ಬುಗಾಟಿ ಹೈಪರ್ ಕಾರು ಹೊಂದಿರುವ ಭಾರತೀಯರು
ಬುಗಾಟಿ ಬ್ರಾಂಡಿನ ಕಾರು ಅನೇಕ ಕಾರು ಪ್ರಿಯರಿಗೆ ಪೋಸ್ಟರ್ ಕಾರ್ ಆಗಿದ್ದರೆ, ಇನ್ನೂ ಕೆಲವರಿಗೆ ಬೆಡ್ ರೂಮಿನ ಪೋಸ್ಟರ್ ಆಗಿ ಜೀವನ ಪರ್ಯಂತ ಉಳಿಯುತ್ತದೆ. ಅತಿ ದುಬಾರಿ ಬೆಲೆಯ ಈ ಕಾರು ಎಲ್ಲರಿಗೂ ಸುಲಭವಾಗಿ ಕೈಗೆಟುಕುವುದಿಲ್ಲ.

ಬುಗಾಟಿ ಕಾರು ಕೆಲವರ ಮೊದಲ, ಎರಡನೇಯ ಅಥವಾ ಹತ್ತನೇಯ ಕಾರ್ ಆಗಿರುವುದಿಲ್ಲ. ಬಹುತೇಕ ಬುಗಾಟಿ ಕಾರ್ ಮಾಲೀಕರು ನೂರಾರು ಕಾರುಗಳನ್ನು ಹೊಂದಿರುತ್ತಾರೆ. ಆದರೂ ಈ ಫ್ರಾನ್ಸ್ ಮೂಲದ ಕಾರನ್ನು ಕೊಳ್ಳಲು ಬಯಸುತ್ತಾರೆ. ಭಾರತೀಯ ಸೆಲೆಬ್ರಿಟಿಗಳು ಈ ಕಾರನ್ನು ಹೊಂದಿರುವ ಬಗ್ಗೆ ಅನೇಕ ವದಂತಿಗಳಿವೆ. ಆದರೆ ಭಾರತದಲ್ಲಿ ಇದುವರೆಗೂ ಈ ಕಾರನ್ನು ಯಾರೂ ಹೊಂದಿಲ್ಲ. ಭಾರತದ ರಸ್ತೆಗಳಲ್ಲಿ ಕಾಣಿಸಿಕೊಂಡ ಬುಗಾಟಿ ವೇರಾನ್ ಕಾರ್ ಅನ್ನು ಟೆಸ್ಟ್ ಡ್ರೈವ್‍ಗಾಗಿ ತರಲಾಗಿತ್ತು.

ಜೆ ಆರ್ ಡಿ ಟಾಟಾ ರವರು ಈ ಕಾರನ್ನು ಹೊಂದಿದ್ದ ಮೊದಲ ಭಾರತೀಯರಾಗಿದ್ದಾರೆ. ಅವರ ಬಳಿಯಿದ್ದ ಕಾರು 2,000 ಸಿಸಿಯ ಎಂಜಿನ್ ಹೊಂದಿತ್ತು. ಯಾವೆಲ್ಲಾ ಭಾರತೀಯರ ಬಳಿ ಬುಗಾಟಿ ಕಾರ್ ಇದೆ ಎಂಬುದರ ಬಗ್ಗೆ ನೋಡಿದಾಗ ಪ್ರಪಂಚದಲ್ಲಿ ಕೇವಲ ಮೂರು ಭಾರತೀಯರು ಮಾತ್ರ ಈ ಬುಗಾಟಿ ಕಾರನ್ನು ಹೊಂದಿದ್ದಾರೆ ಎಂದು ತಿಳಿದು ಬಂತು. ಅವರುಗಳ ಬಗ್ಗೆ ತಿಳಿದು ಕೊಳ್ಳೊಣ.

ರುಬೇನ್ ಸಿಂಗ್
ಇವರು ಕಾರುಗಳ ಬಗ್ಗೆ ಕ್ರೇಜ್ ಹೊಂದಿರುವ ಜನಪ್ರಿಯ ಭಾರತೀಯರಲ್ಲಿ ಒಬ್ಬರು. ರುಬೇನ್ ಸಿಂಗ್‍ರವರು ಲಂಡನ್‍ನಲ್ಲಿ ನೆಲೆಸಿದ್ದು, ತಮ್ಮ ಕನಸಿನ ಗ್ಯಾರೇಜ್ ಅನ್ನು ಹೊಂದಿದ್ದಾರೆ. ಅವರ ಕಾರು ಸಂಗ್ರಹದಲ್ಲಿ ಅನೇಕ ರೋಲ್ಸ್ ರಾಯ್ಸ್ ಕಾರುಗಳಿದ್ದು, ಇತ್ತೀಚಿಗೆ ಖರೀದಿಸಿದ 3 ರೋಲ್ಸ್ ರಾಯ್ಸ್ ಕಲಿನನ್ ಎಸ್‍ಯುವಿ ಕಾರುಗಳು ಅದರಲ್ಲಿ ಸೇರಿವೆ.

ಅವುಗಳನ್ನು ಪೂರ್ತಿಯಾಗಿ ಮಾಡಿಫೈ ಮಾಡಲಾಗಿದೆ. ಅವರ ಬಳಿಯಿರುವ ಇನ್ನಿತರ ಕಾರುಗಳೆಂದರೆ ಪೋರ್ಷೆ 918 ಸ್ಪೈಡರ್, ಫೆರಾರಿ ಎಫ್12 ಬರ್ಲಿನೆಟಾ, ಪಗಾನಿ ಹುವಯರಾ, ಫೆರಾರಿ ಲಾ ಫೆರಾರಿ ಹಾಗೂ ಮೆಕ್‍ಲಾರೆನ್ ಪಿ1. ಆದರೆ ಅವರ ಗ್ಯಾರೇಜ್‍ನಲ್ಲಿರುವ ಅತಿ ದುಬಾರಿ ಬೆಲೆಯ ಕಾರ್ ಎಂದರೆ ಬುಗಾಟಿ ವೇರಾನ್ 16.4 ಕಾರು. ರುಬೇನ್ ಸಿಂಗ್‍ರವರಿಗೆ ತಮ್ಮ ವೇರಾನ್ ಕಾರಿನ ಮೇಲೆ ಎಷ್ಟು ಪ್ರೀತಿಯಿದೆ ಎಂದರೆ ತಮ್ಮ ಬುಗಾಟಿ ಕಾರಿನ ಜೊತೆಯಿರುವ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ.

ಕೆಂಪು, ಕಪ್ಪು ಬಣ್ಣದಿಂದ ಕೂಡಿರುವ ಈ ವೇರಾನ್ ಕಾರು ನೋಡಲು ಅತ್ಯಾಕರ್ಷಕವಾಗಿ ಕಾಣುತ್ತದೆ. ರುಬೇನ್ ಸಿಂಗ್‍ರವರ ಬಳಿಯಿರುವ ಬುಗಾಟಿ ಕಾರು ಅಪ್‍ಡೇಟ್ ಮಾಡಲಾದ ಕಾರ್ ಆಗಿದ್ದು, ಇದರ ಬೆಲೆಯು ಅಪ್‍ಡೇಟ್ ಮಾಡಿರುವ ಕಾರಣಕ್ಕೆ ಶೋರೂಂ ದರಕ್ಕಿಂತ ಹೆಚ್ಚಾಗಿದೆ. ಈ ಕಾರಿನಲ್ಲಿ 8.0 ಲೀಟರಿನ ಕ್ವಾಡ್ ಟರ್ಬೊಚಾರ್ಜ್ಡ್ ಡಬ್ಲ್ಯು16 ಎಂಜಿನ್‍ಯಿದ್ದು, 1001 ಬಿಹೆಚ್‍ಪಿ ಉತ್ಪಾದಿಸುತ್ತದೆ. ಬುಗಾಟಿ ವೇರಾನ್ ಕಾರಿನ ಬೆಲೆಯು ರೂ.9.8 ಕೋಟಿಗಳಾಗಿವೆ. ಅಪ್‍ಗ್ರೇಡ್ ಮಾಡಲಾಗಿರುವ ಕಾರಣದಿಂದ ದರವು ಇನ್ನೂ ಹೆಚ್ಚಾಗಲಿದೆ.
MOST READ: ಅತಿ ಮೈಲೇಜ್ ನೀಡಬಲ್ಲ ಸ್ಮಾರ್ಟ್ ಹೈಬ್ರಿಡ್ ಎಂಜಿನ್‌ನೊಂದಿಗೆ ಮಾರುತಿ ಬಲೆನೊ ಬಿಡುಗಡೆ

ಸಿ.ಜೆ ರಾಯ್
ಡಾ. ಸಿ ಜೆ ರಾಯ್‍ರವರು ದುಬೈನಲ್ಲಿ ನೆಲೆಸಿದ್ದು, ದುಬೈನಲ್ಲಿ ದೊಡ್ಡ ರಿಯಲ್ ಎಸ್ಟೇಟ್ ಕಂಪನಿಯಾದ ಕಾನ್ಫಿಡೆಂಟ್ ಗ್ರೂಪಿನ ಸ್ಥಾಪಕರಾಗಿದ್ದಾರೆ. ಅವರು ವಿಶ್ವದ್ಯಾಂತ ತಮ್ಮ ಬಿಸಿನೆಸ್ ಸ್ಕಿಲ್‍ಗಾಗಿ ಖ್ಯಾತರಾಗಿದ್ದಾರೆ. ಅವರು ಅದ್ಭುತವೆನಿಸುವಂತಹ ಗ್ಯಾರೇಜ್ ಹೊಂದಿದ್ದಾರೆ. ಅನೇಕ ವರದಿಗಳ ಪ್ರಕಾರ ರಾಯ್‍ರವರು ಹೊಂದಿರುವ ಗ್ಯಾರೇಜ್ ದುಬೈನಲ್ಲಿರುವ ದುಬಾರಿ ಗ್ಯಾರೇಜ್ ಆಗಿದೆ. ಅವರ ಬಳಿಯಿರುವ ಕಾರುಗಳ ಸಂಗ್ರಹವನ್ನು ನೋಡಿದರೆ ತಲೆ ತಿರುಗಿ ಬೀಳುವುದು ಗ್ಯಾರಂಟಿ. ಡಾ. ರಾಯ್‍ರವರು ನೀಲಿ, ಕ್ರೋಮ್ ಬಣ್ಣದಲ್ಲಿರುವ ಬುಗಾಟಿ ವೇರಾನ್ ಕಾರ್ ಹೊಂದಿದ್ದು, ವಿಭಿನ್ನವಾಗಿ ಕಾಣಿಸುತ್ತದೆ.
ಈ ಕಾರನ್ನು ಮಾತ್ರವಲ್ಲದೇ ಅವರ ಗ್ಯಾರೇಜ್‍ನಲ್ಲಿ ಅಸಂಖ್ಯ ರೋಲ್ಸ್ ರಾಯ್ಸ್ ಕಾರುಗಳ ಜೊತೆಗೆ, ಲ್ಯಾಂಬೊರ್ಗಿನಿ, ಫೆರಾರಿ 458, ಮೆಕ್‍ಲಾರೆನ್ 720, ಕೊಯಿನಿಗ್ ಅಗೇರಾ ಕಾರುಗಳಿವೆ. ಅವರ ಬಳಿಯಿರುವ ಎಲ್ಲಾ ಕಾರುಗಳು ಆಕರ್ಷಕ ಬಣ್ಣಗಳನ್ನು ಹೊಂದಿವೆ. ಅವರ ಗ್ಯಾರೇಜ್‍ನಲ್ಲಿರುವ ಸ್ಪೋರ್ಟ್ಸ್ ಕಾರುಗಳು ಆರೇಂಜ್ ಬಣ್ಣವನ್ನು ಹೊಂದಿದ್ದರೆ, ರೋಲ್ಸ್ ರಾಯ್ಸ್ ಕಾರುಗಳು ಗ್ರೇ ಬಣ್ಣದಲ್ಲಿವೆ. ಸೂಪರ್ ಲಗ್ಷುರಿ ಕಾರುಗಳಾದ ಬೆಂಟ್ಲಿ ಹಾಗೂ ಬುಗಾಟಿ ಕಾರುಗಳು ಎಲೆಕ್ಟ್ರಿಕ್ ಬ್ಲೂ ಬಣ್ಣವನ್ನು ಹೊಂದಿವೆ.
MOST READ: ಕಾರು ಮಾರಾಟದಲ್ಲಿ ಮಾರುತಿ ಸುಜುಕಿಗೆ ಬಿಗ್ ಲಾಸ್

ಮಯೂರ್ ಶ್ರೀ
ಅಮೇರಿಕಾದಲ್ಲಿರುವ ಭಾರತೀಯ ಮೂಲದ ಉದ್ಯಮಿ ಮಯೂರ್ ಶ್ರೀರವರು ಬುಗಾಟಿ ಕಾರನ್ನು ಖರೀದಿಸಿದ ಭಾರತೀಯ ಮೂಲದ ಮೊದಲ ವ್ಯಕ್ತಿಯಾಗಿದ್ದಾರೆ. ಟೆಕ್ಸಾಸ್ ರಾಜ್ಯಕ್ಕೆ ಡೆಲಿವರಿ ಮಾಡಿದ ಮೊದಲ ಬುಗಾಟಿ ಚಿರೊನ್ ಕಾರು ಇವರಿಗೆ ಸೇರಿದ್ದಾಗಿದೆ. ಮಯೂರ್ ಶ್ರೀರವರು ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ಬುಗಾಟಿ ಚಿರೊನ್ ಕಾರನ್ನು ತಮ್ಮ ತಂದೆಗಾಗಿ ಖರೀದಿಸಿದ್ದರು. ಈ ಕಾರಿಗೆ ಹೆಚ್ಚುವರಿಯಾಗಿ ಇಂಟಿರಿಯರ್ ಹಾಗೂ ಹೊರಭಾಗಕ್ಕೆ ಬಣ್ಣವನ್ನು ಅಪ್‍ಡೇಟ್ ಮಾಡಲಾಗಿದೆ. ಈ ಕಾರನ್ನು ಮಯೂರ್ ಶ್ರೀರವರು ಬುಕ್ ಮಾಡಿದ 2 ವರ್ಷಗಳ ನಂತರ ಡೆಲಿವರಿ ಮಾಡಲಾಯಿತು. ಬುಗಾಟಿ ಚಿರೊನ್ ವಿಶ್ವದ ಅತಿ ದುಬಾರಿ ಕಾರುಗಳಲ್ಲಿ ಒಂದಾಗಿದ್ದು, ಅಮೇರಿಕಾದಲ್ಲಿ ಈ ಕಾರಿನ ಬೆಲೆಯು ರೂ.21 ಕೋಟಿಗಳಾಗಿದೆ.
MOST READ: ಎ3 ಕಾರಿನ ಮೇಲೆ ಐದು ಲಕ್ಷ ಕಡಿತ ಗೊಳಿಸಿದ ಆಡಿ
ಮಯೂರ್ ಶ್ರೀರವರು ಕಾರು ಪ್ರಿಯರಾಗಿದ್ದು, ತಮ್ಮ ಬಹುತೇಕ ಸಮಯವನ್ನು ಟ್ರಾಕ್‍ನಲ್ಲಿ ಕಳೆಯುತ್ತಾರೆ. ಅವರ ಗ್ಯಾರೇಜ್‍ನಲ್ಲಿ ಪೋರ್ಷೆ ಜಿಟಿ ಆರ್‍ಎಸ್2, ಮೆಕ್‍ಲಾರೆನ್ 720ಎಸ್, ರೋಲ್ಸ್ ರಾಯ್ಸ್ ಫಾಂಟಮ್ ಡಿಹೆಚ್‍ಸಿ, ಲ್ಯಾಂಬೊರ್ಗಿನಿ ಅವೆಂಟಡರ್ ಎಸ್‍ವಿಜೆ, ಪೋರ್ಷೆ ಜಿಟಿ ಆರ್‍ಎಸ್3 ಹಾಗೂ ಇತರ ದುಬಾರಿ ಬೆಲೆಯ ಕಾರುಗಳಿವೆ. ಅವರ ಬಳಿಯಿರುವ ಕಾರುಗಳಿಗೆ ವಿಶೇಷವಾದ ನಂಬರ್ ಪ್ಲೇಟ್‍ಗಳನ್ನು ಅಳವಡಿಸಿ ಅವುಗಳ ಮೇಲೆ ತಮ್ಮ ಹೆಸರನ್ನು ಹಾಕಿಸಿದ್ದಾರೆ.


Click it and Unblock the Notifications








