ವಿಶೇಷ ಚೇತನರಿಗಾಗಿ ವಿಶೇಷ ಕಿಟ್ ತಂದ ಟಿವಿಎಸ್ ಎಕ್ಸ್‌ಎಲ್

ಹೊಸೂರು ಮೂಲದ ಟಿವಿಎಸ್ ಮೋಟಾರ್ ಕಂಪನಿ ತನ್ನ ಟಿವಿಎಸ್ ಎಕ್ಸ್‌ಎಲ್ 100 ಶ್ರೇಣಿಯ ಮೊಪೆಡ್‌ಗಳಿಗಾಗಿ ರೆಟ್ರೊ-ಫಿಟ್‌ಮೆಂಟ್ ಕಿಟ್ ಅನ್ನು ಬಿಡುಗಡೆಗೊಳಿಸಿದೆ. ಈ ರೆಟ್ರೊ ಫಿಟ್‍‍ಮೆಂಟ್ ಕಿಟ್‍‍ನ ಬೆಲೆಯು ರೂ.11,237ಗಳಾಗಿದೆ. ಈ ಕಿಟ್ ಎ‍ಆರ್‍ಎ‍ಐ ಪ್ರಮಾಣಪತ್ರವನ್ನು ಪಡೆದಿದೆ.

ವಿಶೇಷ ಚೇತನರಿಗಾಗಿ ವಿಶೇಷ ಕಿಟ್ ತಂದ ಟಿವಿಎಸ್ ಎಕ್ಸ್‌ಎಲ್

ವಯಸ್ಸಾದವರಿಗಾಗಿ ಹಾಗೂ ವಿಶೇಷ ಚೇತನರು ಸುಲಭವಾಗಿ ಪ್ರಯಾಣಿಸುವಂತೆ ಮಾಡಲು ಟಿವಿಎಸ್ ಕಂಪನಿಯು ಈ ಕಿಟ್ ಅನ್ನು ಬಿಡುಗಡೆಗೊಳಿಸಿದೆ. ಎಕ್ಸ್‌ಎಲ್ 100 ಸರಣಿಯ ಮೊಪೆಡ್‌ಗಳಿಗಾಗಿ ಹೊಸ ಆಡ್ ಆನ್ ಕಿಟ್‌ಗಳನ್ನು ಟಿವಿಎಸ್ ಮೋಟಾರ್ಸ್ ಸ್ವತಃ ತಾನೇ ವಿನ್ಯಾಸಗೊಳಿಸಿದ್ದು, ಅಭಿವೃದ್ಧಿಪಡಿಸಿದೆ.

ವಿಶೇಷ ಚೇತನರಿಗಾಗಿ ವಿಶೇಷ ಕಿಟ್ ತಂದ ಟಿವಿಎಸ್ ಎಕ್ಸ್‌ಎಲ್

ಇದು ಸುರಕ್ಷಿತ ಫಿಟ್‌ಗಾಗಿ 6 ಮೌಂಟಿಂಗ್ ಪಾಯಿಂಟ್‌ಗಳನ್ನು ಹೊಂದಿದೆ. ಫೆಂಡರ್‌ಗಳನ್ನು 16-ಇಂಚಿನ ಗೇಜ್-ಶೀಟ್ ಮೆಟಲ್‍‍ನಿಂದ ತಯಾರಿಸಲಾಗಿದೆ. ಚಾಲನೆಯಲ್ಲಿದ್ದಾಗಲೂ ಉತ್ತಮ ನಿಯಂತ್ರಣಕ್ಕಾಗಿ ಹಾಗೂ ಸ್ಟಾಬಿಲಿಟಿಗಾಗಿ ಫ್ರೇಮ್ ಅನ್ನು ವಿನ್ಯಾಸಗೊಳಿಸಲಾಗಿದೆ.

ವಿಶೇಷ ಚೇತನರಿಗಾಗಿ ವಿಶೇಷ ಕಿಟ್ ತಂದ ಟಿವಿಎಸ್ ಎಕ್ಸ್‌ಎಲ್

ಹಗುರವಾದ ತೂಕದ ವಿನ್ಯಾಸ ಹಾಗೂ ನಿರ್ಮಾಣವು ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಆಫ್ಟರ್ ಮಾರ್ಕೆಟ್ ಕಿಟ್‌ಗಳಿಗಿಂತ ಉತ್ತಮ ಪರ್ಫಾಮೆನ್ಸ್ ಅನ್ನು ನೀಡುತ್ತದೆ. ನಾಲ್ಕು ಆರ್ಮ್‌ಸ್ಟ್ರಾಂಗ್ ಸಸ್ಪೆಂಷನ್ ಯುನಿ‍‍ಟ್‍‍ಗಳು ಎಕ್ಸ್‌ಎಲ್ 100 ಅನ್ನು ಕೆಟ್ಟ ರಸ್ತೆಗಳಲ್ಲಿಯೂ ಸ್ಥಿರವಾಗಿಡಲು ಸಹಾಯ ಮಾಡುತ್ತವೆ.

ವಿಶೇಷ ಚೇತನರಿಗಾಗಿ ವಿಶೇಷ ಕಿಟ್ ತಂದ ಟಿವಿಎಸ್ ಎಕ್ಸ್‌ಎಲ್

ಟಿವಿಎಸ್ ಮೋಟಾರ್ಸ್ ಅಭಿವೃದ್ಧಿಪಡಿಸಿದ ಹೊಸ ಕಿಟ್‌ನಲ್ಲಿ ವಾಕಿಂಗ್ ಸ್ಟಿಕ್ ಹಾಗೂ ಕ್ರಚ್‍‍ಗಳಿವೆ. ಈ ಕಿಟ್ ಅನ್ನು ಸದ್ಯಕ್ಕೆ ಎಕ್ಸ್‌ಎಲ್ 100ನಲ್ಲಿ ಮಾತ್ರ ಮಾರಾಟ ಮಾಡಲಾಗುವುದು. ಟಿವಿಎಸ್ ಸರಣಿಯ ಇತರ ವಾಹನಗಳಲ್ಲಿಯೂ ಸಹ ಇದೇ ರೀತಿಯ ರೆಟ್ರೊ ಫಿಟ್‌ಮೆಂಟ್ ಕಿಟ್‌ಗಳನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ.

ವಿಶೇಷ ಚೇತನರಿಗಾಗಿ ವಿಶೇಷ ಕಿಟ್ ತಂದ ಟಿವಿಎಸ್ ಎಕ್ಸ್‌ಎಲ್

ಮಾರುಕಟ್ಟೆಯಲ್ಲಿರುವ ಟಿವಿಎಸ್ ಎಕ್ಸ್‌ಎಲ್ 100 ಅನ್ನು ಸ್ಟ್ಯಾಂಡರ್ಡ್ , ಕಂಫರ್ಟ್ ಹಾಗೂ ಹೆವಿ ಡ್ಯೂಟಿ ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಮೊಪೆಡ್‌ನಲ್ಲಿ 99.7 ಸಿಸಿ ಏರ್-ಕೂಲ್ಡ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ.

ವಿಶೇಷ ಚೇತನರಿಗಾಗಿ ವಿಶೇಷ ಕಿಟ್ ತಂದ ಟಿವಿಎಸ್ ಎಕ್ಸ್‌ಎಲ್

ಈ ಎಂಜಿನ್ 4.3 ಬಿಹೆಚ್‌ಪಿ ಪವರ್ ಹಾಗೂ 6.5 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಮೊಪೆಡ್‌ಗಳು ಮೂಲ ಪ್ರಯಾಣದ ದ್ವಿಚಕ್ರ ವಾಹನವಾಗಿದೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ವಿಶೇಷ ಚೇತನರಿಗಾಗಿ ವಿಶೇಷ ಕಿಟ್ ತಂದ ಟಿವಿಎಸ್ ಎಕ್ಸ್‌ಎಲ್

ಈ ಮೊಪೆಡ್‍‍ಗಳ ಎರಡೂ ತುದಿಗಳಲ್ಲಿ ಡ್ರಮ್ ಬ್ರೇಕ್‌ಗಳು, ಮೆಂಟೆನೆನ್ಸ್ ಇಲ್ಲದ ಬ್ಯಾಟರಿ, ಅನಲಾಗ್ ಸ್ಪೀಡೋಮೀಟರ್, ಕಿಕ್ ಸ್ಟಾರ್ಟ್ ಹಾಗೂ ಬಲ್ಬ್-ಟೈಪ್ ಟರ್ನ್ ಸಿಗ್ನಲ್ ಇಂಡಿಕೇಟರ್‍‍ಗಳಿವೆ. ಟಿವಿಎಸ್ ಎಕ್ಸ್‌ಎಲ್ 100 ಸರಣಿಯ ಮೊಪೆಡ್‌ಗಳು 4.0 ಲೀಟರಿನ ಫ್ಯೂಯಲ್ ಟ್ಯಾಂಕ್ ಹೊಂದಿವೆ.

MOST READ: ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ - ಶೋರೂಂ ಸಿಬ್ಬಂದಿಗೆ ಸುಸ್ತೋ ಸುಸ್ತು..!

ವಿಶೇಷ ಚೇತನರಿಗಾಗಿ ವಿಶೇಷ ಕಿಟ್ ತಂದ ಟಿವಿಎಸ್ ಎಕ್ಸ್‌ಎಲ್

ಎಆರ್‌ಎಐ ಪ್ರಮಾಣಪತ್ರದ ಪ್ರಕಾರ ಪ್ರತಿ ಲೀಟರ್ ಪೆಟ್ರೋಲಿಗೆ 60 ಕಿ.ಮೀ ಮೈಲೇಜ್ ನೀಡುತ್ತದೆ. ಜೊತೆಗೆ ಗಂಟೆಗೆ 60 ಕಿ.ಮೀ ಟಾಪ್ ಸ್ಪೀಡ್‍‍ನಲ್ಲಿ ಚಲಿಸುತ್ತದೆ. ಈ ಮೊಪೆಡ್‍‍ಗಳು 130 ಕೆ.ಜಿಯಷ್ಟು ತೂಕವನ್ನು ಸಾಗಿಸುತ್ತವೆ. ಈ ಮೊಪೆಡ್‍‍ಗಳ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.29,000 ದಿಂದ ರೂ.32,000ಗಳಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ವಿಶೇಷ ಚೇತನರಿಗಾಗಿ ವಿಶೇಷ ಕಿಟ್ ತಂದ ಟಿವಿಎಸ್ ಎಕ್ಸ್‌ಎಲ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಎಕ್ಸ್‌ಎಲ್ 100 ಸರಣಿಯ ಮೊಪೆಡ್‌ಗಳಿಗಾಗಿ ಉತ್ತಮವಾಗಿ ವಿನ್ಯಾಸಗೊಳಿಸಲಾದ ಕಿಟ್ ಖರೀದಿಸುವುದು ಸವಾಲಿನ ಕೆಲಸ. ಟಿವಿಎಸ್ ಮೊಪೆಡ್‌ಗಳ ಎಕ್ಸ್‌ಎಲ್ ಸರಣಿಗಳನ್ನು ಅವುಗಳ ಕನಿಷ್ಠ ವಿನ್ಯಾಸ, ಕಡಿಮೆ ತೂಕ ಹಾಗೂ ವೇಗದ ಕಾರಣಕ್ಕಾಗಿ ಹೆಚ್ಚು ಖರೀದಿಸಲಾಗುತ್ತದೆ. ಟಿವಿಎಸ್ ತನ್ನದೇ ಆದ ಕಿಟ್ ಅನ್ನು ಆರಂಭಿಸಿದ್ದು ಒಳ್ಳೆಯ ಬೆಳವಣಿಗೆ. ಇದು ಜನರಿಗೆ ವಾರಂಟಿಯನ್ನು ಕಳೆದುಕೊಳ್ಳದೆ ಹೆಚ್ಚುವರಿ ಕಿಟ್‍‍ಗಳನ್ನು ಖರೀದಿಸುವ ಆಯ್ಕೆಯನ್ನು ನೀಡುತ್ತದೆ. ಟಿವಿಎಸ್ ಎಕ್ಸ್‌ಎಲ್ 100 ಮೊಪೆಡ್‍‍ಗಾಗಿ ಟಿವಿಎಸ್ ಕಂಪನಿಯು ಇತರ ಕಿಟ್‌ಗಳನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

Most Read Articles

Kannada
English summary
TVS xl100 retro fitment kit for differently abled launched in India details - Read in Kannada
Story first published: Monday, November 18, 2019, 18:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X