ಮತಷ್ಟು ದುಬಾರಿಯಾದ ರಾಯಲ್ ಎನ್‍ಫೀಲ್ಡ್ 650 ಟ್ವಿನ್ಸ್
ಜನಪ್ರಿಯ ದ್ವಿಚಕ್ರ ವಾಹನ ಸಂಸ್ಥೆ ರಾಯಲ್ ಎನ್‍ಫೀಲ್ದ್ ತನ್ನ ಪ್ರಮುಖ ಆವೃತ್ತಿಗಳಲ್ಲಿ ಒಂದಾದ 650 ಸಿಸಿ ಟ್ವಿನ್ಸ್ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ ದುಬಾರಿಯಾಗಿದೆ. ಕಾಂಟಿನೆಂಟಲ್ ಜಿಟಿ 650 ಮತ್ತು ಇಂಟರ್‍ಸೆಪ್ಟರ್ 650 ಬೈಕ್‍ಗಳು ರಾಯಲ್ ಎನ್‍ಫೀಲ್ಡ್ ಸಂಸ್ಥೆಯಲ್ಲಿರುವ ಉನ್ನತ್ತ ಮಟ್ಟದ ಸಾಮರ್ಥ್ಯ ಹೊಂದಿರುವ ಬೈಕ್‍ಗಳಾಗಿದೆ.

ರಾಯಲ್ ಎನ್‍ಫೀಲ್ಡ್ 650 ಟ್ವಿನ್ಸ್ ಬೆಲೆ ಆವೃತ್ತಿಯ ಇಂಟರ್‍ಸೆಪ್ಟರ್ 650 ಗೆ ರೂ. 6,000 ಮತ್ತು ಕಾಂಟಿನೆಂಟಲ್ ಜಿಟಿ 650 ಗೆ ರೂ.6,400 ದರ ಹೆಚ್ಚಾಗಿದೆ.ಭಾರತದ ಎಕ್ಸ್ ಶೋ ರೂಂ ಪ್ರಕಾರ ಎರಡು ಬೈಕ್‍ಗಳಿಗೆ ಪ್ರಾರಂಭಿಕವಾಗಿ ಇಂಟರ್ಸೆಪ್ಟರ್ ಮತ್ತು ಕಾಂಟಿನೆಂಟಲ್ ಜಿಟಿಗೆ ರೂ. 2.56 ಲಕ್ಷ ದರ ಹೊಂದಿದ್ದು, ರಾಯಲ್ ಎನ್‍ಫೀಲ್ಡ್ 650 ಟ್ವಿನ್ಸ್ ಗೆ ಪರಿಷ್ಕೃತ ದರವನ್ನು ತಿಂಗಳ ಆರಂಭದಲ್ಲಿ ಜಾರಿಗೆ ತರಲಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಎಲ್ಲಾ ವಾಹನಗಳ ಮಾರಾಟದಲ್ಲಿ ಕುಸಿತ ಕಂಡಿರುವ ಸಂದರ್ಭದಲ್ಲಿ ರಾಯಲ್ ಎನ್‍ಫೀಲ್ದ್ ತನ್ನ ಬೆಲೆಯನ್ನು ಹೆಚ್ಚಿಸಿದೆ.

ಪ್ರಾರಂಭಿಕ ಬೆಲೆ ಏರಿಕೆಯಾಗಿದ್ದು ಅಲ್ಲದೆ, ರಾಯಲ್ ಎನ್‍ಫೀಲ್ಡ್ ತನ್ನ ವಿವಿಧ ಬಣ್ಣಗಳಿಗೆ ತಕ್ಕಂತೆ ಬೆಲೆ ಏರಿಗೆ ಮಾಡಲಾಗಿದೆ. ಇಂಟರ್‍ಸೆಪ್ಟರ್ 650 ಬೈಕ್ ಮಾರ್ಕ್ ತ್ರೀ, ಆರೆಂಜ್ ಕ್ರಶ್, ಸಿಲ್ವರ್ ಸ್ಪೆಕ್ಟ್ರಾ, ರವಿಶಿಂಗ್ ರೆಡ್, ಬೇಕರ್ ಎಕ್ಸ್ ಪ್ರಸ್ ಮತ್ತು ಗಿಲ್ಟರ್ ಎಂಬ ಆರು ಬಣ್ಣಗಳಲ್ಲಿ ಲಭ್ಯವಿದೆ.

ಮೊದಲ ಮೂರು ಬಣ್ಣಗಳಿಗೆ 2.56 ಲಕ್ಷ ರೂ ಹೊಂದಿದ್ದು, ರವಿಶಿಂಗ್ ರೆಡ್ ಮತ್ತು ಬೇಕರ್ ಎಕ್ಸ್ಪೆಸ್ ರೂ. 2.64 ಲಕ್ಷ ಹಾಗೂ ಗ್ಲಿಟರ್, ಡಸ್ಟ್(ಕ್ರೋಮ್) ಬಣ್ಣಕ್ಕೆ 2.76ದರ ವಿದೆ.ಭಾರತದ ಎಕ್ಸ್ ಶೋ ರೂಂ ಪ್ರಕಾರ ರಾಯಲ್ ಎನ್‍ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಐದು ಬಣ್ಣಗಳಲ್ಲಿ ಲಭ್ಯವಿದ್ದು, ಅವುಗಳು - ವೆಂಚುರಾ ಬ್ಲೂ, ಬ್ಲ್ಯಾಕ್ ಮ್ಯಾಜಿಕ್, ಮೇಹೆಮ್, ಐಸ್ ಕ್ವೀನ್ ಮತ್ತು ಮಿಸ್ಟರ್ ಕ್ಲೀನ್.

ರಾಯಲ್ ಎನ್‍ಫೀಲ್ಡ್ ಇಂಟರ್‍ಸೆಪ್ಟರ್ 650 60ರ ದಶಕದ ಇಂಟರ್‍ಸೆಪ್ಟರ್‍ನಿಂದ ಪ್ರೇರಣೆಯನ್ನು ಹೊಂದಿದ್ದು, ಬ್ರಿಟಿಷ್ ರೋಡ್‍ಸ್ಟರ್ ಮಾದರಿಯ ನೋಟವನ್ನು ಪಡೆದುಕೊಂಡಿದೆ. ಇನ್ನು ಇಂಟರ್‍ಸೆಪ್ಟರ್ 650 ಬೈಕ್ ಕ್ಲೀನ್-ಲೈನ್, ಕ್ಲಾಸಿಕ್ ಟಿಯರ್‍ಡ್ರಾಪ್ ಆಕಾರದ ಫ್ಯುಯಲ್ ಟ್ಯಾಂಕ್ ಮತ್ತು ಡೈಮಂಡ್-ಕ್ವಿಲ್ಟ್-ಪ್ಯಾಟರ್ನ್ಡ್ ಟ್ವಿನ್ ಸೀಟ್‍ಗಳಿಂದ ಆಕರ್ಷಕ ಲುಕ್ ಹೊಂದಿದೆ.

ಭಾರತೀಯ ಎಕ್ಸ್ ಶೋ ರೂಂ ಪ್ರಕಾರ ವೆಂಚುರಾ ಬ್ಲೂ ಮತ್ತು ಬ್ಲ್ಯಾಕ್ ಮ್ಯಾಜಿಕ್ ಬೆಲೆಗಳು 2.71 ಲಕ್ಷ ರೂ. ಮೇಹೆಮ್ ಮತ್ತು ಐಸ್ ಕ್ವೀನ್ ಬಣ್ಣಕ್ಕೆ ತುಸು ಹೆಚ್ಚಾಗಿದ್ದು ರೂ. 2.79 ಲಕ್ಷ, ಮಿಸ್ಟರ್ ಕ್ಲೀನ್ ರೂ. 2.92 ಲಕ್ಷ ದರವನ್ನು ಹೊಂದಿದೆ.
MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಎರಡು ಬೈಕ್ 649 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, 47ಬಿಎಚ್‍ಪಿ ಪವರ್ ಮತ್ತು 52 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣ ಹೊಂದಿದೆ. ಎಂಜಿನ್‍ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಎರಡು ಬೈಕ್‍ಗಳು ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಈಗಲೂ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿಲ್ಲ.
MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ರಾಯಲ್ ಎನ್‍ಫೀಲ್ಡ್ ಎಲ್ಲಾ ವರ್ಗದ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಆದರೆ ಈಗ ದುಬಾರಿಯಾಗುವ ಮೂಲಕ ಮಧ್ಯಮ ವರ್ಗದ ರಾಯಲ್ ಎನ್‍ಫೀಲ್ಡ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ದೇಶಿಯ ಮಾರುಕಟ್ಟೆಯಲ್ಲಿನ ದ್ವಿಚಕ್ರ ವಾಹನಗಳ ಸರಣಿಯಲ್ಲಿ ಈ ಎರಡೂ ಬೈಕ್‍ಗಳು ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿತ್ತು.
MOST READ: ಭಾರತದಲ್ಲಿ ಐಕಾನಿಕ್ ಯಜ್ಡಿ ಬೈಕ್‌ಗಳ ಮರುಬಿಡುಗಡೆ ಪಕ್ಕಾ

ಜಗತ್ತಿನ ಪ್ರಾಚೀನ ಮಾದರಿಯ ವಾಹನ ತಯಾರಕ ರಾಯಲ್ ಎನ್‍ಫೀಲ್ಡ್ 650 ಟ್ವಿನ್ಸ್ ಬೈಕ್ ದೇಶಿಯ ಮಾರುಕಟ್ಟೆಯಲ್ಲಿ 650 ಸಿಸಿ ಆವೃತ್ತಿಯ ಅತ್ಯುತ್ತಮ ಬೈಕ್ ಆಗಿದೆ. ರಾಯಲ್ ಎನ್‍ಫೀಲ್ಡ್ ಬಿಡುಗಡೆಯಾಗುವಾಗ ಅದರ ಬೆಲೆ 300 ಸಿಸಿ ಆವೃತ್ತಿ ಕ್ಕಿಂತಲೂ ಬೆಲೆ ಕಡಿಮೆ ಇತ್ತು. ಆದರೆ ಇದೀಗ 650ಟ್ವಿನ್ಸ್ ಬೈಕ್ ಬೆಲೆ ಹೆಚ್ಚಿಸಿದೆ. 650 ಸಿಸಿ ಟ್ವಿನ್ಸ್ ಬೈಕ್ ಬಜಾಜ್ ಡೊಮಿನಾರ್ 400, ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಬೈಕಿಗೆ ಪೈಪೋಟಿ ನೀಡುತ್ತಿದೆ.


Click it and Unblock the Notifications