗಳ ಮಾರಾಟದಲ್ಲಿ ಇಳಿಕೆಯಾಗಿದೆ. ಪ್ರೀಮಿಯಂ ಫೀಚರ್ಸ್‍ಗಳಿಗಾಗಿ ಹೆಚ್ಚಿದ ಸ್ಪರ್ಧೆಯಿಂದಾಗಿ ರಾಯಲ್ ಎನ್‍ಫೀಲ್ಡ್ ಹೆಚ್ಚಿನ ನವೀಕರಣಗಳನ್ನು ನಡೆಸುತ್ತಿದೆ.

ದೇಶಿಯ ಮಾರುಕಟ್ಟೆಯಲ್ಲಿ ಕ್ಲಾಸಿಕ್ 350 ಬೈಕ್ ಮಾರಾಟವನ್ನು ಹೆಚ್ಚಿಸಲು ರಾಯಲ್ ಎನ್‍ಫೀಲ್ಡ್ ಹೊಸ ಪ್ರಯತ್ನ ಮಾಡುತ್ತಿದೆ. ಇತ್ತೀಚಿಗೆ ಬಿಡುಗಡೆಯಾದ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಸಿಂಗಲ್ ಸೀಟ್ ಬೈಕು 346 ಸಿಸಿ ಸಿಂಗಲ್ ಸಿಲಿಂಡರ್ ಏರ್‍ಕೂಲ್ಡ್ ಎಂಜಿನ್ 5,250 ಆರ್‌ಪಿಎಂನಲ್ಲಿ 19.80 ಬಿಹೆಚ್‌ಪಿ ಪವರ್ ಮತ್ತು 4,000 ಆರ್‌ಪಿಎಂನಲ್ಲಿ 28 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ನವೆಂಬರ್ ತಿಂಗಳಲ್ಲಿ ಮಾರಾಟವಾದ ರಾಯಲ್ ಎನ್‍ಫೀಲ್ಡ್ ಬೈಕ್‍ಗಳೆಷ್ಟು ಗೊತ್ತಾ?

ಈ ಎಂಜಿನ್‍ನೊಂದಿಗೆ 4 ಸ್ಪೀಡ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ಪ್ರಕಾರ ರೂ.1.64 ಲಕ್ಷಗಳಾಗಿದೆ.
MOST READ: ಕಳ್ಳತನವಾಗಿದ್ದ ಕಾರು ಫಾಸ್ಟ್‌ಟ್ಯಾಗ್‌ನಿಂದಾಗಿ ವಾಪಸ್ ಸಿಕ್ಕಿದ್ದೆ ಒಂದು ರೋಚಕ

ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 500 ಬೈಕಿಗೆ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.2.17 ಲಕ್ಷಗಳಾಗಿದೆ. ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುವುದರಿಂದ 500 ಸಿಸಿ ಸರಣಿಯ ಬೈಕ್‍ಗಳನ್ನು ಸ್ಥಗಿತಗೊಳಿಸಲಾಗುತ್ತದೆ.
MOST READ: ದುಬಾರಿ ಬೆಂಝ್ ಕಾರನ್ನು ಹೆಲಿಕಾಪ್ಟರ್ ಮೂಲಕ ಪುಡಿ ಮಾಡಿದ ಭೂಪ

ಹೊಸ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಬೈಕ್ ಅನ್ನು ಸ್ಪಾಟ್ ಟೆಸ್ಟ್ ನಡೆಸಲಾಗಿದೆ. ಈ ಬೈಕಿನ ಟ್ಯಾಂಕ್‍ನಲ್ಲಿ ಹೊಸ ಲೊಗೊ ವಿನ್ಯಾಸ, ಮ್ಯಾಟ್ ಬ್ಲ್ಯಾಕ್ ಎಂಜಿನ್ ಹೊಂದಿರಲಿದೆ ಎಂದು ಸ್ಪೈ ಚಿತ್ರಗಳು ಬಹಿರಂಗಪಡಿಸುತ್ತದೆ. ಪ್ರಸ್ತುತ ಕ್ಲಾಸಿಕ್ 350 ಬೈಕ್‍ಗಿಂತ ಬೆಲೆಯು ತುಸು ಹೆಚ್ಚಿರಲಿದೆ.


Click it and Unblock the Notifications