ಡ್ಯೂಕ್ 250 ಮತ್ತು ಫೇಜರ್25 ಬೈಕ್‌ಗಳಿಗೆ ಭರ್ಜರಿ ಪೈಪೋಟಿ ಕೊಟ್ಟ ಸುಜುಕಿ ಜಿಕ್ಸರ್ ಎಸ್ಎಫ್ 250

ಪ್ರೀಮಿಯಂ ಬೈಕ್‌ಗಳ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಕೆಟಿಎಂ ಮತ್ತು ಯಮಹಾ ಸಂಸ್ಥೆಗಳಿಗೆ ಸುಜುಕಿ ಮೋಟಾರ್‌ಸೈಕಲ್ ಸಂಸ್ಥೆಯು ಹೊಚ್ಚ ಹೊಸ ಜಿಕ್ಸರ್ ಎಸ್ಎಫ್ 250 ಮೂಲಕ ಭರ್ಜರಿ ಪೈಪೋಟಿ ನೀಡುತ್ತಿದ್ದು, ಜೂನ್ ಅವಧಿಯ ಡ್ಯೂಕ್ 250 ಮತ್ತು ಫೇಜರ್ 25 ಬೈಕ್‌ಗಳಿಗೆ ಪೈಪೋಟಿಯಾಗಿ ಮೊದಲ ತಿಂಗಳಿನಲ್ಲಿಯೇ ಬರೋಬ್ಬರಿ 1,526 ಯುನಿಟ್ ಮಾರಾಟಗೊಂಡಿವೆ.

ಡ್ಯೂಕ್ 250 ಮತ್ತು ಫೇಜರ್25 ಬೈಕ್‌ಗಳಿಗೆ ಭರ್ಜರಿ ಪೈಪೋಟಿ ಕೊಟ್ಟ ಸುಜುಕಿ ಜಿಕ್ಸರ್ ಎಸ್ಎಫ್ 250

ಸುಜುಕಿ ಸಂಸ್ಥೆಯು ಮೇ ಕೊನೆಯ ವಾರದಲ್ಲಿ ಜಿಕ್ಸರ್ 250 ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಜೂನ್ ಆರಂಭದಲ್ಲಿ ಹೊಸ ಬೈಕ್ ವಿತರಣೆಗೆ ಚಾಲನೆ ನೀಡಲಾಗಿತ್ತು. ಬಿಡುಗಡೆಯಾದ ಮೊದಲ ತಿಂಗಳ ಅವಧಿಯಲ್ಲೇ ಉತ್ತಮ ಬೇಡಿಕೆ ಪಡೆದುಕೊಳ್ಳವಲ್ಲಿ ಯಶಸ್ವಿಯಾಗಿದ್ದು, ಕೆಟಿಎಂ ಡ್ಯೂಕ್ 250, ಯಮಹಾ ಫೇಜರ್ 25 ಮತ್ತು ಹೋಂಡಾ ಸಿಬಿಆರ್ 250ಆರ್ ಬೈಕ್‌ಗಳಿಗಿಂತಲೂ ಉತ್ತಮ ಮಾರಾಟ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

ಡ್ಯೂಕ್ 250 ಮತ್ತು ಫೇಜರ್25 ಬೈಕ್‌ಗಳಿಗೆ ಭರ್ಜರಿ ಪೈಪೋಟಿ ಕೊಟ್ಟ ಸುಜುಕಿ ಜಿಕ್ಸರ್ ಎಸ್ಎಫ್ 250

ಜೂನ್ ಅವಧಿಯಲ್ಲಿ ಯಮಹಾ ಫೇಜರ್ 25 ಬೈಕ್ ಮಾದರಿಯು 910 ಯುನಿಟ್ ಮಾರಾಟಗೊಂಡಿದ್ದಲ್ಲಿ ಕೆಟಿಎಂ ಡ್ಯೂಕ್ 250 ಮಾದರಿಯು 681 ಮತ್ತು ಹೋಂಡಾ ಸಿಬಿಆರ್250ಆರ್ ಬೈಕ್ ಮಾದರಿಯು ಕೇವಲ 54 ಬೈಕ್‌ಗಳು ಮಾತ್ರವೇ ಮಾರಾಟಗೊಂಡಿವೆ. ಇದೇ ವೇಳೆ ಸುಜುಕಿ ಜಿಕ್ಸರ್ ಎಸ್ಎಫ್ 250 ಬೈಕ್ ಮಾದರಿಯು 1,526 ಯುನಿಟ್ ಮಾರಾಟಗೊಂಡಿದ್ದು, 250 ಸಿಸಿ ಬೈಕ್‌ಗಳಲ್ಲಿ ಮೊದಲ ಸ್ಥಾನಕ್ಕೇರಿದೆ.

ಡ್ಯೂಕ್ 250 ಮತ್ತು ಫೇಜರ್25 ಬೈಕ್‌ಗಳಿಗೆ ಭರ್ಜರಿ ಪೈಪೋಟಿ ಕೊಟ್ಟ ಸುಜುಕಿ ಜಿಕ್ಸರ್ ಎಸ್ಎಫ್ 250

ಇನ್ನು ಸುಜುಕಿ ಮೋಟಾರ್‌ಸೈಕಲ್ ಸಂಸ್ಥೆಯು ಭಾರತದಲ್ಲಿನ ತನ್ನ ಬೈಕ್ ಸರಣಿ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಎಂಟ್ರಿ ಲೆವಲ್ ಸೆಗ್ಮೆಂಟ್‌ನಲ್ಲಿ ಪರ್ಫಾಮೆನ್ಸ್ ಪ್ರಿಯರಿಗಾಗಿ ಜಿಕ್ಸರ್ ಎಸ್‌ಎಫ್ 150 ಮತ್ತು ಜಿಕ್ಸರ್ ಎಸ್ಎಫ್ 250 ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದೆ.

ಡ್ಯೂಕ್ 250 ಮತ್ತು ಫೇಜರ್25 ಬೈಕ್‌ಗಳಿಗೆ ಭರ್ಜರಿ ಪೈಪೋಟಿ ಕೊಟ್ಟ ಸುಜುಕಿ ಜಿಕ್ಸರ್ ಎಸ್ಎಫ್ 250

ಕಡಿಮೆ ಎಂಜಿನ್ ಸಾಮರ್ಥ್ಯದಲ್ಲೇ ಅತ್ಯುತ್ತಮ ಪರ್ಫಾಮೆನ್ಸ್ ಮಾದರಿಗಳಾಗಿರುವ ಜಿಕ್ಸರ್ ಎಸ್ಎಫ್ 150 ಮತ್ತು ಜಿಕ್ಸರ್ ಎಸ್ಎಫ್ 250 ಬೈಕ್‌ಗಳು, ಪ್ರೀಮಿಯಂ ವೈಶಿಷ್ಟ್ಯತೆಗಳೊಂದಿಗೆ ಸ್ಪೋರ್ಟಿ ಡಿಸೈನ್ ಹೊಂದಿರುವ ಉತ್ಸಾಹಿ ಬೈಕ್ ಸವಾರರ ಗಮನಸೆಳೆಯುತ್ತಿವೆ. ಇದರಲ್ಲಿ ಜಿಕ್ಸರ್ ಎಸ್ಎಫ್ 150 ಬೈಕ್ ಈ ಬಾರಿ ಹೊಸ ವಿನ್ಯಾಸವನ್ನು ಪಡೆದುಕೊಂಡಿದ್ದು, ಹೊಸದಾಗಿ ಸ್ಪ್ಲಿಟ್ ಸೀಟ್ ಮತ್ತು ಕ್ಲಿಪ್ ಆನ್ ಹ್ಯಾಂಡಲ್‍ ಬಾರ್ ಅನ್ನು ಪಡೆದುಕೊಂಡಿದೆ. ಹಾಗೆಯೇ ಜಿಕ್ಸರ್ ಎಸ್ಎಫ್ 250 ಬೈಕಿನ ವಿನ್ಯಾಸದ ಬಗ್ಗೆ ಹೇಳುವುದಾದರೇ ಬಾಡಿ ಕಲರ್ ಗ್ರಾಫಿಕ್ಸ್, ಎಲ್ಇಡಿ ಹೆಡ್‍ಲ್ಯಾಂಪ್ಸ್ ಹಾಗೂ ಟೈಲ್ ಲೈಟ್ಸ್ ಮತ್ತು ಸಂಪೂರ್ಣ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಪಡೆದುಕೊಂಡಿದೆ.

ಎಂಜಿನ್ ಸಾಮರ್ಥ್ಯ

2019ರ ಹೊಸ ಸುಜುಕಿ ಜಿಕ್ಸರ್ ಎಸ್ಎಫ್ 150 ಬೈಕ್ ಮಾದರಿಯು 154.9ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದೊಂದಿಗೆ 14.1-ಬಿಹೆಚ್‍ಪಿ ಮತ್ತು 14-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಹೊಸ ಎಂಜಿನ್ ಮಾದರಿಯನ್ನು 5-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಹಾಗೆಯೇ ಜಿಕ್ಸರ್ ಎಸ್ಎಫ್ 250 ಬೈಕ್ ಮಾದರಿಯು 249ಸಿಸಿ ಆಯಿಲ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಸಹಾಯದೊಂದಿಗೆ 26.5-ಬಿಹೆಚ್‍ಪಿ ಮತ್ತು 22.6-ಎನ್ಎಂ ಟಾರ್ಕ್ ಅನ್ನು ಉತ್ಪಾದನಾ ಶಕ್ತಿ ಹೊಂದಿದೆ.

ಡ್ಯೂಕ್ 250 ಮತ್ತು ಫೇಜರ್25 ಬೈಕ್‌ಗಳಿಗೆ ಭರ್ಜರಿ ಪೈಪೋಟಿ ಕೊಟ್ಟ ಸುಜುಕಿ ಜಿಕ್ಸರ್ ಎಸ್ಎಫ್ 250

ಹೊಸ ಬೈಕ್ ಮೈಲೇಜ್

ಸುಜುಕಿ ಜಿಕ್ಸರ್ ಎಸ್ಎಫ್ 250 ಬೈಕ್‍ಗಳು 12-ಲೀಟರ್ ಫ್ಯುಯಲ್ ಟ್ಯಾಂಕ್ ಅನ್ನು ಹೊಂದಿದ್ದು, ಪ್ರತೀ ಲೀಟರ್‍‍ಗೆ 38.5 ಕಿಲೋ ಮೀಟರ್‍ ಮೈಲೇಜ್ ನೀಡಿದ್ದಲ್ಲಿ, ಜಿಕ್ಸರ್ ಎಸ್ಎಫ್ 150 ಬೈಕ್‍ ಮಾದರಿಯು ಪ್ರತಿ ಲೀಟರ್ ಪೆಟ್ರೋಲ್‍ಗೆ ಸುಮಾರು 45 ಕಿಲೋ ಮೀಟರ್‍ ಮೈಲೇಜ್ ಹಿಂದಿರುಗಿಸಬಲ್ಲವು.

ಡ್ಯೂಕ್ 250 ಮತ್ತು ಫೇಜರ್25 ಬೈಕ್‌ಗಳಿಗೆ ಭರ್ಜರಿ ಪೈಪೋಟಿ ಕೊಟ್ಟ ಸುಜುಕಿ ಜಿಕ್ಸರ್ ಎಸ್ಎಫ್ 250

ಇದಲ್ಲದೆ ಸುಜುಕಿ ಜಿಕ್ಸರ್ ಎಸ್ಎಫ್ 150 ಬೈಕ್‍ ಮುಂಭಾಗದಲ್ಲಿ 41ಎಂಎಂ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೋಶಾಕ್ ಅಬ್ಸಾರ್ಬರ್ ಅನ್ನು ಹೊಂದಿದ್ದು, ಜಿಕ್ಸರ್ ಎಸ್ಎಫ್ 250 ಬೈಕ್ ಮುಂಭಾಗದಲ್ಲಿ ಕೂಡಾ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಹಾಗು ಹಿಂಭಾಗದಲ್ಲಿ ಮೊನೋಶಾಕ್ ಅಬ್ಸಾರ್ಬರ್ ಅನ್ನು ಜೋಡಿಸಲಾಗಿದೆ.

ಡ್ಯೂಕ್ 250 ಮತ್ತು ಫೇಜರ್25 ಬೈಕ್‌ಗಳಿಗೆ ಭರ್ಜರಿ ಪೈಪೋಟಿ ಕೊಟ್ಟ ಸುಜುಕಿ ಜಿಕ್ಸರ್ ಎಸ್ಎಫ್ 250

ಜೊತೆಗೆ ಹೊಸ ಸುರಕ್ಷಾ ನಿಯಮ ಅನುಸಾರವಾಗಿ ಜಿಕ್ಸರ್ ಎಸ್ಎಫ್ 250 ಮತ್ತು ಜಿಕ್ಸರ್ ಎಸ್ಎಫ್ 150 ಬೈಕ್‍ಗಳಲ್ಲಿ ಎರಡೂ ಬದಿಗಳಲ್ಲೂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದ್ದು, ಇದರಲ್ಲಿ ಜಿಕ್ಸರ್ ಎಸ್ಎಫ್ 150 ಮಾದರಿಯು ಸಿಂಗಲ್ ಚಾನಲ್ ಎಬಿಎಸ್ ಹೊಂದಿದ್ದಲ್ಲಿ ಜಿಕ್ಸರ್ ಎಸ್ಎಫ್ 250 ಬೈಕಿನಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್ ಅಳವಡಿಸಲಾಗಿದೆ.

Most Read Articles

Kannada
English summary
Suzuki Gixxer SF 250 Beats KTM Duke 250, Yamaha Fazer. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X