ಫೇಸ್‍‍ಲಿಫ್ಟ್ ಅಪಾಚೆ ಆರ್‍‍ಟಿಆರ್ 200 4ವಿ ಪೋಟೋ ಲೀಕ್

ಟಿವಿಎಸ್ ಮೋಟಾರ್ ಕಂಪನಿಯು ಅಪಾಚೆ ಆರ್‍‍ಟಿಆರ್ 200 4ವಿ ಮತ್ತು ಅಪಾಚೆ 160 ಅನ್ನು ಫೇಸ್ ಲಿಪ್ಟ್ ಮಾಡಿ ಬಿಡುಗಡೆಗೆ ಸಜ್ಜಾಗಿದೆ. ಮುಂದೆ ಬಿಡುಗಡೆಯಾಗಲಿರುವ ಅಪಾಚೆ ಆರ್ ಟಿಆರ್ 200 4ವಿ ಬೈಕ್ ಪೋಟೋ ಅನ್‍‍ಲೈನ್‍‍ನಲ್ಲಿ ಲೀಕ್ ಆಗಿದ್ದು, ಇದರಿಂದ ತಿಳಿಯುತ್ತದೆ ಬೈಕಿನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದ್ದಾರೆ ಎಂದು. ಫೇಸ್ ಲಿಪ್ಟ್ ಮಾಡಿದ ಬೈಕ್ ಬಿಎಸ್-6 ಮಾಲಿನ್ಯ ನಿಯಾಮವಳಿಗೆ ಅನುಸಾರವಾಗಿರಬಹುದು.

ಫೇಸ್‍‍ಲಿಫ್ಟ್ ಅಪಾಚೆ ಆರ್‍‍ಟಿಆರ್ 200 4ವಿ ಪೋಟೋ ಲೀಕ್

ಟಿವಿಎಸ್ ಮೋಟಾರ್ ಕಂಪನಿಯಲ್ಲಿ ಟಿವಿಎಸ್ ಅಪಾಚೆಯು ಹೆಚ್ಚು ಮಾರಟವಾದ ಸರಣೆಗಳಲ್ಲಿ ಒಂದಾಗಿದೆ. ಅಪಾಚೆ ಸರಣೆಯ ಬೈಕ್‍‍ಗಳನ್ನು ವಿವಿಧ ರೂಪಾಂತರಗಳಲ್ಲಿ ಲಕ್ಷಾಂತರ ಯುನಿಟ್ ಮಾರಟ ಮಾಡಲಾಗುತ್ತಿದೆ. ಒನ್-ಮೇಕ್ ಚಾಂಪಿಯನ್ ಶಿಪ್ ಗಳಲ್ಲಿ ಪ್ರಸಿದ್ಧಿಯನ್ನು ಪಡೆದುಕೊಂಡಿದೆ.

ಫೇಸ್‍‍ಲಿಫ್ಟ್ ಅಪಾಚೆ ಆರ್‍‍ಟಿಆರ್ 200 4ವಿ ಪೋಟೋ ಲೀಕ್

ಪ್ರಸ್ತುತ ಅಪಾಚೆ ಆರ್‍‍ಟಿಆರ್ 200 4ವಿ ಬೈಕ್ ನಿಧಾನವಾಗಿ ಸ್ವಲ್ಪ ಹಳೆಯದಾಗುತ್ತಿದೆ, ಇದೆ ಕಾರಣದಿಂದ ಫೇಸ್ ಲಿಫ್ಟ್ ಮಾಡಲು ಕಂಪನಿಯು ನಿರ್ಧರಿಸಿದೆ ಎಂಬ ವರದಿ ಇದೆ . ಕಂಪನಿಯು ಫೇಸ್‍‍ಲಿಫ್ಟ್ ಕಾರ್ಯದಲ್ಲಿ ನಿರತವಾಗಿದ್ದು, ಜಿಗ್‍‍ವ್ಹೀಲ್ಸ್ ಜಾಲತಾಣ ಪೋಸ್ಟ್ ಮಾಡಿರುವುದರಲ್ಲಿ ಅಪಾಚೆ ಆರ್‍‍ಟಿಆರ್ 200 4 ಪೇಸ್-ಲಿಫ್ಟ್ ಎಂದು ತಿಳಿದು ಬಂದಿದೆ.

ಫೇಸ್‍‍ಲಿಫ್ಟ್ ಅಪಾಚೆ ಆರ್‍‍ಟಿಆರ್ 200 4ವಿ ಪೋಟೋ ಲೀಕ್

ಮೊದಲ ನೋಟದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ವಾಗುತ್ತಿರುವ ಮಾದರಿ ರೀತಿಯಲ್ಲೂ ಕಂಡರೂ, ಸೂಕ್ಷವಾಗಿ ಗಮನಿಸಿದಾಗ ಕೆಲವು ಬದಲಾವಣೆಗಳನ್ನು ಕಾಣಸಿಗುತ್ತದೆ. ದೊಡ್ದ ಬದಲಾವಣೆ ಬೈಕಿನ ಮುಂದೆ ಇರುವ ಎಲ್‍ಇಡಿ ಹೆಡ್‍‍ಲ್ಯಾಂಪ್ ನಲ್ಲಿ ಕಂಡು ಬರುತ್ತದೆ. ಪ್ರತ್ಯೇಕವಾಗಿ ಕಡಿಮೆ ಬೆಳಕನ್ನು ನೀಡುವ ಎಲ್ಇಡಿ ರಿಫ್ಲೆಕ್ಟ್ ಯುನಿಟ್ ಅನ್ನು ಕೂಡ ಹೊಂದಿದೆ.

ಫೇಸ್‍‍ಲಿಫ್ಟ್ ಅಪಾಚೆ ಆರ್‍‍ಟಿಆರ್ 200 4ವಿ ಪೋಟೋ ಲೀಕ್

ನೂತನವಾಗಿ ಪೇಸ್‍ಲಿಫ್ಟ್ ಮಾಡಿದ ಬೈಕಿನ ಬಾಡಿ ಪ್ಯಾನೆಲ್ ಗಳು ಪ್ರಸುತ್ತ ಮಾದರಿಯಂತೆ ಕಾಣುತ್ತಿದ್ದು, ಅದರಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. ಆದರೆ ಗ್ರ್ಯಾಬ್ ರೈಲ್ ಸ್ಬಲ್ಪ ವಿಭಿನ್ನವಾಗಿ ಕಾಣಿಸುತ್ತಿದ್ದು ಅದನ್ನು ಬದಲಾವಣೆ ಮಾಡಲಾಗಿದೆ ಎಂದು ನಿರೀಕ್ಷಿಸುತ್ತೇವೆ.

ಫೇಸ್‍‍ಲಿಫ್ಟ್ ಅಪಾಚೆ ಆರ್‍‍ಟಿಆರ್ 200 4ವಿ ಪೋಟೋ ಲೀಕ್

ಪೇಸ್‍‍ಲಿಫ್ಟ್ ಮತ್ತೊಂದು ಬದಲಾವಣೆ ಎಂದರೆ ಹೊಸ ಡಿಜಿಟಲ್ ಉಪಕರಣದ ಸೆರ್ಪಡೆಯಾಗಿದ್ದು, ಇದು ಸ್ಮಾರ್ಟ್ ಪೋನ್ ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಎಲ್‍‍ಸಿಡಿ ಸ್ಕ್ರೀನ್ ಹೊಂದಿದೆ. ಈ ಎಲ್‍‍ಸಿಡಿ ಸ್ಕ್ರೀನ್ ಟಿವಿಎಸ್ ಎನ್‌ಟೋರ್ಕ್ 125 ಬೈಕ್ ನಲ್ಲಿ ಇರುವ ರೀತಿಯಲ್ಲಿ ಇದೆ. ಬೈಕ್ ಅದೇ 197.75 ಸಿಸಿ ಎಂಜಿನ್ ಹೊಂದಿರಲಿದೆ. ಬಿಎಸ್-6 ಮಾಲಿನ್ಯ ನಿಯಾಮವಳಿಗೆ ಅನುಸಾರ ಎಂಜಿನ್ ಬದಲಾವಣೆ ನಡೆಸಬಹುದು.

ಫೇಸ್‍‍ಲಿಫ್ಟ್ ಅಪಾಚೆ ಆರ್‍‍ಟಿಆರ್ 200 4ವಿ ಪೋಟೋ ಲೀಕ್

ಪ್ರಸ್ತುತ ಮಾದರಿಯ ಎಂಜಿನ್ 20.7 ಬಿಎಚ್‍ಪಿ ಪವರ್ ಮತ್ತು 18.1 ಎನ್‍ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಗುಣ ಹೊಂದಿದ್ದು, ರೇರ್ ವ್ಹೀಲ್ ಜೊತೆ 5 ಸ್ಪೀಡ್ ಗೇರ್ ಬಾಕ್ಸ್ ಜೋಡಣೆ ಮಾಡಿದ್ದಾರೆ. ಪೇಸ್‍‍ಲಿಫ್ಟ್ ಮಾದರಿಯು ಪವರ್ ಮತ್ತು ಟಾರ್ಕ್ ಉತ್ಪಾದನೆಯಲ್ಲಿ ಸಣ್ಣ ಮಟ್ಟದ ಬದಲಾವಣೆಯನ್ನು ನಾವು ನಿರೀಕ್ಷಿಸಬಹುದು. 6-ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಜೋಡಿಸಬಹುದು ಆದರೆ ಅದು ಖಚಿತವಿಲ್ಲ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಫೇಸ್‍‍ಲಿಫ್ಟ್ ಅಪಾಚೆ ಆರ್‍‍ಟಿಆರ್ 200 4ವಿ ಪೋಟೋ ಲೀಕ್

ಪ್ರಸ್ತುತ ಅಪಾಚೆ ಆರ್‍‍ಟಿಆರ್ 200 4ವಿ ಬೈಕಿಗೆ ಭಾರತದ ಎಕ್ಸ್ ಶೋ ರೂಂ ಪ್ರಕಾರ ರೂ.1,10,000 ದರ ಹೊಂದಿದ್ದು, ಪೇಸ್‍‍ಲಿಫ್ಟ್ ಮಾಡಿದ ಬೈಕಿಗೆ ರೂ.10,000 ದಿಂದ 15,000 ಸಾವಿರ ವ್ಯತಾಸವಿರಬಹುದು ಅಲ್ಲದೇ ದೊಡ್ಡ ವ್ಯತಾಸ ವಿರುವುದಿಲ್ಲ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಫೇಸ್‍‍ಲಿಫ್ಟ್ ಅಪಾಚೆ ಆರ್‍‍ಟಿಆರ್ 200 4ವಿ ಪೋಟೋ ಲೀಕ್

ಟಿ‍ವಿಎಸ್ ಅಪಾಜೆ ಆರ್‍‍ಟಿಆರ್ 200 4 ವಿ 200 ಸಿಸಿ ನೇಕೆಡ್ ಸೆಗ್‍‍ಮೆಂಟ್ ಬೈಕ್ ಆಗಿದೆ. ಆದರೆ ನೇಕೆಡ್ ಸೆಗ್‍ಮೆಂಟ್ ಇತರ ಬೈಕ್ ಪೈಪೋಟಿ ನೀಡುವ ಮಟ್ಟಕ್ಕೆ ಕಂಡು ಬಂದಿಲ್ಲ. ಹೊಸ ಪೇಸ್‍‍ಲಿಫ್ಟ್ ಮಾಡಿ ಬರುವ ಬೈಕ್ ನೇಕೆಡ್ ವಿಭಾಗದ ಇತರ ಬೈಕಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಇರಬಹುದೆಂಬ ನಿರೀಕ್ಷೆ ಇದೆ.

Article Published On: Sunday, September 1, 2019, 15:00 [IST]
English summary
TVS Apache RTR 200 4V Facelift Leaked Images Reveal LED Headlamp - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+