ಜಿನಿಸಿಸ್ ಐಷಾರಾಮಿ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿರುವ ಹ್ಯುಂಡೈ

ಹ್ಯುಂಡೈ ಕಂಪನಿಯು ಸುಮಾರು ಎರಡು ದಶಕಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಕಾರುಗಳನ್ನು ಬಿಡುಗಡೆ ಮಾಡುತ್ತಾ ಬಂದಿದೆ. ವರದಿಗಳ ಪ್ರಕಾರ, ಹ್ಯುಂಡೈ ಕಂಪನಿಯ ಲಗ್ಷುರಿ ಜಿನಿಸಿಸ್ ಕಾರನ್ನು ಮುಂದಿನ ವರ್ಷದ ನಂತರ ಭಾರತದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಜಿನಿಸಿಸ್ ಐಷಾರಾಮಿ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿರುವ ಹ್ಯುಂಡೈ

ಜಿನಿಸಿಸ್ ಕಾರು ಭಾರತದಲ್ಲಿ ಬಿಡುಗಡೆಯಾಗುವ ಬಗ್ಗೆ ಅನೇಕ ವರ್ಷಗಳಿಂದ ಊಹಾಪೋಹಗಳಿದ್ದವು. ಕಿಯಾ ಕಾರಿನ ಬಿಡುಗಡೆಯ ನಂತರ ಈ ಕಾರನ್ನು ಬಿಡುಗಡೆಗೊಳಿಸಲು ಚಿಂತಿಸಲಾಗಿದೆ. ಹ್ಯುಂಡೈ ಕಂಪನಿಯು ತನ್ನ ಸೋದರ ಸಂಸ್ಥೆಯಾದ ಕಿಯಾ ಕಂಪನಿಯ ಸೆಲ್ಟೋಸ್ ಪ್ರಿಮೀಯಂ ಎಸ್‍‍ಯು‍‍ವಿಯನ್ನು ಭಾರತದಲ್ಲಿ ಮುಂದಿನ ತಿಂಗಳು ಬಿಡುಗಡೆಗೊಳಿಸಲಿದೆ. ಲಗ್ಷುರಿ ಕಾರುಗಳ ಮಾರುಕಟ್ಟೆಯು ಏರುಗತಿಯಲ್ಲಿದೆ.

ಜಿನಿಸಿಸ್ ಐಷಾರಾಮಿ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿರುವ ಹ್ಯುಂಡೈ

ಈ ಕಾರಣದಿಂದ ಹ್ಯುಂಡೈ ಕಂಪನಿಯು, ಜಿನಿಸಿಸ್ ಕಾರನ್ನು ಬಿಡುಗಡೆಗೊಳಿಸಿ ಮಾರುಕಟ್ಟೆಯಲ್ಲಿನ ಗಣನೀಯ ಶೇರುಗಳ ಮೇಲೆ ಕಣ್ಣಿಟ್ಟಿದೆ. ಟೊಯೊಟಾ ಕಂಪನಿಯ ಲಗ್ಷುರಿ ಕಾರ್ ಆದ ಲೆಕ್ಸಸ್ ಬಿಡುಗಡೆಗೆ ಸಿದ್ಧವಾಗಿದ್ದು, ಹ್ಯುಂಡೈ ಸಹ ಲಗ್ಷುರಿ ಕಾರನ್ನು ಬಿಡುಗಡೆ ಮಾಡಲು ಸಿದ್ದವಾಗಿದೆ.

ಜಿನಿಸಿಸ್ ಐಷಾರಾಮಿ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿರುವ ಹ್ಯುಂಡೈ

ಹ್ಯುಂಡೈ ಕಂಪನಿಯು ತನ್ನ ಎಲೆಕ್ಟ್ರಿಕ್ ಆವೃತ್ತಿಯ ಕಾರ್ ಆದ ಕೊನಾವನ್ನು ಈ ವರ್ಷದ ಜುಲೈ 9 ರಂದು ಬಿಡುಗಡೆಗೊಳಿಸಲಿದೆ. ಇದರಲ್ಲಿ ಕಡಿಮೆ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅಳವಡಿಸಲಾಗಿದ್ದು, ಸ್ಥಳೀಯವಾಗಿ ತಯಾರಿಸಲಾಗಿದೆ.

ಜಿನಿಸಿಸ್ ಐಷಾರಾಮಿ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿರುವ ಹ್ಯುಂಡೈ

ಕೊನಾ ಎಲೆಕ್ಟ್ರಿಕ್ ವಾಹನದ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.25 ಲಕ್ಷಗಳಾಗಿರಲಿದೆ. ಮೊದಲ ಹಂತದಲ್ಲಿ ಈ ಕಾರನ್ನು ಸೀಮಿತ ಸಂಖ್ಯೆಯಲ್ಲಿ ಮಾರಾಟ ಮಾಡಲಾಗುವುದು. ಬೇಡಿಕೆಗನುಗುಣವಾಗಿ ಹ್ಯುಂಡೈ ಕಂಪನಿಯು ಕೊನಾ ವಾಹನವನ್ನು ಹೆಚ್ಚು ಸಂಖ್ಯೆಯಲ್ಲಿ ತಯಾರಿಸಿ ಮಾರಾಟ ಮಾಡಲಿದೆ. ಹ್ಯುಂಡೈ ಕಂಪನಿಯು ಜಿನಿಸಿಸ್ ಕಾರುಗಳನ್ನು 2020ರ ಆಟೋ ಎಕ್ಸ್ ಪೋ ದಲ್ಲಿ ಅನಾವರಣಗೊಳಿಸಿ, ಈ ಕಾರಿನ ಬಗ್ಗೆ ಗ್ರಾಹಕರಿಗೆ ತಿಳಿಸಲಿದೆ.

ಜಿನಿಸಿಸ್ ಐಷಾರಾಮಿ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿರುವ ಹ್ಯುಂಡೈ

ಜಿನಿಸಿಸ್ ಕಾರಿಗಾಗಿ ಹ್ಯುಂಡೈ ಕಂಪನಿಯು, ಕಂಪನಿಯ ಮಾಲೀಕತ್ವದ ಗ್ರಾಹಕ ಕೇಂದ್ರಗಳನ್ನು ಹಾಗೂ ಚಿಕ್ಕ ಶೋರೂಂಗಳನ್ನು ಭಾರತದಲ್ಲಿನ ಆಯ್ದ ನಗರಗಳಲ್ಲಿ ತೆರೆಯಲಿದೆ. 2020ರ ಆಟೋ ಎಕ್ಸ್ ಪೋದಲ್ಲಿ ಹ್ಯುಂಡೈ ಕಂಪನಿಯು ತನ್ನ ಲಗ್ಷುರಿ ಕಾರ್ ಆದ ಜಿನಿಸಿಸ್ ಅನ್ನು ಅನಾವರಣಗೊಳಿಸಲಿದೆ.

MOST READ: ಅತಿ ಮೈಲೇಜ್ ನೀಡಬಲ್ಲ ಸ್ಮಾರ್ಟ್ ಹೈಬ್ರಿಡ್‌ ಎಂಜಿನ್‌ನೊಂದಿಗೆ ಮಾರುತಿ ಬಲೆನೊ ಬಿಡುಗಡೆ

ಜಿನಿಸಿಸ್ ಐಷಾರಾಮಿ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿರುವ ಹ್ಯುಂಡೈ

ದಕ್ಷಿಣ ಕೊರಿಯಾ ಮೂಲದ ಆಟೋಮೋಬೈಲ್ ದೈತ್ಯ ಕಂಪನಿಯಾದ ಹ್ಯುಂಡೈ ಮೊದಲಿಗೆ ಪ್ರಿಮೀಯಂ ಸೆಗ್‍‍ಮೆಂಟಿನ ಮೇಲೆ ಗಮನಹರಿಸಿ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಲಿದೆ. ಇದರ ಅಂಗವಾಗಿ ಮುಂದಿನ ತಿಂಗಳು ಕೊನಾ ಕಾರ್ ಅನ್ನು ಬಿಡುಗಡೆಗೊಳಿಸುತ್ತಿದೆ.

MOST READ: ಕಪ್ ಎಡಿಷನ್ ಬಿಡುಗಡೆಗೊಳಿಸಿದ ಫೋಕ್ಸ್ ವ್ಯಾಗನ್

ಜಿನಿಸಿಸ್ ಐಷಾರಾಮಿ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿರುವ ಹ್ಯುಂಡೈ

ಹಲವಾರು ವರ್ಷಗಳ ಕಾಲ ಜಿನಿಸಿಸ್ ಬಿಡುಗಡೆಯ ಬಗೆಗೆ ಅಧ್ಯಯನ ನಡೆಸಿ ಹ್ಯುಂಡೈ ಕಂಪನಿಯು ಈ ಕಾರಿನ ಬಿಡುಗಡೆಗೆ ಅನುಮತಿ ನೀಡಿದೆ. ಈ ಕಾರನ್ನು ದೇಶದ್ಯಾಂತವಿರುವ ಆಯ್ದ ನಗರಗಳಲ್ಲಿರುವ ಚಿಕ್ಕ ಡೀಲರ್‍‍‍ಗಳಲ್ಲಿ ಹಾಗೂ ಕಂಪನಿಯ ಮಾಲೀಕತ್ವದ ಗ್ರಾಹಕ ಕೇಂದ್ರಗಳಲ್ಲಿ ಮಾರಾಟ ಮಾಡಲಾಗುವುದು.

MOST READ: ಬೆಂಗಳೂರಿಗರನ್ನು ಮೋಡಿ ಮಾಡಿದ ನಿಸ್ಸಾನ್ ಕಿಕ್ಸ್

ಜಿನಿಸಿಸ್ ಐಷಾರಾಮಿ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿರುವ ಹ್ಯುಂಡೈ

ವಿಶ್ವ ಮಾರುಕಟ್ಟೆಯಲ್ಲಿ ಜೆನಿಸಿಸ್ ಕಾರನ್ನು ಜಿ70, ಜಿ80 ಹಾಗೂ ಜಿ 90 ಸೆಡಾನ್ ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಕಾರು ಜರ್ಮನ್ ಮೂಲದ ಕಾರು ತಯಾರಕ ಕಂಪನಿಗಳಾದ ಮರ್ಸಿಡಿಸ್ ಬೆಂಝ್, ಆಡಿ ಹಾಗೂ ಬಿ‍ಎಂ‍‍ಡಬ್ಲ್ಯು ಕಂಪನಿಗಳ ಕಾರುಗಳ ಜೊತೆಗೆ ಜಾಗ್ವಾರ್ ಹಾಗೂ ಲೆಕ್ಸರ್ ಕಂಪನಿಯ ಕಾರುಗಳಿಗೆ ಪೈಪೋಟಿ ನೀಡಲಿದೆ.

Source: Livemint

Most Read Articles

Kannada
English summary
hyundai's luxury brand genesis to launch in india - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X