ಪ್ರತಿ ಚಾರ್ಜ್‌ಗೆ 110ಕಿ.ಮಿ ಮೈಲೇಜ್ ನೀಡುವ ಒಕಿನಾವ ಪ್ರೈಸ್‌ಪ್ರೋ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ಈಗಾಗಲೇ ಹಲವು ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳನ್ನು ಬಿಡುಗಡೆ ಮಾಡಿ ಅತ್ಯತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇದೀಗ ಮತ್ತೊಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಬಿಡುಗಡೆ ಮಾಡಿದೆ.

ಪ್ರತಿ ಚಾರ್ಜ್‌ಗೆ 110ಕಿ.ಮಿ ಮೈಲೇಜ್ ನೀಡುವ ಒಕಿನಾವ ಪ್ರೈಸ್‌ಪ್ರೋ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಸದ್ಯ ಮಾರುಕಟ್ಟೆಯಲ್ಲಿರುವ ಪ್ರೈಸ್ ಮತ್ತು ಐ-ಪ್ರೈಸ್ ಪ್ಲಸ್ ಮಧ್ಯಮದ ಸ್ಕೂಟರ್ ಮಾದರಿಯಾಗಿ ಪ್ರೈಸ್‌ಪ್ರೋ ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಬೆಲೆಯು ಆನ್‌ರೋಡ್ ಬೆಲೆಗಳಿಗೆ ಅನುಗುಣವಾಗಿ ರೂ.71,990 ದರ ಪಡೆದುಕೊಂಡಿದೆ. ಪ್ರೈಸ್ ಸ್ಕೂಟರ್‌ಗಿಂತಲೂ(ರೂ.59,899) ಅತ್ಯುತ್ತಮ ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿರುವ ಪ್ರೈಸ್‌ಪ್ರೋ ಸ್ಕೂಟರ್ ಮಾದರಿಯು ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಸೆಂಟ್ರಲ್ ಲಾಕಿಂಗ್, ಆ್ಯಂಟಿ ಥೆಪ್ಟ್ ಅಲಾರಾಂ, ಕೀ ಲೆಸ್ ಎಂಟ್ರಿ, ಮೊಬೈಲ್ ಚಾರ್ಜಿಂಗ್ ಪೋರ್ಟ್ ಸೌಲಭ್ಯಗಳನ್ನು ಹೊಂದಿದೆ.

ಪ್ರತಿ ಚಾರ್ಜ್‌ಗೆ 110ಕಿ.ಮಿ ಮೈಲೇಜ್ ನೀಡುವ ಒಕಿನಾವ ಪ್ರೈಸ್‌ಪ್ರೋ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ದುಬಾರಿ ಬೆಲೆಯ ಐ-ಪ್ರೈಸ್ ಪ್ಲಸ್(ರೂ. 1.15 ಲಕ್ಷ) ಸ್ಕೂಟರ್ ಖರೀದಿ ಸಾಧ್ಯವಾಗದ ಗ್ರಾಹಕರನ್ನು ಸೆಳೆಯಲು ಪ್ರೈಸ್‌ಪ್ರೋ ಬಿಡುಗಡೆ ಮಾಡಿರುವ ಒಕಿನವಾ ಸಂಸ್ಥೆಯು ಅಥೆರ್ ಸ್ಕೂಟರ್‌ಗೆ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಪ್ರತಿ ಚಾರ್ಜ್‌ಗೆ 110ಕಿ.ಮಿ ಮೈಲೇಜ್ ನೀಡುವ ಒಕಿನಾವ ಪ್ರೈಸ್‌ಪ್ರೋ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಪ್ರೈಸ್‌ಪ್ರೋ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು 2Kwh ಲೀಥಿಯಂ-ಅಯಾನ್ ಬ್ಯಾಟರಿಯೊಂದಿಗೆ 1kW ಬಿಎಲ್‌ಡಿಸಿ ವಾಟರ್‌ಪ್ರೂಫ್ ಮೋಟಾರ್ ಸೌಲಭ್ಯವನ್ನು ಹೊಂದಿದ್ದು, ಪ್ರತಿ ಚಾರ್ಜ್‌ಗೆ ಗರಿಷ್ಠ 110ಕಿ.ಮಿ ಮೈಲೇಜ್ ಹಿಂದಿರುಗಿಸುತ್ತದೆ.

ಪ್ರತಿ ಚಾರ್ಜ್‌ಗೆ 110ಕಿ.ಮಿ ಮೈಲೇಜ್ ನೀಡುವ ಒಕಿನಾವ ಪ್ರೈಸ್‌ಪ್ರೋ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಹೊಸ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಇಕೋ, ಸ್ಪೋರ್ಟ್ ಮತ್ತು ಟರ್ಬೋ ರೈಡ್ ಮೊಡ್‌ಗಳನ್ನು ನೀಡಲಾಗಿದ್ದು, ಗ್ರಾಹಕರು ತಮ್ಮ ಆದ್ಯತೆ ಮೇರೆಗೆ ರೈಡಿಂಗ್ ಮೊಡ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಹೆಚ್ಚು ಮೈಲೇಜ್ ನೀರಿಕ್ಷಿಸುವ ಗ್ರಾಹಕರು ಇಕೋ ಮೊಡ್ ಬಳಕೆ ಮಾಡಬಹುದಾಗಿದ್ದು, ಹೆಚ್ಚು ವೇಗ ಬಯಸುವ ಗ್ರಾಹಕರು ಸ್ಪೋರ್ಟ್ ಮತ್ತು ಟರ್ಬೋ ಮೊಡ್‌ಗಳನ್ನು ಬಳಕೆ ಮಾಡಬಹುದುದಾಗಿದೆ. ಇಕೋ ಮೊಡ್‌ನಲ್ಲಿ ಮೈಲೇಜ್ ಹೆಚ್ಚು ನೀರಿಕ್ಷೆ ಮಾಡಬಹುದಾಗಿದ್ದು, ಸ್ಪೋರ್ಟ್ ಮತ್ತು ಟರ್ಬೋ ಮೊಡ್‌ಗಳು ಯುವ ಗ್ರಾಹಕರನ್ನು ಸೆಳೆಯಲಿವೆ.

ಪ್ರತಿ ಚಾರ್ಜ್‌ಗೆ 110ಕಿ.ಮಿ ಮೈಲೇಜ್ ನೀಡುವ ಒಕಿನಾವ ಪ್ರೈಸ್‌ಪ್ರೋ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಇಕೋ ಮೊಡ್‌ನಲ್ಲಿ ಪ್ರತಿ ಗಂಟೆಗೆ 35ಕಿ.ಮೀ ವೇಗದಲ್ಲಿ ಗರಿಷ್ಠ 110ಕಿ.ಮೀ ಮೈಲೇಜ್ ಪಡೆದುಕೊಳ್ಳಬಹುದಾಗಿದ್ದು, ಸ್ಪೋರ್ಟ್ ಮತ್ತು ಟರ್ಬೋ ಮೊಡ್‌ನಲ್ಲಿ ಪ್ರತಿ ಗಂಟೆಗೆ 60ರಿಂದ 70ಕಿ.ಮಿ ಟಾಪ್ ಸ್ಪೀಡ್‌ನೊಂದಿಗೆ 90ಕಿ.ಮೀ ಮೈಲೇಜ್ ಪಡೆದುಕೊಳ್ಳಬಹುದಾಗಿದೆ.

ಪ್ರತಿ ಚಾರ್ಜ್‌ಗೆ 110ಕಿ.ಮಿ ಮೈಲೇಜ್ ನೀಡುವ ಒಕಿನಾವ ಪ್ರೈಸ್‌ಪ್ರೋ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

2Kwh ಲೀಥಿಯಂ-ಅಯಾನ್ ಬ್ಯಾಟರಿಯನ್ನು ಪೂರ್ಣ ಪ್ರಮಾಣದಲ್ಲಿ ಚಾರ್ಜಿಂಗ್ ಮಾಡಲು 3ರಿಂದ 4 ಗಂಟೆ ತೆಗೆದುಕೊಳ್ಳಲಿದ್ದು, ಪ್ರೀಮಿಯಂ ಸೌಲಭ್ಯಗಳೊಂದಿಗೆ ಉತ್ತಮ ಬ್ಯಾಟರಿ ಹೊಂದಿರುವ ಸ್ಕೂಟರ್ ಇದಾಗಿದೆ.

MOST READ: ಹತ್ತು ಸಾವಿರಕ್ಕೆ ಎಲೆಕ್ಟ್ರಿಕ್ ಬೈಕ್ ತಯಾರಿಸಿದ ಮೆಕಾನಿಕ್

ಪ್ರತಿ ಚಾರ್ಜ್‌ಗೆ 110ಕಿ.ಮಿ ಮೈಲೇಜ್ ನೀಡುವ ಒಕಿನಾವ ಪ್ರೈಸ್‌ಪ್ರೋ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಇದರೊಂದಿಗೆ ಹೊಸ ಸ್ಕೂಟರ್‌ನಲ್ಲಿ ಫೈಂಡ್ ಮೈ ಸ್ಕೂಟರ್ ಫಂಕ್ಷನ್, ರಿವರ್ಸ್ ಮೊಷನ್ ಫಂಕ್ಷನ್, ರೋಡ್ ಸೈಡ್ ಅಸಿಸ್ಟ್ ಪ್ರೋಗ್ರಾಂ ಸೌಲಭ್ಯವನ್ನು ನೀಡಲಾಗಿದ್ದು, ಸ್ಕೂಟರ್‌ನಲ್ಲಿ ಪ್ರಯಾಣದ ವೇಳೆ ತಾಂತ್ರಿಕ ದೋಷ ಕಂಡುಬಂದಲ್ಲಿ ಗ್ರಾಹಕರ ಸೇವೆಗಾಗಿ ಉಚಿತ ಟೋಯಿಂಗ್ ಸೌಲಭ್ಯವನ್ನು ಸಹ ನೀಡಲಾಗಿದೆ.

MOST READ: ಹೊಸ ಟ್ರಾಫಿಕ್ ರೂಲ್ಸ್ ಜಾರಿ ನಂತರ ಬೆಂಗಳೂರಿನಲ್ಲಿ ಸಂಗ್ರಹವಾದ ದಂಡ ಎಷ್ಟು ಗೊತ್ತಾ?

ಪ್ರತಿ ಚಾರ್ಜ್‌ಗೆ 110ಕಿ.ಮಿ ಮೈಲೇಜ್ ನೀಡುವ ಒಕಿನಾವ ಪ್ರೈಸ್‌ಪ್ರೋ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಖರೀದಿಗೆ ಲಭ್ಯವಿರುವ ಬಣ್ಣಗಳು

ಪ್ರೈಸ್‌ಪ್ರೋ ಎಲೆಕ್ಟ್ರಿಕ್ ಸ್ಕೂಟರ್ ಸದ್ಯಕ್ಕೆ ಗ್ಲೊಸಿ ರೆಡ್/ಬ್ಲ್ಯಾಕ್ ಮತ್ತು ಗ್ಲೊಸಿ ಸ್ಪಾರ್ಕಲ್ ಬ್ಲ್ಯಾಕ್ ಬಣ್ಣಗಳಲ್ಲಿ ಮಾತ್ರವೇ ಖರೀದಿಗೆ ಲಭ್ಯವಿದ್ದು, ಅವಾನ್ ಟ್ರೆಂಡ್ ಇ ಮತ್ತು ಅಥೆರ್ 340 ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

MOST READ: 78 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದ ಕಾರು ಮಾಲೀಕನ ಕಥೆ ಹರೋಹರ

ಪ್ರತಿ ಚಾರ್ಜ್‌ಗೆ 110ಕಿ.ಮಿ ಮೈಲೇಜ್ ನೀಡುವ ಒಕಿನಾವ ಪ್ರೈಸ್‌ಪ್ರೋ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಇನ್ನು ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಹಲವಾರು ಮಹತ್ವದ ಕಾರ್ಯಕ್ರಮಗಳನ್ನು ರೂಪಿಸಿದ್ದು, ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವ ಮತ್ತು ಖರೀದಿಸುವ ಗ್ರಾಹಕರಿಗೂ ಕೂಡಾ ವಿವಿಧ ಹೊಸ ಯೋಜನೆಗಳನ್ನು ಘೋಷಿಸಿದೆ. ಇದರಲ್ಲಿ ಪ್ರಮುಖವಾಗಿ ಜಿಎಸ್‌ಟಿ ದರ ಇಳಿಕೆಯು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ವರದಾನವಾಗಿದ್ದು, ಒಕಿನವಾ ಸೇರಿದಂತೆ ಬಹುತೇಕ ಎಲೆಕ್ಟ್ರಿಕ್ ಸ್ಕೂಟರ್‌ ಉತ್ಪಾದನಾ ಸಂಸ್ಥೆಗಳು ತಮ್ಮ ಉತ್ಪನ್ನ ಬೆಲೆಯಲ್ಲಿ ಸಾಕಷ್ಟು ಇಳಿಕೆ ಮಾಡಿ ಗ್ರಾಹಕರನ್ನು ಆಕರ್ಷಿಸುತ್ತಿವೆ.

More from DriveSpark

Article Published On: Friday, September 6, 2019, 13:32 [IST]
English summary
Okinawa PraisePro Electric Scooter Launched In India: Priced At Rs 71,990.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+