ಆಫ್ ರೋಡ್ ಬುಲೆಟ್ ಟ್ರಯಲ್ಸ್ ಬೈಕ್ ಅನ್ನು ಕ್ಲಾಸಿಕ್ ಮಾದರಿಯಾಗಿ ಬದಲಿಸಿದ ಆರ್‌ಇ ಡೀಲರ್ಸ್
ದೇಶದ ಜನಪ್ರಿಯ ಕ್ಲಾಸಿಕ್ ಬೈಕ್ ಉತ್ಪಾದನಾ ಸಂಸ್ಥೆಯಾಗಿರುವ ರಾಯಲ್ ಎನ್‌ಫೀಲ್ಡ್ ಸದ್ಯ ಮಾರುಕಟ್ಟೆಯಲ್ಲಿ ಹಲವು ಬಗೆಯ ಬೈಕ್ ಆವೃತ್ತಿಗಳನ್ನು ಮಾರಾಟ ಮಾಡುತ್ತಿದ್ದು, ಕೆಲ ದಿನಗಳಷ್ಟೇ ಬಿಡುಗಡೆ ಮಾಡಲಾಗಿದ್ದ ಬುಲೆಟ್ ಟ್ರಯಲ್ಸ್ ಬೈಕ್‌ಗಳು ಇದೀಗ ಕ್ಲಾಸಿಕ್ ಬೈಕ್ ಮಾದರಿಯಾಗಿ ಮಾರಾಟಗೊಳ್ಳುತ್ತಿವೆ.

ಹೌದು, ಆಫ್ ರೋಡ್ ಪ್ರಿಯರಿಗಾಗಿ ಬಿಡುಗಡೆ ಮಾಡಲಾಗಿದ್ದ ಬುಲೆಟ್ ಟ್ರಯಲ್ಸ್ 350 ಮತ್ತು ಬುಲೆಟ್ ಟ್ರಯಲ್ಸ್ 500 ಬೈಕ್‌ಗಳು ಅತ್ಯುತ್ತಮ ತಾಂತ್ರಿಕ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದ್ದರೂ ಸಹ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿದ್ದು, ಮಾರಾಟವಾಗದೇ ಉಳಿದ ಬೈಕ್ ಮಾರಾಟಕ್ಕಾಗಿ ಪರದಾಟುತ್ತಿರುವ ಡೀಲರ್ಸ್‌ಗಳು ಬುಲೆಟ್ ಟ್ರಯಲ್ಸ್ ಬೈಕ್‌ಗಳಿಗೆ ಹೊಸ ರೂಪ ನೀಡಿ ಮಾರಾಟ ಮಾಡುತ್ತಿದ್ದಾರೆ.

ನಿಮಗೆಲ್ಲಾ ಗೊತ್ತಿರುವ ಹಾಗೆ ಕಳೆದ ಕೆಲ ತಿಂಗಳಿನಿಂದ ಆಟೋ ಉತ್ಪಾದನಾ ವಲಯದಲ್ಲಿ ತೀವ್ರ ಕುಸಿತ ಕಂಡಿರುವುದು ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ಸಂಕಷ್ಟದಲ್ಲಿದ್ದು, ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಭಾರೀ ಹಿನ್ನಡೆ ಅನುಭವಿಸಿದೆ.

ರಾಯಲ್ ಎನ್‌ಫೀಲ್ಡ್ ನಿರ್ಮಾಣದ ಕ್ಲಾಸಿಕ್ ಬೈಕ್ ಹೊರತುಪಡಿಸಿ ಉಳಿದೆಲ್ಲಾ ಬೈಕ್ ಮಾದರಿಗಳು ತೀವ್ರ ಹಿನ್ನಡೆ ಅನುಭವಿಸಿದ್ದು, ಆರ್ಥಿಕವಾಗಿ ಹೊರೆಯಾಗುತ್ತಿರುವ ಸ್ಟಾಕ್ ಪ್ರಮಾಣವನ್ನು ಕರಗಿಸಲು ಮುಂದಾಗಿರುವ ಡೀಲರ್ಸ್‌ಗಳು ಬುಲೆಟ್ ಟ್ರಯಲ್ಸ್ ಬೈಕ್‌ಗಳಿಗೆ ಕ್ಲಾಸಿಕ್ ಬೈಕ್ ಬೀಡಿಭಾಗಗಳನ್ನು ಮರುಜೋಡಣೆ ಮಾಡಿ ಮಾರಾಟ ಮಾಡುತ್ತಿದ್ದಾರೆ.

ಬುಲೆಟ್ ಟ್ರಯಲ್ಸ್ ಬೈಕ್‌ಗಳು ಮೂಲತಃ ಆಫ್ ರೋಡ್ ಮಾದರಿಯಾಗಿರುವುದರಿಂದ ಸಿಂಗಲ್ ಸೀಟ್ ಜೊತೆ ಸ್ಪೋರ್ಟಿ ಎಕ್ಸಾಸ್ಟ್ ಹೊಂದಿದ್ದು, ಕ್ಲಾಸಿಕ್ ಬೈಕ್ ಮಾದರಿಯನ್ನು ಹೆಚ್ಚು ಇಷ್ಟಪಡುವ ಆರ್‌ಇ ಗ್ರಾಹಕರು ಬುಲೆಲ್ ಟ್ರಯಲ್ಸ್ ಬೈಕ್‌ಗಳತ್ತ ಮುಖಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಬುಲೆಟ್ ಟ್ರಯಲ್ಸ್ ಬೈಕಿನ ಹೊರ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳೊಂದಿಗೆ ಮಾರಾಟ ಮಾಡುತ್ತಿದ್ದಾರೆ.

ಸ್ಪೋರ್ಟಿ ಎಕ್ಸಾಸ್ಟ್ ಮತ್ತು ಸಿಂಗಲ್ ಸೀಟ್ ವಿನ್ಯಾಸವನ್ನು ತೆಗೆದುಹಾಕಿ ಕ್ಲಾಸಿಕ್ ಬೈಕ್ ಮಾದರಿಯಲ್ಲಿ ಡಬಲ್ ಸೀಟ್ ಮತ್ತು ಸಾಮಾನ್ಯ ಮಾದರಿಯ ಎಕ್ಸಾಸ್ಟ್ ಮರುಜೋಡಣೆ ಮಾಡಿದ್ದು, ಯಾವುದೇ ಹೆಚ್ಚುವರಿ ಬೆಲೆಯಿಲ್ಲದೇ ಮಾರಾಟ ಮಾಡುತ್ತಿದ್ದಾರೆ.

ಬುಲೆಟ್ ಟ್ರಯಲ್ಸ್‌ನಿಂದ ಕ್ಲಾಸಿಕ್ ಮಾದರಿಗೆ ಬದಲಾವಣೆಗೊಂಡಿರುವ ಹೊಸ ಬೈಕ್ ಇದೀಗ ಗ್ರಾಹಕರನ್ನು ಸೆಳೆಯುತ್ತಿದ್ದು, ಮೊದಲೇ ಸ್ಪೋರ್ಟಿ ಲುಕ್ ಹೊಂದಿರುವುದರಿಂದ ಬೈಕ್ ಖರೀದಿಗೆ ಯುವ ಗ್ರಾಹಕರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.
MOST READ: ಬಂಪರ್ ಕ್ರ್ಯಾಶ್ ಗಾರ್ಡ್ ವಿರುದ್ದ ವಿಶೇಷ ಕಾರ್ಯಾಚರಣೆ- ನಿಯಮ ಉಲ್ಲಂಘನೆಗೆ ದಂಡ ಎಷ್ಟು ಗೊತ್ತಾ?

ಕ್ಲಾಸಿಕ್ ಬೈಕಿನ ಎಂಜಿನ್ ಅನ್ನೇ ಹೊಂದಿರುವ ಬುಲೆಟ್ ಟ್ರಯಲ್ಸ್ ಬೈಕ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ 350 ಮತ್ತು 500 ವರ್ಷನ್‌ನಲ್ಲಿ ಮಾರಾಟಕ್ಕಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.62 ಲಕ್ಷ ಮತ್ತು ರೂ.2.07 ಲಕ್ಷ ಬೆಲೆ ಹೊಂದಿವೆ.
MOST READ: ಬಾಲಿವುಡ್ ಸಿಂಗಂ ಕೈಸೇರಿದ ದೇಶದ ಅತಿ ದುಬಾರಿ ಎಸ್‌ಯುವಿ ಕಾರು..!

ಬುಲೆಟ್ ಟ್ರಯಲ್ಸ್ 350 ಬೈಕ್ ಮಾದರಿಯು 346ಸಿಸಿ ಎಂಜಿನ್‌ನೊಂದಿಗೆ 20-ಬಿಎಚ್‌ಪಿ, 28-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದರೆ, ಬುಲೆಟ್ ಟ್ರಯಲ್ಸ್ 500 ಮಾದರಿಯು 499ಸಿಸಿ ಎಂಜಿನ್‌ನೊಂದಿಗೆ 27.5-ಬಿಎಚ್‌ಪಿ, 41.3-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.
MOST READ: ಮಕಾಡೆ ಮಲಗಿರುವ ಆಟೋ ಉದ್ಯಮಕ್ಕೆ ಮತ್ತೆ ಚುರುಕು ನೀಡಿದ ಕೇಂದ್ರ ಸರ್ಕಾರ..!

ಹೀಗಿದ್ದರೂ ಆಫ್ ರೋಡ್ ಬೈಕ್ ಖರೀದಿದಾರರನ್ನು ಸೆಳೆಯುವಲ್ಲಿ ವಿಫಲವಾಗಿರುವ ಬುಲೆಟ್ ಟ್ರಯಲ್ಸ್ ಬೈಕ್‌ಗಳು ಕಳೆದ ಮಾರ್ಚ್‌ನಿಂದಲೇ ಕೇವಲ ಸಾವಿರ ಲೆಕ್ಕದಲ್ಲಿ ಮಾರಾಟಗೊಂಡಿದ್ದು, ಇದೀಗ ಸ್ಟಾಕ್ ಪ್ರಮಾಣವನ್ನು ಕರಗಿಸಲು ಡೀಲರ್ಸ್‌ಗಳು ಹೊಸ ಮಾರ್ಗವನ್ನು ಕಂಡುಕೊಂಡಿರುವುದು ಮಾರಾಟಕ್ಕೆ ಸಹಕಾರಿಯಾಗುತ್ತಿದೆ.
Source: Gaadiwaadi


Click it and Unblock the Notifications