Just In
Don't Miss!
- Finance
ಜಿಯೋ ಮತ್ತೊಮ್ಮೆ ಪ್ರಿಪೇಯ್ಡ್ ಪ್ಲಾನ್ ಬಿಡುಗಡೆ: 98, 149 ರುಪಾಯಿ ರೀಚಾರ್ಜ್
- Education
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ನೇಮಕಾತಿ 2019: 75 ಯುವ ವೃತ್ತಿಪರರಿಗೆ ಹುದ್ದೆಗಳಿವೆ
- Movies
ಹೀರೋ ಆದ ಬಿಗ್ ಬಾಸ್-6 ವಿನ್ನರ್ 'ಮಾಡರ್ನ್ ರೈತ' ಶಶಿ ಕುಮಾರ್
- News
ಸಾಧು ಕೋಕಿಲ ವಿರುದ್ಧದ ಲೈಂಗಿಕ ಕಿರುಕುಳ ಕೇಸಿಗೆ ತಡೆ
- Lifestyle
ಪಾಪ! ಈ ಬೆಕ್ಕಿಗೆ ತನಗೆ ಕಿವಿಯಿದೆ ಎಂದು ಕನ್ನಡಿ ನೋಡಿದ ಮೇಲೆ ಗೊತ್ತಾಯಿತು
- Technology
ಅನಿಯಮಿತ ಕರೆ ಮತ್ತು ಅಧಿಕ ಡಾಟಾಗೆ ಇದುವೇ ಬೆಸ್ಟ್ ಪ್ಲ್ಯಾನ್!
- Sports
ಸಾಮೂಹಿಕ ಉದ್ಧೀಪನ ಸೇವನೆ ಸಾಬೀತು; ನಾಲ್ಕು ವರ್ಷ ರಷ್ಯಾ ಜಾಗತಿಕ ಕ್ರೀಡಾಕೂಟದಿಂದ ನಿಷೇಧ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಕಾರು ಖರೀದಿದಾರರ ನೆಚ್ಚಿನ ಬಣ್ಣ ಯಾವುದು ಗೊತ್ತಾ?
ಸತತ ಒಂಬತ್ತನೇ ವರ್ಷವೂ ಕಾರಿನ ಬಣ್ಣವನ್ನು ಆಯ್ಕೆ ಮಾಡಲು ಗ್ರಾಹಕರ ಆದ್ಯತೆಯಲ್ಲಿ ಬಿಳಿ ಬಣ್ಣವು ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. ಗ್ಲೋಬಲ್ ಆಟೋಮೋಟಿವ್ ಕೋಟಿಂಗ್‍ನ ಪ್ರಮುಖ ಕಂಪನಿಯಾದ ಆಕ್ಸಲ್ಟಾ ತನ್ನ ವರದಿಯನ್ನು ಬಿಡುಗಡೆಗೊಳಿಸಿದೆ.

ಗ್ಲೋಬಲ್ ಆಟೋಮೋಟಿವ್ ಕಲರ್ ಪಾಪ್ಯುಲಾರಿಟಿ ವರದಿಯ ಪ್ರಕಾರ 2019ರಲ್ಲಿ ಬಿಳಿ (38%), ಕಪ್ಪು (19%) ಹಾಗೂ ಗ್ರೇ (13%) ಬಣ್ಣಗಳು ಮೊದಲ ಮೂರು ಸ್ಥಾನವನ್ನು ಪಡೆದಿವೆ. 2011ರಿಂದ ಬಿಳಿ ಬಣ್ಣವು ವಿಶ್ವದಾದ್ಯಂತವಿರುವ ಕಾರುಗಳ ಪೈಕಿ ಮೊದಲ ಸ್ಥಾನದಲ್ಲಿದೆ.

ಈ ವರ್ಷ, ಸಿಲ್ವರ್ ಬಣ್ಣವು ಟಾಪ್ 3 ಸ್ಥಾನದಿಂದ ಹೊರಬಿದ್ದಿದ್ದು, ಅಗ್ರ ಮೂರು ಬಣ್ಣಗಳಿಂದ ಹೊರಗುಳಿದಿದೆ. ಸಿಲ್ವರ್ ಒಂದು ದಶಕಕ್ಕೂ ಹೆಚ್ಚು ಕಾಲ ಟಾಪ್ 3 ಸ್ಥಾನದಲ್ಲಿತ್ತು. ಇದೇ ಮೊದಲ ಬಾರಿಗೆ 10%ನಷ್ಟು ಕಡಿಮೆ ಜನಪ್ರಿಯತೆಯನ್ನು ಹೊಂದಿದೆ.

ಈ ಸಮೀಕ್ಷೆಯ ಪ್ರಕಾರ ಗ್ರೇ ಬಣ್ಣವು ವಿಶ್ವದ ಎಲ್ಲ ಭಾಗಗಳಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಬಿಳಿ, ಕಪ್ಪು, ಗ್ರೇ ಹಾಗೂ ಸಿಲ್ವರ್ ಬಣ್ಣಗಳು ಟಾಪ್ 4 ಸ್ಥಾನಗಳಲ್ಲಿವೆ. ಇದರಿಂದಾಗಿ ಜಾಗತಿಕವಾಗಿ 80% ಮಾರುಕಟ್ಟೆ ಪಾಲನ್ನು ಹೊಂದಿವೆ.

ಬಣ್ಣಗಳ ಆದ್ಯತೆಯು ಕಳೆದ ವರ್ಷ ಸ್ವಲ್ಪ ಬದಲಾಗಿದೆ. ಯುರೋಪ್‍ನಲ್ಲಿ ಬಿಳಿ ಬಣ್ಣವು 1% ನಷ್ಟು ಕಡಿಮೆಯಾಗಿದ್ದು, ಗ್ರೇ ಬಣ್ಣವು 2%ನಷ್ಟು ಹೆಚ್ಚಾಗಿದೆ. ಇದರಿಂದಾಗಿ ಗ್ರೇ ಬಣ್ಣವು ಮೊದಲ ಬಾರಿಗೆ ಯುರೋಪಿನಲ್ಲಿ ಅಗ್ರಸ್ಥಾನವನ್ನು ಪಡೆದಿದೆ.

ಕಳೆದ ವರ್ಷ ಯುರೋಪ್‍ನ ಎಸ್‍ಯುವಿ ವಲಯದಲ್ಲಿ ಗ್ರೇ ಬಣ್ಣಕ್ಕೆ ಬೇಡಿಕೆ ಹೆಚ್ಚಿದ ನಂತರ, ಈ ವರ್ಷ ಕಾಂಪ್ಯಾಕ್ಟ್ / ಸ್ಪೋರ್ಟ್ ಸೆಗ್‍ಮೆಂಟಿನಲ್ಲಿ 5%ನಷ್ಟು ಬೆಳವಣಿಗೆಯಾಗಿದೆ. ಯುರೋಪಿನಲ್ಲಿ ಇದೇ ಮೊದಲ ಬಾರಿಗೆ, ಗ್ರೇ ಬಣ್ಣವು ದೀರ್ಘಕಾಲದಿಂದ ನೆಚ್ಚಿನ ಬಣ್ಣವಾಗಿರುವ ಬಿಳಿ ಬಣ್ಣವನ್ನು ಹಿಂದಿಕ್ಕಿದೆ.

ಯುರೋಪಿಯನ್ನರು ಗ್ರೇ ಬಣ್ಣವನ್ನು ತಮ್ಮ ಭಾವನೆಯನ್ನು ವ್ಯಕ್ತಪಡಿಸಲು ಬಳಸುತ್ತಾರೆ ಎಂದು ಯುರೋಪ್, ಮಧ್ಯಪ್ರಾಚ್ಯ ಹಾಗೂ ಆಫ್ರಿಕಾದ ಕಲರ್ ಡಿಸೈನರ್ ಆದ ಎಲ್ಕೆ ಡಿರ್ಕ್ಸ್ ಹೇಳಿದ್ದಾರೆ. ಬೇರೆ ಕಡೆಗಳಲ್ಲಿ ಬಿಳಿ ಬಣ್ಣವು ಅಗ್ರಸ್ಥಾನದಲ್ಲಿದೆ.
MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಏಷ್ಯಾದಲ್ಲಿ ಬಿಳಿ ಬಣ್ಣದ ಜನಪ್ರಿಯತೆಯು 1%ನಷ್ಟು ಹೆಚ್ಚಾಗಿದ್ದು, ಒಟ್ಟಾರೆಯಾಗಿ 49%ನಷ್ಟು ಜನಪ್ರಿಯತೆಯನ್ನು ಹೊಂದಿದೆ. ಚೀನಾದವರ ಆದ್ಯತೆಗಳು ಆಧುನಿಕ ಹಾಗೂ ಸ್ವಚ್ಛವಾಗಿರುವ ಕಾರಣಕ್ಕೆ ಬಿಳಿ ಬಣ್ಣವನ್ನು ಹೆಚ್ಚು ಬಯಸುತ್ತಾರೆ ಎಂದು ಚೀನಾದ ಕಲರ್ ಡಿಸೈನರ್ ಅನ್ನಿ ಯು ಹೇಳುತ್ತಾರೆ.
MOST READ: ಡಿಸೆಂಬರ್ 1ರಿಂದ ಜಾರಿಗೆ ಬರಲಿರುವ ಫಾಸ್ಟ್ಟ್ಯಾಗ್ ಬಗ್ಗೆ ನಿಮಗೆಷ್ಟು ಗೊತ್ತು?

ಭಾರತದಲ್ಲಿರುವ 33% ಜನರು ಬಿಳಿ ಬಣ್ಣವನ್ನು ಬಯಸುತ್ತಾರೆ. ಇದರಲ್ಲಿ 26% ಸಾಲಿಡ್ ವೈಟ್ ಆದರೆ 7% ಪರ್ಲ್ ವೈಟ್ ಆಗಿದೆ. ಸಿಲ್ವರ್ ಬಣ್ಣವನ್ನು 31% ಜನರು ಬಯಸುತ್ತಾರೆ. ಗ್ರೇ ಬಣ್ಣವನ್ನು 12%ನಷ್ಟು ಜನರು ಇಷ್ಟ ಪಡುತ್ತಾರೆ.
MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಉತ್ತರ ಅಮೇರಿಕಾ ಹಾಗೂ ದಕ್ಷಿಣ ಅಮೆರಿಕಾದಲ್ಲಿ ಬಿಳಿಯ ಬಣ್ಣವು ಅಗ್ರ ಸ್ಥಾನದಲ್ಲಿಯೇ ಮುಂದುವರೆದಿದೆ. ಇದರ ಜೊತೆಗೆ ಗ್ರೇ ಬಣ್ಣದ ವಾಹನಗಳನ್ನು ಹೊಂದುವವರ ಸಂಖ್ಯೆಯೂ ಸಹ ಹೆಚ್ಚಿನ ಪ್ರಮಾಣದಲ್ಲಿದೆ.

ಅಗ್ರ ನಾಲ್ಕು ಬಣ್ಣಗಳಾದ ಬಿಳಿ, ಕಪ್ಪು, ಗ್ರೇ ಹಾಗೂ ಸಿಲ್ವರ್ ಪ್ರಪಂಚಾದ್ಯಂತ ಇನ್ನು ಹೆಚ್ಚಿನ ಜನಪ್ರಿಯತೆಯನ್ನು ಹೊಂದಿವೆ ಎಂದು ಲಾಕ್ಹಾರ್ಟ್‍ರವರು ಹೇಳಿದರು. ಇತರ ಬಣ್ಣಗಳು ಸಹ ಹೆಚ್ಚಿನ ಜನಪ್ರಿಯತೆಯನ್ನು ಹೊಂದುತ್ತಿವೆ. ಕಳೆದ ವರ್ಷದವರೆಗೂ ಈ ಬಣ್ಣಗಳ ಬಗ್ಗೆ ಯಾರೂ ಯೋಚಿಸಿರಲಿಲ್ಲ.

ಇದರಿಂದಾಗಿ ಗ್ರಾಹಕರು ತಮ್ಮ ವಾಹನದ ಬಣ್ಣವನ್ನು ಬದಲಾಯಿಸಲು ಆರಂಭಿಸಿರುವುದು ಕಂಡು ಬರುತ್ತದೆ. ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು ನಮ್ಮ ವಾಹನಗಳ ಗ್ರಾಹಕರೊಂದಿಗೆ ಪಾಲುದಾರರಾಗಲು ಆಕ್ಸಲ್ಟಾ ಸಿದ್ಧವಾಗಿದೆ ಎಂದು ಹೇಳಿದರು.

ಉತ್ತರ ಅಮೆರಿಕಾದಲ್ಲಿ ಕೆಂಪು ಬಣ್ಣವು 9%ನಷ್ಟು ಜನಪ್ರಿಯವಾಗಿದ್ದರೆ, ಬ್ರೌನ್ / ಬೀಜ್ ಬಣ್ಣಗಳು ರಷ್ಯಾದಲ್ಲಿ 12%ನಷ್ಟು ಜನಪ್ರಿಯತೆಯನ್ನು ಹೊಂದಿವೆ. ಗ್ರಾಹಕರ ಆಯ್ಕೆ ಹಾಗೂ ಪ್ರಾಡಕ್ಟ್ ಬ್ರ್ಯಾಂಡಿಂಗ್‌ನಲ್ಲಿ ಬಣ್ಣವು ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಇಂದಿನ ರಸ್ತೆಗಳಲ್ಲಿ ನೀಲಿ, ಕೆಂಪು ಮತ್ತು ಬ್ರೌನ್ / ಬೀಜ್ ಬಣ್ಣಗಳಲ್ಲಿರುವ ವಾಹನಗಳು ಎದ್ದು ಕಾಣುತ್ತವೆ ಎಂದು ಲಾಕ್ಹಾರ್ಟ್ ಹೇಳಿದರು. ಉತ್ತರ ಅಮೆರಿಕಾ ಹಾಗೂ ಯುರೋಪ್‍ನಲ್ಲಿ 10% ವಾಹನಗಳನ್ನು ಹೊಂದಿರುವ ನೀಲಿ ಬಣ್ಣವು ಹೆಚ್ಚು ಜನಪ್ರಿಯವಾಗಿದೆ.

ವಿವಿಧ ಭಾಗಗಳಲ್ಲಿ ಜನಪ್ರಿಯವಾಗಿರುವ ಬಣ್ಣಗಳು
ಆಫ್ರಿಕಾ - ಸಿಲ್ವರ್ ಹಾಗೂ ಬಿಳಿ ಬಣ್ಣಗಳು ಜೊತೆಯಾಗಿ 58%ನಷ್ಟು ಜನಪ್ರಿಯತೆಯನ್ನು ಹೊಂದಿವೆ.
ಏಷ್ಯಾ - ಪರ್ಲ್ ವೈಟ್ ಬಣ್ಣಗಳು ಈ ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿವೆ.
ಯುರೋಪ್ - ಗ್ರೇ ಅತ್ಯಂತ ಜನಪ್ರಿಯ ಬಣ್ಣವಾಗಿದ್ದು, ಹೆಚ್ಚಿನ ಅವಧಿಯಿಂದ ಜನಪ್ರಿಯವಾಗಿದ್ದ ಬಿಳಿ ಬಣ್ಣವನ್ನು ಹಿಂದಿಕ್ಕಿದೆ.
ಉತ್ತರ ಅಮೆರಿಕಾ - ನೀಲಿ ಬಣ್ಣವು 2%ನಷ್ಟು ಹೆಚ್ಚಾಗಿದ್ದು, ಒಟ್ಟು ವಾಹನಗಳ ಪೈಕಿ 10% ವಾಹನಗಳು ನೀಲಿ ಬಣ್ಣವನ್ನು ಹೊಂದಿವೆ.
ರಷ್ಯಾ - 12%ನಷ್ಟು ವಾಹನಗಳು ಬೀಜ್ / ಬ್ರೌನ್ ಬಣ್ಣಗಳನ್ನು ಹೊಂದಿವೆ.
ದಕ್ಷಿಣ ಅಮೆರಿಕಾ - ಸಿಲ್ವರ್ ಬಣ್ಣವು ಹೆಚ್ಚಾಗುತ್ತಿರುವ ಏಕೈಕ ಪ್ರದೇಶವಿದು.