ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಟಿವಿಎಸ್ ಅಪಾಚೆ ಆರ್‍ಆರ್ 310

ಟಿ‍‍ವಿಎಸ್ ಮೋಟಾರ್ ಕಂಪನಿ ತನ್ನ ಜನಪ್ರಿಯ ಅಪಾಚೆ ಆರ್‍ಆರ್ 310 ಬೈಕ್ ಅನ್ನು ಬಿಎಸ್-6 ಆಗಿ ನವೀಕರಿಸಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೊಸ ಟಿವಿಎಸ್ ಅಪಾಚೆ ಆರ್‍ಆರ್ 310 ಬಿಎಸ್-6 ಅನ್ನು ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಲಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಟಿವಿಎಸ್ ಅಪಾಚೆ ಆರ್‍ಆರ್ 310

ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಅಪಾಚೆ ಆರ್‍ಆರ್ 310 ಬಿಎಸ್-6 ಮಾದರಿಯ ಬೆಲೆಯು ಬಹಿರಂಗವಾಗಿದೆ. ಬಹಿರಂಗವಾದ ಮಾಹಿತಿಯ ಪ್ರಕಾರ ಬಿಡುಗಡೆಯಾಗಲಿರುವ ಟಿವಿಎಸ್ ಅಪಾಚೆ ಆರ್‍ಆರ್ 310 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.2.89 ಲಕ್ಷಗಳಾಗಿದೆ. ಇದು ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮಾದರಿಗಿಂತ ಶೇ.17ರಷ್ಟು ಹೆಚ್ಚಳವಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಟಿವಿಎಸ್ ಅಪಾಚೆ ಆರ್‍ಆರ್ 310

ಹೊಸ ಬಿಎಸ್-6 ಅಪಾಚೆ ಆರ್‍ಆರ್ 310 ಬೈಕ್ ಸ್ಪಾಟ್ ಟೆಸ್ಟ್ ನಡೆಸುತ್ತಿರುವುದನ್ನು ಮ್ಯಾಡ್ ಗ್ರಾರೇಜ್ ಯುಟ್ಯೂಬ್ ಚಾನೆಲ್ ವೀಡಿಯೋ ಮೂಲಕ ಬಹಿರಂಗಪಡಿಸಿದೆ. ಬಹಿರಂಗಪಡಿಸಿದ ವೀಡಿಯೋದಲ್ಲಿ ಹೊಸ ಸಂಪೂರ್ಣ ಡಿಜಿ‍ಟಲ್ ಇನ್ಸ್ ಟ್ರೂಮೆಂತ್ ಕ್ಲಸ್ಟರ್ ಮತ್ತು ಹೊಸ ಬಣ್ಣದ ಆಯ್ಕೆಗಳನ್ನು ನೀಡಲಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಟಿವಿಎಸ್ ಅಪಾಚೆ ಆರ್‍ಆರ್ 310

ವೀಡಿಯೋದಲ್ಲಿ ಕಾಣುವ ಕ್ಲಸ್ಟರ್ ನವೀಕರಿಸಿ ಹೊಸ ಪೂರ್ಣ ಪ್ರಮಾಣದ ಡಿಸ್‍‍ಪ್ಲೇಯನ್ನು ಅಳವಡಿಸಲಾಗಿದೆ. ನವೀಕರಿಸಿದ ಕ್ಲಸ್ಟರ್‍‍ನಲ್ಲಿ ಹೊಸ ಬಟನ್ ಮತ್ತು ಪೂರ್ಣ ಪ್ರಮಾಣದ ಸ್ಕ್ರೀನ್ ಹೊಂದಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಅಪಾಚೆ ಆರ್‍ಆರ್ 310 ಬೈಕಿನಲ್ಲಿ ಹೆಚ್ಚಿನ ಮಾಹಿತಿಯನ್ನು ಹೊಂದಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಟಿವಿಎಸ್ ಅಪಾಚೆ ಆರ್‍ಆರ್ 310

ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊರತಪಡಿಸಿ ಹೊಸ ಟಿ‍‍‍ವಿಎಸ್ ಅಪಾಚೆ ಆರ್‍ಆರ್ 310 ಅನ್ನು ಹೊಸ ಡ್ಯುಯಲ್ ಟೋನ್ ಗ್ರೇ ಮತ್ತು ಬ್ಲ್ಯಾಕ್ ಬಣ್ಣವನ್ನು ಹೊಂದಿದೆ. ಇದರಲ್ಲಿ ಕೆಂಪು ಬಣ್ಣದ ಅಂಶಗಳಿವೆ. ಒಟ್ಟಾರೆ ವಿನ್ಯಾಸವು ಪ್ರಸ್ತುತ ಯಾವುದೇ ಇತರ ಬದಲಾವಣೆಗಳನ್ನು ಮಾಡಲಾಗಿಲ್ಲ. ಈ ಬೈಕ್‍‍ನಲ್ಲಿ ಇನ್ನಷ್ಟು ಆಯ್ಕೆಗಳನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಟಿವಿಎಸ್ ಅಪಾಚೆ ಆರ್‍ಆರ್ 310

ಸ್ಪಾಟ್ ಟೆಸ್ಟ್ ಬಹಿರಂಗವಾಗಿರುವ ವೀಡಿಯೋದಲ್ಲಿ ಹೊಸ ಟಿ‍‍ವಿಎಸ್ ಅಪಾಚೆ ಆರ್‍ಆರ್ 310 ಬೈಕ್ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡಲಾಗಿಲ್ಲ . ಈ ಬೈಕ್ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ನಿರೀಕ್ಷೆ ಇದೆ.

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಟಿವಿಎಸ್ ಅಪಾಚೆ ಆರ್‍ಆರ್ 310

2020ರ ಟಿವಿಎಸ್ ಅಪಾಚೆ ಆ‍‍ರ್‍ಆರ್ 310 ಬೈಕ್ ಅದೇ 312 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಆಗಿರಲಿದೆ. ಆದರೆ ಈ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಸಾರವಾಗಿ ನವೀಕರಿಸಲಾಗಿದೆ. ಆದರೆ ಈ ಎಂಜಿನ್‍‍ನ ಪವರ್ ಬಗ್ಗೆ ಯಾವುದೇ ನಿಖರವಾದ ಮಾಹಿತಿ ಲಭ್ಯವಾಗಿಲ್ಲ.

MOST READ: ಕಾರು ಖರೀದಿದಾರರ ನೆಚ್ಚಿನ ಬಣ್ಣ ಯಾವುದು ಗೊತ್ತಾ?

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಟಿವಿಎಸ್ ಅಪಾಚೆ ಆರ್‍ಆರ್ 310

ಹೊಸ ಬೈಕಿನಲ್ಲಿ ಎಲ್‍ಇ‍ಡಿ ಹೆಡ್‍‍ಲ್ಯಾಂಪ್, ಎಲ್‍ಇಡಿ ಟೇಲ್‍‍ಲೈಟ್‍, ಡ್ಯುಯಲ್ ಚಾನೆಲ್ ಎಬಿ‍ಎಸ್ ಮತ್ತು ಸ್ಲಿಪ್ಪರ್ ಕ್ಲಚ್‍ ಅನ್ನು ಅಳವಡಿಸಲಾಗಿದೆ. ಉಳಿದಂತೆ ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬೈಕಿನ ಎಲ್ಲಾ ಫೀಚರ್ಸ್‍‍ಗಳು ಹೊಂದಿರಲಿದೆ.

MOST READ: ಪ್ರತಿ ಲೀಟರ್ ನೀರಿಗೆ 35 ಕಿ.ಮಿ ಮೈಲೇಜ್ ನೀಡುವ ಕಾರ್ ಎಂಜಿನ್ ಸಿದ್ದಪಡಿಸಿದ 21 ವರ್ಷದ ಯುವಕ

ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಬಿಎಸ್-6 ಟಿವಿಎಸ್ ಅಪಾಚೆ ಆರ್‍ಆರ್ 310

ಟಿ‍ವಿಎಸ್ ಕಂಪನಿಯ ಜನಪ್ರಿಯ ಅಪಾಚೆ ಆರ್‍ಆರ್ 310 ಬೈಕ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು. ಬಿಎಸ್-6 ಟಿ‍‍ವಿಎಸ್ ಅಪಾಚೆ ಆರ್‍ಆರ್ 310 ಬೈಕ್ ಭಾರತದಲ್ಲಿ ಬಿಡುಗಡೆಯಾದ ಬಳಿಕ ಕೆ‍‍ಟಿಎಂ ಆರ್‍‍ಸಿ 390, ಬಿಎಂ‍ಡಬ್ಲ್ಯು ಜಿ310 ಆರ್ ಮತ್ತು ಡೊಮಿನಾರ್ 400 ಬೈಕ್‍‍ಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
2020 TVS Apache RR310 BS6 Spied With Significant Updates: Spy Pics & Other Details - Read in Kannada
Story first published: Wednesday, December 18, 2019, 19:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X