ಕಪ್ ಎಡಿಷನ್ ಬಿಡುಗಡೆಗೊಳಿಸಿದ ಫೋಕ್ಸ್ ವ್ಯಾಗನ್

ಫೋಕ್ಸ್ ವ್ಯಾಗನ್ ಕಂಪನಿಯು ಪೊಲೊ, ಆಮಿಯೋ ಹಾಗೂ ವೆಂಟೊ ಮಾದರಿಗಳ ಕಪ್ ಎಡಿಷನ್ ಕಾರುಗಳನ್ನು ಬಿಡುಗಡೆಗೊಳಿಸಿದೆ. ಫೋಕ್ಸ್ ವ್ಯಾಗನ್ ಪೊಲೊ ಕಪ್ ಎಡಿಷನ್ ಬೆಲೆಯು ರೂ. 6.49 ಲಕ್ಷಗಳಾಗಿದ್ದರೆ, ಆಮಿಯೋ ಕಪ್ ಎಡಿಷನ್ ಬೆಲೆ ರೂ.6.19 ಲಕ್ಷ ಹಾಗೂ ವೆಂಟೊ ಕಪ್ ಎಡಿಷನ್ ಕಾರಿನ ಬೆಲೆಯು ರೂ.9.24 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ದರಗಳಾಗಿವೆ.

ಕಪ್ ಎಡಿಷನ್ ಬಿಡುಗಡೆಗೊಳಿಸಿದ ಫೋಕ್ಸ್ ವ್ಯಾಗನ್

ಈ ಕಾರುಗಳನ್ನು 2019ರ ಐಸಿಸಿ ಕ್ರಿಕೆಟ್ ವರ್ಲ್ಡ್ ಕಪ್ ಹಿನ್ನೆಲೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಕಪ್ ಎಡಿಷನ್ ಕಾರುಗಳನ್ನು ಕ್ರಿಕೆಟ್ ಪ್ರಿಯರನ್ನು ಗಮನದಲ್ಲಿಟ್ಟುಕೊಂಡೇ ತಯಾರಿಸಲಾಗಿದೆ. ನಮ್ಮ ದೇಶದಲ್ಲಿ ಕ್ರಿಕೆಟ್‍‍ಗೆ ಕೋಟ್ಯಾಂತರ ಅಭಿಮಾನಿಗಳಿದ್ದು, ಕ್ರಿಕೆಟ್ ಕೇವಲ ಕ್ರೀಡೆಯಾಗಿರದೇ, ಧರ್ಮವಾಗಿದ್ದು ಆರಾಧಿಸಲಾಗುತ್ತದೆ. ಕ್ರಿಕೆಟ್ ನಮ್ಮ ದೇಶದ ಬಹುದೊಡ್ಡ ಕ್ರೀಡೆಯಾಗಿರುವುದರಿಂದ ವರ್ಲ್ಡ್ ಕಪ್ ಪಂದ್ಯಗಳನ್ನು ನೋಡುವವರ ಸಂಖ್ಯೆಯೂ ಹೆಚ್ಚಾಗಿರುತ್ತದೆ.

ಕಪ್ ಎಡಿಷನ್ ಬಿಡುಗಡೆಗೊಳಿಸಿದ ಫೋಕ್ಸ್ ವ್ಯಾಗನ್

ಫೋಕ್ಸ್ ವ್ಯಾಗನ್ ಕಂಪನಿಯು ಈ ಕ್ರಿಕೆಟ್ ಹಬ್ಬದ ಪ್ರಯೋಜನವನ್ನು ಪಡೆಯಲು ಬಯಸಿದೆ. ಭಾರತೀಯರ ಕ್ರಿಕೆಟ್‍‍ಗೆಡಗಿನ ಪ್ರೀತಿಯ ಲಾಭವನ್ನು ಪಡೆಯಲು ಬಯಸಿ ಕಪ್ ಎಡಿಷನ್ ಕಾರುಗಳನ್ನು ಬಿಡುಗಡೆಗೊಳಿಸಿದೆ.

ಕಪ್ ಎಡಿಷನ್ ಬಿಡುಗಡೆಗೊಳಿಸಿದ ಫೋಕ್ಸ್ ವ್ಯಾಗನ್

ಫೋಕ್ಸ್ ವ್ಯಾಗನ್ ಕಂಪನಿಯು ಕ್ರಿಕೆಟ್‍‍ಗೆ ಸಂಬಂಧಿಸಿದಂತೆ ಈ ರೀತಿಯ ಕಾರುಗಳನ್ನು ಬಿಡುಗಡೆಗೊಳಿಸುತ್ತಿರುವುದು ಇದು ಮೊದಲ ಸಲವೇನಲ್ಲ. ಈ ಹಿಂದೆ ಐಪಿ‍ಎಲ್ ಪಂದ್ಯಾವಳಿಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಐ‍‍ಪಿ‍ಎಲ್ ಎಡಿಷನ್‍ ಕಾರುಗಳನ್ನು ಬಿಡುಗಡೆಗೊಳಿಸಿತ್ತು.

ಕಪ್ ಎಡಿಷನ್ ಬಿಡುಗಡೆಗೊಳಿಸಿದ ಫೋಕ್ಸ್ ವ್ಯಾಗನ್

ವಿಶ್ವ ಕಪ್ ಹಿನ್ನೆಲೆಯಲ್ಲಿ ಬಿಡುಗಡೆಗೊಳಿಸಿರುವ ಈ ವಿಶೇಷ ಆವೃತ್ತಿಯ ಕಾರುಗಳು ಕಂಫರ್ಟ್‍‍ಲೈನ್ ಮಾದರಿಯನ್ನು ಅವಲಂಬಿಸಿವೆ. ಇದರಲ್ಲಿರುವ ವಿನ್ಯಾಸಗಳು ಸ್ಟಾಂಡರ್ಡ್ ಕಾರುಗಳಲ್ಲಿದ್ದಂತೆ ಇವೆ. ಆದರೆ ವಿನ್ಯಾಸದಲ್ಲಿ ಕೆಲವೊಂದು ಬದಲಾವಣೆಗಳಾಗಿವೆ. ಕಾರುಗಳ ಮುಂಭಾಗದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಪಕ್ಕದಲ್ಲಿರುವ ಡೋರ್‍‍ಗಳ ಬಳಿ ಇರುವ ಡೆಕಾಲ್‍‍ಗಳ ಮೇಲೆ ವರ್ಲ್ಡ್ ಕಪ್‍‍ನ ಚಿತ್ರವನ್ನು ಕಾಣಬಹುದು.

ಕಪ್ ಎಡಿಷನ್ ಬಿಡುಗಡೆಗೊಳಿಸಿದ ಫೋಕ್ಸ್ ವ್ಯಾಗನ್

ಫ್ರಂಟ್‍‍ನಲ್ಲಿರುವ ಫೆಂಡರ್‍‍ಗಳ ಬಳಿ ಕಪ್‍‍ನ ಲೋಗೊವನ್ನು ಕ್ರೋಮ್‍‍ನಿಂದ ಮಾಡಲಾಗಿದೆ. ಕಪ್‍‍ನ ಥೀಮ್ ಅನ್ನು ಇಂಟಿರಿಯರ್‍‍ನಲ್ಲಿ ಅಳವಡಿಸಲಾಗಿದೆ. ಕಾರಿನ ಒಳಗಿರುವ ಫಾಕ್ಸ್ ಲೆದರ್ ಸೀಟ್ ಕವರ್‍‍ಗಳ ಮೇಲೆ ಕಪ್‍‍ನ ಲೋಗೊಗಳಿವೆ.

MOST READ: ಅತಿ ಮೈಲೇಜ್ ನೀಡಬಲ್ಲ ಸ್ಮಾರ್ಟ್ ಹೈಬ್ರಿಡ್‌ ಎಂಜಿನ್‌ನೊಂದಿಗೆ ಮಾರುತಿ ಬಲೆನೊ ಬಿಡುಗಡೆ

ಕಪ್ ಎಡಿಷನ್ ಬಿಡುಗಡೆಗೊಳಿಸಿದ ಫೋಕ್ಸ್ ವ್ಯಾಗನ್

ಕಾರಿನ ಪಕ್ಕದಲ್ಲಿರುವ ಡೆಕಾಲ್‍‍ಗಳನ್ನು ಪೊಲೊ, ಆಮಿಯೋ ಹಾಗೂ ವೆಂಟೊ ಕಾರುಗಳಿಗಾಗಿ ಪ್ರತ್ಯೇಕವಾಗಿ ವಿಭಿನ್ನವಾಗಿ ವಿನ್ಯಾಸಗೊಳಿಸಲಾಗಿದೆ. ಮೂರೂ ಕಾರುಗಳಲ್ಲಿರುವ ಅಲಾಯ್ ವ್ಹೀಲ್‍‍ಗಳೂ ಸಹ ವಿಭಿನ್ನವಾಗಿವೆ. ಫೋಕ್ಸ್ ವ್ಯಾಗನ್‍‍ನ ಪೊಲೊ ಕಪ್ ಎಡಿಷನ್‍‍ನಲ್ಲಿ ರೇಜರ್ ಅಲಾಯ್ ವ್ಹೀಲ್‍‍ಗಳಿದ್ದರೆ, ಆಮಿಯೋ ಕಾರಿನಲ್ಲಿ ಟೋಸಾ ಅಲಾಯ್ ವ್ಹೀಲ್‍‍ಗಳು ಹಾಗೂ ವೆಂಟೊ ಕಾರಿನಲ್ಲಿ ಲಿನಾಸ್ ಅಲಾಯ್ ವ್ಹೀಲ್‍‍ಗಳಿವೆ. ಈ ಎಲ್ಲಾ ವ್ಹೀಲ್‍‍‍ಗಳ ಗಾತ್ರವು 15 ಇಂಚಿನಷ್ಟಿದೆ.

MOST READ: ಜೀಪ್ ಕಂಪಾಸ್ ಹೊಂದಿರುವ ಭಾರತದ ಖ್ಯಾತ ಸೆಲೆಬ್ರಿಟಿಗಳು

ಕಪ್ ಎಡಿಷನ್ ಬಿಡುಗಡೆಗೊಳಿಸಿದ ಫೋಕ್ಸ್ ವ್ಯಾಗನ್

ಫೋಕ್ಸ್ ವ್ಯಾಗನ್ ಪೊಲೊ ಹಾಗೂ ಆಮಿಯೋ ಕಪ್ ಎಡಿಷನ್ ಕಾರುಗಳಲ್ಲಿ 3 ಸಿಲಿಂಡರ್ ಪೆಟ್ರೋಲ್ ಎಂಜಿನ್‍‍ಗಳಿದ್ದು 76 ಬಿ‍‍ಹೆಚ್‍‍ಪಿ ಹಾಗೂ 95 ಎನ್‍ಎಂ ಟಾರ್ಕ್ ಉತ್ಪಾದಿಸುತ್ತವೆ. ವೆಂಟೊ ಕಪ್ ಎಡಿಷನ್ ಕಾರಿನಲ್ಲಿ 1.6 ಲೀಟರಿನ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಇದ್ದು, 105 ಬಿ‍‍ಹೆಚ್‍‍ಪಿ ಹಾಗೂ 153 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. 5 ಸ್ಪೀಡಿನ ಮ್ಯಾನುಯಲ್ ಗೇರ್‍‍ಬಾಕ್ಸ್ ಟ್ರಾನ್ಸ್ ಮಿಷನ್‍‍ಗಳನ್ನು ಅಳವಡಿಸಲಾಗಿದೆ.

MOST READ: ಬೈಕ್ ಮಾಲೀಕರೇ ಇತ್ತ ಗಮನಿಸಿ- ಯಮಹಾ ಪ್ರಿ ಮಾನ್ಸೂನ್ ಯೋಜನೆಗೆ ಚಾಲನೆ

ಕಪ್ ಎಡಿಷನ್ ಬಿಡುಗಡೆಗೊಳಿಸಿದ ಫೋಕ್ಸ್ ವ್ಯಾಗನ್

ಕಪ್ ಎಡಿಷನ್‍‍ನಲ್ಲಿ ಮೊದಲ ಹಂತವಾಗಿ ಪೆಟ್ರೋಲ್ ಎಂಜಿನ್‍ ಕಾರುಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಡೀಸೆಲ್ ಮಾದರಿಯ ಕಾರುಗಳನ್ನು ನಂತರದಲ್ಲಿ ಬಿಡುಗಡೆ ಮಾಡಲಾಗುವುದು. ಸ್ವಲ್ಪ ಪ್ರಮಾಣದ ಬದಲಾವಣೆಗಳನ್ನು ಹೊರತುಪಡಿಸಿ ಕಪ್ ಎಡಿಷನ್ ಕಾರುಗಳೂ ಸಹ ಸ್ಟಾಂಡರ್ಡ್ ಕಂಫರ್ಟ್‍‍ಲೈನ್ ಕಾರುಗಳ ಮಾದರಿಯಲ್ಲಿಯೇ ದೊರೆಯಲಿವೆ.

ಕಪ್ ಎಡಿಷನ್ ಬಿಡುಗಡೆಗೊಳಿಸಿದ ಫೋಕ್ಸ್ ವ್ಯಾಗನ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಫೋಕ್ಸ್ ವ್ಯಾಗನ್ ಕಂಪನಿಯು ಕ್ರಿಕೆಟ್‍‍ಗೆ ಸಂಬಂಧಪಟ್ಟಂತೆ ಈ ಹಿಂದೆಯೂ ಸಹ ಅನೇಕ ಕಾರುಗಳನ್ನು ಬಿಡುಗಡೆ ಮಾಡಿತ್ತು. ಈಗ ವಿಶ್ವಕಪ್‍‍ಗೆ ಸಂಬಂಧಪಟ್ಟಂತೆ ತನ್ನ ಜನಪ್ರಿಯ ಕಾರುಗಳನ್ನು ಕಪ್ ಎಡಿಷನ್ ಕಾರುಗಳ ಮಾದರಿಯಲ್ಲಿ ಬಿಡುಗಡೆ ಮಾಡಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಕ್ರಿಕೆಟ್ ಅನ್ನು ಆರಾಧಿಸುವ ಕ್ರಿಕೆಟ್ ಪ್ರೇಮಿಗಳು ಈ ಕಾರುಗಳನ್ನು ಖಂಡಿತವಾಗಿಯೂ ಈ ಕಾರುಗಳನ್ನು ಖರೀದಿಸಲಿದ್ದಾರೆ.

Most Read Articles

Kannada
English summary
Volkswagen Launches Cup Editions Of Polo, Ameo & Vento As 2019 Cricket World Cup Begins - Read in kannada
Story first published: Friday, May 31, 2019, 19:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X