ಬಿಡುಗಡೆಯಾಗಲಿದೆ ಎ‍‍ಬಿ‍ಎಸ್ ಹೊಂದಿರುವ ಯಮಹಾ ಎಫ್‍‍ಝಡ್ - ಎಫ್‍ಐ ಬೈಕ್

ಯಮಹಾ ಕಂಪನಿಯು ಹೊಸ ಹೊಸ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿ ಸದ್ದು ಮಾಡುತ್ತಿದೆ. ಈಗ ಮುಂದಿನ ವರ್ಷದಲ್ಲಿ ಬಿಡುಗಡೆಗೊಳಿಸಲಿರುವ ವಾಹನಗಳ ಬಗ್ಗೆಯೂ ಯೋಜನೆಯನ್ನು ರೂಪಿಸಿ ಕೊಂಡಿದೆ.

ಬಿಡುಗಡೆಯಾಗಲಿದೆ ಎ‍‍ಬಿ‍ಎಸ್ ಹೊಂದಿರುವ ಯಮಹಾ ಎಫ್‍‍ಝಡ್ - ಎಫ್‍ಐ ಬೈಕ್

ಮುಂದಿನ ವರ್ಷದ ಆರಂಭದಲ್ಲಿ ತನ್ನ ಹೊಸ ಬೈಕ್ ಅನ್ನು ಬಿಡುಗಡೆಗೊಳಿಸಲಿದೆ. ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯು ಹೊಸ ತಲೆಮಾರಿನ ಎಫ್‍‍ಝಡ್ - ಎಫ್‍ಐ16 ಬೈಕ್ ಅನ್ನು ಜನವರಿ 21ರಂದು ಬಿಡುಗಡೆಗೊಳಿಸಲಿದೆ. ಹೊಸದಾಗಿ ಬಿಡುಗಡೆಯಾಗಲಿರುವ ಬೈಕ್ ಅನ್ನು ಅನೇಕ ಬಾರಿ ಭಾರತೀಯ ರಸ್ತೆಗಳಲ್ಲಿ ಪರೀಕ್ಷಿಸಲಾಗಿದೆ. ಎಫ್‍‍ಝಡ್ - ಎಫ್‍ಐ ಬೈಕಿನ ವಿನ್ಯಾಸವು, ಎಫ್‍‍ಝಡ್ 250 ಬೈಕಿನಿಂದ ಪ್ರೇರಿತವಾಗಿದೆ.

ಬಿಡುಗಡೆಯಾಗಲಿದೆ ಎ‍‍ಬಿ‍ಎಸ್ ಹೊಂದಿರುವ ಯಮಹಾ ಎಫ್‍‍ಝಡ್ - ಎಫ್‍ಐ ಬೈಕ್

ಬಿಡುಗಡೆಯಾಗಲಿರುವ ಬೈಕಿನಲ್ಲಿರುವ ಹೆಡ್‍‍ಲ್ಯಾಂಪ್ ಅಸೆಂಬ್ಲಿಯು ಎಫ್‍‍ಝಡ್250 ಬೈಕಿನಲ್ಲಿರುವಂತೆ ಕಾಣುತ್ತದೆ. ಆದರೆ ಈಗಿರುವ ಬೈಕಿನಲ್ಲಿರುವ ಹಾಲೊಜೆನ್ ಅಸೆಂಬ್ಲಿಯ ಬದಲಿಗೆ ಹೊಸ ತಲೆಮಾರಿನ ಎಫ್‍‍ಝಡ್ ಬೈಕಿನಲ್ಲಿ ಹೊಸ ಬಗೆಯ ಎಲ್‍ಇ‍‍‍ಡಿಗಳು ಇರಲಿವೆ.

ಬಿಡುಗಡೆಯಾಗಲಿದೆ ಎ‍‍ಬಿ‍ಎಸ್ ಹೊಂದಿರುವ ಯಮಹಾ ಎಫ್‍‍ಝಡ್ - ಎಫ್‍ಐ ಬೈಕ್

ಹಳೆ ತಲೆಮಾರಿನ ಬೈಕಿನಲ್ಲಿರುವ ಫ್ಯೂಯಲ್ ಟ್ಯಾಂಕಿನ ಬದಲಿಗೆ ಹೊಸ ಬೈಕಿನಲ್ಲಿ ಅಗಲವಾಗಿರುವ ಟ್ಯಾಂಕ್ ಇರಲಿದೆ. ಸ್ಪ್ಲಿಟ್ ಸೀಟಿನ ಬದಲಿಗೆ ಒಂದೇ ಒಂದು ಸೀಟ್ ಇರಲಿದೆ. ಸ್ಪಾಟ್ ಟೆಸ್ಟ್ ಮಾಡಲಾದ ಬೈಕಿನಲ್ಲಿ ತೋರಿಸಿರುವಂತೆ ಬಿಡುಗಡೆಯಾಗಲಿರುವ ಬೈಕಿನಲ್ಲಿಯೂ ಸಹ ಬೆಲ್ಲಿ ಪ್ಯಾನ್‍‍ಗಳನ್ನು ಸ್ಟಾಂಡರ್ಡ್ ಆಗಿ ನೀಡಲಾಗುವುದು.

ಬಿಡುಗಡೆಯಾಗಲಿದೆ ಎ‍‍ಬಿ‍ಎಸ್ ಹೊಂದಿರುವ ಯಮಹಾ ಎಫ್‍‍ಝಡ್ - ಎಫ್‍ಐ ಬೈಕ್

ಬೈಕಿನ ಹಿಂಭಾಗದಲ್ಲಿರುವ ಟೇಲ್ ಭಾಗವು ಸಣ್ಣದಾಗಿ ಕಾಣಿಸುತ್ತದೆ. ಟಯರ್‍‍ನಲ್ಲಿರುವ ಹಗ್ಗರ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಟೆಸ್ಟ್ ಮಾಡಲಾದ ಬೈಕಿನಲ್ಲಿದ್ದಂತಹ ಟೇಲ್ ಲ್ಯಾಂಪ್ ಅಸೆಂಬ್ಲಿ ಹಾಗೂ ಬ್ಲಿಂಕರ್‍‍ಗಳು ಈಗಿರುವ ಬೈಕಿನಲ್ಲಿಯೂ ಇವೆ. ಹೊಸ ತಲೆಮಾರಿನ ಎಫ್‍‍ಝಡ್ - ಎಫ್‍ಐ ಬೈಕಿನಲ್ಲಿಯೂ ಸಹ 149 ಸಿಸಿಯ, ಸಿಂಗಲ್ ಸಿಲಿಂಡರ್ ಎಂಜಿನ್ ಇರಲಿದೆ. ಈ ಎಂಜಿನ್ 13 ಬಿ‍‍ಹೆಚ್‍‍ಪಿ ಪವರ್ ಹಾಗೂ 12.8 ಎನ್‍ಎಂ ಟಾರ್ಕ್ ಉತ್ಪಾದಿಸಲಿದೆ.

MOST READ: ಉಬರ್‍ ಟ್ಯಾಕ್ಸಿಯಲ್ಲಿ ಓಡಾಡಿದ್ದು ಸಾಕು, ಇನ್ಮುಂದೆ ಹಾರಾಡಿ..!

ಬಿಡುಗಡೆಯಾಗಲಿದೆ ಎ‍‍ಬಿ‍ಎಸ್ ಹೊಂದಿರುವ ಯಮಹಾ ಎಫ್‍‍ಝಡ್ - ಎಫ್‍ಐ ಬೈಕ್

ಈ ಎಂಜಿನ್‍‍ನಲ್ಲಿ 5 ಸ್ಪೀಡಿನ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ. ಹೊಸ ಬೈಕಿನಲ್ಲಿರುವ ಎಂಜಿನ್ ಅನ್ನು ತನ್ನ ಪ್ರತಿಸ್ಪರ್ಧಿ ಬೈಕುಗಳಿಗೆ ಪೈಪೋಟಿ ನೀಡುವ ಸಲುವಾಗಿ ಹೆಚ್ಚಿನ ಪವರ್ ಹಾಗೂ ಟಾರ್ಕ್ ಉತ್ಪಾದಿಸುವಂತೆ ಅಭಿವೃದ್ಧಿಪಡಿಸಲಾಗಿದೆ.

MOST READ: ಈ ಜರ್ಮನ್ ಅಂಬಾಸಿಡರ್‍‍‍ಗೆ ಬಲು ಇಷ್ಟ ನಮ್ಮ ಅಂಬಾಸಿಡರ್ ಕಾರು..!

ಬಿಡುಗಡೆಯಾಗಲಿದೆ ಎ‍‍ಬಿ‍ಎಸ್ ಹೊಂದಿರುವ ಯಮಹಾ ಎಫ್‍‍ಝಡ್ - ಎಫ್‍ಐ ಬೈಕ್

ಹೊಸ ಬೈಕಿನಲ್ಲಿಯೂ ಸಹ ಈಗಿನ ಬೈಕಿನಲ್ಲಿರುವಂತಹ ಸಸ್ಪೆಂಷನ್ ಹಾಗೂ ಬ್ರೇಕ್‍‍ಗಳಿರಲಿವೆ. ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‍‍ಗಳಿದ್ದರೆ, ಹಿಂಭಾಗದಲ್ಲಿ ಮೊನೊಶಾಕ್‍‍ಗಳಿರಲಿವೆ. ಹೊಸ ಬದಲಾವಣೆಯೆಂದರೆ ಹೊಸ ಬೈಕಿನಲ್ಲಿ ಎ‍‍ಬಿ‍ಎಸ್ ಇರಲಿದೆ.

MOST READ: ಬೆಂಗಳೂರಿನ ಉದ್ಯಮಿ ಮದುವೆಮನೆಯಲ್ಲಿ ಐಷಾರಾಮಿ ಕಾರು‍ಗಳ ಕಲರವ..!

ಬಿಡುಗಡೆಯಾಗಲಿದೆ ಎ‍‍ಬಿ‍ಎಸ್ ಹೊಂದಿರುವ ಯಮಹಾ ಎಫ್‍‍ಝಡ್ - ಎಫ್‍ಐ ಬೈಕ್

ಹೆಚ್ಚಿನ ಸುರಕ್ಷಾ ಫೀಚರ್‍‍ಗಳನ್ನು ಹೊಂದಿರುವ ಈ ಬೈಕಿನ ಬೆಲೆಯು ಈಗಿರುವ ಬೈಕಿನ ಬೆಲೆಗಿಂತ ರೂ.8,000 - 10,000ದವರೆಗೆ ಹೆಚ್ಚಾಗಲಿದೆ. ಹೊಸ ಯಮಹಾ ಎಫ್‍‍ಝಡ್ - ಎಫ್‍ಐ ಬೈಕ್ ಬಜಾಜ್ ಪಲ್ಸರ್ ಎನ್‍ಎಸ್ 160, ಟಿವಿ‍ಎಸ್ ಅಪಾಚೆ ಆರ್‍‍ಟಿ‍ಆರ್ 160 4ವಿ ಹಾಗೂ ಹೋಂಡಾ ಎಕ್ಸ್-ಬ್ಲೇಡ್ ಬೈಕುಗಳಿಗೆ ಪೈಪೋಟಿ ನೀಡಲಿದೆ.

Article Published On: Friday, June 14, 2019, 14:49 [IST]
English summary
New Yamaha FZ16 ABS Launch Likely On 21st January In India - Read in kannada
Read more on ಯಮಹಾ yamaha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+