ಬಿಡುಗಡೆಯಾಯಿತು ವೆಸ್ಪಾ ಕ್ಲಬ್ ರೇಂಜ್ ಸ್ಕೂಟರ್
ವೆಸ್ಪಾ ಕ್ಲಬ್ ರೇಂಜ್ ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಸ್ಕೂಟರಿನ ಬೆಲೆಯು ಪುಣೆಯ ಎಕ್ಸ್ ಶೋರೂಂ ದರದಂತೆ ರೂ.72,190 ಗಳಾಗಿದೆ. ವೆಸ್ಪಾ ಕ್ಲಬ್ ರೇಂಜ್ ಸ್ಕೂಟರ್ ಅನ್ನು ವೆಸ್ಪಾ ಎಲ್ಎಕ್ಸ್125 ಸ್ಕೂಟರಿಗಿಂತ ಹೆಚ್ಚು ಆಕರ್ಷಕವಾಗಿರುವ ಸ್ಕೂಟರ್ ಎಂದು ಬಿಂಬಿಸಲಾಗಿದೆ.

ಈ ಸ್ಕೂಟರ್‍ನಲ್ಲಿ ವೆಸ್ಪಾ ಎಲ್ಎಕ್ಸ್125 ಸ್ಕೂಟರಿನಲ್ಲಿದಂತಹ ಎಂಜಿನ್‍ಯಿದ್ದು, ಅದೇ ಮೆಕಾನಿಕಲ್ ಅಂಶಗಳನ್ನು ಒಳಗೊಂಡಿದೆ. ಆದರೆ ಬೇರೆ ಬಣ್ಣ ಹಾಗೂ ಫೀಚರ್‍ಗಳನ್ನು ಹೊಂದಿದೆ. ವೆಸ್ಪಾ ಸ್ಕೂಟರ್‍ಗಳು 2012ರಲ್ಲಿ ದೇಶಿಯ ಮಾರುಕಟ್ಟೆಗೆ ಪುನರಾಗಮನ ಕಂಡ ನಂತರ ಭಾರೀ ಪ್ರಮಾಣದ ಯಶಸ್ಸನ್ನು ಕಂಡಿವೆ. ಪುನರಾಗಮನದ ನಂತರ ವೆಸ್ಪಾ ಸ್ಕೂಟರ್‍ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದು, ಮಾರಾಟದಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಿವೆ.

ವೆಸ್ಪಾ ಕಂಪನಿಯು ಹೊಸ ಸ್ಕೂಟರ್ ಅನ್ನು ಬಿಡುಗಡೆ ಮಾಡಿ ತನ್ನ ಮಾಸ್ ಮಾರುಕಟ್ಟೆಯನ್ನು ಅಡ್ಡಿಪಡಿಸುತ್ತಿಲ್ಲ. ಬದಲಿಗೆ ತನ್ನದೇ ಆದ ಹೆಜ್ಜೆಯನ್ನು ಮೂಡಿಸಲು ಬಯಸಿದೆ. ಆದ ಕಾರಣ ಇಟಲಿಯ ಸ್ಕೂಟರ್ ತಯಾರಕ ಕಂಪನಿಯು ಸ್ಟೈಲಿಶ್ ಸರಣಿಯ ಸ್ಕೂಟರ್‍ಗಳನ್ನು ಮಾರಾಟ ಮಾಡುತ್ತಿದೆ.

ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಉಳಿಯಬೇಕಾದರೆ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದು ಅವಶ್ಯಕವಾಗಿರುವುದರಿಂದ ವೆಸ್ಪಾ ಕಂಪನಿಯು ಹೊಸ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಲೇ ಇದೆ.

ವೆಸ್ಪಾ ಕ್ಲಬ್ ರೇಂಜ್‍ನ ಹೊಸ ಸ್ಕೂಟರ್‍ನಲ್ಲಿ ವಿನ್ಯಾಸದ ಹೊರತಾಗಿ ಬೇರೆ ಯಾವುದೇ ಬದಲಾವಣೆಗಳಾಗಿಲ್ಲ. ವೆಸ್ಪಾ ಕ್ಲಬ್ ರೇಂಜ್‍ನ ಸ್ಕೂಟರ್‍ಗಳು - ಅಜುರೋ ಪ್ರೊವೆಂಜಾ, ಮೇಜ್ ಗ್ರೇ, ಗ್ಲಾಸಿ ಯೆಲ್ಲೋ ಹಾಗೂ ಗ್ಲಾಸಿ ರೆಡ್ ಎಂಬ ನಾಲ್ಕು ಆಕರ್ಷಕ ಬಣ್ಣಗಳಲ್ಲಿ ದೊರೆಯುತ್ತವೆ. ಈ ಬಣ್ಣಗಳ ಜೊತೆಗೆ ಕೆಲವು ಬಿಡಿ ಭಾಗಗಳನ್ನು ಗ್ಲಾಸ್ ಬ್ಲಾಕ್ ಬಣ್ಣದಿಂದ ಫಿನಿಷಿಂಗ್ ಮಾಡಲಾಗಿದೆ. ಮಿರರ್ ಹೌಸಿಂಗ್, ಸ್ಟಾಕ್ಸ್, ಬ್ರೇಕ್ ಲೀವರ್ಸ್, ಗ್ರಾಬ್ ರೇಲ್ಸ್ ಹಾಗೂ ವ್ಹೀಲ್‍ಗಳನ್ನು ಗ್ಲಾಸ್ ಬ್ಲಾಕ್ ಬಣ್ಣದಿಂದ ಫಿನಿಷಿಂಗ್ ಮಾಡಲಾಗಿದೆ.
MOST READ: ಬೆಂಗಳೂರಿನಲ್ಲಿ ಆಯೋಜನೆಗೊಂಡ ಫೋಕ್ಸ್ ವ್ಯಾಗನ್ ಡ್ರೈವ್

ಹೊಸ ವೆಸ್ಪಾ ಕ್ಲಬ್ ರೇಂಜ್ ಸ್ಕೂಟರ್‍ನಲ್ಲಿ ಈಗಿರುವ ಸ್ಕೂಟರ್‍ಗಳಲ್ಲಿರುವ ಫೀಚರ್ಸ್‍ಗಳನ್ನೇ ಮುಂದುವರೆಸಲಾಗಿದೆ. ವೆಸ್ಪಾ ಗ್ರಾಹಕರು ಪಿಯಾಜಿಯೋ ಮೊಬೈಲ್ ಕನೆಕ್ಟಿವಿಟಿ ಫೀಚರ್ ಅನ್ನು ಅಳವಡಿಸಿಕೊಳ್ಳಬಹುದಾಗಿದೆ. ವೆಸ್ಪಾ ಕ್ಲಬ್ ರೇಂಜ್ ಈಗಿರುವ ಸ್ಕೂಟರ್‍ಗಳಲ್ಲಿರುವ 125 ಸಿಸಿಯ ಎಂಜಿನ್ ಅನ್ನು ಹೊಂದಿದೆ.
MOST READ: ಲ್ಯಾಂಡ್ ರೋವರ್‍ನಂತೆ ಬದಲಾಯ್ತು ಮಾರುತಿ ಬ್ರಿಝಾ

ಈ ಎಂಜಿನ್ ಏರ್ ಕೂಲ್ಡ್, 125ಸಿಸಿಯ ಸಿಂಗಲ್ ಸಿಲಿಂಡರ್ ಎಂಜಿನ್ ಆಗಿದ್ದು, ಗರಿಷ್ಠ 9.76 ಬಿಹೆಚ್‍ಪಿ ಹಾಗೂ 10.6 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಸ್ಕೂಟರ್ ಪ್ರತಿ ಲೀಟರ್ ಪೆಟ್ರೋಲ್‍ಗೆ 45 ಕಿ.ಮೀ ಮೈಲೇಜ್ ನೀಡಲಿದೆ. ವೆಸ್ಪಾ ಕ್ಲಬ್ ರೇಂಜ್ ಸ್ಕೂಟರಿನ ಮುಂಭಾಗದಲ್ಲಿ ಸಿಂಗಲ್ ಸೈಡ್ ಸಸ್ಪೆಂಷನ್ ಹಾಗೂ ಹಿಂಭಾಗದಲ್ಲಿ ಹೈಡ್ರಾಲಿಕ್ ಶಾಕ್ ಅಬ್ಸರ್ವರ್‍ಗಳಿವೆ. ಮುಂಭಾಗದಲ್ಲಿ 150 ಎಂಎಂ ಹಾಗೂ ಹಿಂಭಾಗದಲ್ಲಿ 140 ಎಂಎಂ ಡ್ರಮ್ ಬ್ರೇಕ್‍ಗಳಿವೆ.
MOST READ: ಬಿಎಸ್6 ಡೀಸೆಲ್ ಎಂಜಿನ್‍ನೊಂದಿಗೆ ರಸ್ತೆಗಿಳಿಯಲಿವೆ ಮಹೀಂದ್ರಾ ವಾಹನಗಳು

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ವೆಸ್ಪಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಅನೇಕ ಸರಣಿಯ ಸ್ಕೂಟರ್‍ಗಳನ್ನು ಮಾರಾಟ ಮಾಡುತ್ತಿದೆ. ಈ ಸರಣಿಗಳ ಬಗ್ಗೆ ಪರಿಣಿತರು ಮಾತ್ರವೇ ತಿಳಿದಿದ್ದಾರೆ. ಎಲ್ಲಾ ಸ್ಕೂಟರ್‍ಗಳು ಒಂದೇ ತರಹ ಕಾಣಿಸಿ, ಒಂದೇ ತರಹ ಅನುಭವವನ್ನು ನೀಡುತ್ತವೆ. ಆದರೆ ವಿನ್ಯಾಸ ಹಾಗೂ ಬಣ್ಣಗಳಲ್ಲಿ ವ್ಯತ್ಯಾಸವಿದೆ. ಹೊಸದಾಗಿ ಬಿಡುಗಡೆಯಾಗಿರುವ ವೆಸ್ಪಾ ಕ್ಲಬ್ ರೇಂಜ್ ಸ್ಕೂಟರ್‍ಗಳಿಂದಾಗಿ ಮಾರಾಟದಲ್ಲಿ ಮತ್ತಷ್ಟು ಏರಿಕೆ ಕಾಣಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications








