ಬಿಡುಗಡೆಯಾಯ್ತು ಟಿ‍ವಿಎಸ್ ಎನ್‍‍ಟಾರ್ಕ್ ಫೇಸ್‍‍ಲಿಫ್ಟ್ ಟೀಸರ್

ಟಿ‍‍ವಿಎಸ್ ಮೋಟಾರ್ ಎನ್‍ಟಾರ್ಕ್ 125 ಫೇಸ್‍‍ಲಿಫ್ಟ್ ಟೀಸರ್‍ ಅನ್ನು ಬಿಡುಗಡೆಗೊಳಿಸಿದೆ. ಟಿ‍‍ವಿಎಸ್ ಎನ್‍‍ಟಾರ್ಕ್‍‍ನ ಅಧಿಕೃತ ಇನ್‌ಸ್ಟಾಗ್ರಾಮ್, ಟ್ವಿಟರ್ ಮತ್ತು ಫೇಸ್‌ಬುಕ್ ಖಾತೆಗಳಲ್ಲಿ ಹೊಸ ಟಿ‍‍ವಿಎಸ್ ಎನ್‍‍ಟಾರ್ಕ್ 125 ಫೇಸ್‌ಲಿಫ್ಟ್‌ನ ಟೀಸರ್‍ ಅನ್ನು ಬಿಡುಗಡೆಗೊಳಿಸಿದೆ.

ಬಿಡುಗಡೆಯಾಯ್ತು ಟಿ‍ವಿಎಸ್ ಎನ್‍‍ಟಾರ್ಕ್ ಫೇಸ್‍‍ಲಿಫ್ಟ್ ಟೀಸರ್

ಟಿ‍‍ವಿಎಸ್ ಎನ್‍‍ಟಾರ್ಕ್ 125 ಫೇಸ್‌ಲಿಫ್ಟ್‌ನ ವೀಡಿಯೊ ಕೇವಲ ನಾಲ್ಕು ಸೆಕೆಂಡುಗಳ ಅವಧಿಯನ್ನು ಹೊಂದಿದೆ. ಈ ವೀಡಿಯೊದಲ್ಲಿ ಪ್ರಮುಖ ಆಕರ್ಷಣೆಯಾದ ಹೆಡ್‍‍ಲ್ಯಾಂಪ್ ಅನ್ನು ಪ್ರದರ್ಶಿಸಲಾಗಿದೆ. #ComingSoon ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಇದು ದೇಶಿಯ ಮಾರುಕಟ್ಟೆಯಲ್ಲಿರುವ ಅತ್ಯುತ್ತಮ ಸ್ಕೂಟರ್‌ಗಳಲ್ಲಿ ಒಂದಾಗಿದೆ.

ಬಿಡುಗಡೆಯಾಯ್ತು ಟಿ‍ವಿಎಸ್ ಎನ್‍‍ಟಾರ್ಕ್ ಫೇಸ್‍‍ಲಿಫ್ಟ್ ಟೀಸರ್

ಆಕರ್ಷಕ ಲುಕ್ ಹೊಂದಿರುವ ಇದರ ಸ್ಟೈಲಿಂಗ್ ಅನ್ನು ಸ್ಟಿಲ್ತ್ ಫೈಟರ್ ಜೆಟ್‍‍ನ ಪ್ರೇರಣೆಯಿಂದ ತಯಾರಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಅದೇ ಥೀಮ್ ಅನ್ನು ಇಟ್ಟುಕೊಂಡು ಸ್ಕೂಟರ್ ಪಾರಿಣಾಮಕಾರಿ ಲುಕ್ ಮತ್ತು ದೇಹದ ರೇಖೆಗಳನ್ನು ಹೊಂದಿದೆ. ಮುಂಭಾಗದಲ್ಲಿ ದೊಡ್ಡ ಗಾತ್ರದ ಎಲ್‍ಇಡಿ ಡಿಆರ್‍ಎಲ್ ಹೊಂದಿರುವ ದೊಡ್ಡ ಕ್ಲಿಯರ್ ಲೆನ್ಸ್ ಹೊಂದಿರುವ ಹೆಡ್‍‍ಲ್ಯಾಂಪ್, ಮತ್ತು ಇಂಟಿಕೇಟರ್‍‍ಗಳಿವೆ.

ಬಿಡುಗಡೆಯಾಯ್ತು ಟಿ‍ವಿಎಸ್ ಎನ್‍‍ಟಾರ್ಕ್ ಫೇಸ್‍‍ಲಿಫ್ಟ್ ಟೀಸರ್

ದೇಶಿಯ ಮಾರುಕಟ್ಟೆಯಲ್ಲಿರುವ ಸ್ಕೂಟರ್‍‍ಗಳಲ್ಲಿಯೇ ವಿಶಿಷ್ಟವಾದ ಅಲಾಯ್ ವ್ಹೀಲ್ ಹೊಂದಿದೆ. ಸೀಟಿನ ಮೇಲೆ ರೆಡ್ ಕಾಂಟ್ರಾಸ್ಟ್ ಸ್ಟೀಚಿಂಗ್, ಕಾರ್ಬನ್-ಫೈಬರ್ ಪ್ಯಾನೆಲ್ ಅನ್ನು ಒಳಗೊಂಡಿದೆ.

ಬಿಡುಗಡೆಯಾಯ್ತು ಟಿ‍ವಿಎಸ್ ಎನ್‍‍ಟಾರ್ಕ್ ಫೇಸ್‍‍ಲಿಫ್ಟ್ ಟೀಸರ್

ಟಿವಿಎಸ್ ಎನ್‌ಟಾರ್ಕ್ 125 ಮಾದರಿಯು ಗ್ರಾಫೈಟ್ ಪರಿಕಲ್ಪನೆಯ ಉತ್ಪಾದನಾ ಆವೃತ್ತಿಯಾಗಿದ್ದು, 2014 ರ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನ ಕಂಡಿತ್ತು. ಆದರೇ ಕೊನೆಯ ಹಂತದಲ್ಲಿ ಗ್ರಾಫೈಟ್ ಬದಲಾಗಿ ಎನ್‌ಟಾರ್ಕ್ 125 ಆಗಿ ಪರಿಚಯಿಸಲಾಗಿದೆ.

ಬಿಡುಗಡೆಯಾಯ್ತು ಟಿ‍ವಿಎಸ್ ಎನ್‍‍ಟಾರ್ಕ್ ಫೇಸ್‍‍ಲಿಫ್ಟ್ ಟೀಸರ್

ಇಂದಿನ ಜನರೇಷನ್ ಟಿ‍‍ವಿಎಸ್ ಎನ್‍‍ಟಾರ್ಕ್ 125 ಏರ್-ಕೂಲ್ಡ್ 125 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, ಇದು 9.27 ಬಿ‍ಎಚ್‍ಪಿ ಪವರ್ ಮತ್ತು 10.4 ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಪ್ರತಿ ಗಂಟೆಗೆ 95 ಕಿ.ಮೀ ವೇಗವನ್ನು ಹೊಂದಿದೆ. ಈ ಸ್ಕೂಟರ್‍‍‍ನ ಮುಂಭಾಗದಲ್ಲಿ ಸ್ಟಾಂಡರ್ಡ್ ಆಗಿರುವ ಪೆಟಲ್ ಡಿಸ್ಕ್ ಮತ್ತು ಡ್ರಮ್ ಬ್ರೇಕ್‍‍‍ಗಳನ್ನು ಅಳವಡಿಸಿದ್ದಾರೆ.

ಬಿಡುಗಡೆಯಾಯ್ತು ಟಿ‍ವಿಎಸ್ ಎನ್‍‍ಟಾರ್ಕ್ ಫೇಸ್‍‍ಲಿಫ್ಟ್ ಟೀಸರ್

ಆಕರ್ಷಕವಾದ ಟಿವಿಎಸ್ ಎನ್‍ಟಾರ್ಕ್ 125 ಆಕರ್ಷಕ ಲುಕ್‍ನೊಂದಿಗೆ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷಿಸುತ್ತದೆ ಎಂಬ ನಿರೀಕ್ಷೆಯನ್ನು ಕಂಪನಿ ಹೊಂದಿತ್ತು. ಆದರೆ ಕಂಪನಿಯ ನಿರೀಕ್ಷೆಯ ಮಟ್ಟದಲ್ಲಿ ಆಗಿಲ್ಲವಾದರೂ ಮಾರುಕಟ್ಟೆಯಲ್ಲಿ ಯೋಗ್ಯವಾಗಿ ಮಾರಾಟವಾಗುತ್ತಿದೆ. ಮಾರುಕಟ್ಟೆಯಲ್ಲಿ ಟಿ‍‍ವಿಎಸ್ ಮತಷ್ಟು ಜನರನ್ನು ಸೆಳೆಯಲು ಮತ್ತು ಈ ಸ್ಕೂಟರ್ 18 ತಿಂಗಳಿಗಿಂತಲೂ ಹಳೆಯದಾಗಿದೆ. ಇದೇ ಕಾರಣದಿಂದ ಟಿ‍‍ವಿಎಸ್ ಎನ್‍‍ಟಾರ್ಕ್ 125 ಫೇಸ್‍‍ಲಿಫ್ಟ್ ಅನ್ನು ಅಭಿವೃದ್ದಿಪಡಿಸಿದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಬಿಡುಗಡೆಯಾಯ್ತು ಟಿ‍ವಿಎಸ್ ಎನ್‍‍ಟಾರ್ಕ್ ಫೇಸ್‍‍ಲಿಫ್ಟ್ ಟೀಸರ್

ಹೊಸ ಟಿ‍‍ವಿಎಸ್ ಎನ್‍‍ಟಾರ್ಕ್ 125 ಫೇಸ್‍‍ಲಿಫ್ಟ್ ಟೀಸರ್ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದೆ. ಸ್ಕೂಟರ್‍‍ನ ಮುಂಭಾಗದ ತುದಿಯನ್ನು ಮರುವಿ‍‍ನ್ಯಾಸಗೊಳಿಸಲಾಗಿದೆ ಎಂದು ತಿಳಿಯಲು ಸಣ್ಣ ತುಣುಕಿನ ಟೀಸರ್ ವೀಡಿಯೊ ಸಾಕು. ಹೆಡ್‍‍ಲ್ಯಾಂಪ್ ಯು‍ನಿಟ್ ಕೂಡ ಹೊಸ ಟಿ-ಶೇಪ್ ಎಲ್‍ಇ‍ಡಿ ಡಿ‍ಆರ್‍ಎಲ್ ಸಹ ಹೊಂದಿದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಬಿಡುಗಡೆಯಾಯ್ತು ಟಿ‍ವಿಎಸ್ ಎನ್‍‍ಟಾರ್ಕ್ ಫೇಸ್‍‍ಲಿಫ್ಟ್ ಟೀಸರ್

ಟಿವಿಎಸ್ ಎನ್‍‍ಟಾರ್ಕ್ 125 ಆಕರ್ಷಕವಾದ ಪುಟ್ಟ ಸ್ಕೂಟರ್ ಆಗಿದ್ದು, ಇದರ ಸಾವರನಿಗೆ ಸಾಕಷ್ಟು ಆಯ್ಕೆಗಳನ್ನು ಹೊಂದಿದೆ. ಇದು ಆರಾಮದಾಯಕ ರೈಡ್‍‍ಗೆ ಸಹಕಾರಿಯಾಗಿದೆ. ಕಂಪನಿಯು ಟಿ‍‍ವಿಎಸ್ ಎನ್‍‍ಟಾರ್ಕ್ 125 ಫೇಸ್‍ಲಿಫ್ಟ್ ನಲ್ಲಿ ಹೆಚ್ಚಿನ ನವೀಕರಣದೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಎಂದು ಕಂಪನಿ ಹೇಳಿದೆ.

Article Published On: Wednesday, September 18, 2019, 18:39 [IST]
English summary
TVS NTorq 125 Facelift With LED Headlamp & New Design Teased Through Short Video - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+