ಬಿ‍ಎಸ್6 ಡೀಸೆಲ್ ಎಂಜಿನ್‍‍ನೊಂದಿಗೆ ರಸ್ತೆಗಿಳಿಯಲಿವೆ ಮಹೀಂದ್ರಾ ವಾಹನಗಳು

ಬಹುತೇಕ ವಾಹನ ತಯಾರಕರು ಹೊಸ ಬಿ‍ಎಸ್6 ನಿಯಮಗಳಿಗೆ ಹೊಂದಿಕೊಳ್ಳಲಾಗದ ಕಾರಣಕ್ಕಾಗಿ ಡೀಸೆಲ್ ಎಂಜಿನ್ ಹೊಂದಿರುವ ಹಲವು ವಾಹನಗಳ ಉತ್ಪಾದನೆಯನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ.

ಬಿ‍ಎಸ್6 ಡೀಸೆಲ್ ಎಂಜಿನ್‍‍ನೊಂದಿಗೆ ರಸ್ತೆಗಿಳಿಯಲಿವೆ ಮಹೀಂದ್ರಾ ವಾಹನಗಳು

ಆದರೆ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು, ಒಂದು ವಾಹನವನ್ನು ಹೊರತುಪಡಿಸಿ ಉಳಿದ ಡೀಸೆಲ್ ವಾಹನಗಳ ಉತ್ಪಾದನೆಯನ್ನು ಮುಂದುವರೆಸಿಕೊಂಡು ಹೋಗುವುದಾಗಿ ತಿಳಿಸಿದೆ. 1.2 ಲೀಟರಿನ 3 ಸಿಲಿಂಡರ್ ಎಂಜಿನ್ ಹೊಂದಿರುವ ಕೆ‍‍ಯು‍‍ವಿ 100 ವಾಹನವನ್ನು ಮಾತ್ರ ಬೇಡಿಕೆ ಕಡಿಮೆಯಿರುವ ಕಾರಣಕ್ಕೆ ಸ್ಥಗಿತಗೊಳಿಸಲಾಗುವುದು. ಡೀಸೆಲ್ ಎಂಜಿನ್ ಹೊಂದಿರುವ ಉಳಿದ 7 ವಾಹನಗಳು, ಈಗಿರುವ ಬಿ‍ಎಸ್ 4 ನಿಯಮದಿಂದ ಬಿ‍ಎಸ್ 6 ನಿಯಮಕ್ಕೆ ಹೊಂದಿಕೊಳ್ಳುವ ಎಂಜಿನ್‍‍ಗೆ ಅಪ್‍‍ಡೇಟ್ ಪಡೆಯಲಿವೆ.

ಬಿ‍ಎಸ್6 ಡೀಸೆಲ್ ಎಂಜಿನ್‍‍ನೊಂದಿಗೆ ರಸ್ತೆಗಿಳಿಯಲಿವೆ ಮಹೀಂದ್ರಾ ವಾಹನಗಳು

ಹೊಸ ಮಾಲಿನ್ಯ ನಿಯಮಗಳು ಏಪ್ರಿಲ್ 2020ರಿಂದ ಜಾರಿಗೆ ಬರಲಿವೆ. ಈ ನಿಯಮಗಳು ಪೆಟ್ರೋಲ್ ಎಂಜಿನ್ ವಾಹನಗಳಿಗಿಂತ ಹೆಚ್ಚಾಗಿ ಡೀಸೆಲ್ ಎಂಜಿನ್ ವಾಹನಗಳಿಗೆ ಅನ್ವಯವಾಗಲಿವೆ. ಡೀಸೆಲ್ ಎಂಜಿನ್ ಹೊಂದಿರುವ ವಾಹನಗಳು ಎನ್‍ಒಎಕ್ಸ್ ಮಾಲಿನ್ಯವನ್ನು 68% ನಷ್ಟು ಹಾಗೂ ಮ್ಯಾಟರ್ ಮಾಲಿನ್ಯವನ್ನು 82% ನಷ್ಟು ಕಡಿಮೆ ಮಾಡಿಕೊಳ್ಳಬೇಕಾಗಿದೆ.

ಬಿ‍ಎಸ್6 ಡೀಸೆಲ್ ಎಂಜಿನ್‍‍ನೊಂದಿಗೆ ರಸ್ತೆಗಿಳಿಯಲಿವೆ ಮಹೀಂದ್ರಾ ವಾಹನಗಳು

ಇದರಿಂದಾಗಿ ಈಗಿರುವ ಉತ್ಪಾದನಾ ಘಟಕಗಳಲ್ಲಿ ಮಹತ್ತರ ಬದಲಾವಣೆಗಳಾಗಲಿವೆ. ಮಹೀಂದ್ರಾ ಕಂಪನಿಯು ಬಿ‍ಎಸ್6 ನಿಯಮಗಳನ್ನು ವಾಹನಗಳಲ್ಲಿ ಅಪ್‍‍ಡೇಟ್ ಮಾಡುವ ಸಲುವಾಗಿ ರೂ.1,000 ಕೋಟಿಗಳಷ್ಟು ವೆಚ್ಚ ಮಾಡಿದೆ.

ಬಿ‍ಎಸ್6 ಡೀಸೆಲ್ ಎಂಜಿನ್‍‍ನೊಂದಿಗೆ ರಸ್ತೆಗಿಳಿಯಲಿವೆ ಮಹೀಂದ್ರಾ ವಾಹನಗಳು

ಮಹೀಂದ್ರಾ ಕಂಪನಿಯ ಪ್ರಕಾರ ವಿವಿಧ ಮಾದರಿಗಳ 136 ವಾಹನಗಳನ್ನು ಸುಮಾರು 69 ಲಕ್ಷ ಕಿ.ಮೀ ನಷ್ಟು ಚಲಾಯಿಸಿ ಪರೀಕ್ಷಿಸಲಾಗಿದೆ. ತನ್ನ ಎಂಜಿನ್‍‍ಗಳಿಗಾಗಿ, ಮಹೀಂದ್ರಾ ಕಂಪನಿಯು ಸುಮಾರು 30 ಪೇಟೆಂಟ್ ಅರ್ಜಿಗಳನ್ನು ಸಲ್ಲಿಸಿದ್ದು, 1,482 ಹೊಸ ಬಿಡಿಭಾಗಗಳನ್ನು ತನ್ನ ವಾಹನಗಳಲ್ಲಿ ಹೊಸದಾಗಿ ಅಳವಡಿಸಿದೆ. 600 ಸಿಸಿ ಹಾಗೂ 900 ಸಿಸಿ ಡೀಸೆಲ್ ಎಂಜಿನ್‍‍ಗಳನ್ನು ಹೊಂದಿರುವ ಕಂಪನಿಯ ಎಲ್‍‍ಸಿವಿ ರೇಂಜ್‍‍ನ ಜೀತೊ ಹಾಗೂ ಸುಪ್ರೊ ವಾಹನಗಳಲ್ಲಿ ಲೀನ್ ಎನ್‍ಒ‍ಎಕ್ಸ್ ಟೆಕ್ನಾಲಜಿಯನ್ನು (ಎಲ್‍ಎನ್‍‍ಟಿ) ಅಳವಡಿಸಲಾಗಿದೆ.

ಬಿ‍ಎಸ್6 ಡೀಸೆಲ್ ಎಂಜಿನ್‍‍ನೊಂದಿಗೆ ರಸ್ತೆಗಿಳಿಯಲಿವೆ ಮಹೀಂದ್ರಾ ವಾಹನಗಳು

ಈ ಟೆಕ್ನಾಲಜಿಯ ಬೆಲೆಯು ಸೆಲೆಕ್ಟಿವ್ ಕ್ಯಾಟಲಿಟಿಕ್ ರಿಡಕ್ಷನ್ ಟೆಕ್ನಾಲಜಿಗೆ ಹೋಲಿಸಿದರೆ ಕಡಿಮೆಯಾಗಿದೆ. ಮಹೀಂದ್ರಾ ಕಂಪನಿಯು ಈ ಎರಡೂ ಮೋಟಾರ್‍‍ಗಳಲ್ಲಿ ಟರ್ಬೊ‍‍ಚಾರ್ಜರ್‍‍ಗಳನ್ನು ಅಳವಡಿಸಲಿದೆ.

ಬಿ‍ಎಸ್6 ಡೀಸೆಲ್ ಎಂಜಿನ್‍‍ನೊಂದಿಗೆ ರಸ್ತೆಗಿಳಿಯಲಿವೆ ಮಹೀಂದ್ರಾ ವಾಹನಗಳು

ಮಹೀಂದ್ರಾ ಮೂರು 1.5 ಲೀಟರಿನ ಡೀಸೆಲ್ ಎಂಜಿನ್‍‍ಗಳನ್ನು ಹೊಂದಿದ್ದು, ಅವುಗಳನ್ನು ಬದಲಾಯಿಸಲಾಗುವುದು. ಬೊಲೆರೋ ಪವರ್ ಪ್ಲಸ್ ಹಾಗೂ ಟಿಯುವಿ 300 ವಾಹನಗಳಲ್ಲಿರುವ 3 ಸಿಲಿಂಡರ್‍‍ನ ಎಂಜಿನ್ ಹಾಗೂ ವೆರಿಟೊದಲ್ಲಿರುವ 4 ಸಿಲಿಂಡರಿನ ಎಂಜಿನ್‍‍‍ಗಳನ್ನು ಮುಂದುವರೆಸಲಾಗುವುದಿಲ್ಲವೆಂದು ನಂಬಲಾಗಿತ್ತು, ಆದರೆ ಈ ಎಂಜಿನ್‍ಗಳನ್ನು ಮುಂದುವರೆಸಲಾಗುವುದು.

MOST READ: ಹೊಸ ಟೆಕ್ನಾಲಜಿಯೊಂದಿಗೆ ಬಿಡುಗಡೆಯಾದ ದಟ್ಸನ್ ಗೊ, ಗೋ ಪ್ಲಸ್

ಬಿ‍ಎಸ್6 ಡೀಸೆಲ್ ಎಂಜಿನ್‍‍ನೊಂದಿಗೆ ರಸ್ತೆಗಿಳಿಯಲಿವೆ ಮಹೀಂದ್ರಾ ವಾಹನಗಳು

ಆಧುನಿಕವಾಗಿರುವ ಎಂಜಿನ್‍‍ಗಳೆಂದರೆ ಎಕ್ಸ್ ಯುವಿ 300 ಹಾಗೂ ಮರಾಜೋದಲ್ಲಿರುವ 4 ಸಿಲಿಂಡರ್ ಎಂಜಿನ್‍ಗಳಾಗಿವೆ. ಈ ಎಂಜಿನ್‍‍ನ ಹಿಂಬದಿಯಲ್ಲಿ ಎಸ್‍‍ಸಿ‍ಆರ್ ಸಿಸ್ಟಂ ಹೊಂದಿರುವ ಯೂರಿಯಾ ಟ್ಯಾಂಕ್‍‍ಯಿದ್ದು, ಡೀಸೆಲ್ ಪರ್ಟಿಕ್ಯುಲೇಟ್ ಫಿಲ್ಟರ್ (ಡಿ‍‍ಪಿ‍ಎಫ್) ಹೊಂದಲಿದೆ.

MOST READ: ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಬುಗಾಟಿ ವೇರಾನ್

ಬಿ‍ಎಸ್6 ಡೀಸೆಲ್ ಎಂಜಿನ್‍‍ನೊಂದಿಗೆ ರಸ್ತೆಗಿಳಿಯಲಿವೆ ಮಹೀಂದ್ರಾ ವಾಹನಗಳು

2.2 ಲೀಟರಿನ ಎಂಜಿನ್ ಹೊಂದಿರುವ ಸ್ಕಾರ್ಪಿಯೊ ಹಾಗೂ ಎಕ್ಸ್ ಯುವಿ 500 ವಾಹನಗಳೂ ಸಹ ಎಸ್‍‍ಸಿ‍ಆರ್ ಹಾಗೂ ಡಿ‍‍ಪಿ‍ಎಫ್ ಹೊಂದಲಿದ್ದು, ಇದರಿಂದ ಮಾಲಿನ್ಯವನ್ನು ನಿಯಂತ್ರಿಸಲು ಸಾಧ್ಯವಾಗಲಿದೆ. ಬೊಲೆರೊ ವಾಹನಗಳಲ್ಲಿ ಅಳವಡಿಸಲಾಗಿರುವ 2.5 ಲೀಟರಿನ 4 ಸಿಲಿಂಡರ್ ಎಂಜಿನ್ ಅನ್ನು ಮಹೀಂದ್ರಾ ಕಂಪನಿಯು ಹಾಗೆಯೇ ಉಳಿಸಿಕೊಳ್ಳಲಿದೆ.

MOST READ: ಅನಾವರಣಗೊಂಡ ಡುಕಾಟಿ ಹೈಪರ್‍ ಮೋಟಾರ್ಡ್ 950 ಬೈಕ್ ಪರಿಕಲ್ಪನೆ

ಬಿ‍ಎಸ್6 ಡೀಸೆಲ್ ಎಂಜಿನ್‍‍ನೊಂದಿಗೆ ರಸ್ತೆಗಿಳಿಯಲಿವೆ ಮಹೀಂದ್ರಾ ವಾಹನಗಳು

ಮಹೀಂದ್ರಾ ಕಂಪನಿಯು ತನ್ನ ಹೊಸ ಡೀಸೆಲ್ ಎಂಜಿನ್ ಆದ ಫ್ಯೂಚರ್‍ ಅನ್ನು ಅಭಿವೃದ್ಧಿಪಡಿಸುತ್ತಿದ್ದು, ಈ ಎಂಜಿನ್‍‍ನ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

Source: Rushlane

Most Read Articles

Kannada
English summary
Mahindra vehicles to get BS 6 diesel engine - Read in kannada
Story first published: Tuesday, June 4, 2019, 13:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X