ಪ್ರೀಮಿಯಂ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿದೆ ಒಕಿನಾವ ಲೈಟ್ ಎಲೆಕ್ಟ್ರಿಕ್ ಸ್ಕೂಟರ್

ಸದ್ಯ ಮಾರುಕಟ್ಟೆಯಲ್ಲಿ ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್‌ಗಳ ಅಭಿವೃದ್ದಿಯಲ್ಲಿ ಮುಂಚೂಣಿ ಸಾಧಿಸುತ್ತಿರುವ ಒಕಿನಾವ ಸಂಸ್ಥೆಯು ಮುಂದಿನ ಕೆಲವೇ ದಿನಗಳಲ್ಲಿ ಹೆಚ್ಚಿನ ಮಟ್ಟದ ಮೈಲೇಜ್ ಪ್ರೇರಿತ ಮತ್ತೊಂದು ಪ್ರೀಮಿಯಯಂ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯೊಂದನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಬಿಡುಗಡೆಗಾಗಿ ಅಂತಿಮ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಕೈಗೊಂಡಿದೆ.

ಪ್ರೀಮಿಯಂ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿದೆ ಒಕಿನಾವ ಲೈಟ್ ಎಲೆಕ್ಟ್ರಿಕ್ ಸ್ಕೂಟರ್

ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿ ಮತ್ತು ಮಾರಾಟದ ಮೇಲೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಎಲೆಕ್ಟ್ರಿಕ್ ವಾಹನಗಳ ನಿರ್ಮಾಣದತ್ತ ಮುಖ ಮಾಡುತ್ತಿವೆ. ಕೇಂದ್ರ ಸರ್ಕಾರವು ಸಹ ಈ ನಿಟ್ಟಿನಲ್ಲಿ ಇವಿ ವಾಹನಗಳ ಉತ್ಪಾದನೆಯನ್ನು ಹೆಚ್ಚಿಸಲು ಫೇಮ್ 2 ಯೋಜನೆಯನ್ನು ಜಾರಿಗೊಳಿಸಿದ್ದು, ಇದರ ಭಾಗವಾಗಿ ಒಕಿನಾವ ಸಂಸ್ಥೆಯು ತನ್ನ ಉದ್ಯಮ ಕ್ಷೇತ್ರದ ವಿಸ್ತರಣೆಗೆ ಯೋಜನೆ ರೂಪಿಸಿರುವುದಲ್ಲದೇ ಮತ್ತಷ್ಟು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿದೆ.

ಪ್ರೀಮಿಯಂ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿದೆ ಒಕಿನಾವ ಲೈಟ್ ಎಲೆಕ್ಟ್ರಿಕ್ ಸ್ಕೂಟರ್

ಅತ್ಯುತ್ತಮ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸಿ ಸದ್ಯ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಒಕಿನಾವ ಸಂಸ್ಥೆಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಉತ್ಪನ್ನಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಲೈಟ್ ಎನ್ನುವ ಪ್ರೀಮಿಯಂ ಸ್ಕೂಟರ್ ಅನ್ನು ರೋಡ್ ಟೆಸ್ಟಿಂಗ್ ನಡೆಸುತ್ತಿದೆ.

ಪ್ರೀಮಿಯಂ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿದೆ ಒಕಿನಾವ ಲೈಟ್ ಎಲೆಕ್ಟ್ರಿಕ್ ಸ್ಕೂಟರ್

ರೋಡ್ ಟೆಸ್ಟಿಂಗ್ ವೇಳೆ ಕಂಡುಬಂದ ಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇತರೆ ಎಲೆಕ್ಟ್ರಿಕ್ ಸ್ಕೂಟರ್‌ಗಳಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ಹೊಂದಿದ್ದು, ವಿಶೇಷ ವಿನ್ಯಾಸವನ್ನು ಹೊಂದಿರುವ ಹೆಡ್‌ಲ್ಯಾಂಪ್ ಕ್ಲಸ್ಟರ್, ಯು ಆಕಾರದಲ್ಲಿರುವ ಎಲ್ಇಡಿ ಡಿಆರ್‌ಎಲ್, ಪ್ರೊಜೆಕ್ಟರ್ ಮಾದರಿಯ ಟ್ವಿನ್ ಪಾಡ್ ಹೆಡ್‌ಲೈಟ್ ಜೋಡಣೆ ಹೊಂದಿದೆ.

ಪ್ರೀಮಿಯಂ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿದೆ ಒಕಿನಾವ ಲೈಟ್ ಎಲೆಕ್ಟ್ರಿಕ್ ಸ್ಕೂಟರ್

ಜೊತೆಗೆ ಹೊಸ ಸ್ಕೂಟರ್‌ನಲ್ಲಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆ, ದೊಡ್ಡದಾದ ಟೈಲ್ ಲ್ಯಾಂಪ್ ಕ್ಲಸ್ಟರ್, ಹಿಂಬದಿ ಸವಾರರಿಗೆ ಅರಾಮದಾಯಕ ಆಸನ ಸೌಲಭ್ಯ, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಲೋ, ಹೈ ಮತ್ತು ಎಕ್ಸಿಡ್ ರೈಡಿಂಗ್ ಮೋಡ್‌ಗಳು, ವಿಸ್ತರಿತ ಸ್ಪೀಡೋ ಮೀಟರ್, ಟಾಚೋ ಮೀಟರ್, ಸ್ಟಾರ್ಟ್/ಸ್ಟಾಪ್ ಪುಶ್ ಬಟನ್, ಬ್ಲ್ಯೂ ಟೂಥ್ ಕನೆಕ್ಟಿವಿಟಿ, ಯುಎಸ್‌ಬಿ ಚಾರ್ಜರ್ ಮತ್ತು ರೈಡರ್ ಸುರಕ್ಷತೆಗಾಗಿ ಎರಡು ಬದಿಯ ಚಕ್ರಗಳಲ್ಲೂ ಡಿಸ್ಕ್ ಬ್ರೇಕ್, ಟ್ಯೂಬ್‌ಲೆಸ್ ಟೈರ್ ಫೀಚರ್ಸ್ ಮೂಲಕ ಗರಿಷ್ಠ ಮಟ್ಟದಲ್ಲಿ ಯುವ ಗ್ರಾಹಕರನ್ನು ಸೆಳೆಯಬಲ್ಲ ನೀರಿಕ್ಷೆಯಲ್ಲಿದೆ.

ಪ್ರೀಮಿಯಂ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿದೆ ಒಕಿನಾವ ಲೈಟ್ ಎಲೆಕ್ಟ್ರಿಕ್ ಸ್ಕೂಟರ್

ಇನ್ನೊಂದು ಪ್ರಮುಖ ಆಕರ್ಷಣೆ ಅಂದರೆ ಒಕಿನಾವ ಲೈಟ್ ಸ್ಕೂಟರ್ ಈ ಬಾರಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಲೀಥಿಯಂ ಅಯಾನ್ ಬ್ಯಾಟರಿ ಪಡೆದುಕೊಂಡಿದ್ದು, ಪ್ರತಿ ಚಾರ್ಜ್‌ಗೆ 150ರಿಂದ 160 ಕಿ.ಮೀ ಮೈಲೇಜ್ ಹಿಂದಿರುಗಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗಿದೆ.

ಪ್ರೀಮಿಯಂ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿದೆ ಒಕಿನಾವ ಲೈಟ್ ಎಲೆಕ್ಟ್ರಿಕ್ ಸ್ಕೂಟರ್

ಹೀಗಾಗಿ ಒಕಿನವಾ ಬಿಡುಗಡೆ ಮಾಡಲಿರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಸದ್ಯ ಮಾರುಕಟ್ಟೆಯಲ್ಲಿರುವ ಪ್ರೀಮಿಯಂ ಸ್ಕೂಟರ್‌ಗಿಂತಲೂ ಹೆಚ್ಚಿನ ಮಟ್ಟದ ಮೈಲೇಜ್ ನೀಡುವ ಸ್ಕೂಟರ್ ಮಾದರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದು, ಹೊಸ ಸ್ಕೂಟರ್ ಡಿಸೆಂಬರ್ ಅಂತ್ಯದಲ್ಲಿ ಇಲ್ಲವೇ 2020ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್‌ಪೋ ನಂತರ ಬಿಡುಗಡೆಯಾಗುವ ನೀರಿಕ್ಷೆಯಿದೆ.

MOST READ: 2020ರ ಆಟೋ ಎಕ್ಸ್‌ಪೋದಲ್ಲಿ ಸದ್ದು ಮಾಡಲಿವೆ ಈ ಹೊಸ ಎಸ್‌ಯುವಿ ಕಾರುಗಳು..!

ಪ್ರೀಮಿಯಂ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿದೆ ಒಕಿನಾವ ಲೈಟ್ ಎಲೆಕ್ಟ್ರಿಕ್ ಸ್ಕೂಟರ್

ಇನ್ನು ಒಕಿನಾವ ಸಂಸ್ಥೆಯು ಎಲೆಕ್ಟ್ರಿಕ್ ಸ್ಕೂಟರ್‌ಗಳ ಉತ್ಪಾದನಾ ಘಟಕದ ಸಾಮರ್ಥ್ಯವನ್ನು ಹೆಚ್ಚಿಸಲು ಬರೋಬ್ಬರಿ ರೂ.200 ಬಂಡವಾಳ ಹೂಡಿಕೆಯೊಂದಿಗೆ ವಾರ್ಷಿಕವಾಗಿ 10 ಲಕ್ಷ ಸ್ಕೂಟರ್ ಉತ್ಪಾದನಾ ಗುರಿಹೊಂದಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಮಾತ್ರವಲ್ಲದೇ ವಿದೇಶಿ ಮಾರುಕಟ್ಟೆಗಳಿಗೂ ರಫ್ತು ಮಾಡುವ ಯೋಜನೆಗೆ ಚಾಲನೆ ನೀಡಿದೆ.

MOST READ: ನೀರು ಮತ್ತು ಆಲ್ಕೋಹಾಲ್‍‍ನಿಂದ ಚಲಿಸಲಿದೆ ಈ ಎಂಜಿನ್..!

ಪ್ರೀಮಿಯಂ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿದೆ ಒಕಿನಾವ ಲೈಟ್ ಎಲೆಕ್ಟ್ರಿಕ್ ಸ್ಕೂಟರ್

ಒಕಿನವಾ ಸಂಸ್ಥೆಯು ಸದ್ಯ ಮಾರುಕಟ್ಟೆಯಲ್ಲಿ ಪ್ರೈಸ್, ಪ್ರೈಸ್‌ಪ್ರೊ, ಐ-ಪ್ರೈಸ್ ಪ್ಲಸ್, ರಿಡ್ಜ್, ರಿಡ್ಜ್ ಪ್ಲಸ್, ರಿಡ್ಜ್ 30 ಮತ್ತು ಆರ್‌ಡೈಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದ್ದು, ಇದೀಗ ಬಿಡುಗಡೆ ಮಾಡಲಿರುವ ಲೈಟ್ ಸ್ಕೂಟರ್ ಮಾದರಿಯು ಇತರೆ ಸ್ಕೂಟರ್‌ಗಿಂತ ಹೆಚ್ಚಿನ ಮಟ್ಟದ ಫೀಚರ್ಸ್‌ನೊಂದಿಗೆ ರೂ.1.20 ಲಕ್ಷದಿಂದ 1.30 ಲಕ್ಷ ಬೆಲೆ ಹೊಂದುವ ಸಾಧ್ಯತೆಗಳಿವೆ.

MOST READ: ಮೂರನೇ ವ್ಯಕ್ತಿಯ ಕೈಗೆ ಕಾರು ಕೊಟ್ಟ ಮಾಲೀಕನಿಗೆ ಶಾಕ್ ಕೊಟ್ಟ ವಿಮಾ ಕಂಪನಿ..!

ಪ್ರೀಮಿಯಂ ಸೌಲಭ್ಯಗಳೊಂದಿಗೆ ಬಿಡುಗಡೆಯಾಗಲಿದೆ ಒಕಿನಾವ ಲೈಟ್ ಎಲೆಕ್ಟ್ರಿಕ್ ಸ್ಕೂಟರ್

ಇನ್ನು ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಮಳಿಗೆಗಳ ಹೆಚ್ಚಿಸಲು ಒಕಿನವಾ ಸಂಸ್ಥೆಯು ದೇಶದ ಪ್ರಮುಖ 200 ನಗರಗಳಲ್ಲಿ ಹೊಸದಾಗಿ 350 ಡೀಲರ್‌ಶಿಪ್ ಆರಂಭಿಸುತ್ತಿದ್ದು, ಎರಡನೇ ಮತ್ತು ಮೂರನೇ ದರ್ಜೆ ನಗರಗಳಲ್ಲೂ 2020ರ ಅಂತ್ಯಕ್ಕೆ ಒಕಿನಾವ ಸ್ಕೂಟರ್‌ಗಳು ಖರೀದಿ ಲಭ್ಯವಾಗುತ್ತಿರುವುದು ಗ್ರಾಹಕರ ಆಯ್ಕೆಯನ್ನು ಹೆಚ್ಚಿಸಲಿದೆ.

Source: autopunditz

More from DriveSpark

Article Published On: Tuesday, October 29, 2019, 14:20 [IST]
English summary
Okinawa Lite Electric Scooter Spied In Production Ready Form Ahead Of Launch. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+