ಹಿಮಾಲಯನ್ ರೈಡ್‌ಗೆ ತೆರಳುವ ಆರ್‌ಇ ಬೈಕ್ ಸವಾರರಿಗೆ ಇಲ್ಲಿದೆ ಸಿಹಿಸುದ್ದಿ..!

ಪ್ರತಿಯೊಬ್ಬ ಉತ್ಸಾಹಿ ಬೈಕ್ ಸವಾರನಿಗೂ ಹಿಮಾಲಯನ್ ರೈಡ್‌ ಕೈಗೊಳ್ಳಬೇಕೆಂಬ ಮಹಾದಾಸೆ ಇದ್ದೆ ಇರುತ್ತೆ. ಆದ್ರೆ ಕಠಿಣ ರಸ್ತೆಗಳಲ್ಲಿ ಯಾವುದೇ ತೊಂದರೆಯಿಲ್ಲದೆ ಮುಂದುವರಿಯುದು ಅಷ್ಟು ಸುಲಭವಲ್ಲ. ಹೀಗಾಗಿಯೇ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಹೊಸ ಯೋಜನೆಯೊಂದು ರೂಪಿಸಿದ್ದು, ಹಿಮಾಲಯನ್ ರೈಡ್‌ಗೆ ತೆರಳುವ ತನ್ನ ಗ್ರಾಹಕರ ನೆರವಿಗಾಗಿ ಎರಡು ಹೊಸ ಸೇವಾ ಕೇಂದ್ರಗಳಿಗೆ ಚಾಲನೆ ನೀಡಿದೆ.

ಹಿಮಾಲಯನ್ ರೈಡ್‌ಗೆ ತೆರಳುವ ಆರ್‌ಇ ಬೈಕ್ ಸವಾರರಿಗೆ ಇಲ್ಲಿದೆ ಸಿಹಿಸುದ್ದಿ..!

ಹೌದು, ಹಿಮಾಲಯನ್ ರೈಡ್ ವೇಳೆ ತನ್ನ ನೆಚ್ಚಿನ ಗ್ರಾಹಕರ ನೆರವಿಗಾಗಿ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಹಿಮಾಚಲಪ್ರದೇಶದ ಕಾಜಾ ಮತ್ತು ಕಿಲಾಂಗ್ ಪ್ರದೇಶಗಳಲ್ಲಿ ಎರಡು ಹೊಸ ಸೇವಾ ಕೇಂದ್ರಗಳನ್ನು ತೆರಲು ಸಜ್ಜಾಗಿದ್ದು, ಗ್ರಾಹಕರ ಬಹುದಿನಗಳ ಬೇಡಿಕೆಯಗೆ ಮನ್ನಣೆ ನೀಡಿದೆ. ಇದು ಹಿಮಾಲಯನ್ ರೈಡ್‌ಗೆ ತೆರಳುವ ಬೈಕ್ ಉತ್ಸಾಹಿಗಳಿಗೆ ಮತ್ತಷ್ಟು ಅನುಕೂಲಕರವಾಗಿದ್ದು, ಗ್ರಾಹಕರ ಬೇಡಿಕೆ ಅನುಸಾರವಾಗಿ ಸೇವೆ ಒದಗಿಸಲಿದೆ.

ಹಿಮಾಲಯನ್ ರೈಡ್‌ಗೆ ತೆರಳುವ ಆರ್‌ಇ ಬೈಕ್ ಸವಾರರಿಗೆ ಇಲ್ಲಿದೆ ಸಿಹಿಸುದ್ದಿ..!

ಹಿಮಾಚಲಪ್ರದೇಶದ ಕಾಜಾ ಮತ್ತು ಕಿಲಾಂಗ್ ಮೂಲಕವೇ ಸ್ಪೀಟಿ ವ್ಯಾಲಿಯತ್ತ ಬಹುತೇಕ ಬೈಕ್ ಉತ್ಸಾಹಿಗಳು ಪ್ರಯಾಣ ಕೈಗೊಳ್ಳುವ ಪರಿಪಾಠವಿದ್ದು, ವಿಶ್ವದ ಕಠಿಣ ರಸ್ತೆಗಳಲ್ಲಿ ಒಂದಾದ ಸ್ಪೀಟಿ ವ್ಯಾಲಿ ಪ್ರವೇಶಕ್ಕೂ ಮುನ್ನ ಬೈಕ್ ಸವಾರರಿಗೆ ರಾಯಲ್ ಎನ್‌ಫೀಲ್ಡ್ ತೆರೆಯುತ್ತಿರುವ ಹೊಸ ಸೇವಾ ಕೇಂದ್ರಗಳು ಅನುಕೂಲಕವಾಗಿವೆ.

ಹಿಮಾಲಯನ್ ರೈಡ್‌ಗೆ ತೆರಳುವ ಆರ್‌ಇ ಬೈಕ್ ಸವಾರರಿಗೆ ಇಲ್ಲಿದೆ ಸಿಹಿಸುದ್ದಿ..!

ಈಗಾಗಲೇ ಲೇಹದಲ್ಲಿ ತನ್ನ ಹೊಸ ಸೇವಾ ಕೇಂದ್ರವನ್ನು ತೆರಿದಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಬಹುದಿನಗಳ ಬೇಡಿಕೆ ನಂತರ ಇದೀಗ ಕಾಜಾ ಮತ್ತು ಕಿಲಾಂಗ್ ಪ್ರದೇಶಗಳಲ್ಲೂ ಹೊಸ ಸೇವಾ ಕೇಂದ್ರಗಳನ್ನು ತೆರೆಯುತ್ತಿದ್ದು, ಹಿಮಾಲಯನ್ ರೈಡ್‌ಗೆ ತೆರಳುವ ರಾಯಲ್ ಎನ್‌ಫೀಲ್ಡ್ ಗ್ರಾಹಕರಿಗೆ ಇದು ಮತ್ತಷ್ಟು ಅನುಕೂಲಕವಾಗಲಿದೆ.

ಹಿಮಾಲಯನ್ ರೈಡ್‌ಗೆ ತೆರಳುವ ಆರ್‌ಇ ಬೈಕ್ ಸವಾರರಿಗೆ ಇಲ್ಲಿದೆ ಸಿಹಿಸುದ್ದಿ..!

ಇನ್ನು ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಸದ್ಯ ವಿವಿಧ ಮಾದರಿಯ ಹೊಸ ಬೈಕ್‌ಗಳನ್ನು ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಗಿಟ್ಟಿಸಿಕೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಗ್ರಾಹಕರ ಸ್ನೇಹಿ ಉತ್ಪನ್ನಗಳನ್ನು ಹೊರತರುವ ಇರಾದೆಯಲ್ಲಿದೆ. ಇದಕ್ಕಾಗಿಯೇ ಚೆನ್ನೈ ಬಳಿಯ ವಲ್ಲಂ ವಡಗಾಲ್‌ನಲ್ಲಿರುವ ತನ್ನ ಬೈಕ್ ಉತ್ಪಾದನಾ ಘಟಕವನ್ನು ಸಹ ವಿಸ್ತರಣೆ ಮಾಡುತ್ತಿದ್ದು, ಬೈಕ್ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಬೈಕ್ ಖರೀದಿಯ ಕಾಯುವಿಕೆಯ ಅವಧಿಯನ್ನು ತಗ್ಗಿಸಲು ಇದು ಮಹತ್ವದ ಯೋಜನೆಯಾಗಿದೆ.

ಹಿಮಾಲಯನ್ ರೈಡ್‌ಗೆ ತೆರಳುವ ಆರ್‌ಇ ಬೈಕ್ ಸವಾರರಿಗೆ ಇಲ್ಲಿದೆ ಸಿಹಿಸುದ್ದಿ..!

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ತನ್ನ ಮಾತೃ ಸಂಸ್ಥೆಯಾಗಿರುವ ಐರಿಷ್ ಮೋಟಾರ್ ಲಿಮಿಟೆಡ್ ಸಂಸ್ಥೆಯ ಮಾರ್ಗದರ್ಶನದಂತೆ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ್ದು, 200ಸಿಸಿ ಎಂಜಿನ್ ಸಾಮರ್ಥ್ಯ ಹೊಸ ಬೈಕ್‌ಗಳ ಅಭಿವೃದ್ಧಿ ಮತ್ತು ಸುಧಾರಿತ ತಂತ್ರಜ್ಞಾನ ಬಳಕೆ ಮಾಡುವತ್ತ ಹೆಚ್ಚಿನ ಗಮನಹರಿಸುತ್ತಿದೆ.

ಹಿಮಾಲಯನ್ ರೈಡ್‌ಗೆ ತೆರಳುವ ಆರ್‌ಇ ಬೈಕ್ ಸವಾರರಿಗೆ ಇಲ್ಲಿದೆ ಸಿಹಿಸುದ್ದಿ..!

ಜೊತೆಗೆ ರಾಯಲ್ ಎನ್‌ಫೀಲ್ಡ್ ಬೈಕ್‌ಗಳ ತಂತ್ರಜ್ಞಾನ ಸೌಲಭ್ಯದಲ್ಲಿ ಸಾಕಷ್ಟು ಬದಲಾವಣೆಗೊಳ್ಳಲಿದ್ದು, ಇದಕ್ಕಾಗಿಯೇ ಐರಿಷ್ ಮೋಟಾರ್ ಸಂಸ್ಥೆಯು ರಾಯಲ್ ಎನ್‌ಫೀಲ್ಡ್ ಉಸ್ತುವಾರಿಗಾಗಿ ವಿನೋದ್ ಕೆ ದಾಸರಿ ಅವರನ್ನು ನೂತನ ಸಿಇಒ ಆಗಿ ನೇಮಕ ಮಾಡಿದೆ.

ಹಿಮಾಲಯನ್ ರೈಡ್‌ಗೆ ತೆರಳುವ ಆರ್‌ಇ ಬೈಕ್ ಸವಾರರಿಗೆ ಇಲ್ಲಿದೆ ಸಿಹಿಸುದ್ದಿ..!

ಮುಂಬರುವ 2020ರ ಏಪ್ರಿಲ್ 1ರಿಂದ ಜಾರಿಗೆ ಬರುವ ಬಿಎಸ್-6 ನಿಯಮಾವಳಿಗಳಿಗೆ ಅನುಸಾರವಾಗಿ ಹೊಸ ಬೈಕ್‌ಗಳನ್ನು ಅಭಿವೃದ್ಧಿಗೊಳಿಸುವುದು ಒಂದು ಸವಾಲಾಗಿದ್ದು, ಹೊಸ ಬಂಡವಾಳ ಹೂಡಿಕೆಯು ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ಹೊಸ ಯೋಜನೆಗೆ ಸಾಕಷ್ಟು ಸಹಕಾರಿಯಾಗಿಯಾಗಿದೆ ಎನ್ನಬಹುದು.

ಹಿಮಾಲಯನ್ ರೈಡ್‌ಗೆ ತೆರಳುವ ಆರ್‌ಇ ಬೈಕ್ ಸವಾರರಿಗೆ ಇಲ್ಲಿದೆ ಸಿಹಿಸುದ್ದಿ..!

ಕಳೆದ ಒಂದು ವರ್ಷದ ಅವಧಿಯಲ್ಲಿ ಹಲವಾರು ಹೊಸ ಬೈಕ್‌ಗಳನ್ನು ಪರಿಚಯಿಸಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ರೆಟ್ರೋ ಲುಕ್ ಮೋಟಾರ್‌ಸೈಕಲ್ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಕ್ಲಾಸಿಕ್ 350 ಸಿಗ್ನಲ್ಸ್ , ಟ್ರಯಲ್ಸ್ 350, ಟ್ರಯಲ್ಸ್ 500, ಇಂಟರ್‌ಸೆಪ್ಟರ್ 650, ಕಾಂಟಿನೆಂಟಲ್ ಜಿಟಿ 650, ಥಂಡರ್‌ಬರ್ಡ್ 350ಎಕ್ಸ್ ಮತ್ತು ಥಂಡರ್‌ಬರ್ಡ್ 500ಎಕ್ಸ್ ಎನ್ನುವ ಹೊಸ ಬೈಕ್ ಮಾದರಿಗಳನ್ನು ಬಿಡುಗಡೆಮಾಡಿದೆ.

ಹಿಮಾಲಯನ್ ರೈಡ್‌ಗೆ ತೆರಳುವ ಆರ್‌ಇ ಬೈಕ್ ಸವಾರರಿಗೆ ಇಲ್ಲಿದೆ ಸಿಹಿಸುದ್ದಿ..!

ಆದರೆ, ಹೊಸ ಬೈಕ್ ಮಾರಾಟಕ್ಕಾಗಿ ಮಾರಾಟ ಮಳಿಗೆಗಳ ಕೊರತೆ ಎದುರಿಸುತ್ತಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಮೆಟ್ರೋ ನಗರಗಳನ್ನು ಹೊರತುಪಡಿಸಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲೂ ಸಣ್ಣಗಾತ್ರದ ಮಾರಾಟ ಮಳಿಗೆಗಳನ್ನು ತೆರೆಯಲು ಮುಂದಾಗಿದೆ.

Article Published On: Wednesday, July 10, 2019, 16:15 [IST]
English summary
Royal Enfield Sets Up Service Centres In Kaza & Keylong — RE Bikers Now Have More Assistance.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+