ಹೋಂಡಾ ಡ್ರೀಮ್ ಬೈಕ್‍ಗಳನ್ನು ಮಾರಾಟದಲ್ಲಿ ಹಿಂದಿಕ್ಕಿದ ಟಿವಿಎಸ್ ರೇಡಿಯಾನ್

ದೇಶಿಯ ಮಾರುಕಟ್ಟೆಯಲ್ಲಿ ಕಮ್ಯೂಟರ್ ಬೈಕ್ ವಿಭಾಗವು ಯಶಸ್ವಿಯತ್ತ ಸಾಗುತ್ತಿದ್ದು, ಈ ನಿಟ್ಟಿನಲ್ಲಿ ಟಿವಿಎಸ್ ಸಂಸ್ಥೆಯು ತಮ್ಮ ರೇಡಿಯಾನ್ ಬೈಕ್‍ಗಳನ್ನು ಕಳೆದ ಸೆಪ್ಟೆಂಬರ್‍‍ನಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಬೈಕಿನ ಮೈಲೇಜ್ ಮತ್ತು ವಿನ್ಯಾಸಕ್ಕೆ ತಲೆಬಾಗಿದ ಗ್ರಾಹಕರು, ಇದನ್ನು ಖರೀದಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಹೋಂಡಾ ಡ್ರೀಮ್ ಬೈಕ್‍ಗಳನ್ನು ಮಾರಾಟದಲ್ಲಿ ಹಿಂದಿಕ್ಕಿದ ಟಿವಿಎಸ್ ರೇಡಿಯಾನ್

ಟಿವಿಎಸ್ ರೇಡಿಯಾನ್ ಬೈಕ್ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯನ್ನು ಪಡೆಯುತ್ತಿರುವ ಕಾರಣ, ಈ ಬೈಕಿನ ಖರೀದಿ ವೇಳೆ ಮತ್ತೆರಡೆ ಹೊಸ ಬಣ್ಣಗಳಲ್ಲಿ ಆಯ್ಕೆ ಮಾಡಿಕೊಳ್ಳಬಹುದಾದ ಸೌಲಭ್ಯವನ್ನು ಸಂಸ್ಥೆಯು ಗ್ರಾಹಕರಿಗೆ ನೀಡಲಾಗಿದ್ದು, ಈ ಬೈಕ್ ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 50,070 ಸಾವಿರದ ಬೆಲೆಯನ್ನು ಪಡೆದುಕೊಂಡಿದೆ. ಸಧ್ಯಕ್ಕೆ 110 ಸಿಸಿ ಬೈಕ್‍ಗಳು ಮಾರುಕಟ್ಟೆಯಲ್ಲಿ ಅಷ್ಟಿಲ್ಲವಾದರೂ ಈ ಬೈಕ್ ಬಿಡುಗಡೆಗೊಂಡಾಗ ಹೆಚ್ಚಿನ ಜನಪ್ರಿಯತೆಯನ್ನು ಪಡೆದಿತ್ತು ಎಂದರೆ ತಪ್ಪಾಗುವುದಿಲ್ಲ.

ಹೋಂಡಾ ಡ್ರೀಮ್ ಬೈಕ್‍ಗಳನ್ನು ಮಾರಾಟದಲ್ಲಿ ಹಿಂದಿಕ್ಕಿದ ಟಿವಿಎಸ್ ರೇಡಿಯಾನ್

ಜೂನ್ 2019ರಲ್ಲಿ ಹೋಂಡಾ ಟೂ ವ್ಹೀಲರ್ ಸಂಸ್ಥೆಯಲ್ಲಿನ ಜನಪ್ರಿಯ ಡೀಮ್ ಬೈಕ್‍ಗಳು 19,829 ಯೂನಿಟ್ ಮಾರಾಟಗೊಂಡಿದ್ದರೆ, 2018ರ ಜೂನ್‍ನಲ್ಲಿ 23,308 ಯೂನಿಟ್ ಮಾರಾಟಗೊಂಡಿತ್ತು. ಆದರೆ ಇತ್ತೀಚೆಗೆ ಟಿವಿಎಸ್ ಸಂಸ್ಥೆಯು ಬಿಡುಗಡೆ ಮಾಡಲಾದ ರೇಡಿಯಾನ್ ಬೈಕ್ ಜೂನ್ 2019ರಲ್ಲಿ ಸುಮಾರು 20,530 ಯೂನಿಟ್ ಮಾರಾಟಗೊಂಡಿದೆ.

ಹೋಂಡಾ ಡ್ರೀಮ್ ಬೈಕ್‍ಗಳನ್ನು ಮಾರಾಟದಲ್ಲಿ ಹಿಂದಿಕ್ಕಿದ ಟಿವಿಎಸ್ ರೇಡಿಯಾನ್

ಲಭ್ಯವಿರುವ ಬಣ್ಣ ಮತ್ತು ವಾರಂಟಿ

ಒಟ್ಟು ನಾಲ್ಕು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುವ ಟಿವಿಎಸ್ ರೆಡಿಯಾನ್ ಬೈಕ್‌ಗಳು ವೈಟ್, ಬೀಜ್, ಪರ್ಪಲ್ ಮತ್ತು ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದೀಗ ವಾಲ್ಕೆನೊ ರೆಡ್ ಹಾಗು ಟೈಟಾನಿಯಂ ಗ್ರೇ ಎಂಬ ಮತ್ತೆರಡು ಬಣ್ಣಗಳಲ್ಲಿ ಈ ಬೈಕ್ ಅನ್ನು ಖರೀದಿ ಮಾಡಬಹುದಾಗಿದೆ. ಇಷ್ಟೆ ಅಲ್ಲದೆಯೆ ಈ ಬೈಕ್ ಮೇಲೆ ಗರಿಷ್ಠ 5 ವರ್ಷಗಳ ವಾರಂಟಿ ದೊರೆಯಲಿದೆ.

ಬೈಕಿನ ವಿನ್ಯಾಸದಲ್ಲಿ ಸ್ಟೈಲಿಷ್ ಕ್ರೋಮ್ ಅಸೆಂಟ್ಸ್, ಪವರ್ ಫುಲ್ ಹೆಡ್‌ಲ್ಯಾಂಪ್, ಕ್ರೋಮ್ ಬೆಜೆಲ್, ಡೇ ಟೈಮ್ ರನ್ನಿಂಗ್ ಲೈಟ್, ಫ್ಯೂಲ್ ಟ್ಯಾಂಕ್ ಮೇಲ್ಭಾಗದಲ್ಲಿ ಪಾಡ್ ಸೌಲಭ್ಯ, ಕ್ರೋಮ್ ಪ್ರೇರಿತ ಇನ್‌ಸ್ಟುಮೆಂಟಲ್ ಕ್ಲಸ್ಟರ್ ಸೌಲಭ್ಯಗಳು ಬೈಕಿಗೆ ಕ್ಲಾಸಿಕ್ ಟಚ್ ನೀಡಿವೆ.

ಹೋಂಡಾ ಡ್ರೀಮ್ ಬೈಕ್‍ಗಳನ್ನು ಮಾರಾಟದಲ್ಲಿ ಹಿಂದಿಕ್ಕಿದ ಟಿವಿಎಸ್ ರೇಡಿಯಾನ್

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಎಂಜಿನ್ ಸಾಮರ್ಥ್ಯ

109.7 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಟಿವಿಎಸ್ ರೆಡಿಯನ್ ಬೈಕ್‌ಗಳು 8.2-ಬಿಎಚ್‌ಪಿ ಮತ್ತು 8.7-ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದ್ದು, 4-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 10-ಲೀಟರ್ ಫ್ಯೂಲ್ ಟ್ಯಾಂಕ್ ಸೌಲಭ್ಯವನ್ನು ಪಡೆದುಕೊಂಡಿದೆ.

ಹೋಂಡಾ ಡ್ರೀಮ್ ಬೈಕ್‍ಗಳನ್ನು ಮಾರಾಟದಲ್ಲಿ ಹಿಂದಿಕ್ಕಿದ ಟಿವಿಎಸ್ ರೇಡಿಯಾನ್

ಮೈಲೇಜ್

ಕಮ್ಯೂಟರ್ ಬೈಕ್ ವಿಭಾಗದಲ್ಲೇ ಅತ್ಯುತ್ತಮ ಎನ್ನಿಸುವಷ್ಟು ಮೈಲೇಜ್ ಸಾಮರ್ಥ್ಯ ಹೊಂದಿರುವ ರೆಡಿಯಾನ್ ಬೈಕ್‌ಗಳು ಪ್ರತಿ ಲೀಟರ್‌ಗೆ 69.3 ಕಿ.ಮೀ ಮೈಲೇಜ್ ನೀಡಲಿವೆ ಎಂದು ಟಿವಿಎಸ್ ಸಂಸ್ಥೆಯು ಹೇಳಿಕೊಂಡಿದೆ.

ಹೋಂಡಾ ಡ್ರೀಮ್ ಬೈಕ್‍ಗಳನ್ನು ಮಾರಾಟದಲ್ಲಿ ಹಿಂದಿಕ್ಕಿದ ಟಿವಿಎಸ್ ರೇಡಿಯಾನ್

ಬ್ರೇಕಿಂಗ್ ಸಿಸ್ಟಂ

ಹೆಚ್ಚುತ್ತಿರುವ ಸ್ಕಿಡಿಂಗ್ ತೊಂದರೆಯನ್ನ ತಪ್ಪಿಸಲು ಸಿಂಕ್ರೊನೈಸ್ಡ್ ಬ್ರೇಕಿಂಗ್ ಟೆಕ್ನಾಲಜಿಯೊಂದಿಗೆ ಬೈಕಿನ ಎರಡು ಬದಿ ಚಕ್ರಗಳಲ್ಲೂ ಡ್ರಮ್ ಬ್ರೇಕ್ ಬಳಕೆ ಮಾಡಲಾಗಿದ್ದು, ಬೈಕಿನ ಮುಂಭಾಗದಲ್ಲಿ ಟೆಲಿಸ್ಕೊಪಿಕ್ ಫ್ರೋಕ್ಸ್ ಮತ್ತು ಹಿಂಭಾಗದಲ್ಲಿ ಐದು ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಹೈಡ್ರಾಲಿಕ್ ಸಸ್ಷೆನ್ ನೀಡಲಾಗಿದೆ.

ಹೋಂಡಾ ಡ್ರೀಮ್ ಬೈಕ್‍ಗಳನ್ನು ಮಾರಾಟದಲ್ಲಿ ಹಿಂದಿಕ್ಕಿದ ಟಿವಿಎಸ್ ರೇಡಿಯಾನ್

ಬೈಕಿನಲ್ಲಿರುವ ಇತರೆ ಸೌಲಭ್ಯಗಳು

1,265ಎಂಎಂ ಎತ್ತರ ಹೊಂದಿರುವ ಟಿವಿಎಸ್ ರೆಡಿಯಾನ್ ಬೈಕ್‌ಗಳು 180ಎಂಎಂ ಗ್ರೌಂಡ್ ಕ್ಲಿಯೆರೆನ್ಸ್‌ನೊಂದಿಗೆ ಸೈಡ್ ಸ್ಟ್ಯಾಂಡ್ ಇಂಡಿಕೇಟರ್, ಎಲೆಕ್ಟ್ರಿಕ್ ಸ್ಟಾರ್ಟ್, 18-ಇಂಚಿನ ಅಲಾಯ್ ಚಕ್ರಗಳು, ಡ್ಯುರಾ ಗ್ರಿಪ್ ಟೈರ್‌ಗಳು, ಯುಎಸ್‌ಬಿ ಚಾರ್ಚಿಂಗ್ ಸ್ಲಾಟ್ ಸೇರಿದಂತೆ ಆಕರ್ಷಕ ಸೀಟಿನ ವ್ಯವಸ್ಥೆ ಹೊಂದಿದೆ.

ಹೋಂಡಾ ಡ್ರೀಮ್ ಬೈಕ್‍ಗಳನ್ನು ಮಾರಾಟದಲ್ಲಿ ಹಿಂದಿಕ್ಕಿದ ಟಿವಿಎಸ್ ರೇಡಿಯಾನ್

ಒಟ್ಟಿನಲ್ಲಿ ಕ್ಲಾಸಿಕ್ ಸ್ಟೈಲ್‌ನಲ್ಲಿ ಸಿದ್ದವಾಗಿ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಟಿವಿಎಸ್ ರೆಡಿಯಾನ್ ಬೈಕ್‌ಗಳು ಮಧ್ಯಮ ವರ್ಗದ ಗ್ರಾಹಕರ ನೆಚ್ಚಿನ ಆಯ್ಕೆಯಾಗುವ ಎಲ್ಲಾ ಗುಣಗಳನ್ನು ಹೊಂದಿದ್ದು, ಮೈಲೇಜ್ ವಿಚಾರವಾಗಿ ಉತ್ತಮ ಎನ್ನಿಸಲಿರುವ ಈ ಹೊಸ ಬೈಕ್ ಹೀರೋ ಸ್ಪ್ಲೈಂಡರ್, ಹೆಚ್ಎಫ್ ಡಿಲಕ್ಸ್, ಬಜಾಜ್ ಸಿಟಿ 100, ಹೋಂಡಾ ಡ್ರೀಮ್ ಯುಗಾ ಸೇರಿದಂತೆ ಹಲವು ಕಮ್ಯೂಟರ್ ಬೈಕ್‌ಗಳಿಗೆ ತ್ರೀವ ಪೈಪೋಟಿ ನೀಡಲಿದೆ ಎನ್ನಬಹುದು.

Article Published On: Thursday, August 1, 2019, 9:24 [IST]
English summary
TVS Radeon Beats Honda Dream Series June 2019 Sales. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+