ಮಾರುಕಟ್ಟೆಗೆ ಲಗ್ಗೆಯಿಟ್ಟ ಸುಜುಕಿ ಜಿಕ್ಸರ್ 250 ಮತ್ತು ಜಿಕ್ಸರ್ ಎಸ್ಎಫ್ 150 ಬೈಕ್‍ಗಳು
ಸುಜುಕಿ ಮೋಟಾರ್‍ಸೈಕಲ್ಸ್ ಇಂಡಿಯಾ ಸಂಸ್ಥೆಯು ಮಾರುಕಟ್ಟೆಯಲ್ಲಿ ಕಡಿಮೆ ಸಾಮರ್ಥ್ಯವುರುವ ಬೈಕ್‍ಗಳ ಬೇಡಿಕೆಗೆ ಅನುಸಾರವಾಗಿ ಇಂದು ತಮ್ಮ ಜಿಕ್ಸರ್ ಸರಣಿಯಲ್ಲಿ 250ಸಿಸಿ ಮತ್ತು 150ಸಿಸಿ ಬೈಕ್‍ಗಳನ್ನು ಬಿಡುಗಡೆ ಮಾಡಲಾಗಿದೆ. ಈಗಾಗಲೇ ಜಿಕ್ಸರ್ ಸರಣಿಯಲ್ಲಿ ಹಲವಾರು ಬೈಕ್‍ಗಳಿದ್ದು ಇದೀಗ ಈ ಸರಣಿಯಲ್ಲಿ ಮತ್ತೆರಡು ಹೊಸ ಬೈಕ್‍ಗಳು ಜೋಡಣೆಯಾಗಿದೆ.

ಸುಜುಕಿ ಮೋಟಾರ್‍ಸೈಕಲ್ ಬಿಡುಗಡೆ ಮಾಡಿದ ಬೈಕ್‍ಗಳಲ್ಲಿ ಒಂದಾದ ಜಿಕ್ಸರ್ 250 ಎಸ್ಎಫ್ ಬೈಕ್ ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 1.70 ಲಕ್ಷದ ಬೆಲೆಯನ್ನು ಹಾಗು ಮತ್ತೊಂದು ಬೈಕ್ ಆದ ಜಿಕ್ಸರ್ 150 ಎಸ್ಎಫ್ ಬೈಕ್ ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 1.10 ಲಕ್ಷದ ಮಾರಾಟದ ಬೆಲೆಯನ್ನು ಪಡೆದುಕೊಂಡಿದೆ. ಈ ಎರಡು ಬೈಕ್‍ಗಳನ್ನು ಸುಜುಕಿ ಮೋಟಾರ್‍ಸೈಕಲ್ ಸಂಸ್ಥೆಯು ದೆಹಲಿಯಲ್ಲಿನ ನೋಯ್ಡಾನಲ್ಲಿ ಆದ್ದೂರಿಯಾಗಿ ಬಿಡುಗಡೆ ಮಾಡಲಾಗಿದೆ.

ಸುಜಿಕಿ ಜಿಕ್ಸರ್ 125 ಬೈಕ್‍ಗಳು ಈಗಾಗಲೆ ಮಾರುಕಟ್ಟೆಯಲ್ಲಿರುವ ಯಮಹಾ ಫ್ರೇಜರ್ 25, ಹೋಂಡಾ ಸಿಬಿಆರ್ 250ಆರ್, ಬಜಾಜ್ ಪಲ್ಸರ್ ಆರ್‍ಎಸ್ 200 ಮತ್ತು ಕೆಟಿಎಂ ಆರ್‍ಸಿ200 ಬೈಕ್‍ಗಳಿಗೆ ಪೈಪೋಟಿ ನೀಡಿದ್ದಲ್ಲಿ. ಇನ್ನು ಜಿಕ್ಸರ್ 150ಎಸ್ಎಫ್ ಬೈಕ್ ಮಾರುಕಟ್ಟೆಯಲ್ಲಿರುವ ಯಮಹಾ ಎಫ್‍ಜೆಡ್-16 ಹಾಗು ಆರ್15 ಬೈಕ್‍ಗಳಿಗೆ ಪೈಪೋಟಿಯನ್ನು ನೀಡಲಿದೆ.

ಹೊಸ ಬೈಕ್‍ಗಳ ವಿನ್ಯಾಸ
ಸುಜುಕಿ ಜಿಕ್ಸರ್ 150 ಎಸ್ಎಫ್ ಬೈಕ್ ಈ ಬಾರಿ ಚೂಪಾದ ವಿನ್ಯಾಸವನ್ನು ಪಡೆದುಕೊಂಡಿದ್ದು, ಹೊಸದಾಗಿ ಸ್ಪ್ಲಿಟ್ ಸೀಟ್ಸ್ ಮತ್ತು ಕ್ಲಿಪ್ ಆನ್ ಹ್ಯಾಂಡಲ್‍ಬಾರ್ ಅನ್ನು ಪಡೆದುಕೊಂಡಿದೆ. ಇನ್ನು ಜಿಕ್ಸರ್ 250 ಎಸ್ಎಫ್ ಬೈಕಿನ ವಿನ್ಯಾಸದ ಬಗ್ಗೆ ಹೇಳುವುದಾದ್ರೆ ಬಾದಿ ಕಲರ್ ಗ್ರಾಫಿಕ್ಸ್, ಎಲ್ಇಡಿ ಹೆಡ್‍ಲ್ಯಾಂಪ್ಸ್ ಹಾಗು ಟೈಲ್ ಲೈಟ್ಸ್ ಮತ್ತು ಸಂಪೂರ್ಣ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಪಡೆದುಕೊಂಡಿದೆ.

ಎಂಜಿನ್ ಸಾಮರ್ಥ್ಯ
2019ರ ಹೊಸ ಸುಜುಕಿ ಜಿಕ್ಸರ್ 150 ಎಸ್ಎಫ್ ಬೈಕ್ 154.9ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 14.1 ಬಿಹೆಚ್‍ಪಿ ಮತ್ತು 14 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಇನ್ನು ಸುಜುಕಿ ಜಿಕ್ಸರ್ 250 ಎಸ್ಎಫ್ ಬೈಕ್‍ಗಳು 249ಸಿಸಿ ಆಯಿಲ್ ಕೂಲ್ಡ್, ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 26.5 ಬಿಹೆಚ್‍ಪಿ ಮತ್ತು 22.6 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಈ ಬೈಕಿನ ಎಂಜಿನ್ ಅನ್ನು 6 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಮೈಲೇಜ್
ಸುಜುಕಿ ಜಿಕ್ಸರ್ 250 ಎಸ್ಎಫ್ ಬೈಕ್‍ಗಳು 12 ಫ್ಯುಯಲ್ ಟ್ಯಾಂಕ್ ಅನ್ನು ಹೊಂದಿದ್ದು, ಪ್ರತೀ ಲೀಟರ್‍ಗೆ ಇನ್ನು 38.5 ಕಿಲೋಮೀಟರ್‍ನ ಮೈಲೇಜ್ ನೀಡಬಲ್ಲದು. ಇನ್ನು ಜಿಕ್ಸರ್ 150 ಎಸ್ಎಫ್ ಬೈಕ್‍ಗಳು ಒಂದು ಲೀಟರ್ ಪೆಟ್ರೋಲ್‍ಗೆ ಸುಮಾರು 45 ಕಿಲೋಮೀಟರ್‍ನ ಮೈಲೇಜ್ ನೀಡಬಲ್ಲದು.

ಇದಲ್ಲದೆಯೆ ಸುಜುಕಿ ಜಿಕ್ಸರ್ 150 ಎಸ್ಎಫ್ ಬೈಕ್ ಮುಂಭಾಗದಲ್ಲಿ 41ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಅಬ್ಸಾರ್ಬರ್ ಅನ್ನು ಹೊಂದಿದ್ದು, ಇನ್ನು ಜಿಕ್ಸರ್ 250 ಎಸ್ಎಫ್ ಬೈಕ್ ಮುಂಭಾಗದಲ್ಲಿ ಕೂಡಾ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಹಾಗು ಹಿಂಭಾಗದಲ್ಲಿ ಮೊನೊಶಾಕ್ ಅಬ್ಸಾರ್ಬರ್ ಅನ್ನು ಹಿಂದಿದೆ.

ಸುರಕ್ಷತೆಯ ಅನುಸಾರ ಸುಜುಕಿ ಜಿಕ್ಸರ್ 250 ಮತ್ತು 150 ಎಸ್‍ಎಫ್ ಬೈಕ್‍ಗಳ ಎರಡೂ ಬದಿಗಳಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದ್ದು, ಜಿಕ್ಸರ್ 150 ಎಸ್ಎಫ್ ಬೈಕಿನಲ್ಲಿ ಸಿಂಗಲ್ ಚಾನಲ್ ಮತ್ತು 250 ಎಸ್ಎಫ್ ಬೈಕಿನಲ್ಲಿ ಡುಯಲ್ ಚಾನಲ್ ಎಬಿಎಸ್ ಅನ್ನು ಅಳವಡಿಸಲಾಗಿದೆ.


Click it and Unblock the Notifications