ಭಾರತಕ್ಕೆ ಲಗ್ಗೆಯಿಡಲಿದೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬೈಕ್
ರಿವೊಲ್ಟ್ ಮೋಟಾರ್ಸ್ ಕೊನೆಗೂ ತನ್ನ ಎಲೆಕ್ಟ್ರಿಕ್ ಬೈಕ್ ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ. ಈ ಬೈಕ್ ಜೂನ್ 18ರಂದು ನವದೆಹಲಿಯಲ್ಲಿ ಬಿಡುಗಡೆಯಾಗಲಿದೆ. ಭಾರತೀಯ ಮೂಲದ ಈ ಸ್ಟಾರ್ಟ್ ಅಪ್ ಕಂಪನಿಯ ನೇತೃತ್ವವನ್ನು ಮೈಕ್ರೊಮ್ಯಾಕ್ಸ್ ಕಂಪನಿಯ ಸಹ ಸಂಸ್ಥಾಪಕರಾದ ರಾಹುಲ್ ಶರ್ಮಾರವರು ವಹಿಸಿದ್ದಾರೆ.

ಈ ಎಲೆಕ್ಟ್ರಿಕ್ ಬೈಕಿಗೆ ಬೇಕಾಗಿರುವ ಅನುಮೋದನೆಯನ್ನು ಭಾರತೀಯ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್(ಎಆರ್‍ಎಐ)ನಿಂದ ಪಡೆಯಲಾಗಿದೆ. ಇದರಿಂದಾಗಿ ಎಆರ್‍ಎಐ ಪ್ರಮಾಣಿತ, ಎಐ ಹೊಂದಿರುವ, ಎಲೆಕ್ಟ್ರಿಕ್ ಬೈಕ್ ಉತ್ಪಾದನೆಗೆ ರೆಡಿಯಾಗಿದೆ. ರಿವೊಲ್ಟ್ ಇಂಟೆಲಿಕಾರ್ಪ್ ಕಂಪನಿಯು, ಪರಿಸರ ಸ್ನೇಹಿ ವಾಹನಗಳ ಭವಿಷ್ಯದಲ್ಲಿ ನಂಬಿಕೆಯಿಟ್ಟಿದೆ, ಆದ ಕಾರಣ ಆಟೋಮೋಬೈಲ್ ಉದ್ಯಮದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತರಲು ಬಯಸಿದೆ.

ಇಂಧನದಿಂದ ಚಲಿಸುವ ವಾಹನಗಳ ಬದಲಿಗೆ ಆಲ್ ಎಲೆಕ್ಟ್ರಿಕ್ ಪವರ್ ಟ್ರೇನ್‍ಗಳನ್ನು ಪರಿಚಯಿಸುವ ಉದ್ದೇಶವನ್ನು ರಿವೊಲ್ಟ್ ಇಂಟೆಲಿಕಾರ್ಪ್ ಕಂಪನಿಯು ಹೊಂದಿದೆ. ಈ ನಿಟ್ಟಿನಲ್ಲಿ ಕಂಪನಿಯು, ಪಟ್ಟಿಯೊಂದನ್ನು ಬಿಡುಗಡೆಗೊಳಿಸಿದೆ.

ಈ ಪಟ್ಟಿಯಲ್ಲಿ ಇಂಧನಗಳ ಬಳಕೆಯಲ್ಲಿ ಕುಸಿತವುಂಟಾಗಿ, ಎಲೆಕ್ಟ್ರಿಕ್ ವಾಹನಗಳ ಯುಗ ಆರಂಭವಾಗುತ್ತಿರುವುದನ್ನು ತೋರಿಸಲಾಗಿದೆ. ರಿವೊಲ್ಟ್ ಇಂಟೆಲಿಕಾರ್ಪ್ ಕಂಪನಿಯು ಹೊಸ ಬೈಕಿನಲ್ಲಿ ಅನೇಕ ಕಠಿಣ ಪರೀಕ್ಷೆಗಳನ್ನು ನಡೆಸಿ, ಈ ಬೈಕಿನ ಪರ್ಫಾಮೆನ್ಸ್ ಅನ್ನು ಪರೀಕ್ಷಿಸಿತ್ತು.

ಈ ಬೈಕ್ ಉತ್ತಮವಾದ ಪರ್ಫಾಮೆನ್ಸ್ ಹಾಗೂ ವಿನ್ಯಾಸಗಳನ್ನು ಒಳಗೊಂಡಿದೆ. ಈ ಬೈಕ್ ಅನ್ನು ಇಳಿಜಾರು ರಸ್ತೆಗಳಲ್ಲೂ ಪರೀಕ್ಷಿಸಲಾಗಿತ್ತು. ಇಳಿಜಾರು ರಸ್ತೆಯಲ್ಲಿ 10.2 ಡಿಗ್ರಿಯಲ್ಲಿ ಸಾಗಿ ಯಶಸ್ವಿಯಾಗಿತ್ತು. ಈ ಬೈಕಿನಲ್ಲಿರುವ ಬ್ಯಾಟರಿಯು ಫೂಲ್ ಪ್ರೂಫ್ ಹಾಗೂ ಹೈ ಡೆಸಿಬಲ್ ಇಂಟರ್ನಲ್ ಟೆಸ್ಟ್ ಗಳನ್ನು ಒಳಗೊಂಡಿತ್ತು. ಇದರಲ್ಲಿ ಸೈಕಲ್ ಲೈಫ್, ನೇಲ್ ಪೆನೆಟ್ರೆಷನ್, ಶಾಕ್ ಅಬ್ಸಪ್ಷನ್, ಆಲ್ ವೆದರ್ ಹಾಗೂ ವಾಟರ್ ಪ್ರೂಫಿಂಗ್ ಟೆಸ್ಟ್ ಗಳನ್ನು ನಡೆಸಲಾಗಿತ್ತು.

ಲಿಥಿಯಂ ಐಯನ್ ಬ್ಯಾಟರಿ ಹೊಂದಿರುವ ಬೈಕ್ ಈ ಟೆಸ್ಟ್ ನಲ್ಲಿ ಮೊದಲ ಯತ್ನದಲ್ಲಿಯೇ ಯಶಸ್ವಿಯಾಗಿತ್ತು. ಎಆರ್‍ಎಐ ಪ್ರಮಾಣಿತ ಟೆಸ್ಟಿನ ರೇಂಜ್ ಅನ್ನು ಈ ಎಲೆಕ್ಟ್ರಿಕ್ ಬೈಕ್‍ಗಾಗಿ 156 ಕಿ.ಮೀ ಎಂದು ನಿಗದಿ ಪಡಿಸಲಾಗಿತ್ತು. ಕಂಪನಿಯು ಎರಡು ಅಂಕಿಯ ಬೆಳವಣಿಗೆಯನ್ನು ಎದುರು ನೋಡುತ್ತಿದ್ದು, ಬೇಡಿಕೆಗೆ ಅನುಸಾರ, ಉತ್ಪಾದನೆಯನ್ನು ಪ್ರಾರಂಭಿಸಲಿದೆ.

ರಿವೊಲ್ಟ್ ಇಂಟೆಲಿಕಾರ್ಪ್‍ನ ಮೊದಲ ಉತ್ಪನ್ನವು ಎಲೆಕ್ಟ್ರಿಕ್ ಪವರ್‍ಟ್ರೇನ್ ಅನ್ನು ಮಾತ್ರವೇ ಅಲ್ಲದೇ ಹೊಸ ಎಐ ಸಿಸ್ಟಂ ಅನ್ನು ಹೊಂದಿರಲಿದೆ. ಈ ಬೈಕ್ ಭಾರತದ ಮೊದಲ ಸ್ಮಾರ್ಟ್ ಬೈಕ್ ಆಗಿರಲಿದೆ. ಕಂಪನಿಯು ಹೊಸ ಬೈಕಿನ ಮೊದಲ ರೇಖಾಚಿತ್ರವನ್ನು ಕಳೆದ ತಿಂಗಳಿನಲ್ಲಿ ಬಿಡುಗಡೆ ಮಾಡಿತ್ತು.
MOST READ: ಲ್ಯಾಂಡ್ ರೋವರ್‍ನಂತೆ ಬದಲಾಯ್ತು ಮಾರುತಿ ಬ್ರಿಝಾ

ಇದರಲ್ಲಿ ಹೊಸ ಬಗೆಯ ವಿನ್ಯಾಸಗಳಿವೆ. ರಿವೊಲ್ಟ್ ಇಂಟೆಲಿಕಾರ್ಪ್‍ನ ಚೀಫ್ ಡಿಸೈನರ್, ಶಿವಂ ಶರ್ಮಾರವರು ಈ ಬೈಕ್ ಅನ್ನು ವಿನ್ಯಾಸಗೊಳಿಸಿದ್ದಾರೆ. ಒಳ್ಳೆಯ ಬಿಡಿಭಾಗಗಳನ್ನು ಹೊಂದಿದ್ದು, ಸ್ಟ್ರೀಟ್ ಫೈಟರ್‍ನಂತೆ ಕಾಣುತ್ತದೆ.
MOST READ: ಬೆಂಗಳೂರಿನಲ್ಲಿ ಆಯೋಜನೆಗೊಂಡ ಫೋಕ್ಸ್ ವ್ಯಾಗನ್ ಡ್ರೈವ್

ರೇಖಾ ಚಿತ್ರದಲ್ಲಿರುವಂತಹ ಬೈಕ್ ಅನ್ನು ಬಿಡುಗಡೆಗೊಳಿಸಿದರೆ, ಹೆಚ್ಚಿನ ಜನರ ಗಮನವನ್ನು ತನ್ನತ್ತ ಸೆಳೆಯಲಿದೆ. ಈ ಕಂಪನಿಯ ಮುಖ್ಯ ಕಚೇರಿಯು ಗುರುಗ್ರಾಮದಲ್ಲಿದ್ದು, ಉತ್ಪಾದನಾ ಘಟಕವು ಹರಿಯಾಣದ ಮನೇಸಾರ್‍ನಲ್ಲಿದೆ.
MOST READ: ಬಿಡುಗಡೆಯಾಯಿತು ವೆಸ್ಪಾ ಕ್ಲಬ್ ರೇಂಜ್ ಸ್ಕೂಟರ್

ಹೈ ಪ್ರೊಫೈಲ್ ಅನುಭವವುಳ್ಳ ಆರ್ ಅಂಡ್ ಡಿ ತಂಡವು ಗುರುಗ್ರಾಮದಲ್ಲಿರುವ ತಯಾರಕ ಘಟಕದಲ್ಲಿ ಸುಮಾರು 2 ವರ್ಷಗಳಿಂದ ಈ ವಾಹನದ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಭಾರತದ ಮೊಟ್ಟ ಮೊದಲ ಎಐ ಹೊಂದಿರುವ ಬೈಕಿನ ಪರ್ಫಾಮೆನ್ಸ್ ಹಾಗೂ ವಿನ್ಯಾಸದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ತಯಾರಿಸಲು ನಿರ್ಧರಿಸಿದೆ.


Click it and Unblock the Notifications








