ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಥಂಡರ್‍‍ಬರ್ಡ್ 350 ಎಕ್ಸ್ ಬೈಕ್

ಜನಪ್ರಿಯ ಬೈಕ್ ತಯಾರಿಕ ಸಂಸ್ಥೆಯಾದ ರಾಯಲ್ ಎನ್‍‍ಫೀಲ್ಡ್ ತಮ್ಮ ಹೊಸ ಥಂಡರ್‍‍ಬರ್ಡ್ 350 ಎಕ್ಸ್ ಬೈಕ್ ಅನ್ನು ಭಾರತದಲ್ಲಿ ಇತ್ತೀಚೆಗೆ ಸ್ಪಾಟ್ ಟೆಸ್ಟ್ ಮಾಡಿದರು. ಇದೇ ಸಂದರ್ಭದಲ್ಲಿ ಬಿಡುಗಡೆಗೊಂಡ ಸ್ಪೈ ಚಿತ್ರದಿಂದ ಥಂಡರ್‍‍ಬರ್ಡ್ 350 ಎಕ್ಸ್ ಹೊಸ ಆವೃತ್ತಿ ಎಂದು ತಿಳಿದು ಬಂದಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಥಂಡರ್‍‍ಬರ್ಡ್ 350 ಎಕ್ಸ್ ಬೈಕ್

ಈ ಬೈಕಿನ ಎಂಜಿನ್ ಬಿಎಸ್-6 ಎಮಿಷನ್ ನಿಯಮಕ್ಕೆ ಅನುಗುಣವಾಗಿದೆ. ಬೈಕ್ ಚೆನೈಯ ಸುತ್ತ ಮುತ್ತ ಸ್ಪಾಟ್ ಟೆಸ್ಟ್ ನಡೆಸಿದ್ದಾರೆ ಎಂದು ಬೈಕ್‍‍ವಾಲೆ ವರದಿ ಮಾಡಿದೆ. ಸ್ಪೈ ಚಿತ್ರದಿಂದ ತಿಳಿದಿದೆ ಥಂಟರ್‍‍ಬರ್ಡ್ 350 ಎಕ್ಸ್ ಆವೃತ್ತಿಯ ಹೊಸ ಬೈಕಿನಲ್ಲಿ ಹಲವಾರು ಬದಲಾವಣೆ ಮಾಡಿದ್ದು, ಇದರಲ್ಲಿ ಸ್ಪ್ಲಿಟ್-ಸೀಟ್ ಮತ್ತು ಸ್ಪ್ಲಿಟ್ ಗ್ರ್ಯಾಬ್ ರೈಲ್ ಮಾರ್ಪಡು ಮಾಡಿದ್ದಾರೆ. ಫ್ಯೂಲ್ ಟ್ಯಾಂಕ್ ಸ್ಪೋರ್ಟಿ ಲುಕ್‍‍ನೊಂದಿಗೆ ಕೂಡಿದೆ. ಇನ್ನೂ ರೇರ್ ಫೆಂಡರ್, ರೆಟ್ರೋ ಲುಕ್‍‍ನಲ್ಲಿ ಮತ್ತು ಟೈಲ್ ಲೈಟ್ಸ್ ನಲ್ಲಿ ಸಣ್ಣ ಮಟ್ಟದ ಬದಲಾವಣೆಗಳಾಗಿವೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಥಂಡರ್‍‍ಬರ್ಡ್ 350 ಎಕ್ಸ್ ಬೈಕ್

ಥಂಡರ್‍‍ಬರ್ಡ್ 350 ಎಕ್ಸ್ ನಲ್ಲಿ ಸಿಂಗಲ್-ಪಾಡ್ ಇನ್‍‍ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದ್ದು, ಕ್ಲಸ್ಟರ್ ಮಧ್ಯದಲ್ಲಿ ಸಣ್ಣ ಡಿಜಿಟಲ್ ಡಿಸ್‍ಪ್ಲೇ ಡುಯಲ್-ಪಾಡ್ ಸೆಟ್‍ಆಪ್ ಅನ್ನು ಅಳವಡಿಸಿ ಆರ್‍‍ಪಿಎಂ ಮೀಟರ್ ಅನ್ನು ಬದಲಾಯಿಸುತ್ತಾರೆ ಎಂಬುವುದು ಹೇಳಲು ಸಾಧ್ಯವಿಲ್ಲ. ಮಾರುಕಟ್ಟೆಯಲ್ಲಿ ಈಗ ಇರುವ ಥಂಟರ್‍‍ಬರ್ಡ್ ಮಾದರಿಗಿಂತಲೂ ಫೀಚರ್ ಹೆಚ್ಚು ಹೊಂದಿರಬಹುದು.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಥಂಡರ್‍‍ಬರ್ಡ್ 350 ಎಕ್ಸ್ ಬೈಕ್

ಹೊಸ ಥಂಡರ್‍‍ಬರ್ಡ್ ಆವೃತಿಯೂ ಸ್ಪೊಕ್ ವೀಲ್, ಬ್ಯಾಕ್‍‍ರೆಸ್ಟ್ ಮತ್ತು ರೈಡಿಂಗ್ ಆರಾಮದಾಯಕವಾಗಿರುತ್ತದೆ. ರಾಯಲ್ ಎನ್‍‍ಫೀಲ್ಡ್ ತನ್ನ 350ಸಿಸಿ ಮತ್ತು 500ಸಿಸಿ ಬೈಕುಗಳನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸುತ್ತಿದ್ದು, ಬೈಕ್‍ಗಳನ್ನು ಹೊಸ ಜೆ ಮಾಡ್ಯುಲರ್ ವಿನ್ಯಾಸಕ್ಕೆ ಮಾರ್ಪಡು ಮಾಡವ ಸಾಧ್ಯತೆಗಳಿವೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಥಂಡರ್‍‍ಬರ್ಡ್ 350 ಎಕ್ಸ್ ಬೈಕ್

ಬೈಕಿನ ಕಾಸ್ಮೆಟಿಕ್ ಬದಲಾವಣೆಗಳ ಹೊರತಾಗಿ ರೆಟ್ರೊ-ಬಾಬರ್ ಲುಕಿಂಗ್ ಸೇರಿದಂತೆ ಎಂಜಿನ್ ಅನ್ನು ಬಿಎಸ್-6 ನಿಯಮಾವಳಿಗೆ ಅನುಗುಣವಾಗಿ ಮಾರ್ಪಾಡು ಮಾಡಿದ್ದಾರೆ. ಹಿಂದಿನ ಮಾದರಿಗಳಿಗೆ ಹೋಲಿಸಿದಾಗ ಡಿಸ್ಕ್ ಬ್ರೇಕ್‍‍ಗಳ ಸ್ಥಳ ಬದಲಾಯಿಸಿದ್ದು, ಅದರೊಂದಿಗೆ ಪವರ್‍‍ಟ್ರೇನ್ ಅನ್ನು ಮಾರ್ಪಾಡು ಮಾಡಿದ್ದಾರೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಥಂಡರ್‍‍ಬರ್ಡ್ 350 ಎಕ್ಸ್ ಬೈಕ್

ಹೊಸ ಪವರ್‍‍ಟ್ರೇನ್‍‍ನ ಬಗ್ಗೆ ಬಹಿರಂಗ ಪಡಿಸಿಲ್ಲವಾದರೂ ಹೊಸ ಬೈಕ್ ಎಲೆಕ್ಟ್ರಾನಿಕ್ ಫ್ಯೊಯಲ್ ಇಂಜೆಕ್ಟಡ್ ಎಂಜಿನ್ ಸೌಲಭ್ಯ ಹೊಂದಿರುವ ಸಾಧ್ಯತೆಗಳಿವೆ. ಹೊಸ ಥಂಡರ್‍‍ಬರ್ಡ್ ಬೈಕ್‍‍ನ ಪವರ್ ಹೆಚ್ಚಿಸಲು ಟಾರ್ಕ್ ಅಳವಡಿಸಬಹುದು. ಎಂಜಿನ್ ಅನ್ನು ಹೆಚ್ಚು ಪರಿಷ್ಕರಿಸುವ ಸಾಧ್ಯತೆ ಇದೆ, ಇದರಿಂದ ದೀರ್ಘ ಕಾಲದವರೆಗೆ ಕಾರ್ಯ ನಿರ್ವಸುತ್ತದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಥಂಡರ್‍‍ಬರ್ಡ್ 350 ಎಕ್ಸ್ ಬೈಕ್

ಪ್ರಸ್ತುತ ಬಿಡುಗಡೆಯಾಗುವ ರಾಯಲ್ ಎನ್‍ಪೀಲ್ಡ್ ಬೈಕುಗಳು ರೆಟ್ರೊ-ಕ್ಲಾಸಿಕ್ ಆವೃತ್ತಿಯನ್ನು ಹೊಂದಿದ್ದು, ಥಂಡರ್‍‍ಬರ್ಡ್ ಆವೃತ್ತಿಯ ಹೊಸ ಸುಧಾರಿತ ಬದಲಾವಣೆಗಳು ರಾಯಲ್‍‍ಫೀಲ್ದ್ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಬಹುದು. ಸ್ಪಾಟ್ ಟೆಸ್ಟಿಂಗ್ ವೇಳೆ ಸೆರೆ ಸಿಕ್ಕ ಸ್ಪೈಡ್ ಚಿತ್ರದಲ್ಲಿ ಬೈಕ್ ವಿನ್ಯಾಸವು ಆಕರ್ಷಕವಾಗಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಥಂಡರ್‍‍ಬರ್ಡ್ 350 ಎಕ್ಸ್ ಬೈಕ್

ರಾಯಲ್ ಎನ್‍‍ಫೀಲ್ಡ್ ತಮ್ಮ ಹೊಸ ಬೈಕ್‍‍ಗಳ ಮೂಲಕ ಜಾವ ಬೈಕುಗಳಿಗೆ ಸೆಡ್ಡು ಹೊಡೆಯಲು ರೆಡಿಯಾಗಿದೆ. ಜಾವ ಬೈಕ್ ಡೀಲರ್‍‍‍ಗಳ ಕಳ್ಳತನ, ಬೈಕಿನ ಕೆಲವು ಭಾಗಗಳಲ್ಲಿ ತುಕ್ಕು ಹಿಡಿದಿರುವುದು, ಡೆಲಿವರಿ ಮಾಡಲು ವಿಳಂಬ ಈ ಎಲ್ಲಾ ಅಂಶಗಳು ರಾಯಲ್ ಎನ್‍‍ಪೀಲ್ಡ್ ಬೈಕಿಗೆ ಅನುಕೂಲವಾಗಲಿದೆ.

Most Read Articles

Kannada
English summary
Royal Enfield Thunderbird 350X Spy Pics Reveal Single-Pod Instrument Cluster & More - Read in Kannada
Story first published: Tuesday, August 27, 2019, 16:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X