ಎ3 ಕಾರಿನ ಮೇಲೆ ಐದು ಲಕ್ಷ ಕಡಿತ ಗೊಳಿಸಿದ ಆಡಿ

ಆಡಿ ಎ3 ಸೆಡಾನ್ ಕಾರು ಭಾರತೀಯ ಮಾರುಕಟ್ಟೆಯಲಿ ಮಹತ್ವವಾದ ಮೈಲಿಗಲ್ಲನ್ನು ಸ್ಥಾಪಿಸಿದೆ. ಈ ಸೆಡಾನ್ ಕಾರು ಭಾರತದಲ್ಲಿ ಬಿಡುಗಡೆಯಾಗಿ ಐದು ವರ್ಷಗಳು ಕಳೆದಿವೆ. ಆಡಿ ಎ3 ಸೆಡಾನ್ ಮೊದಲ ಬಾರಿಗೆ 2014ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಂಡಿತ್ತು.

ಎ3 ಕಾರಿನ ಮೇಲೆ ಐದು ಲಕ್ಷ ಕಡಿತ ಗೊಳಿಸಿದ ಆಡಿ

2014ರಲ್ಲಿ ಈ ಕಾರನ್ನು ವಿಶ್ವದ ವರ್ಷದ ಕಾರು ಎಂದು ಕರೆಯಲಾಗಿತ್ತು. 2014ರಲ್ಲಿ ಬಿಡುಗಡೆಯಾದಾಗ ಆಕರ್ಷಕವಾದ ಬೆಲೆಯನ್ನು ಹೊಂದಿದ್ದ ಕಾರಣಕ್ಕಾಗಿ ದೇಶಿಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿತ್ತು. ಆಡಿ ಕಂಪನಿಯು ಏಪ್ರಿಲ್ 2017ರಲ್ಲಿ ಈ ಕಾರಿನ ಅಪ್‍‍ಡೇಟೆಡ್ ಆವೃತ್ತಿಯನ್ನು ಬಿಡುಗಡೆಗೊಳಿಸಿತ್ತು. ಎ3 ಸೆಡಾನ್ ಕಾರು ಭಾರತದಲ್ಲಿ ಬಿಡುಗಡೆಯಾಗಿ 5 ವರ್ಷಗಳಾದ ಹಿನ್ನೆಲೆಯಲ್ಲಿ ಆಡಿ ಕಂಪನಿಯು ಈ ಕಾರಿನ ದರಗಳನ್ನು ಕಡಿತಗೊಳಿಸಿದೆ.

ಎ3 ಕಾರಿನ ಮೇಲೆ ಐದು ಲಕ್ಷ ಕಡಿತ ಗೊಳಿಸಿದ ಆಡಿ

ಎ3 ಕಾರಿನ ಬೆಲೆಯನ್ನು ರೂ. 5ಲಕ್ಷಗಳವರೆಗೆ ಕಡಿತಗೊಳಿಸಿದೆ. ಇದರಿಂದಾಗಿ ಹೊಸ ಆಡಿ ಎ3 ಕಾರಿನ ಬೆಲೆಯು ಎಕ್ಸ್ ಶೋ ರೂಂ ದರದಂತೆ ರೂ.28,99,000 ಗಳಿಂದ ಪ್ರಾರಂಭವಾಗುತ್ತದೆ. ಆಡಿ ಎ3 ಕಾರಿನಲ್ಲಿ ನಾಲ್ಕು ಮಾದರಿಗಳಿದ್ದು 35 ಟಿ‍ಎಫ್‍ಎಸ್‍ಐ ಪ್ರಿಮೀಯಂ ಪ್ಲಸ್ ಬೆಲೆಯು ರೂ.28.99 ಲಕ್ಷಗಳಾಗಿದೆ(ಹಳೆಯ ದರ ರೂ.33.12 ಲಕ್ಷ).

ಎ3 ಕಾರಿನ ಮೇಲೆ ಐದು ಲಕ್ಷ ಕಡಿತ ಗೊಳಿಸಿದ ಆಡಿ

35 ಟಿ‍ಎಫ್‍ಎಸ್‍ಐ ಟೆಕ್ನಾಲಜಿಯ ಬೆಲೆಯು ರೂ.30.99 ಲಕ್ಷ (ಹಳೆಯ ದರ ರೂ.34.57 ಲಕ್ಷ), 35 ಟಿಡಿಐ ಪ್ರಿಮೀಯಂ ಪ್ಲಸ್ ಬೆಲೆ ರೂ.29.99 ಲಕ್ಷ ( ಹಳೆಯ ದರ ರೂ.34.93 ಲಕ್ಷ) ಹಾಗೂ 35 ಟಿ‍‍ಡಿ‍ಐ ಟೆಕ್ನಾಲಜಿಯ ಬೆಲೆ ರೂ.31.99 ಲಕ್ಷ (ಹಳೆಯ ದರ ರೂ.36.12 ಲಕ್ಷ) ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ದರಗಳಾಗಿವೆ.

ಮಾದರಿಗಳು

ಹಳೆಯ ದರಗಳು

ಹೊಸ ದರಗಳು

ಎ3 35 ಟಿ‍ಎಫ್‍ಎಸ್‍ಐ ಪ್ರಿಮೀಯಂ ಪ್ಲಸ್ ರೂ. 33,12,000/- ರೂ. 28,99,000/-
ಎ3 35 ಟಿ‍ಎಫ್‍ಎಸ್‍ಐ ಟೆಕ್ನಾಲಜಿ ರೂ. 34,57,000/- ರೂ. 30,99,000/-
ಎ3 35 ಟಿಡಿಐ ಪ್ರಿಮೀಯಂ ಪ್ಲಸ್ ರೂ. 34,93,000/- ರೂ. 29,99,000/-
ಎ3 35 ಟಿ‍‍ಡಿ‍ಐ ಟೆಕ್ನಾಲಜಿ ರೂ. 36,12,000/- ರೂ. 31,99,000/-

ಎ3 ಕಾರಿನ ಮೇಲೆ ಐದು ಲಕ್ಷ ಕಡಿತ ಗೊಳಿಸಿದ ಆಡಿ

ಹೊಸ ಆಡಿ ಎ3 ಸೆಡಾನ್ ಕಾರು ಲಗ್ಷುರಿಗೆ ಹೆಸರುವಾಸಿಯಾಗಿದೆ. ಈ ಕಾರಿನಲ್ಲಿ ಪನೋರಾಮಿಕ್ ಸನ್‍‍ರೂಫ್, ವೈರ್‍‍ಲೆಸ್ ಚಾರ್ಜ್ ಹೊಂದಿರುವ ಆಡಿ ಫೋನ್ ಬಾಕ್ಸ್, ರೇರ್ ವೆಂಟ್‍‍ಗಳನ್ನು ಹೊಂದಿರುವ 2 ಝೋನ್ ಏರ್ ಕಂಡಿಷನಿಂಗ್‍‍ಗಳಿವೆ. ಆಡಿ ಎ3ಎಸ್ ಲೈನ್ ಪ್ಯಾಕೇಜ್‍‍ನಲ್ಲಿ ಎಸ್ ಲೈನ್ ಫ್ರಂಟ್ ಹಾಗೂ ರೇರ್ ಬಂಪರ್‍‍ಗಳು, ಸೈಡ್ ಸ್ಕರ್ಟ್ಸ್, ಎಸ್ ಲೈನ್ ರೇಡಿಯೇಟರ್ ಗ್ರಿಲ್ ಹಾಗೂ ಕ್ರೋಮ್ ಟೇಲ್ ಪೈಪ್ ಹೊಂದಿರುವ ರೇರ್ ಡಿಫ್ಯೂಸರ್, ಇಲ್ಯೂಮಿನಿಟೆಡ್ ಡೋರ್ ಸಿಲ್ ಟ್ರಿಮ್ ಹಾಗೂ ಫ್ರಂಟ್ ಫೆಂಡರ್‍‍ಗಳ ಮೇಲೆ ಎಸ್ ಲೈನ್ ಬ್ಯಾಡ್ಜಿಂಗ್‍‍ಗಳಿವೆ.

ಎ3 ಕಾರಿನ ಮೇಲೆ ಐದು ಲಕ್ಷ ಕಡಿತ ಗೊಳಿಸಿದ ಆಡಿ

ಫೋಕ್ಸ್ ವ್ಯಾಗನ್‍‍ನ ಎಂ‍‍ಕ್ಯೂ‍‍ಬಿ ಪ್ಲಾಟ್‍‍ಫಾರಂ ಮೇಲೆ ಆಧಾರಿತವಾಗಿರುವ ಆಡಿ ಎ3 ಸೆಡಾನ್ 4,456 ಎಂಎಂ ಉದ್ದ, 1,796 ಎಂಎಂ ಅಗಲ, 1,416 ಎಂಎಂ ಎತ್ತರ ಹಾಗೂ 2,637 ಎಂಎಂ ವ್ಹೀಲ್ ಬೇಸ್ ಹೊಂದಿದೆ. ಇದು ಕಾಂಪ್ಯಾಕ್ಟ್ ಸೆಡಾನ್ ಕಾರ್ ಆಗಿದ್ದು, ಒಟ್ಟು 5 ಜನರು ಕೂರಬಹುದಾಗಿದೆ. ಈ ಕಾರು 425 ಲೀಟರ್ ಬೂಟ್ ಸ್ಪೇಸ್ ಹೊಂದಿದೆ. ಹಿಂಬದಿಯಲ್ಲಿರುವ ಸೀಟುಗಳನ್ನು ಮಡುಚಿದಾಗ 1,100 ಲೀಟರ್‍‍ನಷ್ಟು ಬೂಟ್ ಸ್ಪೇಸ್ ದೊರೆಯಲಿದೆ.

MOST READ: ಅತಿ ಮೈಲೇಜ್ ನೀಡಬಲ್ಲ ಸ್ಮಾರ್ಟ್ ಹೈಬ್ರಿಡ್‌ ಎಂಜಿನ್‌ನೊಂದಿಗೆ ಮಾರುತಿ ಬಲೆನೊ ಬಿಡುಗಡೆ

ಎ3 ಕಾರಿನ ಮೇಲೆ ಐದು ಲಕ್ಷ ಕಡಿತ ಗೊಳಿಸಿದ ಆಡಿ

ಆಡಿ ಎ3 ಸೆಡಾನ್ ಕಾರು ಪೆಟ್ರೋಲ್ ಆವೃತ್ತಿ ಹಾಗೂ ಡೀಸೆಲ್‍ ಆವೃತ್ತಿಗಳಲ್ಲಿ ದೊರೆಯುತ್ತದೆ. 1.4 ಲೀಟರಿನ ಟಿ‍ಎಫ್‍ಎಸ್‍ಐ ಪೆಟ್ರೋಲ್ ಎಂಜಿನ್‍ 150 ಹೆಚ್‍‍ಪಿ ಪವರ್ ಹಾಗೂ 250 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ 7 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿದೆ.

MOST READ: ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಯಮಹಾ ಆರ್15 ಮೋಟೊ ಜಿಪಿ

ಎ3 ಕಾರಿನ ಮೇಲೆ ಐದು ಲಕ್ಷ ಕಡಿತ ಗೊಳಿಸಿದ ಆಡಿ

2.0 ಲೀಟರಿನ 4 ಸಿಲಿಂಡರಿನ ಡೀಸೆಲ್ ಎಂಜಿನ್ 143 ಹೆಚ್‍‍ಪಿ ಪವರ್ ಹಾಗೂ 320 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರಲ್ಲಿ 6 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಪೆಟ್ರೋಲ್ ಎಂಜಿನ್‍‍ನಲ್ಲಿ ಪ್ರತಿ ಲೀಟರಿಗೆ 19.2 ಕಿ.ಮೀ ಮೈಲೇಜ್ ಹಾಗೂ ಡೀಸೆಲ್ ಎಂಜಿನ್‍‍ನಲ್ಲಿ ಪ್ರತಿ ಲೀಟರಿಗೆ 20.38 ಕಿ.ಮೀ ಮೈಲೇಜ್ ನೀಡಲಿದೆ.

MOST READ: ಕಾರು ಮಾರಾಟದಲ್ಲಿ ಮಾರುತಿ ಸುಜುಕಿಗೆ ಬಿಗ್ ಲಾಸ್

ಎ3 ಕಾರಿನ ಮೇಲೆ ಐದು ಲಕ್ಷ ಕಡಿತ ಗೊಳಿಸಿದ ಆಡಿ

ಆಡಿ ಎ3 ಸೆಡಾನ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ಸಿ‍ಎಲ್‍ಎ ಕ್ಲಾಸ್ ಕಾರಿಗೆ ಪೈಪೋಟಿ ನೀಡಲಿದೆ.

Most Read Articles

Kannada
Read more on ಆಡಿ audi
English summary
Audi A3 price cut upto Rs 5 lakhs - Read in kannada
Story first published: Saturday, June 1, 2019, 17:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X