ಭಾರತದಲ್ಲಿ ಈ ವರ್ಷ ಬಿಡುಗಡೆಯಾಗಲಿರುವ ಐದು ಸ್ಕೂಟರ್‍ಗಳಿವು
ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಭಾರತೀಯ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಸ್ಕೂಟರ್‍ಗಳನ್ನು ಬಿಡುಗಡೆ ಮಾಡಿ, ಎಲ್ಲಾ ತರಹದ ಗ್ರಾಹಕರನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿವೆ. ಸ್ಕೂಟರ್‍ಗಳು ಭಾರತದ ದ್ವಿಚಕ್ರ ವಾಹನಗಳ ಮಾರುಕಟ್ಟೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂಬುದನ್ನು ಯಾರೂ ಅಲ್ಲಗಳೆಯಲಾಗದು.

ಭಾರತೀಯರು, ಅದರಲ್ಲೂ ನಗರವಾಸಿಗಳು, ಸ್ಕೂಟರ್ ಸವಾರಿಯನ್ನು ಕೈಗೆಟಕುವ, ಆರಾಮದಾಯಕವಾದ ಸರಳ ವಿಧಾನವೆಂದು ಪರಿಗಣಿಸಿದ್ದಾರೆ. 2019ರಲ್ಲಿ 125 ಸಿಸಿ ಸಾಮರ್ಥ್ಯದ ಅನೇಕ ಸ್ಕೂಟರ್‍ಗಳು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದವು. ದ್ವಿಚಕ್ರ ವಾಹನ ತಯಾರಕರು ತಮ್ಮ ಸ್ಕೂಟರ್‍ಗಳಲ್ಲಿ ಹೊಸದಾದ ಫೀಚರ್‍ಗಳನ್ನು ಅಳವಡಿಸಿ ಬೇರೆ ಕಂಪನಿಯ ಸ್ಕೂಟರ್‍ಗಳಿಗೆ ಪೈಪೋಟಿ ನೀಡಿದರು. ಮುಂಬರುವ ದಿನಗಳಲ್ಲಿ ಹಲವು ಹೊಸ ಸ್ಕೂಟರ್‍ಗಳ ಬಿಡುಗಡೆಯನ್ನು ನಿರೀಕ್ಷಿಸಬಹುದು. ಮುಂಬರಲಿರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಐದು ಹೊಸ ಸ್ಕೂಟರ್‍ಗಳ ಮಾಹಿತಿಯನ್ನು ನಿಮಗಾಗಿ ನೀಡುತ್ತಿದ್ದೇವೆ.

1. ಬಜಾಜ್ ಅರ್ಬನೈಟ್ ಚೇತಕ್ ಎಲೆಕ್ಟ್ರಿಕ್
ಬಜಾಜ್ ಆಟೋ ಮುಂಬರುವ ದಿನಗಳಲ್ಲಿ ಬಿಡುಗಡೆಗೊಳಿಸಲಿರುವ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಇತ್ತೀಚಿಗಷ್ಟೆ ಸ್ಪಾಟ್ ಟೆಸ್ಟ್ ಮಾಡಲಾಗಿತ್ತು. ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಜಾಜ್ ಅರ್ಬನೈಟ್ ಎಲೆಕ್ಟ್ರಿಕ್ ಸ್ಕೂಟರ್ ಹೆಸರಿನಲ್ಲಿ ಬಿಡುಗಡೆಗೊಳಿಸಲಾಗುವುದು. ಈ ಬೈಕಿನ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲದೇ ಹೋದರೂ ಈ ಎಲೆಕ್ಟ್ರಿಕ್ ಸ್ಕೂಟರ್ ರೆಟ್ರೋ ಡಿಸೈನ್ ಥೀಂ ಹೊಂದಿರಲಿದೆ.

ಈ ಬೈಕಿನಲ್ಲಿಯೂ ಸಹ ಟ್ವಿನ್ ಟೇಲ್‍ಲ್ಯಾಂಪ್, ಗ್ರಾಬ್ ರೇಲ್ ಬಾರ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಮುಂಭಾಗದಲ್ಲಿ ಡಿಸ್ಕ್ ಬ್ರೇಕ್‍ಗಳಿರಲಿವೆ. ಈ ಬೈಕಿನಲ್ಲಿ ಬ್ಯಾಟರಿಯನ್ನು ಅಳವಡಿಸಲಾಗುವುದೇ ಅಥವಾ ಎಲೆಕ್ಟ್ರಿಕ್ ಮೋಟಾರ್ ಅಳವಡಿಸಲಾಗುವುದೇ ಎಂಬುದು ಖಚಿತವಾಗಿಲ್ಲ.

2. ಹೋಂಡಾ ಆಕ್ಟಿವಾ 6ಜಿ
ಹೋಂಡಾ ಭಾರತದಲ್ಲಿ ಹೊಸ ಆಕ್ಟಿವಾ 6ಜಿ ಸ್ಕೂಟರನ್ನು ಬಿಡುಗಡೆಗೊಳಿಸಲಿದೆ. ಈ ಸ್ಕೂಟರ್ ಅನ್ನು ಇತ್ತೀಚಿಗೆ ಹಲವು ಕಾಸ್ಮೆಟಿಕ್ ಹಾಗೂ ಮೆಕಾನಿಕಲ್ ಅಪ್‍ಡೇಟ್‍ಗಳೊಂದಿಗೆ ಸ್ಪಾಟ್ ಟೆಸ್ಟ್ ಮಾಡಲಾಗಿತ್ತು. ಈ ಹೊಸ ಸ್ಕೂಟರಿನ ಮುಂಭಾಗದಲ್ಲಿ ಹೊಸ ವಿನ್ಯಾಸದಲ್ಲಿರುವ ಎಲ್‍ಇಡಿ ಹೆಡ್‍ಲ್ಯಾಂಪ್, ರಿಸ್ಟೈಲ್ಡ್ ಫ್ರಂಟ್ ಏಪ್ರಾನ್, ಇಂಟಿಗ್ರೇಟೆಡ್ ಸೈಡ್ ಟರ್ನ್ ಇಂಡಿಕೇಟರ್ ಹಾಗೂ ಮರುವಿನ್ಯಾಸಗೊಳಿಸಿರುವ ಬಾಡಿ ಪ್ಯಾನೆಲ್‍ಗಳನ್ನು ಅಳವಡಿಸಲಾಗುವುದು.

ಇನ್ನೂ ಮೆಕಾನಿಕಲ್ ಅಂಶಗಳ ಬಗ್ಗೆ ಹೇಳುವುದಾದರೆ ಆಕ್ಟಿವಾ 6ಜಿಯಲ್ಲೂ ಹೊಸ ಟೆಲಿಸ್ಕೋಪಿಕ್ ಸಸ್ಪೆಂಷನ್ ಹಾಗೂ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಅಸೆಂಬ್ಲಿಗಳಿರಲಿವೆ. ಇದರ ಜೊತೆಗೆ ಸ್ಟಾಂಡರ್ಡ್ 130 ಎಂಎಂ ಡ್ರಮ್ ಬ್ರೇಕ್‍ಗಳಿರಲಿವೆ. ಚಾಲಕರ ಸುರಕ್ಷತೆಗಾಗಿ ಹೋಂಡಾ ಕಂಪನಿಯ ಕಂಬೈನ್ಡ್ ಬ್ರೇಕಿಂಗ್ ಸಿಸ್ಟಂ (ಸಿಬಿಎಸ್)ಗಳನ್ನು ಅಳವಡಿಸಲಾಗುವುದು. ಆಕ್ಟಿವಾ 6ಜಿ ಸ್ಕೂಟರಿನಲ್ಲಿ ಬಿಎಸ್6 ನಿಯಮಕ್ಕೆ ಹೊಂದಿಕೊಳ್ಳುವ 110ಸಿಸಿಯ ಏರ್ ಕೂಲ್ ಎಂಜಿನ್ ಇರಲಿದ್ದು, ಈಗಿರುವ ಮಾದರಿಯ ಸ್ಕೂಟರ್‍ಗಿಂತ ಹೆಚ್ಚಿನ ಪವರ್ ಹಾಗೂ ಟಾರ್ಕ್ ಉತ್ಪಾದಿಸಲಿದೆ. ಈಗಿರುವ ಸ್ಕೂಟರ್‍ನಲ್ಲಿರುವ ಎಂಜಿನ್ 7 ಬಿಹೆಚ್‍ಪಿ ಪವರ್ ಹಾಗೂ 9 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರಲ್ಲಿ ಸಿವಿಟಿ ಗೇರ್‍ಬಾಕ್ಸ್ ಅಳವಡಿಸಲಾಗಿದೆ.

3. ಟಿವಿಎಸ್ ಜೂಪಿಟರ್2020
ಟಿವಿಎಸ್ ಮೋಟಾರ್ಸ್ ಕೆಲವು ದಿನಗಳಿಂದ ಜೂಪಿಟರ್ ಸ್ಕೂಟರಿನ ಹೊಸ ಆವೃತ್ತಿಯ ಅಭಿವೃದ್ಧಿಯಲ್ಲಿ ತೊಡಗಿದೆ. ಹೊಸ ಸ್ಕೂಟರ್ ಬಹುತೇಕ ಭಾರತೀಯ ಸ್ಕೂಟರ್‍ಗಳ ಛಾಯೆಯನ್ನು ಹೊಂದಿರಲಿದ್ದು, ಮುಂಭಾಗದ ಏಪ್ರಾನ್ ಹಾಗೂ ಸೈಡ್ ಬಾಡಿ ಪ್ಯಾನೆಲ್‍ಗಳಲ್ಲಿ ಕೆಲವೊಂದು ಬದಲಾವಣೆಗಳಾಗಲಿವೆ. ಈ ಸ್ಕೂಟರಿನಲ್ಲಿ ಫುಲ್ ಎಲ್‍ಇಡಿ ಹೆಡ್‍ಲ್ಯಾಂಪ್ ಸೆಟ್‍ಅಪ್ ಹಾಗೂ ಸ್ಕೂಟರಿಗೆ ಪ್ರಿಮೀಯಂ ಲುಕ್ ನೀಡಲು ಕ್ರೋಮ್‍ಗಳನ್ನು ಸೇರಿಸಲಾಗಿದೆ.
MOST READ: ಟ್ಯೂಬ್‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍ಲೆಸ್ ಟಯರ್ ಸದ್ದು ಶುರು

ಈ ಸ್ಕೂಟರ್ ನಲ್ಲಿ ಈಗಿರುವ ಸ್ಕೂಟರಿನಲ್ಲಿರುವಂತಹ 109.7 ಸಿಸಿಯ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್‍ನ ಒಹೆಚ್‍ಸಿ ಎಂಜಿನ್ ಇರಲಿದೆ. ಈ ಎಂಜಿನ್ 8 ಬಿಹೆಚ್‍ಪಿ ಪವರ್ ಅನ್ನು 7,500 ಆರ್‍ಪಿಎಂನಲ್ಲಿ ಹಾಗೂ 8 ಎನ್‍ಎಂ ಟಾರ್ಕ್ ಅನ್ನು 5,500 ಆರ್‍ಪಿಎಂನಲ್ಲಿ ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿ ಸಿವಿಟಿ ಗೇರ್‍ಬಾಕ್ಸ್ ಅಳವಡಿಸಲಾಗಿದೆ. ಈ ಹೊಸ ಸ್ಕೂಟರ್, ಹಳೆ ಸ್ಕೂಟರ್‍ನ ಬ್ರೇಕಿಂಗ್ ಸೆಟ್ ಅಪ್ ಹೊಂದಿರಲಿದೆ.

4. ಸುಜುಕಿ 110ಸಿಸಿ ಸ್ಕೂಟರ್
ಸುಜುಕಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ 110ಸಿಸಿ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲಿದೆ. ಈ ಸ್ಕೂಟರ್ ಹೊಸದಾಗಿ ಬಿಡುಗಡೆಯಾಗಲಿರುವ ಹೋಂಡಾ ಆಕ್ಟಿವಾ 6ಜಿ ಹಾಗೂ ಟಿವಿಎಸ್ ಜೂಪಿಟರ್ ಬೈಕುಗಳಿಗೆ ಪೈಪೋಟಿ ನೀಡಲಿದೆ. ಈ ಸ್ಕೂಟರಿನಲ್ಲಿ ರೆಟ್ರೋ ಶೈಲಿಯ ವಿನ್ಯಾಸವಿರಲಿದ್ದು, ಇದರಲ್ಲಿರುವ ಬಹುತೇಕ ಬಿಡಿಭಾಗಗಳನ್ನು ಆಕ್ಸೆಸ್ 125 ಸ್ಕೂಟರ್‍ನಿಂದ ಪಡೆಯಲಾಗಿದೆ.
MOST READ: ಮ್ಯಾನುವಲ್ ಕಾರ್ ಡ್ರೈವಿಂಗ್ ಮಾಡದಿದ್ರೆ ಲೈಸೆನ್ಸ್ ಸಿಗೋದಿಲ್ಲ

ಸುಜುಕಿ ಕಂಪನಿಯು ಈ ಸ್ಕೂಟರ್‍ಗಾಗಿ ಹೊಸ 110 ಸಿಸಿಯ ಏರ್ ಕೂಲ್ಡ್ ಎಂಜಿನ್ ಅಭಿವೃದ್ಧಿಪಡಿಸಲಿದೆ. ಈ ಸ್ಕೂಟರಿನಲ್ಲಿ ಹೊಸ ಬಗೆಯ ಎಲ್‍ಇಡಿ ಹೆಡ್‍ಲ್ಯಾಂಪ್ ಹಾಗೂ ಟೇಲ್‍ಲ್ಯಾಂಪ್, ಸೆಮಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಅಂಡರ್ ಸೀಟ್ ಸ್ಟೋರೇಜ್‍ಗಳನ್ನು ಅಳವಡಿಸಲಾಗುವುದು. ಈ ಸ್ಕೂಟರ್‍ನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆಂಷನ್ ಸೆಟ್‍ಅಪ್ ಹಾಗೂ ಸ್ಕೂಟರನ್ನು ನಿಯಂತ್ರಿಸಲು 130 ಎಂಎಂ ಡ್ರಮ್ ಬ್ರೇಕ್‍ಗಳನ್ನು ಮುಂಭಾಗ ಹಾಗೂ ಹಿಂಭಾಗದಲ್ಲಿ ಅಳವಡಿಸಲಾಗುವುದು.

5. ಟಿವಿಎಸ್ ಕ್ರಿಯಾನ್
ಟಿವಿಎಸ್ ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಸದ್ಯಕ್ಕೆ ಬಿಡುಗಡೆ ಮಾಡದೇ ಇದ್ದರೂ, ಈ ವರ್ಷದ ಕೊನೆಗೆ ಬಿಡುಗಡೆಗೊಳಿಸಲಿದೆ. ಕ್ರಿಯಾನ್ ಕಾನ್ಸೆಪ್ಟ್ ಅನ್ನು 2018ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದಾಗ ಎಲ್ಲರ ಗಮನವನ್ನು ಸೆಳೆದಿತ್ತು. ವರದಿಗಳ ಪ್ರಕಾರ, ಈ ಎಲೆಕ್ಟ್ರಿಕ್ ಸ್ಕೂಟರ್‍ನಲ್ಲಿ ಪವರ್‍ಫುಲ್ ಆಗಿರುವ ಎಲೆಕ್ಟ್ರಿಕ್ ಮೋಟಾರ್ ಅನ್ನು ಅಳವಡಿಸಲಾಗುವುದು.
MOST READ: ಬೆಂಗಳೂರಿನ ಉದ್ಯಮಿ ಮದುವೆಮನೆಯಲ್ಲಿ ಐಷಾರಾಮಿ ಕಾರುಗಳ ಕಲರವ..!

ಈ ಸ್ಕೂಟರ್ 0-80 ಕಿ.ಮೀ ವೇಗವನ್ನು ಕೇವಲ 5.1 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ. ಒಂದು ಬಾರಿ ಚಾರ್ಜ್ ಮಾಡಿದರೆ 80 ಕಿ.ಮೀ ಚಲಿಸಲಿದೆ. ಇದರ ಜೊತೆಗೆ ಈ ಸ್ಕೂಟರಿನಲ್ಲಿ ಹೊಸ ಟೆಕ್ನಾಲಜಿಗಳಿರಲಿದ್ದು, ಮೂರು ವಿಧದ ರೈಡಿಂಗ್ ಮೋಡ್‍ಗಳು, ರಿಜನರೇಟಿವ್ ಬ್ರೇಕಿಂಗ್, ಯಾಂಟಿ - ಥೆಫ್ಟ್ ಜಿಪಿಎಸ್ ನ್ಯಾವಿಗೇಶನ್ ಹಾಗೂ ಪಾರ್ಕ್ ಅಸಿಸ್ಟ್ ಗಳಿರಲಿವೆ.
Source: Gaadiwaadi


Click it and Unblock the Notifications








