Just In
- 8 hrs ago
ಕೊನೆಯ ಆಸೆಯೆಂತೆ ರಾಜಕುಮಾರ ಪ್ರಿನ್ಸ್ ಫಿಲಿಪ್ ಅಂತಿಮ ಯಾತ್ರೆಗೆ ಸಿದ್ದವಾಗಿದೆ ಮಾಡಿಫೈ ಲ್ಯಾಂಡ್ ರೋವರ್
- 10 hrs ago
ಜಪಾನ್ನಲ್ಲಿ ಬಿಡುಗಡೆಯಾಯ್ತು ಮೇಡ್ ಇನ್ ಇಂಡಿಯಾ 2021ರ ಸುಜುಕಿ ಜಿಕ್ಸರ್ 250 ಬೈಕ್
- 11 hrs ago
ಆಕರ್ಷಕ ಬೆಲೆಯಲ್ಲಿ ದೇಶದ ಮೊದಲ ಹೈಬ್ರಿಡ್ ಟ್ರ್ಯಾಕ್ಟರ್ ಬಿಡುಗಡೆ
- 11 hrs ago
ಬೆಲೆ ಏರಿಕೆ ಪಡೆದುಕೊಂಡ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್
Don't Miss!
- News
ಬೆಂಗಳೂರಲ್ಲಿ ರೆಮಿಡಿಸ್ವಿರ್ ಔಷಧಿ ಪೂರೈಕೆಗೆ SAST ಏಜೆನ್ಸಿ ನಿಯೋಜನೆ
- Lifestyle
ಗುರುವಾರದ ದಿನ ಭವಿಷ್ಯ: ಈ ದಿನ ಹೇಗಿದೆ ನಿಮ್ಮ ರಾಶಿಫಲ
- Sports
ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಆರ್ಸಿಬಿ!
- Finance
ಚಿನ್ನ, ಬೆಳ್ಳಿ ಸ್ವಲ್ಪ ಕುಸಿತ: ಏಪ್ರಿಲ್ 14ರಂದು ಎಲ್ಲೆಡೆ ಬೆಲೆ ಎಷ್ಟಿದೆ?
- Movies
40, 50, 60ರ ಸೀಕ್ರೆಟ್ ಬಿಚ್ಚಿಟ್ಟ ಕ್ರೇಜಿಸ್ಟಾರ್ ರವಿಚಂದ್ರನ್
- Education
SSLC Exams 2021: ಸಿಬಿಎಸ್ಇ ಪರೀಕ್ಷೆ ರದ್ದು ಬೆನ್ನಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ಊಹಾಪೋಹ: ಸುರೇಶ್ ಕುಮಾರ್ ಸ್ಪಷ್ಟನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಡುಗಡೆಯಾದ ಸುಜುಕಿ ಆಕ್ಸಿಸ್ 125 ಸ್ಪೆಷಲ್ ಎಡಿಷನ್ ಸ್ಕೂಟರ್
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಸುಜುಕಿ ಮೋಟಾರ್‍ಸೈಕಲ್ಸ್ ತಮ್ಮ ಜನಪ್ರಿಯ ಆಕ್ಸಿಸ್ 125 ಸ್ಕೂಟರ್‍ನ ಸ್ಪೆಷಲ್ ಎಡಿಷನ್ ಅನ್ನು ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದ ಸ್ಪೆಷಲ್ ಎಡಿಷನ್ ಸ್ಕೂಟರ್ ಅನ್ನು ಸುಜುಕಿ ಆಕ್ಸಿಸ್ 125 ಎಸ್ಇ ಎಂದು ಹೆಸರಿಡಲಾಗಿದ್ದು, ಇದು ಎಕ್ಸ್ ಶೂರುಂ ಪ್ರಕಾರ ರೂ. 61,788 ಬೆಲೆಯನ್ನು ಪಡೆದುಕೊಂಡಿದೆ.

ಮಾರುಕಟ್ಟೆಯಲ್ಲಿ ಸುಜುಕಿ ಆಕ್ಸಿಸ್ 125 ಎಸ್ಇ ಸ್ಕೂಟರ್‍ನ ಎದುರಾಳಿಗಳಾದ ಟಿವಿಎಸ್ ಎನ್‍ಟಾರ್ಕ್ 125 ಎಕ್ಸ್ ಶೋರುಂ ಪ್ರಕಾರ ರೂ. 58,000 ಮತ್ತು ಹೋಂಡಾ ಆಕ್ಟೀವಾ 125 ರೂ. 60,000 ಬೆಲೆಯನ್ನು ಪಡೆದುಕೊಂಡಿದೆ. ಸುಜುಕಿ ಆಕ್ಸಿಸ್ 125 ಎಸ್ಇ ಸ್ಕೂಟರ್‍ನಲ್ಲಿ ಗುರುತರ ಬದಲಾವಣೆಗಳನ್ನು ನೀಡಲಾಗಿದ್ದು, ಸಾಧಾರಣ ಸುಜುಕಿ ಆಕ್ಸಿಸ್ 125 ಸ್ಕೂಟರ್‍ಗಿಂತಲೂ ವಿಭಿನ್ನವಾದ ಮತ್ತು ಆಕರ್ಷಕವಾದ ವಿನ್ಯಾಸವನ್ನ ಇದು ಪಡೆದುಕೊಂಡಿದೆ.

ಬಿಡುಗಡೆಯಾದ ಹೊಸ ಸುಜುಕಿ ಆಕ್ಸಿಸ್ 125 ಎಸ್ಇ ಸ್ಕೂಟರ್‍ನಲ್ಲಿ ಈ ಬಾರಿ ಕಪ್ಪು ಬಣ್ಣದ ಅಲಾಯ್ ವ್ಹೀಲ್ಸ್ ಸೇರಿದಂತೆ, ಮೃದುವಾದ ಸೀಟ್, ಕ್ರೋಮ್ ಫಿನಿಷ್ ಹೊಂದಿದ ರಿಯರ್ ವ್ಯೂ ಮಿರರ್ ಮತ್ತು ಮರೂನ್ ಬಣ್ಣವನ್ನು ನೀಡಲಾಗಿದೆ. ಈ ಸ್ಕೂಟರ್ ಬ್ಲಾಕ್, ಸಿಲ್ವರ್ ಮತ್ತು ಸಿಲ್ವರ್ ಶೇಡ್ ಬಣ್ಣಗಳಲ್ಲಿ ಕೂಡಾ ಖರೀದಿಗೆ ಲಭ್ಯವಿದೆ.

ಹೊಸ ಬಣ್ಣವನ್ನು ಹೊರತು ಪಡಿಸಿ ಸುಜುಕಿ ಆಕ್ಸಿಸ್ 125 ಸ್ಕೂಟರ್‍ನಲ್ಲಿ ಬೇರಾವ ಮಾರ್ಪಾಡುಗಳನ್ನು ಮಾಡಲಿಲ್ಲ. ಸುಜುಕಿ ಆಕ್ಸಿಸ್ 125 ಎಸ್ಇ ಸ್ಕೂಟರ್ ಕ್ರೋಮ್ ಹೆಡ್‍ಲೈಟ್ ಮಾಸ್ಕ್, 3ಡಿ ಕ್ರೋಮ್ ಅಕ್ಸಿಸ್ 125 ಬ್ಯಾಡಿಂಗ್ ಮತ್ತು ಅಕರ್ಷಕವಾದ ಫುಟ್‍ಬೋರ್ಡ್ ಹಾಗು ಸೀಟ್ ಕವರ್ ಅನ್ನು ನೀಡಲಾಗುತ್ತಿದೆ.

ಹೊಸ ಬಣ್ಣದಲ್ಲಿ ಕಾಣಿಸಿಕೊಂಡ ಸುಜುಕಿ ಆಕ್ಸಿಸ್ 125 ಎಸ್ಇ ಸ್ಕೂಟರ್‍ನಲ್ಲಿ ಈ ಬಾರಿ ಎಲ್ಇಡಿ ಆಧಾರಿತ ಹೆಡ್‍ಲೈಟ್ ಅನ್ನು ನೀಡಲಾಗಿತ್ತಿದ್ದು, ಸುಜುಕಿ ಮೋಟಾರ್‍ಸೈಕಲ್ಸ್ ಇಂಡಿಯಾ 1.30 ಲಕ್ಷ ಯೂನಿಟ್ ಆಕ್ಸಿಸ್ ಅನ್ನು ಮಾರಾಟ ಮಾಡಿದ ಕಾರಣದಿಂದಾಗಿ ಬಿಡುಗಡೆ ಮಾಡಲಿದೆ ಎನ್ನಲಾಗಿದೆ.

ಎಂಜಿನ್ ಸಾಮರ್ಥ್ಯ
ಸುಜುಕಿ ಆಕ್ಸಿಸ್ 125 ಎಸ್ಇ ಸ್ಕೂಟರ್‍ಗಳು 124ಸಿಸಿ ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 8.6 ಬಿಹೆಚ್‍ಪಿ ಮತ್ತು 10.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದ್ದು, ಎಂಜಿನ್ ಅನ್ನು ಸಿವಿಟಿ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಈ ಸ್ಕೂಟರ್ 5.6 ಲೀಟರ್‍ನ ಫ್ಯುಯಲ್ ಟ್ಯಾಂಕ್ ಅನ್ನು ಸಹ ಒದಗಿಸಲಾಗಿದೆ.

ಸುಜುಕಿ ಆಕ್ಸಿಸ್ 125 ಎಸ್ಇ ಸ್ಕೂಟರ್‍ನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಂ ಬ್ರೇಕ್ ಅನ್ನು ನೀಡಲಾಗಿದೆ. ಇನು ಸಸ್ಪೆನ್ಷನ್ ಬಗ್ಗೆ ಹೇಳುವುದಾದರೆ ಈ ಸ್ಕೂಟರ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಸಿಂಗಲ್ ಸೈಡೆಡ್ ಸ್ಪ್ರಿಂಗ್ ಸಸ್ಪೆನ್ಷನ್‍ಗಳನ್ನು ಒದಗಿಸಲಾಗಿದೆ.

ಮಾರುಕಟ್ಟೆಯಲ್ಲಿ ಸುಜುಕಿ ಆಕ್ಸಿಸ್ 125 ಸ್ಕೂಟರ್‍ಗಳು ಟಿವಿಎಸ್ ಎನ್‍ಟಾರ್ಕ್ 125, ಹೋಂಡಾ ಆಕ್ಟೀವಾ 125 ಮತ್ತು ಹೀರೋ ಡೆಸ್ಟಿನಿ 125 ಸ್ಕೂಟರ್‍ಗಳಿಗೆ ಪೈಪೋಟಿಯನ್ನು ನೀಡುತ್ತಿದ್ದು, ಇವೆಲ್ಲವು ಕಾಂಬಿ ಬ್ರೇಕಿಂಗ್ ಸಿಸ್ಟಂ ಅನ್ನು ಇದೇ ವರ್ಷದ ಫೆಬ್ರುವರಿ ತಿಂಗಳಿನಲ್ಲಿ ಪಡೆದುಕೊಂಡಿದೆ. ಇದೀಗ ಸರ್ಕಾರ ಆದೇಶದ ಅನುಸಾರ ಎಲ್ಲಾ ವಾಹನಗಳು ಬಿಎಸ್-6 ಎಂಜಿನ್ ಅನ್ನು ಹೊಂದಿರಬೇಕಿದೆ.

ಕಳೆದ ಕೆಲ ತಿಂಗಳುಗಳಿಂದ ಸ್ಕೂಟರ್‍ಗಳ ಮಾರಾಟದಲ್ಲಿ ಏರಿಳಿತಗಳಾಗುತ್ತಿದ್ದು, ಅವುಗಳಲ್ಲಿ ಸುಜುಕಿ ಮಾತ್ರ ಕೊಂಚ ಸುಧಾರಿಸಿಕೊಂಡಿದೆ ಅಂತಾನೇ ಹೇಳ್ಬೋದು. ಏಕೆಂದರೆ 2019ರ ಜೂನ್ ತಿಂಗಳಿನಲಿ 67491 ಯೂನಿಟ್ ಅಕ್ಸಿಸ್ ಸ್ಕೂಟರ್‍ಗಳು ಮಾರಾಟಗೊಂಡಿದ್ದು, 2018ರ ಜೂನ್‍ನಲ್ಲಿ 52217 ಯೂನಿಟ್ ಮಾರಾಟಗೊಂಡಿತ್ತು. ಅಂದರೆ ಕಳೆದ ಜೂನ್‍ಗಿಂತಲೂ ಈ ಜೂನ್‍ನಲ್ಲಿ ಸುಮಾರು ಶೇಕಡ 29ರಷ್ಟು ಅಧಿಕವಾಗಿ ಮಾರಾಟಗೊಂಡಿದೆ.