ಹೊಸ ಬಣ್ಣದೊಂದಿಗೆ ಬರಲಿದೆ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350

ಜನಪ್ರಿಯ ರಾಯಲ್ ಎನ್‍‍ಫೀಲ್ಡ್ ಕಂಪನಿಯು ತನ್ನ ಸರಣಿಯಲ್ಲಿ ಹೆಚ್ಚು ಮಾರಾಟವಾಗುವ ಕ್ಲಾಸಿಕ್ 350 ಬೈಕ್ ಅನ್ನು ಶೀಘ್ರದಲ್ಲೇ ನವೀಕರಿಸಲಿದೆ. ಫ್ಯೂಯಲ್ ಇಂಜೆಕ್ಷನ್ ತಂತ್ರಜ್ಞಾನದ ಸೇರ್ಪಡೆಯೊಂದಿಗೆ 350 ಸಿಸಿ ಸರಣಿಯಲ್ಲಿ ಬಿಎಸ್-6 ಎಂಜಿನ್ ಅನ್ನು ಬಿಡುಗಡೆಗೊಳಿಸಲು ಕಂಪನಿಯು ಸಜ್ಜಾಗಿದೆ.

ಹೊಸ ಬಣ್ಣದೊಂದಿಗೆ ಬರಲಿದೆ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350

ರಾಯಲ್ ಎನ್‍‍ಫೀಲ್ಡ್, ಕ್ಲಾಸಿಕ್ 350 ಬೈಕಿ‍ನಲ್ಲಿ ಹೊಸದಾಗಿ ಅಲಾಯ್ ವ್ಹೀಲ್‍‍ಗಳನ್ನು ಅಳವಡಿಸಲಿದೆ. ಇದರ ಜೊತೆಯಲ್ಲಿ ಕ್ಲಾಸಿಕ್ 350 ಬೈಕ್ ಅನ್ನು ಹೊಸ ಬಣ್ಣಗಳಗಳಲ್ಲಿ ಬಿಡುಗಡೆಗೊಳಿಸಲಿದೆ. ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಇನ್ನೂ ಮುಂದೆ ಕಲರ್‍‍ಫುಲ್ ಆಗಿರಲಿದೆ.

ಹೊಸ ಬಣ್ಣದೊಂದಿಗೆ ಬರಲಿದೆ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350

ಕ್ಲಾಸಿಕ್ 350 ಬೈಕಿನಲ್ಲಿ ಗನ್‍‍ಮೆಟಲ್ ಗ್ರೇ ಆವೃತ್ತಿಯಲ್ಲಿ ಅಲಾಯ್ ವ್ಹೀಲ್‍‍ಗಳನ್ನು ಅಳವಡಿಸಲಾಗುವುದು. ಸ್ಟೆಲ್ತ್ ಬ್ಲ್ಯಾಕ್ ಕ್ಲಾಸಿಕ್ 350 ಆವೃತ್ತಿಯಲ್ಲಿ ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಳಿಸಲಾಗುತ್ತದೆ.

ಹೊಸ ಬಣ್ಣದೊಂದಿಗೆ ಬರಲಿದೆ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350

ಇನ್ನೂ ಸ್ಟೆಲ್ತ್ ಬ್ಲ್ಯಾಕ್‍ 350 ಆವೃತ್ತಿಯಲ್ಲಿ ಅಲಾಯ್ ವ್ಹೀಲ್‍‍ನೊಂದಿಗೆ ಕೆಲವು ಸ್ಟಿಕ್ಕರ್ ಅಪ್‍ಡೇ‍‍ಟ್‍ಗಳನ್ನು ಮಾಡಲಾಗುವುದು. ಹೊಸ ಬೈಕಿನಲ್ಲಿ ಟ್ಯಾಕ್ ಸ್ಟ್ರೀಪ್ಸ್, ರಾಯಲ್ ಎನ್‍‍ಫೀಲ್ಡ್ ಲೋಗೋ ಮತ್ತು ರೆಡ್ ಬಣ್ಣದ ಸೆಂಟರ್ ಕೌಲ್‍ ಅನ್ನು ಹೊಂದಿರಲಿದೆ.

ಹೊಸ ಬಣ್ಣದೊಂದಿಗೆ ಬರಲಿದೆ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350

ಕ್ಲಾಸಿಕ್ 350 ಬೈಕ್ ಹೊಸ ಕ್ರೋಮ್ ಬಣ್ಣವನ್ನು ಹೊಂದಿರುತ್ತದೆ. ಆದರೆ ಅದು ಸ್ಪೋಕ್ ವ್ಹೀಲ್‍ಗಳೊಂದಿಗೆ ಮಾತ್ರ ಬಿಡುಗಡೆ ಮಾಡಲಾಗುವುದು. ಉತ್ಪಾದನಾ ಘಟಕದಿಂದ ಬರುವ ಎರಡು ಬಣ್ಣಗಳಲ್ಲಿ ಅಲಾಯ್ ವ್ಹೀಲ್‍‍ಗಳನ್ನು ಅಳವಡಿಸಲಾಗುತ್ತದೆ.

ಹೊಸ ಬಣ್ಣದೊಂದಿಗೆ ಬರಲಿದೆ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350

ಇತ್ತೀಚೆಗೆ ರಾಯಲ್ ಎನ್‍‍ಫೀಲ್ಡ್ ಆನ್‍‍ಲೈನ್ ಕಾನ್ಫಿಗರರೇಟರ್ ಅನ್ನು ಪರಿಚಯಿಸಿತು. ಹೊಸ ಕ್ಲಾಸಿಕ್ 350 ಬೈಕಿನಲ್ಲಿ ಪ್ಯಾನಿಯರ್‍‍ಗಳು, ಎಂಜಿನ್ ಗಾರ್ಡ್‍‍ಗಳು, ವಿಭಿನ್ನ ಸೀಟುಗಳು ಮತ್ತು ಆಲಾಯ್ ವ್ಹೀಲ್‍ಗಳು ಮತ್ತು 16 ವಿಭಿನ್ನ ಎಕ್ಸಾಸ್ಟ್ ಪರಿಕರಗಳನ್ನು ಅಳವಡಿಸುತ್ತದೆ.

ಹೊಸ ಬಣ್ಣದೊಂದಿಗೆ ಬರಲಿದೆ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350

ಆರಂಭಿಕ ಹಂತದಲ್ಲಿ 6 ನಗರಗಳಲ್ಲಿ 141 ಮಳಿಗೆಗಳನ್ನು ಈ ಪರಿಕರಗಳು ಲಭ್ಯವಿರಲಿವೆ. ಈ ಪರಿಕರಗಳಿಗೆ ಎರಡು ವರ್ಷಗಳ ವಾರಂಟಿ ನೀಡಲಾಗುತ್ತದೆ. ಮರ್ಕ್ಯುರಿ ಸಿಲ್ವರ್ ಮತ್ತು ಪ್ಯೂರ್ ಬ್ಲ್ಯಾಕ್ ಎಂಬ ಎರಡು ಹೊಸ ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆಗೊಳಿಸಲಾದ ಕ್ಲಾಸಿಕ್ 350 ಬೈಕಿಗೆ ಇದು ಅನ್ವಯಿಸುತ್ತದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಹೊಸ ಬಣ್ಣದೊಂದಿಗೆ ಬರಲಿದೆ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350

ರಾಯಲ್ ಎನ್‍‍ಫೀಲ್ಡ್ ಕಂಪನಿಯ ಬೈಕುಗಳ ಮಾರಾಟದಲ್ಲಿ ಕುಸಿತವಾಗಿದೆ. ಅತಿ ಹೆಚ್ಚು ಮಾರಾಟವಾಗುವ 350 ಸಿಸಿ ಸರಣಿಯ ಬೈಕುಗಳ ಮಾರಾಟದಲ್ಲಿ ಇಳಿಕೆಯಾಗಿದೆ. ಪ್ರೀಮಿಯಂ ಫೀಚರ್ಸ್‍‍ಗಳಿಗಾಗಿ ಹೆಚ್ಚಿದ ಸ್ಪರ್ಧೆಯಿಂದಾಗಿ ರಾಯಲ್ ಎನ್‍‍‍ಫೀಲ್ಡ್ ಹೆಚ್ಚಿನ ನವೀಕರಣಗಳನ್ನು ನಡೆಸುತ್ತಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಹೊಸ ಬಣ್ಣದೊಂದಿಗೆ ಬರಲಿದೆ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350

ದೇಶಿಯ ಮಾರುಕಟ್ಟೆಯಲ್ಲಿ ಕ್ಲಾಸಿಕ್ 350 ಬೈಕ್ ಮಾರಾಟವನ್ನು ಹೆಚ್ಚಿಸಲು ರಾಯಲ್ ಎನ್‍‍ಫೀಲ್ಡ್ ಹೊಸ ಪ್ರಯತ್ನ ಮಾಡುತ್ತಿದೆ. ಇತ್ತೀಚಿಗೆ ಬಿಡುಗಡೆಯಾದ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಸಿಂಗಲ್ ಸೀಟ್ ಬೈಕು 346 ಸಿಸಿ ಸಿಂಗಲ್ ಸಿಲಿಂಡರ್ ಏರ್‍‍ಕೂಲ್ಡ್ ಎಂಜಿನ್ 5,250 ಆರ್‌ಪಿಎಂನಲ್ಲಿ 19.80 ಬಿಹೆಚ್‌ಪಿ ಪವರ್ ಮತ್ತು 4,000 ಆರ್‌ಪಿಎಂನಲ್ಲಿ 28 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಹೊಸ ಬಣ್ಣದೊಂದಿಗೆ ಬರಲಿದೆ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350

ಈ ಎಂಜಿನ್‍‍ನೊಂದಿಗೆ 4 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 350 ಬೈಕಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ಪ್ರಕಾರ ರೂ.1.64 ಲಕ್ಷಗಳಾಗಿದೆ.

ಹೊಸ ಬಣ್ಣದೊಂದಿಗೆ ಬರಲಿದೆ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350

ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ರಾಯಲ್ ಎನ್‍‍ಫೀಲ್ಡ್ ಕ್ಲಾಸಿಕ್ 500 ಬೈಕಿಗೆ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.2.17 ಲಕ್ಷಗಳಾಗಿದೆ. ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುವುದರಿಂದ 500 ಸಿಸಿ ಸರಣಿಯ ಬೈಕ್‍‍ಗಳನ್ನು ಸ್ಥಗಿತಗೊಳಿಸಲಾಗುತ್ತದೆ.

Article Published On: Monday, December 9, 2019, 16:03 [IST]
English summary
Exclusive: BS6 RE Classic 350 In New Colours With Alloy Wheels Launching Soon - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+