ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಟಿವಿ‍ಎಸ್ ಜೂಪಿಟರ್

ಟಿವಿ‍ಎಸ್ ಮೋಟಾರ್ ಕಂಪನಿಯು ತನ್ನ ಜೂಪಿಟರ್ ಸ್ಕೂಟರ್ ಅನ್ನು ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಳಿಸಿದೆ. ಹೊಸ ಟಿವಿ‍ಎಸ್ ಜೂಪಿಟರ್ ಬಿ‍ಎಸ್ 6 ಸ್ಕೂಟರಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ. 67,911 ಗಳಾಗಿದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಟಿವಿ‍ಎಸ್ ಜೂಪಿಟರ್

ಬಿ‍ಎಸ್ 6 ಎಂಜಿನ್ ಹೊಂದಿರುವ ಹೊಸ ಸ್ಕೂಟರ್ ಅನ್ನು ಸದ್ಯಕ್ಕೆ ಜೂಪಿಟರ್ ಕ್ಲಾಸಿಕ್‍‍ನೊಂದಿಗೆ ಮಾರಾಟ ಮಾಡಲಾಗುವುದು. ಉಳಿದ ಮಾದರಿಯ ಸ್ಕೂಟರ್‍‍ಗಳನ್ನು ಮುಂಬರುವ ದಿನಗಳಲ್ಲಿ ಹಂತಹಂತವಾಗಿ ಅಪ್‍‍ಡೇಟ್ ಮಾಡಲಾಗುವುದು.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಟಿವಿ‍ಎಸ್ ಜೂಪಿಟರ್

ಟಿವಿಎಸ್ ಜೂಪಿಟರ್ ಬಿಎಸ್ 6 ಮಾದರಿಯು ಈಗ ಬ್ರಾಂಡ್‌ನ ಇಟಿ ಫೈ ಅಂದರೆ ಇಕೋಥ್ರಸ್ಟ್ ಫ್ಯೂಯಲ್ ಇಂಜೆಕ್ಷನ್ ತಂತ್ರಜ್ಞಾನವನ್ನು ಹೊಂದಿದೆ. ಇದು ಕಂಪನಿಯು ಹೊಸದಾಗಿ ಅಭಿವೃದ್ಧಿಪಡಿಸಿದ ಇಟಿ-ಫೈ ಹಾಗೂ ಆರ್‌ಟಿ-ಫೈ ಎಂಬ ಫೈ ತಂತ್ರಜ್ಞಾನದ ಭಾಗವಾಗಿದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಟಿವಿ‍ಎಸ್ ಜೂಪಿಟರ್

ಮೊದಲ ಆವೃತ್ತಿಯಾದ ಇಟಿ ಫೈ ಹೆಚ್ಚಿನ ರಿಫೈನ್‍‍ಮೆಂಟ್, ಸುಧಾರಿತ ಇಂಧನ ಆರ್ಥಿಕತೆ ಹಾಗೂ ಒಟ್ಟಾರೆ ಪರ್ಫಾಮೆನ್ಸ್ ಅನ್ನು ಒದಗಿಸುತ್ತದೆ. ಎರಡನೇಯದಾದ ಆರ್‍‍ಟಿ ಫೈ (ರೇಸ್ ಟ್ಯೂನ್ಡ್ ಫ್ಯೂಯಲ್ ಇಂಜೆಕ್ಷನ್) ಟೆಕ್ನಾಲಜಿಯು ಎಲ್ಲಾ ಪರಿಸ್ಥಿತಿಗಳಲ್ಲೂ ರೇಸಿಂಗ್ ಅನುಭವವನ್ನು ನೀಡುತ್ತದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಟಿವಿ‍ಎಸ್ ಜೂಪಿಟರ್

ಬಿಎಸ್ 6 ಎಂಜಿನ್ ಹೊಂದಿರುವ ಟಿವಿಎಸ್ ಜೂಪಿಟರ್ ಕ್ಲಾಸಿಕ್, ಇಟಿ ಫೈ ಟೆಕ್ನಾಲಜಿಯನ್ನು ಹೊಂದಿದ ಮೊದಲ ಸ್ಕೂಟರ್ ಆಗಿದೆ. ಬಿಎಸ್ 6 ಎಂಜಿನ್ ಅಪ್‌ಡೇಟ್‌ನೊಂದಿಗೆ ಇತರ ಎಲ್ಲ ಮಾದರಿಗಳಲ್ಲೂ ಈ ಟೆಕ್ನಾಲಜಿಯನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯಲಾಗುವುದು.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಟಿವಿ‍ಎಸ್ ಜೂಪಿಟರ್

ಹೊಸ ಟೆಕ್ನಾಲಜಿಯನ್ನು ಹೊಂದಿರುವ ಜೂಪಿಟರ್ ಕ್ಲಾಸಿಕ್ ಹಳೆಯ ಮಾದರಿಗಳಿಗಿಂತ 15%ನಷ್ಟು ಹೆಚ್ಚಿನ ಫ್ಯೂಯಲ್ ಎಫಿಶಿಯನ್ಸಿ ನೀಡುತ್ತದೆ ಎಂದು ಟಿವಿಎಸ್ ಕಂಪನಿಯು ಹೇಳಿದೆ. ಈ ಅಪ್‍‍ಡೇಟ್‍‍ಗಳ ಹೊರತಾಗಿ, ಹೊಸ ಟಿವಿಎಸ್ ಜುಪಿಟರ್ ಬಿಎಸ್ 6 ಸ್ಕೂಟರ್ ಅನ್ನು ಈಗ ಇಂಡಿ ಬ್ಲೂ ಎಂಬ ಹೊಸ ಬಣ್ಣದಲ್ಲಿ ಮಾರಾಟ ಮಾಡಲಾಗುತ್ತದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಟಿವಿ‍ಎಸ್ ಜೂಪಿಟರ್

ಹೊಸ ಸ್ಕೂಟರಿನ ಮುಂಭಾಗದಲ್ಲಿ ಯುಎಸ್‌ಬಿ ಚಾರ್ಜರ್, ಮೊಬೈಲ್ ಇರಿಸಲು ಕಬ್ಬಿ ಸ್ಪೇಸ್ ಹಾಗೂ ಟಿಂಟೆಡ್ ವೈಸರ್‍‍ಗಳಿವೆ. ಟಿವಿಎಸ್ ಜೂಪಿಟರ್ ಬಿಎಸ್ 6 ಸ್ಕೂಟರಿನಲ್ಲಿ ಬಿ‍ಎಸ್ 4 ಸ್ಕೂಟರಿನಲ್ಲಿದ್ದಂತಹ 109.7 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್‌ನ ಅಳವಡಿಸಲಾಗಿದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಟಿವಿ‍ಎಸ್ ಜೂಪಿಟರ್

ಈ ಎಂಜಿನ್ 7,500 ಆರ್‌ಪಿಎಂನಲ್ಲಿ 7.8 ಬಿಹೆಚ್‌ಪಿ ಪವರ್ ಹಾಗೂ 5,500 ಆರ್‌ಪಿಎಂನಲ್ಲಿ 8 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ ಸಿವಿಟಿ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಟಿವಿಎಸ್ ಮೋಟಾರ್ ಕಂಪನಿಯ ಪ್ರಯಾಣಿಕ ಮೋಟರ್ ಸೈಕಲ್, ಸ್ಕೂಟರ್ ಹಾಗೂ ಕಾರ್ಪೊರೇಟ್ ಬ್ರಾಂಡ್‍‍ನ ಮಾರ್ಕೆಟಿಂಗ್ ಉಪಾಧ್ಯಕ್ಷರಾದ ಅನಿರುದ್ಧಾ ಹಲ್ದಾರ್‍‍ರವರು ಈ ಬಗ್ಗೆ ಮಾತನಾಡಿದ್ದಾರೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಟಿವಿ‍ಎಸ್ ಜೂಪಿಟರ್

ಟಿವಿಎಸ್ ಮೋಟಾರ್ ಕಂಪನಿ ಯಾವಾಗಲೂ ಗ್ರಾಹಕರಿಗೆ ಸಂತೋಷವನ್ನು ನೀಡುತ್ತ ಬಂದಿದೆ. ಬಿಎಸ್ 4ನಿಂದ ಬಿ‍ಎಸ್ 6ಗೆ ಬದಲಾಗುವ ಅವಕಾಶವನ್ನು ತೆಗೆದುಕೊಂಡು, ಆರ್‍‍ಟಿ ಫೈ ಹಾಗೂ ಇಟಿ ಫೈ ಎಂಬ ಎರಡು ಫೈ ಟೆಕ್ನಾಲಜಿ ಪ್ಲಾಟ್‌ಫಾರಂಗಳನ್ನು ಆರಂಭಿಸಿದ್ದೇವೆ. ಇಟಿ ಫೈ (ಇಕೋ ಥ್ರಸ್ಟ್ ಫ್ಯೂಯಲ್ ಇಂಜೆಕ್ಷನ್) ಭಾರತದ ಪ್ರಯಾಣಿಕರ ಮೇಲೆ ಗಮನಹರಿಸಲಿದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಟಿವಿ‍ಎಸ್ ಜೂಪಿಟರ್

ಟಿವಿಎಸ್ ಜೂಪಿಟರ್ ಕ್ಲಾಸಿಕ್ ಇಟಿ ಫೈ ಚಾಲನಾ ಸಾಮರ್ಥ್ಯ, ಸುಗಮತೆ ಮತ್ತು ಇಂಧನದ ಒಟ್ಟಾರೆ ಪರ್ಫಾಮೆನ್ಸ್ ಅನ್ನು ಹೆಚ್ಚಿಸುತ್ತದೆ. ಟಿವಿಎಸ್ ಜೂಪಿಟರ್ ಕ್ಲಾಸಿಕ್ ಇಟಿ ಫೈ ಅನುಕೂಲಕರ ಮುಂಭಾಗದ ಮೊಬೈಲ್ ಫೋನ್ ಕ್ಯೂಬಿ, ಯುಎಸ್‌ಬಿ ಚಾರ್ಜರ್ ಹಾಗೂ ಹೊಸ ಟಿಂಟೆಡ್ ವೀಸರ್ ಅನ್ನು ಹೊಂದಿದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಟಿವಿ‍ಎಸ್ ಜೂಪಿಟರ್

ಮುಂಬರುವ ದಿನಗಳಲ್ಲಿಯೂ ನಮ್ಮ ಗ್ರಾಹಕರು ಟಿವಿಎಸ್ ಜೂಪಿಟರ್ ಮೇಲಿಟ್ಟಿರುವ ನಂಬಿಕೆಯನ್ನು ಮುಂದುವರೆಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಟಿವಿ‍ಎಸ್ ಜೂಪಿಟರ್

ಟಿವಿ‍ಎಸ್ ಜೂಪಿಟರ್ ಕ್ಲಾಸಿಕ್ ಸ್ಕೂಟರಿನ ಹೊರತಾಗಿ, ಈ ಸ್ಕೂಟರ್ ಅನ್ನು ಬೇಸ್, ಝಡ್‍ಎಕ್ಸ್ (ಡಿಸ್ಕ್ ಹಾಗೂ ಡ್ರಂ) ಹಾಗೂ ಗ್ರಾಂಡ್ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಕ್ಲಾಸಿಕ್ ಮಾದರಿಯು ಗ್ರಾಂಡ್ ಮಾದರಿಯ ಕೆಳಗಿನ ಸರಣಿಯಲ್ಲಿರಲಿದೆ.

ಬಿ‍ಎಸ್ 6 ಎಂಜಿನ್‍‍ನಲ್ಲಿ ಬಿಡುಗಡೆಗೊಂಡ ಟಿವಿ‍ಎಸ್ ಜೂಪಿಟರ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಜೂಪಿಟರ್ ಸ್ಕೂಟರ್ ದೇಶಿಯ ಮಾರುಕಟ್ಟೆಯಲ್ಲಿರುವ ಟಿವಿ‍ಎಸ್ ಕಂಪನಿಯ ಜನಪ್ರಿಯ ಸ್ಕೂಟರ್‍‍ಗಳಲ್ಲಿ ಒಂದಾಗಿದೆ. 2013ರಲ್ಲಿ ಬಿಡುಗಡೆಯಾದಾಗಿನಿಂದ ಇದುವರೆಗೂ ಈ ಸ್ಕೂಟರಿನ ಹತ್ತು ಲಕ್ಷ ಯುನಿಟ್‍‍ಗಳನ್ನು ಮಾರಾಟ ಮಾಡಲಾಗಿದೆ. ಜೂಪಿಟರ್ ಸ್ಕೂಟರ್ ದೇಶಿಯ ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟಿವಾ 5 ಜಿ ಹಾಗೂ ಹೀರೋ ಪ್ಲೆಶರ್ 110 ಸ್ಕೂಟರ್‍‍ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
TVS Jupiter BS-VI Scooter Launched In India: Priced At Rs 67,911. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X