ಬಾಲಿವುಡ್ ಸಿಂಗಂ ಕೈಸೇರಿದ ದೇಶದ ಅತಿ ದುಬಾರಿ ಎಸ್‌ಯುವಿ ಕಾರು..!

ಜಗತ್ತಿನ ಶ್ರೇಷ್ಠ ಆಟೋ ಉತ್ಪಾದನಾ ಸಂಸ್ಥೆಗಳಲ್ಲಿ ಒಂದಾಗಿರುವ ರೋಲ್ಸ್ ರಾಯ್ಸ್ ಸಂಸ್ಥೆಯು ಕಳೆದ ಕೆಲ ತಿಂಗಳ ಹಿಂದಷ್ಟೇ ಜಾಗತಿಕ ಮಾರುಕಟ್ಟೆಗಳಲ್ಲಿ ತನ್ನ ಬಹುನೀರಿಕ್ಷಿತ ಕಲಿನಿಯನ್ ಎಸ್‌ಯುವಿ ಕಾರನ್ನು ಬಿಡುಗಡೆ ಮಾಡಿದ್ದು, ಇದೀಗ ಭಾರತದಲ್ಲೂ ಹೊಸ ಕಾರಿನ ಮಾರಾಟಕ್ಕೆ ಭರ್ಜರಿ ಚಾಲನೆ ಸಿಕ್ಕಿರುವುದಲ್ಲದೇ ಮಾರಾಟದಲ್ಲೂ ಸಹ ಹೊಸ ಸಂಚಲನ ಸೃಷ್ಠಿಸಿದೆ.

ಬಾಲಿವುಡ್ ಸಿಂಗಂ ಕೈಸೇರಿದ ದೇಶದ ಅತಿ ದುಬಾರಿ ಎಸ್‌ಯುವಿ ಕಾರು..!

ಬಲಿಷ್ಠತೆ, ಸ್ಟೈಲ್ ಮತ್ತು ಐಷಾರಾಮಿ ಸೌಲಭ್ಯಗಳೊಂದಿಗೆ ಎಸ್‌ಯುವಿ ಕಾರುಗಳಲ್ಲೇ ಶ್ರೇಷ್ಠ ಎನ್ನಿಸುವ ಕಲಿನಿಯನ್ ಕಾರು ರೋಲ್ಸ್ ರಾಯ್ಸ್ ಸಂಸ್ಥೆಯ ಮೊದಲ ಎಸ್‌ಯುವಿ ಮಾದರಿಯಾಗಿದ್ದು, ಬಾಲಿವುಡ್ ನಟ-ನಟಿಯರ ಹಾಟ್ ಫೆವರಿಟ್ ಕಾರು ಮಾದರಿಯಾಗಿ ಹೊರಹೊಮ್ಮಿದೆ. ಹೊಸ ಕಾರು ಭಾರತದಲ್ಲಿ ಬಿಡುಗಡೆಯಾಗಿ ನಾಲ್ಕೈದು ತಿಂಗಳ ಅವಧಿಯಲ್ಲಿ 50ಕ್ಕೂ ಹೆಚ್ಚು ಕಾರುಗಳಿಗೆ ಬೇಡಿಕೆ ಸಲ್ಲಿಕೆಯಾಗಿದ್ದು, ವಿಭಿನ್ನ ಪಾತ್ರಗಳ ಮೂಲಕ ಅಪಾರ ಅಭಿಮಾನಿ ಬಳಗ ಹೊಂದಿರುವ ಅಜಯ್ ದೇವಗನ್ ಕೂಡಾ ಇದೀಗ ಕಲಿನಿಯನ್ ಮಾಲೀಕರಾಗಿದ್ದಾರೆ.

ಬಾಲಿವುಡ್ ಸಿಂಗಂ ಕೈಸೇರಿದ ದೇಶದ ಅತಿ ದುಬಾರಿ ಎಸ್‌ಯುವಿ ಕಾರು..!

ಹಣ ಇದ್ದರೂ ಖರೀದಿ ಮಾಡಲು ಸಾಧ್ಯವಿಲ್ಲದ ರೋಲ್ಸ್ ರಾಯ್ಸ್ ಕಾರುಗಳ ಖರೀದಿಗೆ ಹತ್ತಾರು ಕಠಿಣ ಪರೀಕ್ಷೆಗಳನ್ನು ಎದುರಿಸುವ ಅವಶ್ಯಕತೆಯಿದ್ದು, ಹಣದ ಜೊತೆಗೆ ವ್ಯಕ್ತಿಯ ಹಿನ್ನಲೆಯ ಆಧಾರದ ಮೇಲೆ ರೋಲ್ಸ್ ರಾಯ್ಸ್ ಕಾರುಗಳನ್ನು ಮಾರಾಟಮಾಡಲಾಗುತ್ತದೆ.

ಬಾಲಿವುಡ್ ಸಿಂಗಂ ಕೈಸೇರಿದ ದೇಶದ ಅತಿ ದುಬಾರಿ ಎಸ್‌ಯುವಿ ಕಾರು..!

ರೋಲ್ಸ್ ರಾಯ್ಸ್ ಕಾರು ಖರೀದಿಗೂ ಮುನ್ನ ವಿವಿಧ ಹಂತದ ಪರೀಕ್ಷೆಗಳನ್ನು ಎದುರಿಸುವುದು ಕಡ್ಡಾಯವಾಗಿದ್ದು, ಕಾರು ಖರೀದಿಯ ಉದ್ದೇಶ, ನಿರ್ವಹಣಾ ಸಾಮರ್ಥ್ಯದ ಮೇಲೆ ಕಾರು ವಿತರಣೆ ಮಾಡಲಾಗುತ್ತದೆ. ಈ ಎಲ್ಲಾ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಿರುವ ನಟ ಅಜಯ್ ದೇವಗನ್ ಅವರು ಇದೀಗ ತಮ್ಮ ಕನಸಿನ ಕಾರಿನ ಮಾಲೀಕರಾಗಿದ್ದಾರೆ.

ಬಾಲಿವುಡ್ ಸಿಂಗಂ ಕೈಸೇರಿದ ದೇಶದ ಅತಿ ದುಬಾರಿ ಎಸ್‌ಯುವಿ ಕಾರು..!

ಹೊಸ ಕಾರು ಭಾರತದಲ್ಲಿ ಎಕ್ಸ್‌ಶೋರೂಂ ಪ್ರಕಾರ ರೂ.6.95 ಕೋಟಿ ಬೆಲೆ ಹೊಂದಿದ್ದು, ಆರ್ಕಿಟೆಕ್ಚರ್ ಆಫ್ ಲಗ್ಷುರಿ ಕಾರು ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಉತ್ಪಾದನೆಗೊಂಡಿರುವ ಕಲಿನಿಯನ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಫ್ಯಾಂಟಮ್ VIII ಕಾರಿಗಿಂತಲೂ ಕೆಳದರ್ಜೆಯಲ್ಲಿ ಮಾರಾಟಗೊಳ್ಳಲಿದೆ. ಕೇವಲ ಐಷಾರಾಮಿ ಅಷ್ಟೇ ಅಲ್ಲದೇ ಆಫ್ ರೋಡ್ ವೈಶಿಷ್ಟ್ಯತೆ ಹೊತ್ತು ಬಂದಿರುವ ಕಲಿನಿಯನ್ ಕಾರು ನೂರಕ್ಕೂ ಹೆಚ್ಚು ವಿನೂತನ ತಾಂತ್ರಿಕ ಸೌಲಭ್ಯಗಳೊಂದಿಗೆ ಜಗತ್ತಿನಲ್ಲಿ ಇದುವರೆಗೆ ಉತ್ಪಾದನೆಯಾದ ಇತರೆ ಐಷಾರಾಮಿ ಎಸ್‌ಯುವಿ ಕಾರುಗಳಿಂತಲೂ ವಿಶೇಷ ಎನ್ನಿಸಲಿದೆ.

ಬಾಲಿವುಡ್ ಸಿಂಗಂ ಕೈಸೇರಿದ ದೇಶದ ಅತಿ ದುಬಾರಿ ಎಸ್‌ಯುವಿ ಕಾರು..!

ಕಲಿನಿಯನ್ ಕಾರುಗಳು 5-ಸೀಟರ್ ಸೌಲಭ್ಯ ಹೊಂದಿರುವ ಎಸ್‌ಯುವಿ ಮಾದರಿಯಾಗಿದ್ದು, 22 ಇಂಚಿನ ಚಕ್ರಗಳನ್ನು ಹೊಂದಿದೆ. ಜೊತೆಗೆ ಅಲ್ಯೂಮಿನಿಯಂ ಪ್ಯಾಟ್‌ಫಾರ್ಮ್ ಮೇಲೆ ಸಿದ್ದವಾಗಿರುವ ಕಲ್ಲಿನನ್ ಕಾರುಗಳು ಫ್ಯಾಂಟಮ್ VIII ಮಾದರಿಯಲ್ಲೇ ಎಂಜಿನ್ ಡಿಸೈನ್ ಪಡೆದಿದೆ.

ಬಾಲಿವುಡ್ ಸಿಂಗಂ ಕೈಸೇರಿದ ದೇಶದ ಅತಿ ದುಬಾರಿ ಎಸ್‌ಯುವಿ ಕಾರು..!

ಜೊತೆಗೆ ಆಧುನಿಕ ಐಷಾರಾಮಿ ಎಸ್‌ಯುವಿ ಎಂದೇ ಬಿಂಬಿತವಾಗಿರುವ ಕಲಿನಿಯನ್ ಕಾರುಗಳು ಸೈಡ್ ಪ್ರೋಫೈಲ್‌ನಲ್ಲಿ ಬಲವಾದ ಭುಜ ರೇಖೆಗಳನ್ನು ಹೊಂದಿದ್ದು, ಇದು ಈ ಹಿಂದೆ 1930ರಲ್ಲಿ ನಿರ್ಮಾಣವಾಗಿದ್ದ 'ಡಿ ಬ್ಲ್ಯಾಕ್' ಕಾರಿನ ಕೆಲವು ವಿನ್ಯಾಸಗಳನ್ನು ಸಹ ಇದರಲ್ಲಿ ಎರವಲು ಪಡೆದುಕೊಳ್ಳಲಾಗಿದೆ.

MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಬಾಲಿವುಡ್ ಸಿಂಗಂ ಕೈಸೇರಿದ ದೇಶದ ಅತಿ ದುಬಾರಿ ಎಸ್‌ಯುವಿ ಕಾರು..!

ಕಲಿನಿಯನ್ ಕಾರಿನ ಉದ್ದಳತೆ

ಎಸ್‌ಯುವಿ ಹೆಸರಿಗೆ ತಕ್ಕಂತೆ ಅತಿ ಎತ್ತರದ ಬಾಡಿ ಕಿಟ್ ಹೊಂದಿರುವ ಕಲಿನಿಯನ್ ಕಾರುಗಳು 5,341ಎಂಎಂ ಉದ್ದ, 2,164ಎಂಎಂ ಅಗಲ, 1,834ಎಂಎಂ ಎತ್ತರದೊಂದಿಗೆ 3,295ಎಂಎಂ ವೀಲ್ಹ್ ಬೆಸ್ ಸೌಲಭ್ಯ ಹೊಂದಿದೆ.

MOST READ:ಬಂಪರ್ ಕ್ರ್ಯಾಶ್ ಗಾರ್ಡ್ ವಿರುದ್ದ ವಿಶೇಷ ಕಾರ್ಯಾಚರಣೆ- ನಿಯಮ ಉಲ್ಲಂಘನೆಗೆ ದಂಡ ಎಷ್ಟು ಗೊತ್ತಾ?

ಬಾಲಿವುಡ್ ಸಿಂಗಂ ಕೈಸೇರಿದ ದೇಶದ ಅತಿ ದುಬಾರಿ ಎಸ್‌ಯುವಿ ಕಾರು..!

ಕಾರಿನ ಒಳವಿನ್ಯಾಸ

ಆಧುನಿಕ ಒಳವಿನ್ಯಾಸದೊಂದಿಗೆ ಸಿದ್ದವಾಗಿರುವ ರೋಲ್ಸ್ ರಾಯ್ಸ್ ಕಲಿನಿಯನ್ ಕಾರುಗಳಲ್ಲಿ ಬಳಕೆ ಮಾಡಿರುವ ಐಷಾರಾಮಿ ವೈಶಿಷ್ಟ್ಯತೆಗಳು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಕಾರಿನ ಒಳಗೆ ಪ್ರವೇಶ ಮಾಡಿದ್ದಲ್ಲಿ ಸ್ಪರ್ಗಕ್ಕೆ ಮೂರೇ ಗೇಣು ಎನ್ನುವ ಭಾವನೆ ಮೂಡದೇ ಇರಲಾರದು.

MOST READ: ಮಕಾಡೆ ಮಲಗಿರುವ ಆಟೋ ಉದ್ಯಮಕ್ಕೆ ಮತ್ತೆ ಚುರುಕು ನೀಡಿದ ಕೇಂದ್ರ ಸರ್ಕಾರ..!

ಬಾಲಿವುಡ್ ಸಿಂಗಂ ಕೈಸೇರಿದ ದೇಶದ ಅತಿ ದುಬಾರಿ ಎಸ್‌ಯುವಿ ಕಾರು..!

5-ಸೀಟರ್ ಸಾಮರ್ಥ್ಯವಿರುವ ಈ ಕಾರಿನಲ್ಲಿ ಪ್ರತಿ ಸೀಟುಗಳು ಸಹ ಪ್ರತ್ಯೇಕವಾಗಿ ಎಲೆಕ್ಟ್ರಿಕ್ ಆಪರೇಟ್ ಸೌಲಭ್ಯ ಹೊಂದಿದ್ದು, ನಿಮಗೆ ಬೇಕಾದ ರೀತಿಯಲ್ಲಿ ಹೋಂದಾಣಿಕೆ ಮಾಡಿಕೊಳ್ಳಬಹುದು. ಜೊತೆಗೆ ಬೆರಳುಗಳ ತುದಿಯಲ್ಲೇ ನಿಯಂತ್ರಣ ಮಾಡಬಹುದಾದ ಇನ್ಪೋಟೈನ್‌ಮೆಂಟ್ ಮತ್ತು ಎಂಟರ್‌ಟೈನ್‌ಮೆಂಟ್ ಸೌಲಭ್ಯ ಇದಲ್ಲಿದೆ.

ಬಾಲಿವುಡ್ ಸಿಂಗಂ ಕೈಸೇರಿದ ದೇಶದ ಅತಿ ದುಬಾರಿ ಎಸ್‌ಯುವಿ ಕಾರು..!

ಇದು ತ್ರಿ ಬಾಕ್ಸ್ ಎಸ್‌ಯುವಿ!

ಕಲಿನಿಯನ್ ಕಾರನ್ನು ರೋಲ್ಸ್ ರಾಯ್ಸ್ ಸಂಸ್ಥೆಯು ತ್ರಿ ಬಾಕ್ಸ್ ಎಸ್‌ಯುವಿ ಎಂದು ಕರೆದಿದೆ. ಇದಕ್ಕೆ ಕಾರಣ, ಈ ಕಾರಿನಲ್ಲಿ ಎಂಜಿನ್‌ ರೂಂ, ಕ್ಯಾಬಿನ್ ಮತ್ತು ಬೂಟ್‌ ಎಂದು ಮೂರು ವಿಭಾಗಗಳನ್ನು ಪ್ರತ್ಯೇಕಿಸಿದೆ. ಇದನ್ನೇ ತ್ರಿ ಬಾಕ್ಸ್‌ ಎಸ್‌ಯುವಿ ಎನ್ನಲಾಗಿದೆ. ಇದು ಇತರೆ ಎಸ್‌ಯುವಿಗಳಲ್ಲಿ ಎಂಜಿನ್‌ ರೂಂ ಮತ್ತು ಕ್ಯಾಬಿನ್‌ಗಳು ಮಾತ್ರ ಇರುತ್ತವೆ. ಕ್ಯಾಬಿನ್‌ಗಳ ಒಳಗೆಯೇ ಬೂಟ್‌ ಇರುತ್ತದೆ. ಹೀಗಾಗಿ ಅವು ಟು ಬಾಕ್ಸ್ ಎಸ್‌ಯುವಿಗಳಾಗಿವೆ.

ಬಾಲಿವುಡ್ ಸಿಂಗಂ ಕೈಸೇರಿದ ದೇಶದ ಅತಿ ದುಬಾರಿ ಎಸ್‌ಯುವಿ ಕಾರು..!

ಇನ್ನು ಮುಂದುವರೆದು, ಕಲಿನಿಯನ್ ಕಾರುಗಳಲ್ಲಿ ಸೂಟ್ ಪ್ಯಾಕೇಜ್ ಸೌಲಭ್ಯವನ್ನು ಸಹ ಸೇರಿಸಲಾಗಿದ್ದು, ಕಾರಿನ ಬೂಟ್ ಸ್ಪೆಸ್ ಬಳಿ ಬಟನ್ ಒತ್ತಿದ್ರೆ ಸಾಕು ಎರಡು ಐಷಾರಾಮಿ ಚೇರ್‌ಗಳು ಸಣ್ಣದೊಂದು ಸಭೆ ನಡೆಸಲು ಅನೂಕಲಕರ ಮಾಡಿಕೊಡುತ್ತವೆ.

ಬಾಲಿವುಡ್ ಸಿಂಗಂ ಕೈಸೇರಿದ ದೇಶದ ಅತಿ ದುಬಾರಿ ಎಸ್‌ಯುವಿ ಕಾರು..!

ಎಂಜಿನ್ ಸಾಮರ್ಥ್ಯ

ಕಲಿನಿಯನ್ ಕಾರು 6.75-ಲೀಟರ್(6,750 ಸಿಸಿ) ಟ್ವಿನ್ ಟರ್ಬೋ ವಿ12 ಪೆಟ್ರೋಲ್ ಎಂಜಿನ್ ಹೊಂದಿದ್ದು, 571-ಬಿಎಚ್‌ಪಿ ಮತ್ತು 650-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು. ಹೀಗಾಗಿ ಕಾರಿನ ವೇಗವನ್ನು ಪ್ರತಿ ಗಂಟೆಗೆ 250 ಕಿ.ಮೀ ಟಾಪ್ ಸ್ಪೀಡ್ ಇರಿಸಲಾಗಿದೆ.

ಬಾಲಿವುಡ್ ಸಿಂಗಂ ಕೈಸೇರಿದ ದೇಶದ ಅತಿ ದುಬಾರಿ ಎಸ್‌ಯುವಿ ಕಾರು..!

ಇದಲ್ಲದೇ ರೋಲ್ಸ್ ರಾಯ್ಸ್ ಸಂಸ್ಥೆಯು ಮೊದಲ ಬಾರಿಗೆ ಕಲಿನಿಯನ್ ಕಾರುಗಳನ್ನು ಆಲ್ ವೀಲ್ಹ್ ಡ್ರೈವ್ ಸಿಸ್ಟಂನೊಂದಿಗೆ ಬಿಡುಗಡೆ ಮಾಡಿದ್ದು, ಆಫ್ ರೋಡ್‌ಗಳಲ್ಲೂ ಇದು ತನ್ನ ಕೌಶಲ್ಯ ಪ್ರದರ್ಶನ ಮಾಡಬಲ್ಲದು. ಇದಕ್ಕಾಗಿಯೇ ಕಾರಿನಲ್ಲಿ ವಿವಿಧ ರೀತಿಯ ಡ್ರೈವಿಂಗ್ ಮೊಡ್‌ಗಳನ್ನು ಒದಗಿಸಲಾಗಿದೆ.

More from DriveSpark

Article Published On: Monday, August 26, 2019, 19:28 [IST]
English summary
Bollywood Actor Ajay Devgan Purchased India’s most Expesive SUV.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+