ರೈಡಿಂಗ್ ಗೇರ್ ಬಿಡುಗಡೆಗೊಳಿಸಿದ ಟಿವಿಎಸ್
ಭಾರತ ಮೂಲದ ದ್ವಿ ಚಕ್ರ ವಾಹನ ತಯಾರಕ ಕಂಪನಿಯಾದ ಟಿವಿಎಸ್ ಮೋಟಾರ್ ತನ್ನ ಕಂಪನಿಯ ರೈಡಿಂಗ್ ಗೇರ್ ಹಾಗೂ ಕ್ಯಾಶುಯಲ್ ಉಡುಪುಗಳನ್ನು ಬಿಡುಗಡೆಗೊಳಿಸಿದೆ. ಟಿವಿಎಸ್ ರೇಸಿಂಗ್ ಪರ್ಫಾಮೆನ್ಸ್ ಗೇರ್ ಎಂದು ಕರೆಯಲಾಗುವ ಈ ಉಡುಪುಗಳನ್ನು ಕಂಪನಿಯ ಮೋಟೊಸೊಲ್‍ನಲ್ಲಿ ನಿನ್ನೆ ಬಿಡುಗಡೆಗೊಳಿಸಲಾಗಿದೆ.

ಇವುಗಳನ್ನು ಆನ್‍ಲೈನ್‍ನಲ್ಲಿ ಅಥವಾ ದೇಶಾದ್ಯಂತವಿರುವ ಟಿವಿಎಸ್ ಮೋಟಾರ್ ಡೀಲರ್‍ಗಳ ಬಳಿ ಖರೀದಿಸಬಹುದು. ಈ ರೈಡಿಂಗ್ ಗೇರ್‍ಗಳಲ್ಲಿ ಹೆಲ್ಮೆಟ್, ರೈಡಿಂಗ್ ಜಾಕೆಟ್, ರೈಡಿಂಗ್ ಪ್ಯಾಂಟ್, ರೈಡಿಂಗ್ ಗ್ಲೌಸ್, ರೈಡಿಂಗ್ ಬೂಟ್ಸ್ ಗಳು ಸೇರಿವೆ.

ಕ್ಯಾಶುಯಲ್ ಉಡುಪುಗಳಲ್ಲಿ ಟಿ ಶರ್ಟ್, ಅರ್ಬನ್ ಜ್ಯಾಕೆಟ್, ಅರ್ಬನ್ ಪ್ಯಾಂಟ್ಸ್, ರೇನ್ ವೇರ್, ಕ್ಯಾಶುಯಲ್ ಬೂಟ್ಸ್, ಬ್ಯಾಕ್ ಪ್ಯಾಕ್, ಕ್ಯಾಪ್ ಹಾಗೂ ಸನ್‍ಗ್ಲಾಸುಗಳು ಸೇರಿವೆ. ಟಿವಿಎಸ್ ಮೋಟಾರ್ ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸುದರ್ಶನ್ ವೇಣುರವರು ಈ ಬಗ್ಗೆ ಮಾತನಾಡಿದ್ದಾರೆ.

1982ರಿಂದ ಟಿವಿಎಸ್ ರೇಸಿಂಗ್, ರೇಸಿಂಗ್‍ಗಳಿಗಾಗಿ ಹಾಗೂ ಯುವಕರಿಗಾಗಿ ವಾಹನಗಳನ್ನು ಬಿಡುಗಡೆಗೊಳಿಸುತ್ತಿದೆ. ಟಿವಿಎಸ್ ರೇಸಿಂಗ್‍ನ ಮೇಲೆ ನಿರ್ಮಿತವಾಗಿರುವ ಟಿವಿಎಸ್ ಅಪಾಚೆ ಸೀರಿಸ್ ಹಾಗೂ ಟಿವಿಎಸ್ ಎನ್‌ಟಾರ್ಕ್ 125 ಯುವ ಜನತೆಯ ಹಾಗೂ ರೇಸ್ ಪ್ರಿಯರ ನೆಚ್ಚಿನ ವಾಹನಗಳಾಗಿವೆ.

ಈ ಸಂಸ್ಕೃತಿಯು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ವೇಗವಾಗಿ ಬೆಳೆಯುತ್ತಿದೆ. ಈ ಕಾರಣಕ್ಕಾಗಿ ಮೊಟ್ಟಮೊದಲ ಮೊಟೊಸೊಲ್‍ನಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸೇರಿದ್ದಾರೆ. ಟಿವಿಎಸ್ ರೇಸಿಂಗ್ ಪರ್ಫಾಮೆನ್ಸ್ ಗೇರ್ ಉತ್ಸಾಹಿ ಯುವ ಸವಾರರು ಹೆಚ್ಚು ಜವಾಬ್ದಾರಿಯುತವಾಗಿ ಸವಾರಿ ಮಾಡಲು ನೆರವಾಗಲಿದೆ ಎಂದು ಹೇಳಿದರು.

ಹೆಲ್ಮೆಟ್
ಹೆಲ್ಮೆಟ್‍ಗಳು ಐಎಸ್‍ಐ ಹಾಗೂ ಇಸಿಇ ಪ್ರಮಾಣಪತ್ರವನ್ನು ಪಡೆದಿವೆ. ಈ ಹೆಲ್ಮೆಟ್‍ಗಳಲ್ಲಿ ಬ್ಲೂಟೂತ್‍ಗಳಿಗೆ ಸ್ಪೀಕರ್ ಅಳವಡಿಸುವ ಸೌಲಭ್ಯವನ್ನು ನೀಡಲಾಗಿದೆ. ಹೆಲ್ಮೆಟ್‍ನೊಳಗಿರುವ ಪ್ಯಾಡಿಂಗ್ ಅನ್ನು ಹೊರತೆಗೆದು ತೊಳೆಯಬಹುದಾಗಿದೆ. ರಾತ್ರಿ ವೇಳೆಯಲ್ಲಿ ಗೋಚರಿಸುವಂತಹ ರಿಫ್ಲೆಕ್ಟಿವ್ ಸ್ಟ್ರಿಪ್ಸ್ ಗಳನ್ನು ಈ ಹೆಲ್ಮೆಟ್‍ನಲ್ಲಿ ಅಳವಡಿಸಲಾಗಿದೆ. ಟಿವಿಎಸ್ ಕಂಪನಿಯ ಈ ಹೆಲ್ಮೆಟ್‍ಗಳ ಬೆಲೆಯು ರೂ.2,500ದಿಂದ ಆರಂಭವಾಗುತ್ತದೆ.

ರೈಡಿಂಗ್ ಜ್ಯಾಕೆಟ್
ಈ ರೈಡಿಂಗ್ ಜ್ಯಾಕೆಟ್‍ಗಳನ್ನು 600ಡಿ ಪಾಲಿಸ್ಟರ್ ಫ್ಯಾಬ್ರಿಕ್ ಹಾಗೂ ಬ್ಲಾಕ್ ನಿಯೊಪ್ರಿನ್‍ಗಳಿಂದ ತಯಾರಿಸಲಾಗಿದೆ. ಈ ಜ್ಯಾಕೆಟ್‍ಗಳು ಲೆವೆಲ್ 1 ಸಿಇ ಪ್ರಮಾಣಪತ್ರದ ಎಲ್ಬೊ ಹಾಗೂ ಶೋಲ್ಡರ್ ಪ್ರೊಟೆಕ್ಟರ್ಸ್ ಹಾಗೂ ಹೆಚ್ಚು ದಪ್ಪವಿರುವ ಟಿಪಿಇ ಬ್ಯಾಕ್ ಪ್ರೊಟೆಕ್ಟರ್‍ಗಳನ್ನು ಹೊಂದಿವೆ. ಈ ಜ್ಯಾಕೆಟ್ ವಾಟರ್‍ಪ್ರೂಫ್ ಆಗಿದೆ. ಈ ಜ್ಯಾಕೆಟ್‍ಗಳ ಬೆಲೆಯು ರೂ.5,600ರಿಂದ ಶುರುವಾಗುತ್ತದೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ರೈಡಿಂಗ್ ಗ್ಲೌಸ್
ಈ ರೈಡಿಂಗ್ ಗ್ಲೌಸ್‍ಗಳನ್ನು ಹೆಚ್ಚಿನ ಗುಣಮಟ್ಟದ ಪಾಲಿಯುರೆಥಾನ್‍ನಿಂದ ತಯಾರಿಸಲಾಗಿದೆ. ಈ ಗ್ಲೌಸ್‍ಗಳು ಗಟ್ಟಿಯಾದ ಪಾಲಿಮಾರ್ ನಕ್ಕಲ್ ಪ್ರೊಟೆಕ್ಟರ್‍ಗಳನ್ನು ಹೊಂದಿವೆ. ಈ ಗ್ಲೌಸ್‍ಗಳು ರಬ್ಬರ್‍ಗಳನ್ನು ಸಹ ಹೊಂದಿದ್ದು, ಅವುಗಳಿಂದ ಹೆಲ್ಮೆಟ್ ಹಾಗೂ ವಾಹನದ ವೈಸರ್‍ಗಳನ್ನು ಒರೆಸಬಹುದಾಗಿದೆ. ಟಿವಿಎಸ್ ಕಂಪನಿಯು ಈ ರೈಡಿಂಗ್ ಗ್ಲೌಸ್‍ನ ಬೆಲೆಯನ್ನು ಬಹಿರಂಗಪಡಿಸಿಲ್ಲ.
MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ರೈಡಿಂಗ್ ಪ್ಯಾಂಟ್
ರೈಡಿಂಗ್ ಪ್ಯಾಂಟ್ ಅನ್ನು 600ಡಿ ಪಾಲಿಯೆಸ್ಟರ್ ಫೈಬರ್‍ನಿಂದ ತಯಾರಿಸಲಾಗಿದೆ. ಈ ಪ್ಯಾಂಟ್ ಮಲ್ಟಿ ಫ್ಯಾಬ್ರಿಕ್ ಶೆಲ್ ಕನ್‍ಸ್ಟಕ್ಷನ್ ಹೊಂದಿದೆ. ಪ್ಯಾಂಟ್ ಗರಿಷ್ಠ ಎಲಾಸ್ಟಿಸಿಟಿ ಯನ್ನು ಸವಾರನಿಗೆ ನೀಡುತ್ತದೆ. ಈ ಪ್ಯಾಂಟ್ ಲೆವೆಲ್ 1 ಸಿಇ ಪ್ರಮಾಣಿತ ಕ್ನಿ ಪ್ರೊಟೆಕ್ಟರ್ ಹಾಗೂ ಹೆಚ್ಚು ದಪ್ಪವಾಗಿರುವ ಟಿಪಿಇ ಫೋಮ್ ಹಿಪ್ ಪ್ರೊಟೆಕ್ಟರ್‍ಗಳನ್ನು ಹೊಂದಿದೆ.
MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ರೈಡಿಂಗ್ ಬೂಟ್ಸ್
ಈ ರೈಡಿಂಗ್ ಬೂಟ್‍ಗಳನ್ನು ಸಿಂಥೆಟಿಕ್ ಟೆಕ್ಸ್ ಟೈಲ್ಸ್ ಹಾಗೂ ಅಕಾರ್ಡಿಯನ್ ಫ್ಲೆಕ್ಸ್ ಜೋನ್‍ಗಳನ್ನು ಬಳಸಿ ತಯಾರಿಸಲಾಗಿದೆ. ಈ ರೈಡಿಂಗ್ ಬೂಟ್‍ಗಳ ಸುರಕ್ಷತೆಯನ್ನು ಆರ್ಕ್ ಸಪೋರ್ಟ್ ಹಾಗೂ ಫುಟ್ ಪ್ರೊಟೆಕ್ಷನ್‍ನಿಂದ ಮತ್ತಷ್ಟು ಹೆಚ್ಚಿಸಲಾಗಿದೆ. ರಾತ್ರಿ ವೇಳೆಯಲ್ಲಿ ಗೋಚರಿಸಲು ಈ ಬೂಟಿನಲ್ಲಿ ರಿಫ್ಲೆಕ್ಟಿವ್ ಇನ್ಸರ್ಟ್ ಅಳವಡಿಸಲಾಗಿದೆ.

ಟಿವಿಎಸ್ ಮೋಟೊಸೊಲ್ ಬಗ್ಗೆ
ಮೊದಲ ಟಿವಿಎಸ್ ಮೋಟೊಸೊಲ್ ಗೋವಾದಲ್ಲಿ ನಡೆಯುತ್ತಿದೆ. ನಿನ್ನೆ ಆರಂಭವಾದ ಈ ಮೋಟೊಸೊಲ್ ಇಂದು ಮುಕ್ತಾಯವಾಗಲಿದೆ. ಎರಡು ದಿನದ ಈ ಮೇಳದಲ್ಲಿ ರೇಸಿಂಗ್ ಹಾಗೂ ಸಾಹಸಿ ಸ್ಪರ್ಧೆಗಳು ನಡೆಯಲಿದ್ದು, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಚಾಂಪಿಯನ್‍ಗಳ ಜೊತೆಗೆ ಮಾತುಕತೆ ನಡೆಯಲಿದೆ. ಇದರ ಜೊತೆಗೆ ಟಿವಿಎಸ್ ಕಂಪನಿಯು ಖ್ಯಾತ ಸಂಗೀತ ತಂಡಗಳಿಂದ ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಟಿವಿಎಸ್ ಕಂಪನಿಯು ತನ್ನ ರೈಡಿಂಗ್ ಗೇರ್‍ಗಳನ್ನು ಬಿಡುಗಡೆಗೊಳಿಸಿ ಅತ್ಯುತ್ತಮವಾದ ಕೆಲಸವನ್ನು ಮಾಡಿದೆ. ಬೈಕ್ ಸವಾರರು ಸುರಕ್ಷತೆಗಾಗಿ ಈ ರೈಡಿಂಗ್ ಗೇರ್‍ಗಳನ್ನು ಡೀಲರ್‍ಗಳಿಂದ ಖರೀದಿಸಬಹುದು. ಆಕರ್ಷಕವಾದ ಬೆಲೆಯನ್ನು ಹೊಂದಿರುವ ಈ ರೈಡಿಂಗ್ ಗೇರ್‍ಗಳು ಟಿವಿಎಸ್ ವಾಹನಗಳನ್ನು ಹೊಂದಿಲ್ಲದ ಬೇರೆ ಕಂಪನಿಗಳ ಬೈಕ್ ಸವಾರರನ್ನೂ ಸಹ ಆಕರ್ಷಿಸುವ ಸಾಧ್ಯತೆಗಳಿವೆ.


Click it and Unblock the Notifications