ಕುಸಿತ ಕಂಡ ಟಿವಿಎಸ್ ಅಪಾಚೆ ಆರ್‍ಆರ್ 310 ಮಾರಾಟ
ಟಿವಿಎಸ್ ಕಂಪನಿಯು ತನ್ನ ಅಪಾಚೆ ಆರ್‍ಆರ್ 310 ಬೈಕಿನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿ, ನವೀಕರಿಸಿದ ಬೈಕ್ ಅನ್ನು ಕಳೆದ ತಿಂಗಳು ಬಿಡುಗಡೆಗೊಳಿಸಿತ್ತು. ಈ ಬೈಕಿನ ಮಾರಾಟವು ಮೇ ತಿಂಗಳಲ್ಲಿ ಕೇವಲ 175 ಯುನಿಟ್‌ಗಳಿಗೆ ಕುಸಿದಿರುವುದರಿಂದ ಖರೀದಿದಾರರು ಈ ಬೈಕ್ ಅನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.

ನವೀಕರಿಸಿದ ಟಿವಿಎಸ್ ಅಪಾಚೆ ಆರ್‍ಆರ್ 310 ಬೈಕ್ಅನ್ನು ಮೇ 27ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಈ ಬೈಕಿನಲ್ಲಿ ಸವಾರರ ಚಾಲನಾ ಅನುಭವವನ್ನು ಹೆಚ್ಚಿಸುವ ಸಲುವಾಗಿ ಅನೇಕ ವಿಶುಯಲ್ ಹಾಗೂ ಮೆಕಾನಿಕಲ್ ಅಂಶಗಳನ್ನು ನವೀಕರಿಸಲಾಗಿದೆ. ಈ ಬೈಕಿನಲ್ಲಿ ಉಂಟಾಗುತ್ತಿದ್ದ ವೈಬ್ರೇಷನ್ ಹಾಗೂ ಶಬ್ದಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಹೊಸ ರಬ್ಬರ್ ಪ್ಯಾಡ್ ಹಾಗೂ ಮರುವಿನ್ಯಾಸದ ಚೈನ್ ರೋಲರ್ ಬಳಸಿ ಸಮಸ್ಯೆಯನ್ನು ನಿವಾರಿಸಿದೆ.

ಕಂಪನಿಯು ಇಸಿಯು ಅನ್ನು ರೀಮ್ಯಾಪ್ ಮಾಡಿದ್ದರೂ, ಔಟ್‍ಪುಟ್ ಅಂಶಗಳನ್ನು ಬದಲಿಸದೇ ಹಾಗೆಯೇ ಉಳಿಸಿದೆ. 312.2 ಸಿಸಿಯ ರಿವರ್ಸ್ ಇನ್‍ಕ್ಲೈನ್‍ನ, ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ 9,700 ಆರ್‌ಪಿಎಂನಲ್ಲಿ 33 ಬಿಹೆಚ್‍ಪಿ ಹಾಗೂ 7,700 ಆರ್‌ಪಿಎಂನಲ್ಲಿ 27.3 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎಂಜಿನ್‍ನಲ್ಲಿ 6 ಸ್ಪೀಡಿನ ಗೇರ್‌ಬಾಕ್ಸ್ ಅಳವಡಿಸಲಾಗಿದೆ. ಎಂವೈ2019 ಅಪ್‌ಡೇಟ್‍ನಿಂದಾಗಿ ಅಸಿಸ್ಟ್ / ಸ್ಲಿಪ್ಪರ್ ಕ್ಲಚ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದೆ. ನವೀಕರಣಕ್ಕೆ ಮುಂಚೆ ಬೈಕುಗಳನ್ನು ಖರೀದಿಸಿದ್ದವರು ಟಿವಿಎಸ್ ಸರ್ವಿಸ್ ಸೆಂಟರ್‍ಗಳಲ್ಲಿ ಅಸಿಸ್ಟ್ / ಸ್ಲಿಪ್ಪರ್ ಕ್ಲಚ್ ಫೀಚರ್‍ಗಳನ್ನು ಸುಮಾರು ರೂ.4,000ಗಳಿಗೆ ಅಳವಡಿಸಿಕೊಳ್ಳಬಹುದು.

ಅಸಿಸ್ಟ್ / ಸ್ಲಿಪ್ಪರ್ ಕ್ಲಚ್ ಫೀಚರ್, ಕ್ಲಚ್ ಲಿವರ್ ಆಪರೇಟಿಂಗ್ ಫೋರ್ಸ್ ಅನ್ನು 20%ನಷ್ಟು ಕಡಿಮೆ ಮಾಡುತ್ತದೆ ಎಂದು ಟಿವಿಎಸ್ ಹೇಳಿಕೊಂಡಿದೆ. ಹಳೆಯ ಬೈಕುಗಳನ್ನು ಹೊಂದಿರುವವರಿಗೆ ಹೊಸ ಬಾರ್ ಎಂಡ್ ವೇಟ್, ವೈಸರ್‌ಗಾಗಿ ರಬ್ಬರ್ ಪ್ಯಾಡಿಂಗ್ ಹಾಗೂ ನವೀಕರಿಸಿದ ಚೈನ್ ರೋಲರ್ ಅನ್ನು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ನೀಡಲಾಗಿದೆ. 2019ರ ಅಪಾಚೆ ಆರ್‍ಆರ್ 310 ಬೈಕ್, ರೇಸಿಂಗ್ ಬ್ಲ್ಯಾಕ್ ಬಣ್ಣದ (ಮ್ಯಾಟ್ ಫಿನಿಶ್) ಬದಲಿಗೆ ಹೊಸ ಫ್ಯಾಂಟಮ್ ಬ್ಲ್ಯಾಕ್ (ಗ್ಲೋಸ್ ಫಿನಿಶ್) ಬಣ್ಣವನ್ನು ಪಡೆದಿದೆ.
MOST READ: ಹೆಚ್ಚು ಮಾರಾಟವಾಗುವ ಸ್ಕೂಟರ್‍ಗಳಲ್ಲಿ ಹೋಂಡಾ ಆಕ್ಟಿವಾ ಈಗಲೂ ನಂ.1

ರೇಸಿಂಗ್ ರೆಡ್ ಬಣ್ಣವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. 35 ವರ್ಷಗಳ ಟಿವಿಎಸ್ ರೇಸಿಂಗ್ ಎಂಬ ಅಕ್ಷರಗಳ ಬದಲಿಗೆ ಆರ್‍ಆರ್310 ಎಂದು ಹಿಂಬದಿಯ ಪ್ಯಾನೆಲ್ ಮೇಲೆ ಅಳವಡಿಸಲಾಗಿದೆ. ಹಾರ್ಡ್‍ವೇರ್ ಅಂಶಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.
MOST READ: ಮೇ 2019ರಲ್ಲಿ ಹೆಚ್ಚು ಮಾರಾಟವಾದ ಬೈಕುಗಳಿವು

2019 ಟಿವಿಎಸ್ ಅಪಾಚೆ ಆರ್‍ಆರ್310 ಬೈಕಿನ ಮುಂಭಾಗದಲ್ಲಿ ತಲೆಕೆಳಗಾದ ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆಂಷನ್‍ಗಳಿವೆ. ಪೆಟಲ್ ಟೈಪಿನ ಡಿಸ್ಕ್, ಆಂಕರಿಂಗ್ ಕಾರ್ಯಗಳನ್ನು ಮಾಡುತ್ತದೆ. ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ ನೀಡಲಾಗಿದೆ.
MOST READ: ಬ್ಲೂಟೂತ್ ಹೊಂದಲಿವೆ ಎಪ್ರಿಲಿಯಾ ಸ್ಕೂಟರ್‍ಗಳು

ಈ ಬೈಕಿನಲ್ಲಿ ವಿಶುಯಲ್ ಹಾಗೂ ಮೆಕಾನಿಕಲ್ ಅಂಶಗಳ ಬದಲಾವಣೆ ಮಾಡುವುದರ ಜೊತೆಗೆ, ಟಿವಿಎಸ್ ಕಂಪನಿಯು, ತನ್ನ ಪ್ರಮುಖ ಉತ್ಪನ್ನದ ಮಾರಾಟವನ್ನು ಹೆಚ್ಚಿಸಲು ಜೀರೊ ಡೌನ್ ಪೇಮೆಂಟ್ ಹಾಗೂ ಕಡಿಮೆ ಇಎಂಐ ಆಯ್ಕೆಗಳನ್ನು ಘೋಷಿಸಿದೆ.


Click it and Unblock the Notifications








