ಜಾವಾ ಬೈಕ್ ಮಾರಾಟದ ಅಬ್ಬರದ ಮುಂದೆ ನೆಲಕಚ್ಚಿದ ರಾಯಲ್ ಎನ್‌ಫೀಲ್ಡ್

ಸದ್ಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಮುಂಚೂಣಿ ಕಾಯ್ದುಕೊಂಡಿದ್ದರೂ ಮಾಸಿಕ ಬೈಕ್ ಮಾರಾಟ ಪ್ರಮಾಣದಲ್ಲಿ ಈ ಬಾರಿ ತೀವ್ರ ಹಿನ್ನಡೆ ಅನುಭವಿಸಿದೆ. 2019ರ ಜೂನ್ ಅವಧಿಯಲ್ಲಿ ಶೇ.24ರಷ್ಟು ಕುಸಿತ ಕಂಡಿದ್ದು, ಪ್ರತಿಸ್ಪರ್ಧಿ ಜಾವಾ ಬೈಕ್ ಮಾರಾಟ ವಿತರಣೆ ಆರಂಭವಾಗಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.

ಜಾವಾ ಬೈಕ್ ಮಾರಾಟದ ಅಬ್ಬರದ ಮುಂದೆ ನೆಲಕಚ್ಚಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು 2019ರ ಆರಂಭದಿಂದಲೂ ಬೈಕ್ ಮಾರಾಟದಲ್ಲಿ ತುಸು ಹಿನ್ನಡೆ ಅನುಭವಿಸುತ್ತಲೇ ಬಂದಿದ್ದು, ಜೂನ್ ಅವಧಿಯಲ್ಲಿ ಮಾತ್ರ ದಾಖಲೆಯ ಕುಸಿತ ಕಂಡಿದೆ. 2018ರ ಜೂನ್ ಅವಧಿಯಲ್ಲಿನ ಬೈಕ್ ಮಾರಾಟ ಪ್ರಮಾಣಕ್ಕೆ ಹೋಲಿಕೆ ಮಾಡಿದಾಗ ಶೇ.24 ರಷ್ಟು ಹಿನ್ನಡೆಯಾಗಿದ್ದು, ಜನಪ್ರಿಯ ಮಾದರಿಗಳಾದ ಕ್ಲಾಸಿಕ್ 350, ಕ್ಲಾಸಿಕ್ 500 ಮತ್ತು ಥಂಡರ್‌ಬರ್ಡ್ 500 ಬೈಕ್ ಮಾರಾಟದಲ್ಲಿ ತೀವ್ರ ಕುಸಿತ ದಾಖಲಾಗಿದೆ.

ಜಾವಾ ಬೈಕ್ ಮಾರಾಟದ ಅಬ್ಬರದ ಮುಂದೆ ನೆಲಕಚ್ಚಿದ ರಾಯಲ್ ಎನ್‌ಫೀಲ್ಡ್

ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ಪ್ರತಿ ಬೈಕ್ ಉತ್ಪನ್ನದಲ್ಲೂ ಹಲವು ಬದಲಾವಣೆಗಳನ್ನು ಪರಿಚಯಿಸಿದ್ದರೂ ಸಹ ನಿಗದಿತ ಮಟ್ಟದ ಗುರಿಸಾಧಿಸು ಸಾಧ್ಯವಾಗಿಲ್ಲ. ಹೀಗಾಗಿ ಇದು ಪ್ರತಿಸ್ಪರ್ಧಿ ಜಾವಾ ಬೈಕ್ ಮಾರಾಟ ಪ್ರಕ್ರಿಯೆ ಆರಂಭವೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಜಾವಾ ಬೈಕ್ ಮಾರಾಟದ ಅಬ್ಬರದ ಮುಂದೆ ನೆಲಕಚ್ಚಿದ ರಾಯಲ್ ಎನ್‌ಫೀಲ್ಡ್

ಜೂನ್ ಅವಧಿಯಲ್ಲಿನ ಆರ್‌ಇ ಬೈಕ್ ಮಾರಾಟ ಪ್ರಮಾಣ..!

ಬೈಕ್ ಆವೃತ್ತಿಗಳು ಜೂನ್-2019 ಜೂನ್-2018 ಬದಲಾವಣೆಯ ಪ್ರಮಾಣ
ಬುಲೆಟ್ 350 10,000 10,044 -0.44
ಕ್ಲಾಸಿಕ್ 350 33,790 50,426 -32.99
ಎಲೆಕ್ಟ್ರಾ 350 2,694 2,985 -9.75
ಥಂಡರ್‌ಬರ್ಡ್ 350 4,749 5,232 -9.23
ಥಂಡರ್‌ಬರ್ಡ್ 500 97 347 -72.05
ಬುಲೆಟ್ 500 138 284 -51.41
ಹಿಮಾಲಯನ್ 1,223 942 29.83
ಕ್ಲಾಸಿಕ್ 500 640 2,328 -72.51
650 ಟ್ವಿನ್ ಬೈಕ್ಸ್ 1,751 - -
ಜಾವಾ ಬೈಕ್ ಮಾರಾಟದ ಅಬ್ಬರದ ಮುಂದೆ ನೆಲಕಚ್ಚಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಸಂಸ್ಥೆಗೆ ಅತಿ ಹೆಚ್ಚು ಲಾಭದಾಯಕ ಮಾದರಿಯಾದ ಕ್ಲಾಸಿಕ್ 350 ಮಾದರಿಯು 2019ರ ಜೂನ್ ಅವಧಿಯಲ್ಲಿ 33,790 ಯುನಿಟ್ ಮಾರಾಟ ಮಾಡಿದ್ದು, ಅದೇ ಕಳೆದ ವರ್ಷದ ಜೂನ್ ಅವಧಿಯಲ್ಲಿ 50,426 ಯುನಿಟ್ ಮಾರಾಟ ಮಾಡಿತ್ತು. ಪ್ರಸ್ತುಕ ವರ್ಷದಲ್ಲಿ ಕ್ಲಾಸಿಕ್ 350 ಮಾರಾಟದಲ್ಲಿ ಶೇ. 32.99 ರಷ್ಟು ಹಿನ್ನಡೆಯಾಗಿದ್ದು, ಜಾವಾ ಮತ್ತು ಜಾವಾ 42 ಬೈಕ್ ಮಾದರಿಗಳು ತೀವ್ರ ಪೈಪೋಟಿ ನೀಡುತ್ತಿರುವ ಸ್ಪಷ್ಟವಾಗಿದೆ.

ಜಾವಾ ಬೈಕ್ ಮಾರಾಟದ ಅಬ್ಬರದ ಮುಂದೆ ನೆಲಕಚ್ಚಿದ ರಾಯಲ್ ಎನ್‌ಫೀಲ್ಡ್

ಹಾಗೆಯೇ ಕ್ಲಾಸಿಕ್ 500 ಬೈಕ್ ಮಾರಾಟದಲ್ಲೂ ಸಹ 2018ರ ಜೂನ್ ಅವಧಿಗೂ 2019 ಜೂನ್ ಅವಧಿಗೂ ಶೇ. 72 ರಷ್ಟು ಹಿನ್ನಡೆಯಾಗಿದ್ದು, ಹಿಮಾಲಯನ್ ಅಡ್ವೆಂಚರ್ ಬೈಕ್ ಮಾತ್ರವೇ ಶೇ. 29.83ರಷ್ಟು ಮುನ್ನಡೆಯೊಂದಿಗೆ 2019ರ ಜೂನ್ ಅವಧಿಯಲ್ಲಿ 1,223 ಯುನಿಟ್‌ಗಳು ಮಾರಾಟಗೊಂಡಿವೆ.

ಜಾವಾ ಬೈಕ್ ಮಾರಾಟದ ಅಬ್ಬರದ ಮುಂದೆ ನೆಲಕಚ್ಚಿದ ರಾಯಲ್ ಎನ್‌ಫೀಲ್ಡ್

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಇನ್ನುಳಿದಂತೆ ಬುಲೆಟ್ 350, ಎಲೆಕ್ಟ್ರಾ 350, ಥಂಡರ್‌ಬರ್ಡ್ 350, ಬುಲೆಟ್ 500 ಮತ್ತು ಟ್ವಿನ್ ಬೈಕ್ ಮಾದರಿಗಳಾದ ಇಂಟರ್‍‍ಸೆಪ್ಟರ್ 650 ಹಾಗೂ ಕಾಟಿನೆಂಟಲ್ ಜಿಟಿ 650 ಬೈಕ್ ಮಾರಾಟದಲ್ಲೂ ತುಸು ಹಿನ್ನಡೆಯಾಗಿದ್ದು, ಜಾವಾ ಮತ್ತು ಇದೀಗ ಬಿಡುಗಡೆಯಾಗಿರುವ ಸಿಎಫ್ ಮೊಟೊ ಬೈಕ್‌ಗಳು ಮತ್ತಷ್ಟು ಪೈಪೋಟಿ ನೀಡುವ ನೀರಿಕ್ಷೆಯಲ್ಲಿವೆ.

ಜಾವಾ ಬೈಕ್ ಮಾರಾಟದ ಅಬ್ಬರದ ಮುಂದೆ ನೆಲಕಚ್ಚಿದ ರಾಯಲ್ ಎನ್‌ಫೀಲ್ಡ್

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಹುಬೇಡಿಕೆಯೊಂದಿಗೆ ಹೊಸ ದಾಖಲೆಗೆ ಕಾರಣವಾಗಿರುವ ರಾಯಲ್ ಎನ್‌ಫೀಲ್ಡ್ ಹೈ ಎಂಡ್ ಬೈಕ್ ಆವೃತ್ತಿಗಳಾದ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‌ಗಳ ಬೆಲೆಗಳನ್ನು ಏರಿಕೆ ಮಾಡಲಾಗುತ್ತಿದ್ದು, ಮೂಲಗಳ ಪ್ರಕಾರ ಹೊಸ ಬೈಕ್‌ಗಳ ಬೆಲೆಯಲ್ಲಿ ರೂ. 20 ಸಾವಿರ ಏರಿಕೆಯಾಗಬಹುದು ಎನ್ನಲಾಗುತ್ತಿದೆ.

ಜಾವಾ ಬೈಕ್ ಮಾರಾಟದ ಅಬ್ಬರದ ಮುಂದೆ ನೆಲಕಚ್ಚಿದ ರಾಯಲ್ ಎನ್‌ಫೀಲ್ಡ್

ಕ್ಲಾಸಿಕ್ ವಿನ್ಯಾಸದ ಮತ್ತು ಅಧಿಕ ಏಂಜಿನ್ ಸಾಮರ್ಥ್ಯ ಬೈಕ್‍ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ರಾಯಲ್ ಎನ್‍ಫೀಲ್ಡ್ ಸಂಸ್ಥೆಯು ಇಂಟರ್‍‍ಸೆಪ್ಟರ್ 650 ಮತ್ತು ಕಾಂಟಿನೆಂಟಲ್ ಜಿಟಿ 650 ಬೈಕ್‍ ಮೂಲಕ ಮತ್ತೊಂದು ಹಂತದತ್ತ ಹೆಜ್ಜೆಯಿಡುತ್ತಿದ್ದು, ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೈಕ್‌ಗಳನ್ನು ಏರಿಕೆ ಮಾಡಲು ನಿರ್ಧರಿಸಿದೆ. ಈ ಬಗ್ಗೆ ಮುಂದಿನ ವಾರ ಎಷ್ಟು ಹೆಚ್ಚಳವಾಗಲಿದೆ ಎನ್ನುವ ಮಾಹಿತಿ ಹೊರಬಿಳಲಿದ್ದು, ಕನಿಷ್ಠ ರೂ.20 ಸಾವಿರ ಹೆಚ್ಚಳವಾಗುವ ಬಗ್ಗೆ ಸುಳಿವು ಸಿಕ್ಕಿದೆ.

Most Read Articles

Kannada
English summary
Royal Enfield Sales Model-Wise Break-Up For June 2019. Read in Kannada.
Story first published: Saturday, July 20, 2019, 17:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more