ಲೈಫ್ ಟೈಮ್ ಕ್ವಾಲಿಟಿ ಕೇರ್ ಅಭಿಯಾನ ಆರಂಭಿಸಿದ ಯಮಹಾ
ಯಮಹಾ ಸಂಸ್ಥೆಯು ತನ್ನ ನೆಚ್ಚಿನ ಗ್ರಾಹಕರಿಗಾಗಿ 'ಲೈಫ್ ಟೈಮ್ ಕ್ವಾಲಿಟಿ ಕೇರ್' ಅಭಿಯಾನವನ್ನು ಘೋಷಣೆ ಮಾಡಿದ್ದು, ಧೀರ್ಘಕಾಲದ ಮಾಲೀಕ್ವವನ್ನು ಹೆಚ್ಚಿಸಲು ಇದು ಸಹಕಾರಿಯಾಗಲಿದೆ. ಹೊಸ ಸರ್ವೀಸ್ ಅಭಿಯಾನವು ಹೊಸದಾಗಿ ಖರೀದಿ ಮಾಡಲಾಗುವ ಬೈಕ್ ಮಾಲೀಕರ ಜೊತೆಗೆ ಈಗಾಗಲೇ ಬೈಕ್ ಖರೀದಿ ಮಾಡಿರುವ ಬೈಕ್ ಮಾಲೀಕರಿಗೂ ಅನ್ವಯವಾಗಲಿದೆ.

ಹೊಸ ವಾಹನಗಳ ಪರ್ಫಾಮೆನ್ಸ್ ಮತ್ತು ಇಂಧನ ದಕ್ಷತೆಯನ್ನು ಕಾಯ್ದುಕೊಳ್ಳಲು ಕಾಲ ಕಾಲಕ್ಕೆ ಸರ್ವೀಸ್ ಮಾಡಿಸುವುದು ತುಂಬಾ ಮುಖ್ಯ. ಆದ್ರೆ ಹೊಸದಾಗಿ ವಾಹನ ಖರೀದಿ ಮಾಡುವಾಗ ಇರುವ ಹುಮ್ಮುಸ್ಸು ನಂತರದ ದಿನಗಳಲ್ಲಿ ಇರುವುದಿಲ್ಲ. ಇಂದರಿಂದ ವಾಹನ ಕಾರ್ಯಕ್ಷಮತೆಯಲ್ಲಿ ಸಾಕಷ್ಟು ವ್ಯತ್ಯಾಸಗಳಾಗುವುದು ಇದೇ ಕಾರಣಕ್ಕೆ. ಆದ್ರೆ ಇದನ್ನು ಹೊಗಲಾಡಿಸಿ ಖರೀದಿ ಮಾಡಲಾಗುವ ವಾಹನವು ಯಾವಗಲೂ ಹೊಸತರಂತೆ ಕಾಣಲು ಯಮಹಾ ಸಂಸ್ಥೆಯು ಹೊಸ ಅಭಿಯಾನಕ್ಕೆ ಚಾಲನೆ ನೀಡಿದೆ.

ಲೈಫ್ ಟೈಮ್ ಕ್ವಾಲಿಟಿ ಕೇರ್ ಅಭಿಯಾನದಲ್ಲಿ ಹಲವಾರು ತಾಂತ್ರಿಕ ಸೌಲಭ್ಯಗಳ ಸೇವೆ ದೊರೆಯಲಿದ್ದು, ಬೈಕ್ ಮತ್ತು ಸ್ಕೂಟರ್ ಮಾದರಿಗಳಿಗೆ ಅನುಗುಣವಾಗಿ ಅತಿ ಕಡಿಮೆ ಬೆಲೆಯಲ್ಲಿ ವಾರ್ಷಿಕ ಚಂದಾದಾರರಾಗಬೇಕು.

ಲೈಫ್ ಟೈಮ್ ಕ್ವಾಲಿಟಿ ಕೇರ್ ಅಭಿಯಾನದಲ್ಲಿ ಒಂದು ಬಾರಿ ಚಂದಾದಾರದಲ್ಲಿ ರೋಡ್ ಸೈಡ್ ಅಸಿಸ್ಟ್, ವಿಸ್ತರಿತ ವಾರಂಟಿ ಅವಧಿ, ಸರ್ವೀಸ್ ವೇಳೆ ಉಚಿತವಾಗಿ ಪಿಕ್ ಅಪ್ ಮತ್ತು ಡ್ರಾಪ್ ಸೇವೆ ಮತ್ತು ವಾರ್ಷಿಕ ನಿರ್ವಹಣೆ ಒಪ್ಪಂದಗಳನ್ನು ಒಳಗೊಂಡಿರುತ್ತದೆ.

ಯಮಹಾದ ಹೊಸ ಸೇವಾ ಯೋಜನೆಯ ಅಡಿ ಮಾಲೀಕರಿಗೆ ಒಂದೇ ನಿಲುಗಡೆಯಲ್ಲಿ ಪೂರ್ಣ ಪ್ರಮಾಣದ ಸೇವೆಗಳು ದೊರೆಯಲಿದ್ದು, ಪ್ರತಿ ವಾಹನಕ್ಕೆ 90 ನಿಮಿಷಗಳ ಸೇವಾ ಸಮಯವನ್ನು ಇದು ಒಳಗೊಂಡಿದೆ. ನುರಿತ ತಂತ್ರಜ್ಞರ ತಂಡದಿಂದಾಗಿ ಅತಿ ಕಡಿಮೆ ಅವಧಿಯಲ್ಲಿ ಯಾವುದೇ ಹೆಚ್ಚು ಕಿರಿಕಿರಿ ಇಲ್ಲದಂತೆ ಸರ್ವೀಸ್‌ಗಳನ್ನು ಪೂರ್ಣಗೊಳಿಸಲಿದ್ದು, ಯಮಹಾ ಸಂಸ್ಥೆಯ ಕಾಲ್ ಆಫ್ ದಿ ಬ್ಲ್ಯೂ ಸೀಜನ್ 2ರ ಭಾಗವಾಗಿ ಈ ಸೇವೆಯನ್ನು ನೀಡಲಾಗುತ್ತಿದೆ.

ಹೊಸ ಸರ್ವೀಸ್ ಅಭಿಯಾನವು ಅಕ್ಟೋಬರ್ ಆರಂಭದಿಂದಲೇ ಸೇವೆಗೆ ಲಭ್ಯವಿದ್ದು, ಆಸಕ್ತ ಗ್ರಾಹಕರು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಯಮಹಾ ಅಧಿಕೃತ ಡೀಲರ್ಸ್‌ಗಳನ್ನು ಸಂಪರ್ಕಿಸಿ ಈ ಕುರಿತು ವಿಚಾರಣೆ ಮಾಡಬಹುದಾಗಿದೆ.

ಇನ್ನು ಯಮಹಾ ಸಂಸ್ಥೆಯು ಗ್ರಾಹಕರ ವಿಶ್ವಾಸ ಗಳಿಸುವಲ್ಲಿ ಹಲವಾರು ತಾಂತ್ರಿಕ ಸೌಲಭ್ಯಗಳ ಗುಣಮಟ್ಟ ನಿರ್ವಹಣೆಗಾಗಿ ವಿವಿಧ ಮಾದರಿಯ ಅಭಿಯಾನಗಳನ್ನು ಎರ್ಪಡಿಸುತ್ತಲೇ ಇದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಬಿಎಸ್-6 ವಾಹನಗಳ ಮೇಲೆ ಭಾರೀ ನೀರಿಕ್ಷೆಯಿಟ್ಟುಕೊಂಡಿದೆ.
MOST READ: ರಾಯಲ್ ಎನ್‌ಫೀಲ್ಡ್‌ಗೆ ಪೈಪೋಟಿಯಾಗಿ ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಬಿಡುಗಡೆ

2020ರ ಏಪ್ರಿಲ್ 1ರಿಂದಲೇ ಬಿಎಸ್-6 ವಾಹನಗಳ ಮಾರಾಟಕ್ಕೆ ಅಧಿಕೃತ ಚಾಲನೆ ದೊರೆಯಲಿದ್ದು, ಡೆಡ್‌ಲೈನ್‌ಗೂ ಮುನ್ನ ಯಮಹಾ ಸಂಸ್ಥೆಯು ತನ್ನ ಜನಪ್ರಿಯ ಬೈಕ್ ಮತ್ತು ಸ್ಕೂಟರ್ ಮಾದರಿಗಳನ್ನು ಹೊಸ ನಿಯಮದಂತೆ ಉನ್ನತೀಕರಿಸಿ ಬಿಡುಗಡೆಗೆ ಚಾಲನೆ ನೀಡಲಿದೆ.
MOST READ: ಪ್ರೀಮಿಯಂ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿದೆ ಒಕಿನಾವ ಲೈಟ್ ಎಲೆಕ್ಟ್ರಿಕ್ ಸ್ಕೂಟರ್

ಯಮಹಾ ಜನಪ್ರಿಯ ಆರ್15 ಇದೀಗ ಮೊದಲ ಹಂತದಲ್ಲಿ ಬಿಎಸ್-6 ಎಂಜಿನ್‌ನೊಂದಿಗೆ ಅಭಿವೃದ್ದಿಗೊಂಡಿದ್ದು, ಇದೇ ವರ್ಷ ಡಿಸೆಂಬರ್ 19ರಂದು ಅಧಿಕೃತವಾಗಿ ರಸ್ತೆಗಿಳಿಯಲಿದೆ. ಎಂಜಿನ್ ಪರ್ಫಾಮೆನ್ಸ್ ಸಾಕಷ್ಟು ಸುಧಾರಣೆ ಕಂಡಿರುವ ಹೊಸ ಬೈಕ್ ಮಾದರಿಯು ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ತವಕದಲ್ಲಿದೆ.


Click it and Unblock the Notifications