ಬಹಿರಂಗವಾಯ್ತು ಬಿಎಸ್-6 ಜಿಕ್ಸರ್ 250, ಎಸ್‍ಎಫ್ 250 ಬೈಕ್‍ಗಳ ಮಾಹಿತಿ
ಸುಜುಕಿ ಮೋಟಾರ್‍ಸೈಕಲ್ ಇತ್ತೀಚೆಗೆ ಬಿಡುಗಡೆ ಮಾಡಿದ ಜಿಕ್ಸರ್ 250, ಎಸ್‍ಎಫ್ 250 ಬೈಕ್‍ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ನವೀಕರಿಸುವ ಕಾರ್ಯದಲ್ಲಿ ಕಂಪನಿ ನಿರತವಾಗಿದೆ. ಮುಂಬರುವ ಬಿಎಸ್-6 ಮಾಲಿನ್ಯ ನಿಯಮಕ್ಕೆ ತಕ್ಕಂತೆ ಜಪಾನಿನ ಬೈಕ್ ತಯಾರಕ ಕಂಪನಿಯಾದ ಸುಜುಕಿ ಮೋಟಾರ್‍ಸೈಕಲ್ ತನ್ನ ಜಿಕ್ಸರ್ 250 ಮತ್ತು ಜಿಕ್ಸರ್ ಎಸ್‍ಎಫ್ 250 ಮಾದರಿಗಳನ್ನು ನವೀಕರಿಸುತ್ತಿವೆ.

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಮುನ್ನ ಐಎಬಿ ಅನ್‍ಲೈನ್‍ನಲ್ಲಿ ಹೊಸ ದಾಖಲೆಗಳು ಸೋರಿಕೆಯಾಗಿದೆ. ದೇಶಿಯ ಮಾರುಕಟ್ಟೆಗಾಗಿ ನವೀಕರಿಸಿದ ಜಿಕ್ಸರ್ ಟ್ವಿನ್ಸ್ ಬೈಕ್‍ಗಳ ಕೆಲವು ಪ್ರಮುಖ ಮಾಹಿತಿಗಳು ಬಹಿರಂಗವಾಗಿವೆ. ಇದರಿಂದ ಹೊಸ ಬೈಕ್‍ಗಳ ಕೆಲವು ಮಾಹಿತಿಗಳು ತಿಳಿದುಬಂದಿದೆ.

ಸೋರಿಕೆಯಾದ ದಾಖಲೆಯ ಮಾಹಿತಿಯ ಪ್ರಕಾರ ಸುಜಿಕಿ ಜಿಕ್ಸರ್ 250 ಮತ್ತು ಎಸ್‍ಎಫ್ 250 ಬಿಎಸ್-6 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿರಲಿದೆ. ಈ ಎಂಜಿನ್ 9000 ಆರ್‍ಪಿಎಂನಲ್ಲಿ 25.7 ಬಿಎಚ್‍ಪಿ ಪವರ್ ಉತ್ಪಾದಿಸುತ್ತದೆ. ಈ ಎಂಜಿನ್ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಪ್ರಸ್ತುತ ಮಾದರಿಯಲ್ಲಿರುವ ಎಂಜಿನ್‍ಗಿಂತ ಒಂದು ಬಿಎಚ್‍ಪಿ ಕಡಿಮೆಯಾಗಿದೆ. ಎರಡು ಬೈಕ್‍ಗಳಲ್ಲಿ ಪ್ರಸ್ತುತ ಇರುವ ಸ್ಟ್ಯಾಂಡರ್ಡ್ 6 ಸ್ಪೀಡ್ ಗೇರ್‍ಬಾಕ್ಸ್ ಅನ್ನು ಮುಂದುವರೆಸಲಿದೆ.

ಹೊಸ ಸುಜುಕಿ ಜಿಕ್ಸರ್‍ನಲ್ಲಿ ಎಂಜಿನ್ ನವೀಕರಣ ಹೊರತುಪಡಿಸಿ ಬೇರೆ ಯಾವುದೇ ಬದಲಾವಣೆಗಳು ಕಂಡುಬಂಡಿಲ್ಲ. ಎರಡು ಬೈಕ್‍ಗಳು ಪ್ರಸ್ತುತ ಮಾದರಿಯ ವಿನ್ಯಾಸ, ವೈಶಿಷ್ಟ್ಯಗಳು ಮತ್ತು ಉಪಕರಣಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

ಸುಜುಕಿ ಜಿಕ್ಸರ್ 250 ನೇಕೆಡ್ ಸ್ಟ್ರೀಟ್‍ಫೈಟರ್ ಆಗಿದ್ದರೆ, ಎಸ್‍ಎಫ್ 250 ಬೈಕ್ ಫೇರ್ಡ್ ಆವೃತ್ತಿಯಾಗಿದೆ. ಎರಡೂ ಬೈಕ್‍ಗಳು ಎಲ್‍ಇಡಿ ಹೆಡ್‍ಲ್ಯಾಂಪ್‍ಗಳು, ಎಲ್‍ಇಡಿ ಟೈಲ್‍ಲೈಟ್‍ಗಳು, ಎಲ್‍ಸಿಡಿ ಡಿಜಿಟಲ್ ಎನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಇತರ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಪ್ರಸ್ತುತ ನೇಕೆಡ್ ಆವೃತ್ತಿಯ ಸುಜುಕಿ ಜಿಕ್ಸರ್ 250 ಹೊಸದಾಗಿ ವಿನ್ಯಾಸಗೊಳಿಸಲಾದ ಟ್ಯಾಂಕಿನ ಮೇಲೆ ವಿಶಿಷ್ಟವಾದ ಬಾಡಿ ಗ್ರಾಫಿಕ್ಸ್ ಗಳಿದ್ದು, ಇದರ ಜೊತೆಗೆ ಒವಲ್ ಶೇಪಿನ ಎಲ್ಇಡಿ ಹೆಡ್‌ಲ್ಯಾಂಪ್ ಯೂನಿಟ್‍ಗಳಿವೆ. ಜಿಕ್ಸರ್ 250 ಬೈಕಿನಲ್ಲಿ ಟಯರ್ ಹಗ್ಗರ್, ಸ್ಪ್ಲಿಟ್ ಸೀಟ್, ಕಪ್ಪು ಬಣ್ಣದ ಅಲಾಯ್ ವ್ಹೀಲ್ ಹಾಗೂ ಕ್ರೋಮ್ ಅಂಶಗಳನ್ನು ಹೊಂದಿರುವ ಡ್ಯುಯಲ್ ಮಫ್ಲರ್ ಅಂಶಗಳಿವೆ.

ಸುಜುಕಿ ಜಿಕ್ಸರ್ 250 ಮತ್ತು ಎಸ್‍ಎಫ್ 250 ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‍ಗಳು ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಸಸ್ಪೆಂಷನ್ ಅನ್ನು ಹೊಂದಿದೆ. ಬ್ರೈಕಿಂಗ್ ಸಿಸ್ಟಂ ಉತ್ತಮವಾಗಿದ್ದು, ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‍ಗಳನ್ನು ಅಳವಡಿಸಿದ್ದಾರೆ. ಸ್ಟ್ಯಾಂಡರ್ಡ್ ಡ್ಯುಯಲ್ ಚಾನೆಲ್ ಎಬಿಎಸ್ ಸಿಸ್ಟಂ ಅನ್ನು ಅಳವಡಿಸಿದ್ದಾರೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಸುಜುಕಿ ಜಿಕ್ಸರ್ 250 ಬೈಕಿಗೆ ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.09 ಲಕ್ಷ ದರ ಹೊಂದಿದ್ದರೆ, ಜಿಕ್ಸರ್ ಎಸ್‍ಎಫ್ 250 ಬೈಕ್ ತುಸು ದುಬಾರಿಯಾಗಿದ್ದು ರೂ.1.70 ಲಕ್ಷ ದರವನ್ನು ಹೊಂದಿದೆ. ನವೀಕರಿಸಿದ ಹೊಸ ಜಿಕ್ಸರ್ 250 ಮತ್ತು ಎಸ್‍ಎಫ್ 250 ಬೈಕ್‍ಗಳಿಗೆ ಪ್ರಸ್ತುತ ಮಾದರಿಗಳಿಗಿಂತ ಸ್ವಲ್ಪ ಹೆಚ್ಚಿನ ಬೆಲೆ ಹೊಂದಿರಲಿದೆ ಎಂದು ನಿರೀಕ್ಷಿಸುತ್ತೇವೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಸುಜುಕಿ ಜಿಕ್ಸರ್ 250 ಮತ್ತು ಎಸ್‍ಎಫ್ 250 ಅನ್ನು ಇತ್ತೀಚೆಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ಎರಡು ಬೈಕ್‍ಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ತಕ್ಕಂತೆ ಎಂಜಿನ್ ಅನ್ನು ನವೀಕರಿಸಲಾಗುತ್ತಿವೆ. ಈ ಎರಡು ಬೈಕ್‍ಗಳು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕೆಟಿಎಂ ಡ್ಯೂಕ್ 250, ಬಜಾಜ್ ಪಲ್ಸರ್ ಆರ್‍ಎಸ್ 200 ಮತ್ತು ಟಿವಿಎಸ್ ಅಪಾಚೆ ಆರ್‍ಆರ್ 310 ಬೈಕ್‍ಗಳಿಗೆ ಪೈಪೋಟಿಯನ್ನು ನೀಡಲಿದೆ.
Source: IAB


Click it and Unblock the Notifications