ಹೊಸ ಟೆಕ್ನಾಲಜಿಯೊಂದಿಗೆ ಬಿಡುಗಡೆಯಾದ ದಟ್ಸನ್ ಗೊ, ಗೋ ಪ್ಲಸ್
ದಟ್ಸನ್ ಇಂಡಿಯಾ ಕಂಪನಿಯು ತನ್ನ ಗೊ ಹಾಗೂ ಗೋ ಪ್ಲಸ್ ವಾಹನಗಳನ್ನು ಅಪ್‍ಡೇಟ್ ಮಾಡಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಎರಡೂ ವಾಹನಗಳಲ್ಲಿ ಈಗ ಹೊಸ ಸುರಕ್ಷಾ ಫೀಚರ್ ಆದ ವೆಹಿಕಲ್ ಡೈನಾಮಿಕ್ ಕಂಟ್ರೋಲ್ (ವಿಡಿಸಿ) ಟೆಕ್ನಾಲಜಿಯನ್ನು ಅಳವಡಿಸಲಾಗಿದೆ.

ವಿಡಿಸಿ ಟೆಕ್ನಾಲಜಿಯು ಈ ಸೆಗ್‍ಮೆಂಟಿನಲ್ಲಿರುವ ದಟ್ಸನ್ ಗೊ ಹಾಗೂ ಗೋ ಪ್ಲಸ್ ವಾಹನಗಳಲ್ಲಿ ಮೊದಲ ಬಾರಿಗೆ ಅಳವಡಿಸಲಾಗಿರುವ ಸುರಕ್ಷಾ ಫೀಚರ್ ಆಗಿದೆ. ಇದರಿಂದಾಗಿ ಕಂಪನಿಯು ಕಾರುಗಳ ಮಾಲೀಕರಿಗೆ ನೀಡುತ್ತಿರುವ ವಿಶ್ವ ದರ್ಜೆಯ ಅನುಭವವನ್ನು ನೀಡಲಿದೆ. ವಿಡಿಸಿ ಟೆಕ್ನಾಲಜಿಯು ಈ ವಾಹನಗಳಲ್ಲಿರುವ ವ್ಹೀಲ್ ಸ್ಪೀಡ್, ಸ್ಟೀಯರಿಂಗ್ ವ್ಹೀಲ್ ಪೊಸಿಷನ್ ಹಾಗೂ ಲ್ಯಾಟೆರಲ್ ಆಕ್ಸೆಲರೇಷನ್‍ಗಳ ಮಾನದಂಡಗಳನ್ನು ಅರಿಯಲು ಸೆನ್ಸಾರ್‍ಗಳನ್ನು ಬಳಸುತ್ತದೆ.

ಈ ಫೀಚರ್ ಸುರಕ್ಷೆಯ ಚಾಲನಾ ಅನುಭವವನ್ನು ನೀಡುವುದರ ಜೊತೆಗೆ, ಕಾರು ಒವರ್ ಅಥವಾ ಅಂಡರ್‍ಸ್ಟೀಯರಿಂಗ್ ಆದಾಗ ಕಂಟ್ರೋಲ್ ಮಾಡುತ್ತದೆ. ಹೊಸ ಗೊ ಹಾಗೂ ಗೋ ಪ್ಲಸ್ ವಾಹನಗಳಲ್ಲಿ ಇಬಿಡಿಯಿರುವ ಎಬಿಎಸ್, ಬ್ರೇಕ್ ಅಸಿಸ್ಟ್, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂಗಳನ್ನು ಅಳವಡಿಸಲಾಗಿದೆ.

ಹೊಸ ಸುರಕ್ಷಾ ಫೀಚರ್‍ಗಳ ಹೊರತಾಗಿ, ದಟ್ಸನ್ ಕಂಪನಿಯು, ಗೊ ಹ್ಯಾಚ್‍ಬ್ಯಾಕ್‍ಗಾಗಿ ವಿವಿಡ್ ಬ್ಲೂ ಎಂಬ ಹೊಸ ಬಣ್ಣವನ್ನು ಬಿಡುಗಡೆ ಮಾಡಿದೆ. ದೇಶಿಯ ಮಾರುಕಟ್ಟೆಗಾಗಿ ಈ ಎರಡೂ ವಾಹನಗಳಲ್ಲಿ ಮಾಡಿರುವ ಏಕೈಕ ಬದಲಾವಣೆಯಿದು.

ಗೊ ಹಾಗೂ ಗೋ ಪ್ಲಸ್ ವಾಹನಗಳು 1.2 ಲೀಟರಿನ 3 ಸಿಲಿಂಡರಿನ ಪೆಟ್ರೋಲ್ ಎಂಜಿನ್ ಹೊಂದಿವೆ. ಈ ಎಂಜಿನ್ 67 ಬಿಹೆಚ್‍ಪಿ ಹಾಗೂ 104 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರ ಜೊತೆಗೆ 5 ಸ್ಪೀಡಿನ ಮ್ಯಾನುಯಲ್ ಗೇರ್‍ಬಾಕ್ಸ್ ಅನ್ನು ಸ್ಟಾಂಡರ್ಡ್ ಆಗಿ ಹೊಂದಿರುತ್ತದೆ. ನಿಸ್ಸಾನ್ ಇಂಡಿಯಾದ ಸೇಲ್ಸ್ ಹಾಗೂ ಕಮರ್ಷಿಯಲ್ ವಿಭಾಗದ ಡೈರೆಕ್ಟರ್ ಆದ ಹರ್ದಿಪ್ ಸಿಂಗ್ ಬ್ರಾರ್‍ರವರು ಮಾತನಾಡಿ, ದಟ್ಸನ್ ಗ್ರಾಹಕರಿಗೆ ಹೊಸ ಹಾಗೂ ಕ್ರಿಯಾಶೀಲ ಉತ್ಪನ್ನಗಳ ಅನುಭವವನ್ನು ಗ್ರಾಹಕರಿಗೆ ವರ್ಗಾಯಿಸುತ್ತದೆ.
MOST READ: ಬುಗಾಟಿ ಹೈಪರ್ ಕಾರು ಹೊಂದಿರುವ ಭಾರತೀಯರು

ನಮ್ಮ ವಾಹನಗಳು ಸುರಕ್ಷತೆಗೆ, ಹೊಸ ಟೆಕ್ನಾಲಜಿಗೆ, ವಿನ್ಯಾಸಕ್ಕೆ ಹಾಗೂ ಆರಾಮದಾಯಕ ಚಾಲನೆಗೆ ಒತ್ತು ನೀಡುತ್ತವೆ. ಹೊಸ ದಟ್ಸನ್ ಗೊ ಹಾಗೂ ಗೋ ಪ್ಲಸ್ ವಾಹನಗಳು ವಿಡಿಸಿ ಟೆಕ್ನಾಲಜಿಯನ್ನು ಹೊಂದಿರುವುದರಿಂದ ಇವುಗಳನ್ನು ಚಲಾಯಿಸುವವರು ಆತ್ಮ ವಿಶ್ವಾಸದಿಂದ ಚಲಾಯಿಸಲಿದ್ದಾರೆ ಎಂದು ತಿಳಿಸಿದರು.
MOST READ: ಮುಖೇಶ್ ಅಂಬಾನಿ ಬಳಿಯಿರುವ ದುಬಾರಿ ಕಾರುಗಳಿವು

ದಟ್ಸನ್ ಗೊ ಹ್ಯಾಚ್‍ಬ್ಯಾಕ್ ಹಾಗೂ ಗೋ ಪ್ಲಸ್ ಎಂಪಿವಿ ವಾಹನಗಳ ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಗೊ ಹ್ಯಾಚ್‍ಬ್ಯಾಕ್‍ನ ಆರಂಭಿಕ ಬೆಲೆಯು ರೂ.3.32 ಲಕ್ಷಗಳಿಂದ ಪ್ರಾರಂಭವಾದರೆ, ಟಾಪ್ ಕಾರಿನ ಬೆಲೆಯು ರೂ.5.02 ಲಕ್ಷಗಳವರೆಗೆ ಇದೆ. ಗೋ ಪ್ಲಸ್ ಎಂಪಿವಿಯ ಆರಂಭಿಕ ಬೆಲೆಯು ರೂ.3.86 ಲಕ್ಷಗಳಿಂದ ಶುರುವಾದರೆ, ಇದರಲ್ಲಿರುವ ಟಾಪ್ ಮಾದರಿಯ ಕಾರಿನ ಬೆಲೆಯು ರೂ.5.74 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋ ರೂಂದರದಂತೆ ಇವೆ.
MOST READ: ಕ್ರಿಶ್ಚಿಯಾನೊ ರೊನಾಲ್ಡೊ ಕಾರು ಸಂಗ್ರಹಕ್ಕೆ ಮತ್ತೊಂದು ಐಷಾರಾಮಿ ಕಾರು

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ದಟ್ಸನ್‍ನ ಗೊ ಹಾಗೂ ಗೋ ಪ್ಲಸ್ ವಾಹನಗಳಲ್ಲಿ ವಿಡಿಸಿ ಎಂಬ ಹೊಸ ಸುರಕ್ಷಾ ಫೀಚರ್ ಅನ್ನು ಅಳವಡಿಸಲಾಗಿದೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ದಟ್ಸನ್ ಗೊ ವಾಹನವು ಟಾಟಾ ಟಿಯಾಗೊ, ಮಾರುತಿ ವ್ಯಾಗನ್ ಆರ್ ವಾಹನಗಳಿಗೆ ಪೈಪೋಟಿ ನೀಡಲಿದೆ. ದಟ್ಸನ್ ಗೋ ಪ್ಲಸ್ ಮಾರುತಿ ಎರ್ಟಿಗಾ ಹಾಗೂ ರೆನಾಲ್ಟ್ ಟ್ರಿಬರ್ ಎಂಪಿವಿಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications








