ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಬಿಎಸ್6 ಟಿವಿಎಸ್ ಬೈಕುಗಳು
ಭಾರತದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಟಿವಿಎಸ್ ಮೋಟಾರ್ ತನ್ನ ಬಿಎಸ್-6 ಬೈಕ್‍ಗಳನ್ನು ನವೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಳಿಸಲಿದೆ. ಕಂಪನಿಯು ಮುಂದಿನ ವರ್ಷದ ಏಪ್ರಿಲ್ ತಿಂಗಳಿಗಿಂತ ಮೊದಲು ತನ್ನ ಸರಣಿಯಲ್ಲಿರುವ ಎಲ್ಲಾ ವಾಹನಗಳನ್ನು ಬಿಎಸ್-6 ಮಾದರಿಗಳಾಗಿ ನವೀಕರಿಸಿ ಬಿಡುಗಡೆಗೊಳಿಸಲಿದೆ.

ಐಎಬಿಯ ವರದಿಗಳ ಪ್ರಕಾರ, ಟಿವಿಎಸ್ ಮೋಟಾರ್ ನಿರ್ದೇಶಕ ಹಾಗೂ ಚೀಫ್ ಎಕ್ಸಿಕ್ಯುಟಿವ್ ಆಫೀಸರ್ ಕೆ.ಎನ್. ರಾಧಾಕೃಷ್ಣನ್ ಅವರು ಭಾರತದಲ್ಲಿ ಬಿಎಸ್-6 ಎಂಜಿನ್ ಅಳವಡಿಸಿರುವ ಅಪಾಚೆ ಆರ್‍ಟಿಆರ್ 200 4ವಿ ಮತ್ತು ಅಪಾಚೆ ಆರ್‍ಟಿಆರ್ 160 4ವಿ ಬೈಕ್‍ಗಳನ್ನು ಸ್ಪಾಟ್ ಟೆಸ್ಟ್ ನಡೆಸಿರುವುದನ್ನು ಖಚಿತಪಡಿಸಿದ್ದಾರೆ.

ರಾಧಾಕೃಷ್ಣನ್‍ರವರು ಮಾತನಾಡಿ, ಕಂಪನಿಯು ನವೆಂಬರ್ ತಿಂಗಳಿನಲ್ಲಿ ಬಿಎಸ್-6 ಮಾದರಿಗಳನ್ನು ಬಿಡುಗಡೆಗೊಳಿಸಿ, ಅದನ್ನು ಮಾರುಕಟ್ಟೆಯಲ್ಲಿ ವಿತರಿಸಲಿದೆ. ಕಂಪನಿಯ ಹಣಕಾಸು ವರ್ಷದ ಕೊನೆಯ ತಿಂಗಳಲ್ಲಿ ಬಿಎಸ್-6 ಮಾದರಿಗಳನ್ನು ಮಾರುಕಟ್ಟೆಯಲ್ಲಿ ಲಭ್ಯವಾಗುವಂತೆ ಮಾಡಲು ಸಂಪೂರ್ಣವಾಗಿ ಗಮನಹರಿಸುತ್ತೇವೆ ಮತ್ತು ನಾವು ಬಿಎಸ್-6 ಮಾದರಿಗಳನ್ನು ಪೂರ್ವಭಾವಿಯಾಗಿ ಮಾರಾಟ ಮಾಡುತ್ತೇವೆ. ಸರ್ಕಾರವು ಹೇಳಿರುವ ಹೊಸ ಮಾಲಿನ್ಯ ನಿಯಮ ಗಡುವಿಗಿಂತ ಮೊದಲೇ ಬಿಡುಗಡೆಗೊಳಿಸಲು ಕಂಪನಿಯು ಸಜ್ಜಾಗಿದೆ ಎಂದು ಹೇಳಿದರು.

ಬಿಎಸ್-6 ಬೈಕ್‍ಗಳ ಟೈಮ್‍ಲೈನ್ ಬಹಿರಂಗವಾದರೂ, ರಾಧಾಕೃಷ್ಣನ್ ಅವರು ಬಿಡುಗಡೆಯಾಗಲಿರುವ ಬಿಎಸ್-6 ಮಾದರಿಯ ಹೆಸರು ಅಥವಾ ಬೆಲೆ ಅಥವಾ ಬೆಲೆ ಏರಿಕೆಗಳ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಲಿಲ್ಲ. ಟಿವಿಎಸ್ ಮೋಟಾರ್ ಕಂಪನಿಯು ಮೊದಲಿಗೆ ತನ್ನ ಸರಣಿಯಲ್ಲಿರುವ ಬೈಕ್‍ಗಳನ್ನು ಬಿಎಸ್-6ಗೆ ನವೀಕರಿಸುತ್ತದೆ.

ಮುಂದಿನ ವರ್ಷದ ಆರಂಭದಲ್ಲಿ ಕಂಪನಿಯು ಸ್ಕೂಟರ್‍ಗಳನ್ನು ಬಿಎಸ್-6 ಮಾದರಿಗೆ ನವೀಕರಿಸಲಿದೆ. ಬಿಎಸ್-6 ಮಾದರಿಯ ಬೈಕ್ ಮತ್ತು ಸ್ಕೂಟರ್‍ಗಳ ಬೆಲೆಯು ಬಿಎಸ್-4 ಮಾದರಿಗಳಿಗಿಂತ ಶೇ.10 ರಿಂದ ಶೇ.15 ರಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

ಟಿವಿಎಸ್ ಸತತವಾಗಿ ತಮ್ಮ ಬೈಕ್‍ಗಳ ನವೀಕರಣ ಮಾಡುತ್ತಿದೆ. ಅಪಾಚೆ ಆರ್‍ಟಿಆರ್ 200 4ವಿ ಬೈಕು ಕಂಪನಿಯು ಬ್ಲೂಟೂತ್ ಸಂಪರ್ಕವನ್ನು ಬಳಸುವ ಸ್ಮಾರ್ಟ್‌ಫೋನ್‌ನೊಂದಿಗೆ ಸ್ಮಾರ್ಟ್‍ಸೊನೆಕ್ಟ್ ತಂತ್ರಜ್ಞಾನದೊಂದಿಗೆ ಬೈಕ್ ಅನ್ನು ನವೀಕರಿಸಿದೆ.

ಕಂಪನಿಯು ಅಪಾಚೆ ಆರ್ಆರ್ 310 ಬೈಕ್ ಅನ್ನು ಕೂಡ ನವೀಕರಿಸಿದೆ. ಬೈಕ್ ಅನ್ನು ಸ್ಲಿಪ್ಪರ್ ಮತ್ತು ಅಸಿಸ್ಟ್ ಕ್ಲಚ್‍ನೊಂದಿಗೆ ನವೀಕರಿಸಲಾಗಿದೆ. ಕಂಪನಿಯು ಮೊದಲ ಬಾರಿಗೆ ಟಿವಿಎಸ್ ಅಪಾಚೆ ಆರ್‍ಟಿಆರ್ 160 4ವಿ ಬೈಕಿನಲ್ಲಿ ಬಿಎಸ್ 6 ಎಂಜಿನ್ ಅನ್ನು ಅಳವಡಿಸಿತ್ತು.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಇತರ ವಾಹನ ತಯಾರಕ ಕಂಪನಿಗಳಾದ ಯಮಹಾ, ಹೀರೋ ಮತ್ತು ಹೋಂಡಾ ತಮ್ಮ ಬಿಎಸ್-6 ಪ್ರೇರಿತ ಮಾದರಿಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿವೆ. ಹೋಂಡಾ ತಮ್ಮ ಬಿಎಸ್-6 ಮಾದರಿಗಳನ್ನು ಬಿಡುಗಡೆಗೊಳಿಸಲು ಪ್ರಾರಂಭಿಸಿದೆ. ಕಳೆದ ತಿಂಗಳು ಮೊದಲ ಬಿಎಸ್-6 ವಾಹನವಾದ ಅಕ್ಟಿವಾ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿತ್ತು.
MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ದೇಶಾದ್ಯಂತ ಮಾಲಿನ್ಯವನ್ನು ಕಡಿಮೆಗೊಳಿಸುವ ಗುರಿಯನ್ನಿಟ್ಟುಕೊಂಡು ಸರ್ಕಾರವು ಹೊಸ ಬಿಎಸ್-6 ಮಾಲಿನ್ಯ ನಿಯಮವನ್ನು ಜಾರಿಗೊಳಿಸುತ್ತಿದೆ. ಹೊಸ ಬಿಎಸ್-6 ಮಾಲಿನ್ಯ ನಿಯಮದ ಗಡುವನ್ನು ಏಪ್ರಿಲ್ 1ಕ್ಕೆ ನಿಗದಿಪಡಿಸಲಾಗಿದೆ. ಟಿವಿಎಸ್ ಮೋಟಾರ್ ಕಂಪನಿ, ಹೆಚ್ಚಿನ ಸುರಕ್ಷತೆಗಾಗಿ ಟಿವಿಎಸ್ ರೇಸಿಂಗ್ ಪರ್ಫಾರ್ಮೆನ್ಸ್ ಗೇರ್ ಅನ್ನು ತನ್ನ ಸರಣಿಯ ಬೈಕುಗಳಲ್ಲಿ ಅಳವಡಿಸುತ್ತಿದೆ. ಕಂಪನಿಯು ಹೊಸದಾಗಿ ರೈಡಿಂಗ್ ಗೇರ್ ಮತ್ತು ಅರ್ಬನ್ ವೇರ್ ಎಂಬ ಎರಡು ಹೊಸ ರೈಡಿಂಗ್ ಗೇರ್‍ಗಳನ್ನು ಆರಂಭಿಸಿದೆ.
MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಟಿವಿಎಸ್ ಮೋಟಾರ್ ಕಂಪನಿಯು, ಬೈಕ್, ಸ್ಕೂಟರ್ ಮತ್ತು ತ್ರಿಚಕ್ರ ವಾಹನ ಸೇರಿದಂತೆ ದೊಡ್ಡ ಶ್ರೇಣಿಯನ್ನು ಹೊಂದಿದೆ. ಇವೆಲ್ಲವೂಗಳನ್ನು ಬಿಎಸ್-6 ನಿಯಮಕ್ಕೆ ತಕ್ಕಂತೆ ನವೀಕರಿಸಲು ಹೆಚ್ಚಿನ ಸಮಯಾವಕಾಶ ತೆಗೆದುಕೊಳ್ಳುತ್ತದೆ. ಆದರೂ ಬಿಎಸ್-6 ಮಾಲಿನ್ಯ ನಿಯಮದ ಗಡುವಿಗಿಂತ ಮೊದಲೇ ತನ್ನ ಶ್ರೇಣಿಯ ವಾಹನಗಳನ್ನು ಬಿಎಸ್-6 ಮಾದರಿಗೆ ನವೀಕರಿಸಿ ಬಿಡುಗಡೆಗೊಳಿಸಲು ಸಜ್ಜಾಗಿರುವುದಾಗಿ ಕಂಪನಿ ಹೇಳಿದೆ.


Click it and Unblock the Notifications








