ಹೊಸ ಬಣ್ಣದಲ್ಲಿ ಕಾಣಿಸಿಕೊಂಡ ಸುಜುಕಿ ಆಕ್ಸಿಸ್ 125 ಎಸ್ಇ ಸ್ಕೂಟರ್
ಸುಜುಕಿ ಮೋಟಾರ್‍ಸೈಕಲ್ ಇಂಡಿಯಾ ತಮ್ಮ ಜನಪ್ರಿಯ ಆಕ್ಸಿಸ್ 125 ಎಸ್ಇ (ಸ್ಪೆಷಲ್ ಎಡಿಷನ್) ಸ್ಕೂಟರ್‍ಗೆ ಹೊಸ ಬಣ್ಣವನ್ನು ನೀಡಿ ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಇದೀಗ ಹೊಸ ಬಣ್ಣ ಪಡೆದ ಸುಜುಕಿ ಆಕ್ಸಿಸ್ 125 ಎಸ್‍ಇ ಸ್ಕೂಟರ್‍ನ ಚಿತ್ರಗಳು ಸೋರಿಕೆಯಾಗಿದೆ. ಹೊಸ ಬಣ್ಣದ ಸ್ಕೂಟರ್‍ನ ಬಗ್ಗೆ ಸಂಸ್ಥೆಯು ಯಾವುದೇ ನಿಖರವಾದ ಮಾಹಿತಿಯನ್ನು ನೀಡಲಿಲ್ಲವಾದರೂ, ಡೀಲರ್‍ಗಳ ಯಾರ್ಡ್ ಅನ್ನು ತಲುಪುತ್ತಿದೆ.

ಜನಪ್ರೀಯ ಸುಜುಕಿ ಆಕ್ಸಿಸ್ 125 ಎಸ್ಇ ಸ್ಕೂಟರ್ ಈಗಾಗಲೇ ಮೆಟಾಲಿಕ್ ಬ್ಲಾಕ್, ಮೆಟಾಲಿಕ್ ಸೋನಿಕ್ ಸಿಲ್ವರ್ ಮತ್ತು ಪರ್ಲ್ ಮಿರಾಜ್ ವೈಟ್ ಎಂಬ ಮೂರು ಬಣ್ಣಗಳಲ್ಲಿ ಮಾರಾಟವಾಗುತ್ತಿದ್ದು, ಡೀಲರ್‍ಗಳ ಬಳಿ ಇದೀಗ ಮೇಟ್ ರೆಡ್/ಬರ್ಗುಂಡಿ ಎಂಬ ಹೊಸ ಬಣ್ಣದಲ್ಲಿ ಕಾಣಿಸಿಕೊಂಡಿದೆ. ಡೀಲರ್‍ಗಳ ಮಾಹಿತಿ ಪ್ರಕಾರ ಈ ಸ್ಕೂಟರ್ ಸುಮಾರು ರೂ. 61,788 ಬೆಲೆಯನ್ನು ಪಡೆದಿರಲಿದ್ದು, ಸಾಧಾರಣಾ ಆಕ್ಸಿಸ್ ಸ್ಕೂಟರ್‍ಗಳು ರೂ. 60,188 ಎಕ್ಸ್ ಶೋರುಂ ಬೆಲೆಯಲ್ಲಿ ಮಾರಾಟವಾಗುತ್ತಿದೆ.

ಹೊಸ ಬಣ್ಣವನ್ನು ಹೊರತು ಪಡಿಸಿ ಸುಜುಕಿ ಆಕ್ಸಿಸ್ 125 ಸ್ಕೂಟರ್‍ನಲ್ಲಿ ಬೇರಾವ ಮಾರ್ಪಾಡುಗಳನ್ನು ಮಾಡಲಿಲ್ಲ. ಸುಜುಕಿ ಆಕ್ಸಿಸ್ 125 ಎಸ್ಇ ಸ್ಕೂಟರ್ ಕ್ರೋಮ್ ಹೆಡ್‍ಲೈಟ್ ಮಾಸ್ಕ್, 3ಡಿ ಕ್ರೋಮ್ ಅಕ್ಸಿಸ್ 125 ಬ್ಯಾಡಿಂಗ್ ಮತ್ತು ಅಕರ್ಷಕವಾದ ಫುಟ್‍ಬೋರ್ಡ್ ಹಾಗು ಸೀಟ್ ಕವರ್ ಅನ್ನು ನೀಡಲಾಗುತ್ತಿದೆ.

ಚಿತ್ರಗಳಲ್ಲಿ ಕಾಣಿಸುತ್ತಿರುವ ಹೊಸ ಬಣ್ಣ ಪಡೆದ ಸುಜುಕಿ ಆಕ್ಸಿಸ್ 125 ಎಸ್ಇ ಸ್ಕೂಟರ್‍ನಲ್ಲಿ ರಿಯರ್ ವ್ಯೂ ಮಿರರ್ ಇನ್ಸ್ಟಾಲ್ ಮಾಡಲಿಲ್ಲವಾಗಿದ್ದು, ಖರೀದಿಯ ವೇಳೆ ಇನ್ನಿತರೆ ಆಕ್ಸಿಸ್ ಸ್ಕೂಟರ್‍ಗಳಲ್ಲಿ ಕಾಣಿಸುವ ಹಾಗೆ ಕ್ರೋಮ್ ಟ್ರೀಟ್ಮೆಂಟ್ ಪಡೆದ ರಿಯರ್ ವ್ಯೂ ಮಿರರ್ ಯೂನಿಟ್‍ಗಳನ್ನು ನೀವು ಡೀಲರ್‍ನ ಬಳಿ ಕೇಳಿ ಪಡೆಯಬಹುದಾಗಿದೆ.

ಹೊಸ ಬಣ್ಣದಲ್ಲಿ ಕಾಣಿಸಿಕೊಂಡ ಸುಜುಕಿ ಆಕ್ಸಿಸ್ 125 ಎಸ್ಇ ಸ್ಕೂಟರ್‍ನಲ್ಲಿ ಈ ಬಾರಿ ಎಲ್ಇಡಿ ಆಧಾರಿತ ಎಲ್ಇಡಿ ಹೆಡ್‍ಲೈಟ್ ಅನ್ನು ನೀಡಲಾಗಿತ್ತುದ್ದು, ಸುಜುಕಿ ಮೋಟಾರ್‍ಸೈಕಲ್ಸ್ ಇಂಡಿಯಾ 1.30 ಲಕ್ಷ ಯೂನಿಟ್ ಆಕ್ಸಿಸ್ ಅನ್ನು ಮಾರಾಟ ಮಾಡಿದ ಕಾರಣದಿಂದಾಗಿ ಬಿಡುಗಡೆ ಮಾಡಲಿದೆ ಎನ್ನಲಾಗಿದೆ.

ಎಂಜಿನ್ ಸಾಮರ್ಥ್ಯ
ಸುಜುಕಿ ಆಕ್ಸಿಸ್ 125 ಎಸ್ಇ ಸ್ಕೂಟರ್‍ಗಳು 124ಸಿಸಿ ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂಡ 8.6 ಬಿಹೆಚ್‍ಪಿ ಮತ್ತು 10.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದ್ದು, ಎಂಜಿನ್ ಅನ್ನು ಸಿವಿಟಿ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಈ ಸ್ಕೂಟರ್ 5.6 ಲೀಟರ್‍ನ ಫ್ಯುಯಲ್ ಟ್ಯಾಂಕ್ ಅನ್ನು ಸಹ ಒದಗಿಸಲಾಗಿದೆ.

ಸುಜುಕಿ ಆಕ್ಸಿಸ್ 125 ಎಸ್ಇ ಸ್ಕೂಟರ್‍ನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಂ ಬ್ರೇಕ್ ಅನ್ನು ನೀಡಲಾಗಿದೆ. ಇನು ಸಸ್ಪೆನ್ಷನ್ ಬಗ್ಗೆ ಹೇಳುವುದಾದರೆ ಈ ಸ್ಕೂಟರ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಸಿಂಗಲ್ ಸೈಡೆಡ್ ಸ್ಪ್ರಿಂಗ್ ಸಸ್ಪೆನ್ಷನ್‍ಗಳನ್ನು ಒದಗಿಸಲಾಗಿದೆ.

ಮಾರುಕಟ್ಟೆಯಲ್ಲಿ ಸುಜುಕಿ ಆಕ್ಸಿಸ್ 125 ಸ್ಕೂಟರ್‍ಗಳು ಟಿವಿಎಸ್ ಎನ್‍ಟಾರ್ಕ್ 125, ಹೋಂಡಾ ಆಕ್ಟೀವಾ 125 ಮತ್ತು ಹೀರೋ ಡೆಸ್ಟಿನಿ 125 ಸ್ಕೂಟರ್‍ಗಳಿಗೆ ಪೈಪೋಟಿಯನ್ನು ನೀಡುತ್ತಿದ್ದು, ಇವೆಲ್ಲವು ಕಾಂಬಿ ಬ್ರೇಕಿಂಗ್ ಸಿಸ್ಟಂ ಅನ್ನು ಇದೇ ವರ್ಷದ ಫೆಬ್ರುವರಿ ತಿಂಗಳಿನಲ್ಲಿ ಪಡೆದುಕೊಂಡಿದೆ. ಇದೀಗ ಸರ್ಕಾರ ಆದೇಶದ ಅನುಸಾರ ಎಲ್ಲಾ ವಾಹನಗಳು ಬಿಎಸ್-6 ಎಂಜಿನ್ ಅನ್ನು ಹೊಂದಿರಬೇಕಿದೆ.

ಕಳೆದ ಕೆಲ ತಿಂಗಳುಗಳಿಂದ ಸ್ಕೂಟರ್‍ಗಳ ಮಾರಾಟದಲ್ಲಿ ಏರಿಳಿತಗಳಾಗುತ್ತಿದ್ದು, ಅವುಗಳಲ್ಲಿ ಸುಜುಕಿ ಮಾತ್ರ ಕೊಂಚ ಸುಧಾರಿಸಿಕೊಂಡಿದೆ ಅಂತಾನೇ ಹೇಳ್ಬೋದು. ಏಕೆಂದರೆ 2019ರ ಜೂನ್ ತಿಂಗಳಿನಲಿ 67491 ಯೂನಿಟ್ ಅಕ್ಸಿಸ್ ಸ್ಕೂಟರ್‍ಗಳು ಮಾರಾಟಗೊಂಡಿದ್ದು, 2018ರ ಜೂನ್‍ನಲ್ಲಿ 52217 ಯೂನಿಟ್ ಮಾರಾಟಗೊಂಡಿತ್ತು. ಅಂದರೆ ಕಳೆದ ಜೂನ್‍ಗಿಂತಲೂ ಈ ಜೂನ್‍ನಲ್ಲಿ ಸುಮಾರು ಶೇಕಡ 29ರಷ್ಟು ಅಧಿಕವಾಗಿ ಮಾರಾಟಗೊಂಡಿದೆ.
Source: bikeadvice


Click it and Unblock the Notifications