ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಯಮಹಾ ಆರ್15 ಮೋಟೊ ಜಿಪಿ

ಯಮಹಾ ಕಂಪನಿಯು ವೈಝಡ್‍ಎಫ್ - ಆರ್15 ವಿ3.0 ಬೈಕಿನ ಮೋಟೊ ಜಿಪಿ ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಅಣಿಯಾಗಿದೆ. ಈ ಹೊಸ ಬೈಕ್ ಅನ್ನು ವೈ‍‍ಝಡ್‍ಆರ್ ಎಂ 1 ಮೋಟೊ ಜಿಪಿ ಬೈಕಿನ ನೆನಪಿಗಾಗಿ ಮುಂದಿನ ಕೆಲವೇ ತಿಂಗಳುಗಳಲ್ಲಿ ಬಿಡುಗಡೆಗೊಳಿಸಲಾಗುವುದು.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಯಮಹಾ ಆರ್15 ಮೋಟೊ ಜಿಪಿ

ವಾಲೆಂಟಿನೋ ರೊಸಿ ಹಾಗೂ ಮಾವೆರಿಕ್ ವಿನಾಲ್ಸ್ ರವರು ಚಾಲನೆ ಮಾಡುವ ಮೋಟೊ ಜಿಪಿ ಮೋಟಾರ್ ಬೈಕ್ ಗಳಲ್ಲಿ ಕಂಡು ಬರುವ ಗ್ರಾಫಿಕ್ಸ್ ಹಾಗೂ ಡೆಕಾಲ್‍‍ಗಳನ್ನು ಈ ಬೈಕುಗಳು ಹೊಂದಿರಲಿವೆ. ಯಮಹಾ ಕಂಪನಿಯು ಮೋಟೊ ಜಿಪಿಯ ಪ್ರೇರಿತವಾಗಿರುವ ಬೇಬಿ ಸೂಪರ್ ಸ್ಪೋರ್ಟ್ ಬೈಕ್ ಆವೃತ್ತಿಯನ್ನು ಬಿಡುಗಡೆ ಮಾಡಲು ಚಿಂತಿಸುತ್ತಿದೆ. ಯಮಹಾ ಕಂಪನಿಯು ಈ ಹಿಂದೆಯೂ ಸಹ ಈ ರೀತಿಯಾಗಿ ಬೈಕುಗಳನ್ನು ಬಿಡುಗಡೆ ಮಾಡಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಯಮಹಾ ಆರ್15 ಮೋಟೊ ಜಿಪಿ

2018ರ ಆಗಸ್ಟ್ ನಲ್ಲಿ ಯಮಹಾ ಕಂಪನಿಯು, ವೈಝಡ್‍ಎಫ್ - ಆರ್ 15 ವಿ3.0ದ ಮೋಟೊ ಜಿಪಿ ಎಡಿಷನ್ ಅನ್ನು ಬಿಡುಗಡೆಗೊಳಿಸಿತ್ತು. 2018ರಲ್ಲಿ ಎನಿಯೋಸ್ ಹಾಗೂ ಮೊವಿಸ್ಟಾರ್‍‍ಗಳು ಯಮಹಾ ಮೋಟೊ ಜಿಪಿಯ ಪ್ರಾಯೋಜಿತರಾಗಿದ್ದ ಕಾರಣ ಈ ಡೆಕಾಲ್‍‍‍ಗಳನ್ನು ಆರ್15ನ ಮೋಟೊ‍‍ಜಿಪಿ ಎಡಿಷನ್‍‍ನಲ್ಲಿ ಅಳವಡಿಸಲಾಗಿತ್ತು.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಯಮಹಾ ಆರ್15 ಮೋಟೊ ಜಿಪಿ

ಈ ವರ್ಷ ಮಾನ್‍‍ಸ್ಟರ್ ಎನರ್ಜಿ ಕಂಪನಿಯು ಪ್ರಿಮೀಯರ್ ರೇಸಿಂಗ್ ಟೀಂ‍‍ನ ಪ್ರಾಯೋಜಕರಾಗಿದ್ದಾರೆ. ಆದ ಕಾರಣ ಮಾನ್‍‍ಸ್ಟರ್ ಎನರ್ಜಿ ಲೊಗೊವನ್ನು ಮೋಟೊ ಜಿಪಿ ಬೈಕ್ ಹಾಗೂ ಆರ್15 ಮೋಟೊ ಜಿಪಿ ಎಡಿಷನ್ ಬೈಕುಗಳ ಮೇಲೆ ಕಾಣಬಹುದಾಗಿದೆ. ಮಾನ್‍‍ಸ್ಟರ್ ಎನರ್ಜಿ ಲೊಗೊದ ಜೊತೆಯಲ್ಲಿ ಎನಿಯೋಸ್ ಡೆಕಾಲ್‍‍ಗಳನ್ನು ಸಹ ಕಾಣಬಹುದು.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಯಮಹಾ ಆರ್15 ಮೋಟೊ ಜಿಪಿ

ಯಮಹಾ ಕಂಪನಿಯು ಇದುವರೆಗೂ ಹೊಸ ಆರ್15 ವಿ3.0 ಮೋಟೊ ಜಿಪಿ ಎಡಿಷನ್ ಬೈಕಿನ ವಿನ್ಯಾಸವನ್ನು ಬಿಡುಗಡೆಗೊಳಿಸದೇ ಇದ್ದರೂ, ಇತ್ತೀಚಿಗೆ ಇಂಗೆಂಡಿನಲ್ಲಿ ಬಿಡುಗಡೆಗೊಳಿಸಲಾದ ವೈ‍‍ಝಡ್‍ಎಫ್ - ಆರ್125 ಮೋಟೊ ಜಿಪಿ ಎಡಿಷನ್ ಬೈಕಿನಂತೆಯೇ ಇರಲಿದೆ. ಆದರೆ ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಆರ್15 ಹಾಗೂ ಆರ್125 ಬೈಕುಗಳಲ್ಲಿರುವ ಅಪ್‍‍ಸೈಡ್ ಡೌನ್ ಫೋರ್ಕ್ ಹಾಗೂ ವೈ ಶೇಪಿನಲ್ಲಿರುವ ವಿಭಿನ್ನವಾದ ಅಲಾಯ್ ವ್ಹೀಲ್‍‍ಗಳನ್ನು ಹೊಂದಿರುವುದಿಲ್ಲ.

MOST READ: ಅತಿ ಮೈಲೇಜ್ ನೀಡಬಲ್ಲ ಸ್ಮಾರ್ಟ್ ಹೈಬ್ರಿಡ್‌ ಎಂಜಿನ್‌ನೊಂದಿಗೆ ಮಾರುತಿ ಬಲೆನೊ ಬಿಡುಗಡೆ

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಯಮಹಾ ಆರ್15 ಮೋಟೊ ಜಿಪಿ

ಭಾರತೀಯ ಮಾರುಕಟ್ಟೆಗಾಗಿ ಹಳೆ ಮಾದರಿಯ ಮುಂಭಾಗದ ಟೆಲಿಸ್ಕೋಪಿಕ್ ಅಪ್ ಫ್ರಂಟ್ ಸಸ್ಪೆಂಷನ್ ಹಾಗೂ ಸ್ಟಾಂಡರ್ಡ್ ಅಲಾಯ್ ವ್ಹೀಲ್ ಡಿಸೈನ್‍‍ಗಳನ್ನು ಅಳವಡಿಸಲಾಗುವುದಿಲ್ಲ. ಯಮಹಾದ ವೈಝಡ್‍ಎಫ್ ಆರ್15 ಮೋಟೊ ಜಿಪಿ ಎಡಿಷನ್ ಬೈಕಿನಲ್ಲಿ ಅದೇ ಲಿಕ್ವಿಡ್ ಕೂಲ್‍‍ನ 155 ಸಿಸಿಯ ವೆರಿಯೆಬಲ್ ವಾಲ್ವ್ ಆಕ್ಚುಯೇಷನ್ ಹೊಂದಿರುವ ಸಿಂಗಲ್ ಸಿಲಿಂಡರ್ ಎಂಜಿನ್ ಇರಲಿದೆ.

MOST READ: ಬೆಂಗಳೂರಿಗರನ್ನು ಮೋಡಿ ಮಾಡಿದ ನಿಸ್ಸಾನ್ ಕಿಕ್ಸ್

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಯಮಹಾ ಆರ್15 ಮೋಟೊ ಜಿಪಿ

ಈ ಎಂಜಿನ್ 19.3 ಬಿ‍‍ಹೆಚ್‍‍ಪಿ ಹಾಗೂ 15 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 6 ಸ್ಪೀಡಿನ ಗೇರ್‍‍ಬಾಕ್ಸ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಇದರ ಜೊತೆಗೆ ಸ್ಲಿಪರ್ ಕ್ಲಚ್‍‍ಗಳನ್ನು ಅಳವಡಿಸಲಾಗಿದೆ.

MOST READ: ಜಿನಿಸಿಸ್ ಐಷಾರಾಮಿ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿರುವ ಹ್ಯುಂಡೈ

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಯಮಹಾ ಆರ್15 ಮೋಟೊ ಜಿಪಿ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಯಮಹಾ ಕಂಪನಿಯು ಸೂಪರ್ ಸ್ಫೊರ್ಟ್ ತಯಾರಿಕೆಯಲ್ಲಿ ದೊಡ್ಡ ಇತಿಹಾಸವನ್ನು ಹೊಂದಿದೆ. ಅದರಲ್ಲಿ ಆರ್15 ಬೈಕ್ ಸಹ ಒಂದು. ಇದು ಉತ್ತಮವಾದ ಬೈಕ್ ಆಗಿದ್ದು, ಈ ಮೋಟೊ ಜಿಪಿ ಎಡಿಷನ್‍ನಿಂದಾಗಿ ಮೋಟಾರ್‍‍ಸ್ಪೋರ್ಟ್ ಪ್ರಿಯರು ಇದರಲ್ಲಿರುವ ಗ್ರಾಫಿಕ್ಸ್ ಹಾಗೂ ಡೆಕಾಲ್‍‍ಗಳಿಂದಾಗಿ ಯಮಹಾ ಮೋಟೊ ಜಿಪಿ ಸ್ಟಾರ್‍‍ಗಳು ಚಲಾಯಿಸಿದ ಬೈಕ್‍‍ಗಳನ್ನು ಚಲಾಯಿಸಿದ ಅನುಭವವನ್ನು ಪಡೆಯಲಿದ್ದಾರೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಯಮಹಾ ಆರ್15 ಮೋಟೊ ಜಿಪಿ

ಮೋಟೊ ಜಿಪಿ ಎಡಿಷನ್ ಬೈಕಿನ ಬೆಲೆಯು ಬೇರೆ ಯಮಹಾ ಬೈಕುಗಳ ಬೆಲೆಗಿಂತ ರೂ.3,000 ಹೆಚ್ಚಿರಲಿದೆ. 2018ರ ಮಾದರಿಯ ಬೈಕಿನಂತೆ ಈ ಬೈಕ್ ಅನ್ನು ಸಹ ಸೀಮಿತ ಸಂಖ್ಯೆಯಲ್ಲಿ ಬಿಡುಗಡೆಗೊಳಿಸಲಾಗುವುದು.

Most Read Articles

Kannada
Read more on ಯಮಹಾ yamaha
English summary
2019 Yamaha R15 MotoGP Edition To Be Launched Soon — Baby MotoGP Replica Coming Up! - Read in kannada
Story first published: Saturday, June 1, 2019, 14:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X