ಅನಾವರಣಗೊಂಡ ಡುಕಾಟಿ ಹೈಪರ್ ಮೋಟಾರ್ಡ್ 950 ಬೈಕ್ ಪರಿಕಲ್ಪನೆ
ಡುಕಾಟಿ ಕಂಪನಿಯು ಹೈಪರ್‍ಮೋಟಾರ್ಡ್ 950 ಬೈಕಿನ ಕಾನ್ಸೆಪ್ಟ್ ಅನ್ನು ಇಟಲಿಯಲ್ಲಿರುವ ಕಾನ್‍ಕಾರ್ಸೊ ಡಿ ಎಲಿಗಾಂಝಾ ವಿಲ್ಲಾ ಡಿ ಎಸ್ಟೇಟ್‍ನಲ್ಲಿ ಬಿಡುಗಡೆಗೊಳಿಸಿದೆ. ಈ ಬೈಕಿನ ಪರಿಕಲ್ಪನೆಯು ಆಸಕ್ತಿಕರವಾಗಿದೆ.

ಉತ್ಪಾದನಾ ಹಂತದಲ್ಲಿರುವ ಹೈಪರ್‍ಮೋಟಾರ್ಡ್ 950 ಬೈಕ್ ಅನ್ನು 2018ರ ಇಐಸಿಎಂಎ ಯಲ್ಲಿ ಜಾಗತಿಕವಾಗಿ ಬಿಡುಗಡೆಗೊಳಿಸಲಾಗಿತ್ತು. ಹೈಪರ್‍ಮೋಟಾರ್ಡ್ 950 ಬೈಕ್‍ನ ಪರಿಕಲ್ಪನೆಯು ಸ್ಟಾಂಡರ್ಡ್ ಮಾದರಿಯ ಬೈಕಿಗಿಂತ ವಿಭಿನ್ನವಾಗಿದ್ದು, ಸಿಟಿ ವಾಲ್‍ಗಳಲ್ಲಿರುವಂತಹ ಗ್ರಾಫಿಕ್ಸ್ ಅನ್ನು ಹೊಂದಿದೆ. ಈ ಬೈಕ್ ಕೆಂಪು ಹಾಗೂ ಕಪ್ಪು ಬಣ್ಣವನ್ನು ಹೊಂದಿದ್ದು, ಟ್ಯಾಂಕಿನ ಎರಡೂ ಬದಿಯಲ್ಲಿ ಹೈಪರ್ ಎಂದು ಬರೆಯಲಾಗಿದೆ.

ಹೆಡ್‍ಲ್ಯಾಂಪ್ ಹಾಗೂ ಬ್ಯಾಕ್‍ಲೈಟಿನ ಮೇಲೆ 03 ಎಂಬ ಸಂಖ್ಯೆಯಿದ್ದು, ಸೀಟುಗಳ ಮೇಲೆ ಡುಕಾಟಿ ಎಂದಿದೆ. ಇದರ ಜೊತೆಗೆ ಕೆಂಪು, ಕಪ್ಪು ಬಣ್ಣ ಮಿಶ್ರವಾಗಿರುವ ವ್ಹೀಲ್‍ಗಳು ಹಾಗೂ ಟಯರ್‍ನ ಸೈಡ್ ವಾಲ್‍ಗಳಿವೆ.

ಇದರ ಜೊತೆಗೆ, ಡುಕಾಟಿ ಕಂಪನಿಯು ಈ ಕಾನ್ಸೆಪ್ಟ್ ಬೈಕಿನಲ್ಲಿ ಹ್ಯಾಂಡ್ ಗಾರ್ಡ್‍ಗಳನ್ನು ಹಾಗೂ ಡ್ರೈ ಕ್ಲಚ್‍ಗಳನ್ನು ಅಳವಡಿಸಿದೆ. ಈ ಬದಲಾವಣೆಗಳ ಹೊರತಾಗಿ, ಬೈಕಿನಲ್ಲಿ ಬೇರೆ ಯಾವುದೇ ಬದಲಾವಣೆಗಳಾಗಿಲ್ಲ.

ಹೈಪರ್‍ಮೋಟಾರ್ಡ್ 950 ಬೈಕ್‍ನಲ್ಲಿ 937 ಸಿಸಿಯ ಎಲ್-ಟ್ವಿನ್ ಎಂಜಿನ್‍ಯಿದ್ದು 114 ಬಿಹೆಚ್‍ಪಿ ಹಾಗೂ 96 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಸಸ್ಪೆಂಷನ್ ಹಾಗೂ ಬ್ರೇಕಿಂಗ್‍ನಲ್ಲಿ ಟಾಪ್ ಮಾದರಿಗಳನ್ನು ಅಳವಡಿಸಲಾಗಿದ್ದು, ಕ್ರಮವಾಗಿ ಒಹ್ಲಿನ್ ಹಾಗೂ ಬ್ರೆಂಬೊಗಳಿಂದ ಪಡೆಯಲಾಗಿದೆ.
MOST READ: ಬುಗಾಟಿ ಹೈಪರ್ ಕಾರು ಹೊಂದಿರುವ ಭಾರತೀಯರು

ಡುಕಾಟಿ ಕಂಪನಿಯು ಈ ಹೈಪರ್‍ಮೋಟಾರ್ಡ್ 950 ಬೈಕ್ ಕಾನ್ಸೆಪ್ಟ್ ಬೈಕಿನ ಬೆಲೆಯನ್ನು ಬಹಿರಂಗಪಡಿಸಿಲ್ಲ. ಆದರೆ ಈ ಬೈಕುಗಳನ್ನು ಮಾರುಕಟ್ಟೆಯಲ್ಲಿ ಸೀಮಿತ ಸಂಖ್ಯೆಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.
MOST READ: ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಬುಗಾಟಿ ವೇರಾನ್

ಹೈಪರ್‍ಮೋಟಾರ್ಡ್ 950 ಕಾನ್ಸೆಪ್ಟ್ ಬೈಕ್ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲದೇ ಇದ್ದರೂ, ಒಂದು ವೇಳೆ ಬಿಡುಗಡೆಯಾದರೇ, ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ಬಿಡುಗಡೆಯಾಗಬಹುದು.


Click it and Unblock the Notifications