ಮಾರಾಟಕ್ಕಿದೆ ಹಾರ್ಲೆ ಡೇವಿಡ್ಸನ್‍‍ನಂತಿರುವ ರಾಯಲ್ ಎನ್‍‍ಫೀಲ್ಡ್

ಹಾರ್ಲೆ ಡೇವಿಡ್ಸನ್ ಹಾಗೂ ರಾಯಲ್ ಎನ್‍‍ಫೀಲ್ಡ್ ಕಂಪನಿಗಳು ಭಾರತದಲ್ಲಿ ತಮ್ಮದೇ ಆದ ಸಂಪರ್ಕ ಜಾಲವನ್ನು ಹೊಂದಿವೆ. ಈ ಎರಡೂ ಕಂಪನಿಗಳೂ ವಿಶ್ವದ ಅತ್ಯಂತ ಹಳೆಯ ಹಾಗೂ ಐ‍‍ಕಾನಿಕ್ ಬೈಕ್ ತಯಾರಕ ಕಂಪನಿಗಳಾಗಿವೆ. ಇದರ ಜೊತೆಗೆ ರೆಟ್ರೊ ಶೈಲಿಯ ಬೈಕುಗಳನ್ನು ತಯಾರಿಸುತ್ತವೆ.

ಮಾರಾಟಕ್ಕಿದೆ ಹಾರ್ಲೆ ಡೇವಿಡ್ಸನ್‍‍ನಂತಿರುವ ರಾಯಲ್ ಎನ್‍‍ಫೀಲ್ಡ್

ಈ ಕಂಪನಿಯ ಬೈಕುಗಳ ಬೆಲೆಯಲ್ಲಿ ಭಾರೀ ಪ್ರಮಾಣದ ವ್ಯತ್ಯಾಸಗಳಿವೆ. ಭಾರತದಲ್ಲಿ ಹಲವಾರು ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಹಾರ್ಲೆ ಡೇವಿಡ್ಸನ್ ಬೈಕುಗಳ ರೀತಿಯಲ್ಲಿ ಮಾರ್ಪಡಿಸಲಾಗಿದೆ. ಇದರ ಹಿಂದಿರುವ ಪ್ರಮುಖವಾದ ಕಾರಣವೆಂದರೆ ಎರಡೂ ಬೈಕುಗಳು ಸ್ವಲ್ಪಮಟ್ಟಿಗೆ ಒಂದೇ ರೀತಿಯ ಸ್ಟೈಲಿಂಗ್ ಹಾಗೂ ಡಿಸೈನ್ ಹೊಂದಿವೆ. ರಾಯಲ್ ಎನ್‌ಫೀಲ್ಡ್ ಬೈಕುಗಳನ್ನು ಸುಲಭವಾಗಿ ಕ್ರೂಸರ್ ಬೈಕ್‌ಗಳ ರೀತಿಯಲ್ಲಿ ಮಾರ್ಪಡಿಸಬಹುದು.

ಇದೇ ರೀತಿಯಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್ ಅನ್ನು ಹಾರ್ಲೆ ಡೇವಿಡ್ಸನ್ ಬೈಕಿನ ರೀತಿಯಲ್ಲಿ ಮಾಡಿಫೈಗೊಳಿಸಲಾಗಿದ್ದು, ಆ ಬೈಕ್ ಮಾರಾಟಕ್ಕೆ ಲಭ್ಯವಿದೆ. ಬಿ‍ಎಲ್‍‍ಸಿ ಬೈಕರ್ ಬಿಡುಗಡೆಗೊಳಿಸಿರುವ ಈ ವೀಡಿಯೊ ಬೈಕಿನ ಬಗ್ಗೆ ಪೂರ್ಣ ಮಾಹಿತಿಯನ್ನು ತೋರಿಸುತ್ತದೆ.

ಮಾರಾಟಕ್ಕಿದೆ ಹಾರ್ಲೆ ಡೇವಿಡ್ಸನ್‍‍ನಂತಿರುವ ರಾಯಲ್ ಎನ್‍‍ಫೀಲ್ಡ್

ಈ ವೀಡಿಯೊ ಬೈಕಿನಲ್ಲಿ ಮಾಡಲಾಗಿರುವ ವಿವಿಧ ಮಾರ್ಪಡುಗಳ ಬಗ್ಗೆ ತಿಳಿಸುತ್ತದೆ. ಮಾರ್ಪಡಿಸಿದ ಬೈಕ್‌ಗಳಲ್ಲಿ ಆಸಕ್ತಿ ಹೊಂದಿರುವವರು ರೂ.2.5 ಲಕ್ಷ ನೀಡಿ ಈ ಬೈಕ್ ಖರೀದಿಸಬಹುದು. 2013ರ ರಾಯಲ್ ಎನ್‌ಫೀಲ್ಡ್ ಬುಲೆಟ್ ಸ್ಟ್ಯಾಂಡರ್ಡ್ ಮಾದರಿಯ ಬೈಕ್ ಅನ್ನು ಈ ರೀತಿಯಾಗಿ ಮಾರ್ಪಡುಗೊಳಿಸಲಾಗಿದೆ.

ಮಾರಾಟಕ್ಕಿದೆ ಹಾರ್ಲೆ ಡೇವಿಡ್ಸನ್‍‍ನಂತಿರುವ ರಾಯಲ್ ಎನ್‍‍ಫೀಲ್ಡ್

ಈ ಬೈಕ್ ಸದ್ಯಕ್ಕೆ ಅದರ ಮಾಲೀಕನ ಬಳಿಯಿದೆ. ಬೈಕ್ ಅನ್ನು ಖರೀದಿಸಬಯಸುವವರು ವೀಡಿಯೊದಲ್ಲಿ ತೋರಿಸಿರುವ ಮೇಲ್ ಐಡಿ ಮೂಲಕ ಬೈಕಿನ ಮಾಲೀಕರನ್ನು ಸಂಪರ್ಕಿಸಬಹುದು. ಇನ್ನು ಈ ಬೈಕಿನ ಮಾರ್ಪಡಿನ ಬಗ್ಗೆ ಹೇಳುವುದಾದರೆ, ಬೈಕಿನ ಮುಂಭಾಗದ ತುದಿಗೆ ಪೂರ್ಣ ಪ್ರಮಾಣದ ಕ್ರೂಸರ್ ಲುಕ್ ನೀಡಲಾಗಿದ್ದು, ಕ್ರೋಮ್‌ ಬಣ್ಣವನ್ನು ಅಳವಡಿಸಲಾಗಿದೆ.

ಮಾರಾಟಕ್ಕಿದೆ ಹಾರ್ಲೆ ಡೇವಿಡ್ಸನ್‍‍ನಂತಿರುವ ರಾಯಲ್ ಎನ್‍‍ಫೀಲ್ಡ್

ಮುಂಭಾಗದಲ್ಲಿ ಅಗಲವಾದ 110 ಸೆಕ್ಷನ್‍‍ನ ಟಯರ್‌ಗೆ ಹೊಂದಿಕೊಳ್ಳುವಂತಹ ಕಸ್ಟಮ್ ಟ್ರಿಪಲ್ ಟಿಯನ್ನು ಸೇರಿಸಲಾಗಿದೆ. ಇದನ್ನು 19 ಇಂಚಿನ ರಿಮ್‌ಗೆ ಜೋಡಿಸಲಾಗಿದೆ. ರಿಮ್‍‍ಗಳು ಕಪ್ಪು ಬಣ್ಣವನ್ನು ಹೊಂದಿದ್ದು, ಅದ್ಬುತವಾಗಿ ಕಾಣುತ್ತವೆ. ಮಾರ್ಪಡಾದ ಬೈಕಿನಲ್ಲಿರುವ ಹೆಚ್ಚಿನ ಬಾಡಿ ಪ್ಯಾನೆಲ್‌ಗಳು ಕೆಂಪು ಬಣ್ಣವನ್ನು ಹೊಂದಿವೆ.

ಮಾರಾಟಕ್ಕಿದೆ ಹಾರ್ಲೆ ಡೇವಿಡ್ಸನ್‍‍ನಂತಿರುವ ರಾಯಲ್ ಎನ್‍‍ಫೀಲ್ಡ್

ಎಂಜಿನ್ ಹಾಗೂ ಇತರ ಬಿಡಿ ಭಾಗಗಳು ಕಪ್ಪು ಬಣ್ಣವನ್ನು ಹೊಂದಿವೆ. ಹೆಡ್‌ಲೈಟ್ ಅನ್ನು ಸಹ ಮಾಡಿಫೈ ಮಾಡಲಾಗಿದೆ. ಎಲ್‌ಇಡಿ ಫಾಗ್‌ಲ್ಯಾಂಪ್‌ಗಳು ಬೈಕ್‌ನ ಮುಂಭಾಗದ ತುದಿಗೆ ಮ್ಯಾಚೊ ಲುಕ್ ನೀಡುತ್ತದೆ. ಕಸ್ಟಮ್ ಏರ್ ಫಿಲ್ಟರ್, ಡಮ್ಮಿ ಎಂಜಿನ್ ಗಾರ್ಡ್, ಎಂಜಿನ್ ಡರ್ಟ್ ಗಾರ್ಡ್‍‍ಗಳಿವೆ.

ಮಾರಾಟಕ್ಕಿದೆ ಹಾರ್ಲೆ ಡೇವಿಡ್ಸನ್‍‍ನಂತಿರುವ ರಾಯಲ್ ಎನ್‍‍ಫೀಲ್ಡ್

ಹ್ಯಾಂಡಲ್‌ಬಾರ್ ರೈಸರ್‌ಗಳಲ್ಲಿ ಮಾಡಿಫೈಗೊಂಡ ವೈಡ್ ಹ್ಯಾಂಡಲ್‌ಬಾರ್ ಅಳವಡಿಸಲಾಗಿದೆ. ಹ್ಯಾಂಡಲ್‌ಬಾರ್‌ಗಳ ಮೇಲಿರುವ ಇಂಡಿಕೇಟರ್‍‍ಗಳನ್ನು ತಲೆಕೆಳಗಾಗಿ ಜೋಡಿಸಲಾಗಿದೆ. ಇದು ಬೈಕ್‌ನ ಒಟ್ಟಾರೆ ನೋಟವನ್ನು ಹೆಚ್ಚಿಸುತ್ತದೆ.

ಮಾರಾಟಕ್ಕಿದೆ ಹಾರ್ಲೆ ಡೇವಿಡ್ಸನ್‍‍ನಂತಿರುವ ರಾಯಲ್ ಎನ್‍‍ಫೀಲ್ಡ್

ಫುಟ್‌ಪೆಗ್‌ಗಳನ್ನು ಮುಂಭಾಗದಲ್ಲಿ ಇಡಲಾಗಿದೆ. ಇದರಿಂದಾಗಿ ಬೈಕ್ ಸವಾರಿ ಮಾಡುವಾಗ ಸವಾರನು ವಿಶಿಷ್ಟವಾದ ಕ್ರೂಸರ್ ಚಾಲನೆಯ ಅನುಭವವನ್ನು ಪಡೆಯುತ್ತಾನೆ. ಸ್ಯಾಡಲ್‍‍ಗಳನ್ನು ವಿಶಾಲವಾಗಿರುವ ಇಂಧನ ಟ್ಯಾಂಕಿನ ಹಿಂದೆ ಅಳವಡಿಸಲಾಗಿದೆ.

ಮಾರಾಟಕ್ಕಿದೆ ಹಾರ್ಲೆ ಡೇವಿಡ್ಸನ್‍‍ನಂತಿರುವ ರಾಯಲ್ ಎನ್‍‍ಫೀಲ್ಡ್

ಹಿಂಭಾಗದ ತುದಿಯು ಕಸ್ಟಮ್ ಫೆಂಡರ್ ಜೊತೆಗೆ ದೊಡ್ಡ ಗಾತ್ರದ 190 ಸೆಕ್ಷನ್‍‍ನ ಟಯರ್ ಹೊಂದಿದೆ. ಫೆಂಡರ್‌ನಲ್ಲಿರುವ ಎಲ್‌ಇಡಿ ಸ್ಟ್ರಿಪ್‌ಗಳು ಟೇಲ್‌ಲೈಟ್‍‍ಗಳ ಕಾರ್ಯಗಳನ್ನು ಮಾಡುತ್ತವೆ. ಕಸ್ಟಮ್ ಟ್ವಿನ್ ಪೈಪ್ ಸೈಲೆನ್ಸರ್ ಈ ಬೈಕಿನ ಮಾಡಿಫೀಕೇಷನ್ ಅನ್ನು ಪೂರ್ಣಗೊಳಿಸುತ್ತದೆ. ಆದರೆ ಈ ಸೈಲೆನ್ಸರ್ ಒಂದೇ ಒಂದು ಪೈಪ್ ಹೊಂದಿದೆ.

More from DriveSpark

Article Published On: Thursday, August 8, 2019, 17:48 [IST]
English summary
This Harley Davidson Fatboy look-alike Royal Enfield Bullet is up for sale. Read in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+