ಜೀಪ್ ಕಂಪಾಸ್ ಹೊಂದಿರುವ ಭಾರತದ ಖ್ಯಾತ ಸೆಲೆಬ್ರಿಟಿಗಳು

ಜೀಪ್ ಸಂಸ್ಥೆಯು ಅಮೇರಿಕಾದ ಜನಪ್ರಿಯ ವಾಹನ ತಯಾರಕ ಸಂಸ್ಥೆಯಾಗಿದ್ದು, ವಿವಿಧ ಕಾರು ಉತ್ಪನ್ನಗಳ ಮೂಲಕ ಐಷಾರಾಮಿ ಕಾರು ಖರೀದಿದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದರಲ್ಲಿ ಕಂಪಾಸ್ ಎಸ್‍‍‍ಯು‍‍ವಿ ಕಾರು ಸದ್ಯ ಮಾರುಕಟ್ಟೆಯಲ್ಲಿ ಬಹು ಬೇಡಿಕೆಯೊಂದಿಗೆ ಮಾರಾಟವಾಗುತ್ತಿದ್ದು, ಭಾರತೀಯ ಸೆಲೆಬ್ರಿಟಿಗಳ ನೆಚ್ಚಿನ ಕಾರು ಮಾದರಿಯಾಗಿ ಹೊರಹೊಮ್ಮಿದೆ.

ಜೀಪ್ ಕಂಪಾಸ್ ಹೊಂದಿರುವ ಭಾರತದ ಖ್ಯಾತ ಸೆಲೆಬ್ರಿಟಿಗಳು

ಎಸ್‍‍ಯು‍‍ವಿ ಕಾರು ಕೊಳ್ಳುವ ಬಹುತೇಕ ಗ್ರಾಹಕರ ಆಯ್ಕೆ ಜೀಪ್ ಕಂಪಾಸ್ ಆಗಿದ್ದು, ಇತರೆ ಕಾರುಗಳಿಗಿಂತ ಹೆಚ್ಚಾಗಿ ಕಂಪಾಸ್ ಕಾರನ್ನು ಕೊಳ್ಳಲು ಬಯಸುತ್ತಾರೆ. ಮಧ್ಯಮ ವರ್ಗದ ಕಾರು ಖರೀದಿದಾರರಿಂದ ಹಿಡಿದು, ಜನಪ್ರಿಯ ಸೆಲೆಬ್ರಿಟಿಗಳವರೆಗೆ ಜೀಪ್ ಕಂಪಾಸ್ ಹೆಚ್ಚು ಮನ್ನಣೆಗಳಿಸಿದೆ. ಹಾಗಾದರೆ ಜೀಪ್ ಕಂಪಾಸ್ ಹೊಂದಿರುವ ಸೆಲೆಬ್ರಿಟಿಗಳು ಯಾರ್ಯಾರು ಎನ್ನುವ ಪಟ್ಟಿ ಇಲ್ಲಿದೆ.

ಜೀಪ್ ಕಂಪಾಸ್ ಹೊಂದಿರುವ ಭಾರತದ ಖ್ಯಾತ ಸೆಲೆಬ್ರಿಟಿಗಳು

ಕಿಚ್ಚ ಸುದೀಪ್

ಭಾರತೀಯ ಚಿತ್ರರಂಗದ ಖ್ಯಾತ ನಟರುಗಳಲ್ಲಿ ಒಬ್ಬರಾದ ಕಿಚ್ಚ ಸುದೀಪ್‍‍ರವರು ಕಳೆದ ವರ್ಷವಷ್ಟೆ ಕಪ್ಪು ಬಣ್ಣದ ಜೀಪ್ ಕಂಪಾಸ್ ಕಾರನ್ನು ಖರೀದಿಸಿದ್ದಾರೆ. ಇದಲ್ಲದೇ ಸುದೀಪ್‍‍ರವರ ಬಳಿ ಇನ್ನೂ ಅನೇಕ ದುಬಾರಿ ಬೆಲೆಯ ಕಾರುಗಳಿವೆ. ಜೀಪ್ ಕಂಪಾಸ್ ಕಾರನ್ನು ಹೊಂದಿರುವ ದಕ್ಷಿಣ ಭಾರತದ ಸೆಲೆಬ್ರಿಟಿಗಳ ಪೈಕಿ ಸುದೀಪ್ ಸಹ ಒಬ್ಬರು. ಸುದೀಪ್‍‍ರವರು ಅನೇಕ ಬಾರಿ ಈ ಕಾರನ್ನು ಸ್ವತಃ ತಾವೇ ಡ್ರೈವ್ ಮಾಡಿದ್ದಾರೆ.

ಜೀಪ್ ಕಂಪಾಸ್ ಹೊಂದಿರುವ ಭಾರತದ ಖ್ಯಾತ ಸೆಲೆಬ್ರಿಟಿಗಳು

ಸಾರಾ ಅಲಿ ಖಾನ್

ಬಾಲಿವುಡ್ ಚಿತ್ರ ನಟ ಸೈಫ್ ಅಲಿ ಖಾನ್ ರವರ ಪುತ್ರಿ ಹಾಗೂ ಚಿತ್ರ ನಟಿ ಸಾರಾ ಅಲಿ ಖಾನ್‍‍ರವರು ಜೀಪ್ ಕಂಪಾಸ್ ಕಾರನ್ನು ಹೊಂದಿದ್ದಾರೆ. ಸಾರಾ ಅವರು ಅನೇಕ ಬಾರಿ ತಮ್ಮ ಜೀಪ್ ಕಂಪಾಸ್ ಕಾರಿನೊಂದಿಗೆ ಕಾಣಿಸಿಕೊಂಡಿದ್ದಾರೆ.

ಜೀಪ್ ಕಂಪಾಸ್ ಹೊಂದಿರುವ ಭಾರತದ ಖ್ಯಾತ ಸೆಲೆಬ್ರಿಟಿಗಳು

ಈ ಕಾರನ್ನು ಸಾರಾ ಅವರ ತಾಯಿ ಅಮೃತಾ ಅವರ ಹೆಸರಿನಲ್ಲಿ ರಿಜಿಸ್ಟ್ರರ್ ಮಾಡಿಸಲಾಗಿದೆ. ನೀಲಿ ಬಣ್ಣದ ಸಾರಾ ಅವರ ಕಂಪಾಸ್ ಕಾರು 1.4 ಲೀಟರಿನ ಟರ್ಬೊ‍‍ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 161 ಬಿ‍‍ಹೆಚ್‍‍ಪಿ ಹಾಗೂ 250 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರಲ್ಲಿ ಮ್ಯಾನುಯಲ್ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‍‍ಗಳನ್ನು ಅಳವಡಿಸಿಕೊಳ್ಳಬಹುದು.

ಜೀಪ್ ಕಂಪಾಸ್ ಹೊಂದಿರುವ ಭಾರತದ ಖ್ಯಾತ ಸೆಲೆಬ್ರಿಟಿಗಳು

ಜಾಕ್ವೆಲಿನ್ ಫರ್ನಾಂಡಿಸ್

ಶ್ರೀಲಂಕಾದ ನಟಿ ಜಾಕ್ವೆಲಿನ್ ಫರ್ನಾಂಡಿಸ್‍‍ರವರು ಕಳೆದ ವರ್ಷವಷ್ಟೆ ಕೆಂಪು ಬಣ್ಣದ ಕಂಪಾಸ್ ಕಾರನ್ನು ಖರೀದಿಸಿದ್ದಾರೆ. ಅನೇಕ ಬಾರಿ ಈ ಕಾರಿನ ಜೊತೆಗೆ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಈ ಕಾರಿನ ಜೊತೆಯಲ್ಲಿರುವ ಅನೇಕ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ.

ಜೀಪ್ ಕಂಪಾಸ್ ಹೊಂದಿರುವ ಭಾರತದ ಖ್ಯಾತ ಸೆಲೆಬ್ರಿಟಿಗಳು

ಇವರ ಬಳಿಯಿರುವ ಕಾರಿನ ಎಂಜಿನ್ ಬಗ್ಗೆ ನಿರ್ದಿಷ್ಟವಾಗಿ ತಿಳಿದಿಲ್ಲವಾದರೂ, ಈ ಮಾದರಿಯ ಕಾರು 2.0 ಲೀಟರಿನ ಮಲ್ಟಿಜೆಟ್ ಡೀಸೆಲ್ ಎಂಜಿನ್ ಹೊಂದಿದ್ದು, ಹೆಚ್ಚಿನ ಪ್ರಮಾಣದ 170 ಬಿಹೆಚ್‍‍ಪಿ ಹಾಗೂ 350 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಜಾಕ್ವೆಲಿನ್‍‍ರವರು ತಮ್ಮ ಮೇಕಪ್ ಆರ್ಟಿಸ್ಟ್ ಗೂ ಸಹ ಜೀಪ್ ಕಂಪಾಸ್ ಕಾರನ್ನು ಗಿಫ್ಟ್ ನೀಡಿದ್ದರು.

ಜೀಪ್ ಕಂಪಾಸ್ ಹೊಂದಿರುವ ಭಾರತದ ಖ್ಯಾತ ಸೆಲೆಬ್ರಿಟಿಗಳು

ಅಕ್ಷಯ್ ಕುಮಾರ್

ಬಾಲಿವುಡ್‍‍ನ ಕಿಲಾಡಿ ಎಂದು ಪ್ರಸಿದ್ದರಾಗಿರುವ ನಟ ಅಕ್ಷಯ್ ಕುಮಾರ್‍‍ರವರು ಅನೇಕ ದುಬಾರಿ ಬೆಲೆಯ ಕಾರುಗಳನ್ನು ಹೊಂದಿದ್ದಾರೆ. ಅವುಗಳಲ್ಲಿ ಬೆಂಟ್ಲಿ ಕಾಂಟಿನೆಂಟಲ್ ಜಿಟಿ, ರೇಂಜ್ ರೋವರ್ ಹಾಗೂ ರೋಲ್ಸ್ ರಾಯ್ಸ್ ಘೋಸ್ಟ್ ಕಾರುಗಳು ಸೇರಿವೆ. ಇದಲ್ಲದೇ ಹೋಂಡಾ ಸಿ‍ಆರ್-ವಿ ಸೇರಿದಂತೆ ಅನೇಕ ಸಣ್ಣ ಕಾರುಗಳನ್ನು ಸಹ ಅಕ್ಷಯ್ ಕುಮಾರ್‍‍ರವರು ಹೊಂದಿದ್ದಾರೆ.

ಜೀಪ್ ಕಂಪಾಸ್ ಹೊಂದಿರುವ ಭಾರತದ ಖ್ಯಾತ ಸೆಲೆಬ್ರಿಟಿಗಳು

ಅಕ್ಷಯ್ ಕುಮಾರ್‍‍ರವರು ಕಪ್ಪು ಬಣ್ಣದ ಜೀಪ್ ಕಂಪಾಸ್ ವಾಹನವನ್ನು ಹೊಂದಿದ್ದಾರೆ. ಅವರು ಹೆಚ್ಚಾಗಿ ಈ ಕಾರಿನ ಜೊತೆಯಲ್ಲಿ ಕಾಣಿಸಿಕೊಂಡಿಲ್ಲ. ಈ ಕಾರನ್ನು ಅವರ ಆಪ್ತರು ದಿನನಿತ್ಯದ ಬಳಕೆಗಾಗಿ ಬಳಸುತ್ತಿರುವ ಸಾಧ್ಯತೆಗಳಿವೆ.

MOST READ: ಅತಿ ಮೈಲೇಜ್ ನೀಡಬಲ್ಲ ಸ್ಮಾರ್ಟ್ ಹೈಬ್ರಿಡ್‌ ಎಂಜಿನ್‌ನೊಂದಿಗೆ ಮಾರುತಿ ಬಲೆನೊ ಬಿಡುಗಡೆ

ಜೀಪ್ ಕಂಪಾಸ್ ಹೊಂದಿರುವ ಭಾರತದ ಖ್ಯಾತ ಸೆಲೆಬ್ರಿಟಿಗಳು

ರೋಹಿತ್ ರಾಯ್

ಜನಪ್ರಿಯ ಕಿರುತೆರೆ ನಟ ಹಾಗೂ ಸಿನಿಮಾಗಳಲ್ಲೂ ಕಾಣಿಸಿಕೊಂಡಿರುವ ರೋಹಿತ್ ರಾಯ್ ರವರು ಕಾರುಗಳನ್ನು ಮಾತ್ರವಲ್ಲದೇ, ಪ್ರಿಮೀಯಂ ಬೈಕುಗಳನ್ನು ಸಹ ಇಷ್ಟ ಪಡುತ್ತಾರೆ. ಅವರು ಇತ್ತೀಚಿಗೆ ಬಿಳಿ ಬಣ್ಣದ ಜೀಪ್ ಕಂಪಾಸ್ ಕಾರನ್ನು ಖರೀದಿಸಿ, ಕಾರಿನ ಜೊತೆಯಿರುವ ಚಿತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಬಿಳಿ ಬಣ್ಣದ ಕಾರ್ ಆಗಿರುವುದರಿಂದ ಈ ಕಾರು ಬಹು ಜನರ ಗಮನವನ್ನು ಸೆಳೆಯಲಿದೆ.

MOST READ: ಎಲ್‍‍ಸಿ‍‍ವಿ ಮಾರುಕಟ್ಟೆಗೆ ಮತ್ತೆ ಕಾಲಿಡಲಿವೆ ರೆನಾಲ್ಟ್ ಮತ್ತು ನಿಸ್ಸಾನ್

ಜೀಪ್ ಕಂಪಾಸ್ ಹೊಂದಿರುವ ಭಾರತದ ಖ್ಯಾತ ಸೆಲೆಬ್ರಿಟಿಗಳು

ಉನ್ನಿ ಮುಕುಂದನ್

ಉನ್ನಿ ಮುಕುಂದನ್ ದಕ್ಷಿಣ ಭಾರತದ ಸ್ಟಾರ್ ನಟರಲ್ಲಿ ಒಬ್ಬರು. ಅವರು ಆಟೋಮೋಬೈಲ್ ಪ್ರಿಯರು. ಇತ್ತೀಚಿಗಷ್ಟೇ ಹೊಸ ಜಾವಾ ಮೋಟಾರ್ ಬೈಕ್ ಅನ್ನು ಖರೀದಿಸಿದ್ದಾರೆ. ಉನ್ನಿರವರು 2017ರಲ್ಲಿ ಕೆಂಪು ಬಣ್ಣದ ಜೀಪ್ ಕಂಪಾಸ್ ಕಾರನ್ನು ಖರೀದಿಸಿದಾಗ, ಡೀಲರ್ ಕಾರನ್ನು ವಿತರಿಸುವ ಸಲುವಾಗಿಯೇ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದರು.

ಜೀಪ್ ಕಂಪಾಸ್ ಹೊಂದಿರುವ ಭಾರತದ ಖ್ಯಾತ ಸೆಲೆಬ್ರಿಟಿಗಳು

ಜೀಪ್ ಕಂಪಾಸ್‍‍ನ ಯಾವ ಮಾದರಿಯ ಕಾರನ್ನು ಹೊಂದಿದ್ದಾರೆ ಎಂಬುದು ಖಚಿತವಾಗಿ ತಿಳಿದು ಬಂದಿಲ್ಲ. ಉನ್ನಿರವರು ಅನೇಕ ಬಾರಿ ತಮ್ಮ ನೆಚ್ಚಿನ ಕಂಪಾಸ್ ಕಾರಿನ ಜೊತೆ ಕಾಣಿಸಿಕೊಂಡಿದ್ದಾರೆ.

MOST READ: ಅನಾವರಣಗೊಂಡ ಬಿ‍ಎಂ‍‍ಡಬ್ಲ್ಯು 1 ಸೀರಿಸ್ ಕಾರು

ಜೀಪ್ ಕಂಪಾಸ್ ಹೊಂದಿರುವ ಭಾರತದ ಖ್ಯಾತ ಸೆಲೆಬ್ರಿಟಿಗಳು

ರಿಯಾ ಚಕ್ರವರ್ತಿ

ಉದಯೋನ್ಮುಖ ತಾರೆ ರಿಯಾ ಚಕ್ರವರ್ತಿರವರು, ಇತ್ತೀಚಿಗೆ ತಮಗಾಗಿ ಸಿಲ್ವರ್ ಬಣ್ಣದ ಜೀಪ್ ಕಂಪಾಸ್ ಕಾರನ್ನು ಖರೀದಿಸಿದ್ದಾರೆ. ಈ ಅತ್ಯಾಕರ್ಷಕವಾದ ಕಾರು ರಿಯಾರವರ ಪರ್ಸಾನಾಲಿಟಿಗೆ ಹೇಳಿ ಮಾಡಿಸಿದಂತಿದೆ. ಯಾವ ಮಾದರಿಯ ಕಾರು ಎಂದು ತಿಳಿದು ಬಂದಿಲ್ಲ.

ಜೀಪ್ ಕಂಪಾಸ್ ಹೊಂದಿರುವ ಭಾರತದ ಖ್ಯಾತ ಸೆಲೆಬ್ರಿಟಿಗಳು

ಕಂಪಾಸ್ ಕಾರು 4x2 ಹಾಗೂ 4 x4 ಆಯ್ಕೆಗಳಲ್ಲಿ ಡೀಸೆಲ್ ಎಂಜಿನ್ ಹಾಗೂ 4x2 ಆಯ್ಕೆಯಲ್ಲಿ ಪೆಟ್ರೋಲ್ ಎಂಜಿನ್‍‍ನಲ್ಲಿ ದೊರೆಯುತ್ತದೆ. ಪೆಟ್ರೋಲ್ ಎಂಜಿನ್‍‍ನಲ್ಲಿ ಡ್ಯೂಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ದೊರೆತರೆ, ಡೀಸೆಲ್ ಎಂಜಿನ್‍‍ನಲ್ಲಿ ಆಟೋಮ್ಯಾಟಿಕ್ ಎಂಜಿನ್ ಅನ್ನು ಕಂಪಾಸ್ ಇನ್ನೂ ಬಿಡುಗಡೆಗೊಳಿಸಿಲ್ಲ.

More from DriveSpark

Article Published On: Friday, May 31, 2019, 15:46 [IST]
English summary
India’s famous Jeep Compass SUV owners - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+