ಪ್ರಯಾಣಿಕ ಮೋಟಾರ್‍‍ಸೈಕಲ್‍‍ಗಳ ಉತ್ಪಾದನೆ ನಿಲ್ಲಿಸಲಿರುವ ಸುಜುಕಿ

ಟೈಮ್ಸ್ ಆಫ್ ಇಂಡಿಯಾ ವರದಿಗಳ ಪ್ರಕಾರ, ದ್ವಿ ಚಕ್ರ ವಾಹನ ತಯಾರಕ ಕಂಪನಿಗಳು ತಮ್ಮ ಗಮನವನ್ನು ಪ್ರಯಾಣಿಕ ಮೋಟಾರ್‍‍ಸೈಕಲ್‍‍ಗಳ ಬದಲಿಗೆ ಪ್ರಿಮೀಯಂ ಹಾಗೂ ಲೈಫ್‍‍ಸ್ಟೈಲ್ ಮೋಟಾರ್‍‍ಸೈಕಲ್‍‍ಗಳಿಗೆ ಆದ್ಯತೆ ನೀಡುತ್ತಿದ್ದಾರೆ.

ಪ್ರಯಾಣಿಕ ಮೋಟಾರ್‍‍ಸೈಕಲ್‍‍ಗಳ ಉತ್ಪಾದನೆ ನಿಲ್ಲಿಸಲಿರುವ ಸುಜುಕಿ

ಈ ಯೋಜನೆಯನ್ನು ಯಮಹಾ ಕಂಪನಿಯು ಬಹಳ ಹಿಂದೆಯೇ ಘೋಷಿಸಿತ್ತು, ಈಗ ಜಪಾನ್ ಮೂಲದ ಸುಜುಕಿ ಕಂಪನಿಯು ಪ್ರಯಾಣಿಕ ಸೆಗ್‍‍ಮೆಂಟಿನ ಮೋಟಾರ್‍‍ಸೈಕಲ್‍‍ಗಳ ಉತ್ಪಾದನೆಯನ್ನು ನಿಲ್ಲಿಸಿ, ಪ್ರಿಮೀಯಂ ಹಾಗೂ ಪರ್ಫಾಮೆನ್ಸ್ ಬೈಕುಗಳ ಉತ್ಪಾದನೆ ಮಾಡುವುದಾಗಿ ತಿಳಿಸಿದೆ. ಸುಜುಕಿ ಕಂಪನಿಯು ಸೋಮವಾರ ಜಿಕ್ಸರ್ ಎಸ್‍ಎಫ್ 250 ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಈ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.7 ಲಕ್ಷಗಳಾಗಿದೆ.

ಪ್ರಯಾಣಿಕ ಮೋಟಾರ್‍‍ಸೈಕಲ್‍‍ಗಳ ಉತ್ಪಾದನೆ ನಿಲ್ಲಿಸಲಿರುವ ಸುಜುಕಿ

ಈಗ ಇದಕ್ಕಿಂತ ಹೆಚ್ಚಿನ ಬೆಲೆಯ ಬೈಕಿನ ಉತ್ಪಾದನೆಯತ್ತ ಗಮನ ಹರಿಸಲಿದೆ. ಸುಜುಕಿ ಮೋಟಾರ್‍‍ಸೈಕಲ್ ಇಂಡಿಯಾದ, ಮಾರ್ಕೆಟಿಂಗ್ ಉಪಾಧ್ಯಕ್ಷರಾದ ದೇವಾಶಿಷ್ ಹಂದಾ ರವರು ಮಾತನಾಡಿ, ನಮ್ಮ ಹೊಸ ಪ್ರಾಡಕ್ಟ್ ಗಳ ತಂತ್ರದ ಭಾಗವಾಗಿ ಬಿಡುಗಡೆಯಾಗಲಿರುವ ನಮ್ಮ ಎಲ್ಲಾ ಹೊಸ ಬೈಕುಗಳು 150ಸಿಸಿ ಗಿಂತ ಹೆಚ್ಚಾಗಿರಲಿವೆ, ಇದು ಜಿಕ್ಸರ್ ಎಸ್‍ಎಫ್250 ನಿಂದ ಶುರುವಾಗಲಿದೆ ಎಂದು ತಿಳಿಸಿದರು.

ಪ್ರಯಾಣಿಕ ಮೋಟಾರ್‍‍ಸೈಕಲ್‍‍ಗಳ ಉತ್ಪಾದನೆ ನಿಲ್ಲಿಸಲಿರುವ ಸುಜುಕಿ

ಹಂದಾ ರವರು ಮಾತನಾಡಿ, ನಮ್ಮ ಎಲ್ಲಾ ಹೊಸ ಪ್ರಾಡಕ್ಟ್ ಗಳು ಈ ಸೆಗ್‍‍ಮೆಂಟಿನಲ್ಲಿರುವ ಬೈಕುಗಳಿಗಿಂತ ಹೆಚ್ಚಿನ ಸಾರ್ಮರ್ಥ್ಯ ಹೊಂದಿರಲಿದ್ದು, ನಾವು ಪ್ರಯಾಣಿಕ ಸೆಗ್‍‍ಮೆಂಟಿನ ಭಾಗವಾಗಿ ಮುಂದುವರೆಯುವುದಿಲ್ಲ. ನಾವು ಬೈಕುಗಳ ಅವಶ್ಯಕತೆ ಇರುವವರ ಬದಲಿಗೆ, ಬೈಕುಗಳ ಬಗ್ಗೆ ಪ್ಯಾಷನ್ ಹೊಂದಿರುವ ಗ್ರಾಹಕರನ್ನು ತೃಪ್ತಿಪಡಿಸಬೇಕೆಂದಿದ್ದೇವೆ ಎಂದು ತಿಳಿಸಿದರು.

ಪ್ರಯಾಣಿಕ ಮೋಟಾರ್‍‍ಸೈಕಲ್‍‍ಗಳ ಉತ್ಪಾದನೆ ನಿಲ್ಲಿಸಲಿರುವ ಸುಜುಕಿ

ಪ್ರಾಡಕ್ಟ್ ತಂತ್ರದ ಬಗ್ಗೆ ಮಾತನಾಡಿದ ಹಂದಾರವರು, ನಾವು ಈ ವರ್ಷ ಅಥವಾ ಮುಂದಿನ ವರ್ಷದ ಅವಧಿಯಲ್ಲಿ ಸ್ಪೋರ್ಟ್ಸ್ ಬೈಕ್ ಬಿಡುಗಡೆಯ ಗುರಿ ಹೊಂದಿದ್ದು, ಬಜಾಜ್ ಪಲ್ಸರ್‍220ಎಫ್ ಅಥವಾ ಯಮಹಾದ ಫೇಜರ್25 ಬೈಕುಗಳಿಗೆ ಪರ್ಯಾಯ ಆಯ್ಕೆಯನ್ನು ನೋಡುತ್ತಿರುವ ಗ್ರಾಹಕರನ್ನು ಸೆಳೆಯಲು ಬಯಸಿದ್ದೇವೆ. ನಾವು ಯುವ ಹಾಗೂ ನಗರವಾಸಿ ಗ್ರಾಹಕರನ್ನು ಸೆಳೆಯಲು ಬಯಸುತ್ತೇವೆ, ಏಕೆಂದರೆ 50% ಗೂ ಹೆಚ್ಚಿನ ನಮ್ಮ 500 ಡೀಲರ್‍‍ಗಳು ಮೆಟ್ರೊ ಅಥವಾ ಮೊದಲ ಹಂತದ ನಗರಗಳಲ್ಲಿದ್ದಾರೆ ಎಂದು ಹೇಳಿದರು.

ಪ್ರಯಾಣಿಕ ಮೋಟಾರ್‍‍ಸೈಕಲ್‍‍ಗಳ ಉತ್ಪಾದನೆ ನಿಲ್ಲಿಸಲಿರುವ ಸುಜುಕಿ

ಸುಜುಕಿ ಕಂಪನಿಯು ಕಳೆದ ವರ್ಷ ಬಿಡುಗಡೆ ಮಾಡಿದ ಬೈಕುಗಳೆಲ್ಲವೂ ಪರ್ಫಾಮೆನ್ಸ್ ಆಧಾರಿತವಾಗಿವೆ. ಇದರಲ್ಲಿ ಇತ್ತೀಚಿಗಷ್ಟೇ ಬಿಡುಗಡೆಯಾದ ಸುಜುಕಿ ಜಿಕ್ಸರ್ ಎಸ್‍ಎಫ್155 ಮತ್ತು ಸುಜುಕಿ ಜಿಕ್ಸರ್ ಎಸ್‍ಎಫ್250 ಬೈಕುಗಳೂ ಸಹ ಸೇರಿವೆ. ಸುಜುಕಿ ಕಂಪನಿಯು ತನ್ನ ಜನಪ್ರಿಯ ಹಯಾತೆ ಬೈಕಿನ ಉತ್ಪಾದನೆಯನ್ನು ಈಗಾಗಲೇ ಸ್ಥಗಿತಗೊಳಿಸಿದೆ.

ಪ್ರಯಾಣಿಕ ಮೋಟಾರ್‍‍ಸೈಕಲ್‍‍ಗಳ ಉತ್ಪಾದನೆ ನಿಲ್ಲಿಸಲಿರುವ ಸುಜುಕಿ

ಹಂದಾರವರು ಮಾತನಾಡಿ, ನಾವು ಮುಂದಿನ ವರ್ಷದಿಂದ ಬಿಡುಗಡೆ ಮಾಡಲಿರುವ ವಾಹನಗಳು ಈಗಿರುವ ವಾಹನಗಳಿಗಿಂತ ಹೆಚ್ಚಿನ ಸಿಸಿ ಹೊಂದಿರಲಿವೆ. ನಾವು ಮುಂದೆ ಪ್ರತಿ ವರ್ಷ ಎರಡು ವಾಹನಗಳನ್ನು ಬಿಡುಗಡೆಗೊಳಿಸಲಿದ್ದೇವೆ. ಈ ವಾಹನಗಳಲ್ಲಿ ಈಗಿರುವ ಎಂಜಿನ್‍‍ಗಳಿಗಿಂತ ಹೆಚ್ಚಿನ ಸಾಮರ್ಥ್ಯವಿರಲಿದೆ ಎಂದು ತಿಳಿಸಿದರು.

MOST READ: ಏಪ್ರಿಲ್ 2019ರಲ್ಲಿ ಹೆಚ್ಚು ಮಾರಾಟವಾದ ಬೈಕುಗಳಿವು

ಪ್ರಯಾಣಿಕ ಮೋಟಾರ್‍‍ಸೈಕಲ್‍‍ಗಳ ಉತ್ಪಾದನೆ ನಿಲ್ಲಿಸಲಿರುವ ಸುಜುಕಿ

ಸ್ಪೋರ್ಟ್ ಬೈಕುಗಳಿಗಾಗಿ ಕಾದಿರುವ ಮಾರುಕಟ್ಟೆಗಾಗಿ ಸುಜುಕಿಯು ಈ ಯೋಜನೆಯನ್ನು ಹೊಂದಿದೆ. ಈ ಬಗ್ಗೆ ಮಾತನಾಡಿದ ಹಂದಾರವರು ನಾವು ಈಗಾಗಲೇ ಸ್ಪೋರ್ಟ್ಸ್ ಬೈಕಿನ ಬಗ್ಗೆ ಪ್ಯಾಷನ್ ಹೊಂದಿರುವವರನ್ನು ಗುರಿಯಾಗಿಸಿಕೊಂಡಿದ್ದೇವೆ. ಅವರಿಗೆ 250 ಸಿಸಿ ಹಾಗೂ ಅದಕ್ಕಿಂತ ಹೆಚ್ಚಿನ ಸಿಸಿಯ ಬೈಕುಗಳಾದ ಜಿ‍ಎಸ್‍ಎಕ್ಸ್ 750, ಜಿ‍ಎಸ್‍ಎಕ್ಸ್ ಆರ್1000 ಅಥವಾ ವಿ ಸ್ಟಾರ್ಮ್ 650 ಬಗ್ಗೆ ತಿಳಿದಿರುತ್ತದೆ. ಮುಂಬರುವ ದಿನಗಳಲ್ಲಿ ನಾವು ಕ್ರೂಸರ್ ಮಾರುಕಟ್ಟೆಗೆ ಕಾಲಿಡಲಿದ್ದೇವೆ ಎಂದು ತಿಳಿಸಿದರು.

ಪ್ರಯಾಣಿಕ ಮೋಟಾರ್‍‍ಸೈಕಲ್‍‍ಗಳ ಉತ್ಪಾದನೆ ನಿಲ್ಲಿಸಲಿರುವ ಸುಜುಕಿ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಸುಜುಕಿ ಕಂಪನಿಯ ಯೋಜನೆಯು ಅದ್ಭುತವಾಗಿದ್ದು, ಸರಿಯಾದ ಸಮಯದಲ್ಲಿ ಬಂದಿದೆ. ಮೋಟಾರ್‍‍ಸೈಕಲ್ ಮಾರುಕಟ್ಟೆಯು ನಿಧಾನವಾಗಿ ಪರ್ಫಾಮೆನ್ಸ್ ಆಧಾರಿತ ಮೋಟಾರ್‍‍ಸೈಕಲ್‍‍ಗಳಿಗೆ ಬದಲಾಗುತ್ತಿದೆ. ಏಕೆಂದರೆ ಸ್ಕೂಟರ್ ಸೆಗ್‍‍ಮೆಂಟ್ ನಿಧಾನವಾಗಿ ಮೋಟಾರ್ ಸೈಕಲ್ ಸೆಗ್‍‍ಮೆಂಟ್ ಅನ್ನು ಆಕ್ರಮಿಸಿಕೊಳ್ಳುತ್ತಿದ್ದು, ಪ್ರಯಾಣಕ್ಕಾಗಿ ಸ್ಕೂಟರ್‍‍ಗಳನ್ನು ಹೆಚ್ಚು ಸಂಖ್ಯೆಯಲ್ಲಿ ಕೊಳ್ಳಲಾಗುತ್ತಿದೆ. ಇದರಿಂದ ಮೋಟಾರ್‍‍ಸೈಕಲ್ ತಯಾರಕರು ಪ್ರಿಮೀಯಂ ಹಾಗೂ ಪರ್ಫಾಮೆನ್ಸ್ ಬೈಕುಗಳ ತಯಾರಿಕೆಗೆ ಆದ್ಯತೆ ನೀಡುತ್ತಿದ್ದಾರೆ.

Article Published On: Thursday, May 23, 2019, 18:21 [IST]
English summary
Suzuki To Stop Manufacturing Commuter Motorcycles – Will Cater To Performance Segment Only - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+