ಉಬರ್‍ ಟ್ಯಾಕ್ಸಿಯಲ್ಲಿ ಓಡಾಡಿದ್ದು ಸಾಕು, ಇನ್ಮುಂದೆ ಹಾರಾಡಿ..!

ಪ್ರಪಂಚದಲ್ಲಿರುವ ಬಹುತೇಕ ನಗರಗಳಲ್ಲಿಅಸಂಖ್ಯ ವಾಹನಗಳಿಂದಾಗಿ, ದಟ್ಟಣೆ ಉಂಟಾಗಿ ಉಸಿರುಗಟ್ಟುವ ವಾತಾವರಣ ಸೃಷ್ಟಿಯಾಗಿದೆ. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗಲು ಕೆಲವರು ಕ್ಯಾಬ್‍‍ಗಳ ಮೊರೆ ಹೋಗುತ್ತಾರೆ.

ಕ್ಯಾಬ್ ಸೇವೆಯನ್ನು ನೀಡುವ ಉಬರ್ ಕಂಪನಿಯು, ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಹಾರುವ ಕ್ಯಾಬ್‍‍ಗಳ ಸೇವೆಯನ್ನು ನೀಡಲು ಯೋಜನೆ ರೂಪಿಸುತ್ತಿದೆ. ಉಬರ್ ಎಲಿವೇಟ್ ಸಂಸ್ಥೆಯು ತನ್ನ ಮೊಟ್ಟ ಮೊದಲ ಏರ್ ಟ್ಯಾಕ್ಸಿ ಸೇವೆಯಾದ ಉಬರ್ ಏರ್ ಸೇವೆಯನ್ನು ಅಮೇರಿಕಾದ ಲಾಸ್ ಏಂಜಲೀಸ್ ಹಾಗೂ ಡಲ್ಲಾಸ್‍ ನಗರಗಳಲ್ಲಿ ನೀಡಲಿದೆ. ಉಬರ್ ಎಲಿವೇಟ್‍‍ನ ಸಿ‍ಇ‍ಒರವರು ಈ ಯೋಜನೆಯನ್ನು ಭಾರತದಲ್ಲಿಯೂ ಆರಂಭಿಸುವ ಯೋಜನೆಯಲ್ಲಿದ್ದಾರೆ. ಉಬರ್ ಎಲಿವೇಟ್ ಈ ಸೇವೆಯನ್ನು ಆಸ್ಟ್ರೇಲಿಯಾದ ಮೆಲ್ಬೋರ್ನ್‍‍‍ನಲ್ಲಿ ಪರೀಕ್ಷಿಸಲಿದೆ.

ಉಬರ್‍ ಟ್ಯಾಕ್ಸಿಯಲ್ಲಿ ಓಡಾಡಿದ್ದು ಸಾಕು, ಇನ್ಮುಂದೆ ಹಾರಾಡಿ..!

ಇದು ಉಬರ್ ಕಂಪನಿಯು ಫ್ಲೈಯಿಂಗ್ ಟ್ಯಾಕ್ಸಿ ಆಪ್‍‍ಗಾಗಿ ನಡೆಸುತ್ತಿರುವ ಮೊದಲ ಅಂತರ್‍‍ರಾಷ್ಟ್ರೀಯ ಟೆಸ್ಟ್ ಸೈಟ್ ಆಗಿದೆ. ಕಂಪನಿಯು ಈ ಪರೀಕ್ಷೆಯನ್ನು ಮೊದಲು ಯು‍ಎ‍ಇನಲ್ಲಿರುವ ದುಬೈನಲ್ಲಿ ನಡೆಸಲು ಉದ್ದೇಶಿಸಿತ್ತು, ಆದರೆ ಯೋಜನೆ ತಡವಾಗುತ್ತಿದ್ದ ಕಾರಣ ಆಸ್ಟ್ರೇಲಿಯಾದಲ್ಲಿ ನಡೆಸಲಿದೆ.

ಉಬರ್‍ ಟ್ಯಾಕ್ಸಿಯಲ್ಲಿ ಓಡಾಡಿದ್ದು ಸಾಕು, ಇನ್ಮುಂದೆ ಹಾರಾಡಿ..!

ಮೆಲ್ಬೋರ್ನ್ ಅನ್ನು ಪರೀಕ್ಷಾರ್ಥ ಸ್ಥಳವೆಂದು ಘೋಷಿಸುವ ಸಮಯದಲ್ಲಿ ಹಾಜರಿದ್ದ ಉಬರ್ ಎಲಿವೇಟ್‍‍ನ ಮುಖ್ಯಸ್ಥರಾದ ಎರಿಕ್ ಅಲಿಸನ್‍‍ರವರು ಭಾರತವು ಉಬರ್ ಎಲಿವೇಟ್ ಕಂಪನಿಗೆ ಪ್ರಮುಖವಾದ ಮಾರುಕಟ್ಟೆಯಾಗಿದೆ ಎಂದು ತಿಳಿಸಿದರು.

ಉಬರ್‍ ಟ್ಯಾಕ್ಸಿಯಲ್ಲಿ ಓಡಾಡಿದ್ದು ಸಾಕು, ಇನ್ಮುಂದೆ ಹಾರಾಡಿ..!

ಅವರು ಮಾತನಾಡಿ ಈ ಸೇವೆಯನ್ನು ಭಾರತೀಯ ಮಾರುಕಟ್ಟೆಯಲ್ಲಿ ವಿಸ್ತರಿಸುವ ಸಾಧ್ಯತೆಗಳನ್ನು ನೋಡುತ್ತಿದ್ದು, ಮುಂಬರುವ ದಿನಗಳಲ್ಲಿ ಈ ಯೋಜನೆಯನ್ನು ವಿಸ್ತರಿಸುವ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಮೊದಲ ಸ್ಥಾನ ನೀಡಲಾಗಿದೆ ಎಂದು ಹೇಳಿದರು. ಮೊದಲ ಫ್ಲೈಯಿಂಗ್ ಟ್ಯಾಕ್ಸಿ ಸೇವೆಯನ್ನು 2023ರಲ್ಲಿ ಅಮೇರಿಕಾದಲ್ಲಿ ಪ್ರಾರಂಭಿಸಲಾಗುವುದಾದರೂ, ಈ ಸೇವೆಯನ್ನು ಭಾರತದಲ್ಲಿ ಆರಂಭಿಸಲು ಇದಕ್ಕಿಂತಲೂ ಹೆಚ್ಚಿನ ಸಮಯ ಹಿಡಿಯಲಿದೆ.

MOST READ: ಟ್ಯೂಬ್‍‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍‍ಲೆಸ್ ಟಯರ್ ಸದ್ದು ಶುರು

ಉಬರ್‍ ಟ್ಯಾಕ್ಸಿಯಲ್ಲಿ ಓಡಾಡಿದ್ದು ಸಾಕು, ಇನ್ಮುಂದೆ ಹಾರಾಡಿ..!

ಆದರೆ ಉಬರ್ ಎಲಿವೇಟ್ ಕಂಪನಿಯು ಈಗಾಗಲೇ ವಿಮಾನಯಾನ ಸಂಸ್ಠೆಗಳ ಜೊತೆ ಮಾತುಕತೆ ಶುರು ಮಾಡಿದ್ದು, ಭಾರತದಲ್ಲಿರುವ ರಾಜ್ಯ ಸರ್ಕಾರಗಳ ಜೊತೆಗೂ ಮಾತುಕತೆ ನಡೆಸಿದೆ. ಇದರಿಂದಾಗಿ ಸೇವೆಯನ್ನು ಆರಂಭಿಸಲು ಭರವಸೆ ದೊರೆತಿದೆ.

ಉಬರ್‍ ಟ್ಯಾಕ್ಸಿಯಲ್ಲಿ ಓಡಾಡಿದ್ದು ಸಾಕು, ಇನ್ಮುಂದೆ ಹಾರಾಡಿ..!

ಭಾರತವು ಪ್ರಪಂಚದಲ್ಲಿಯೇ ಇಕ್ಕಟ್ಟಾದ ರಸ್ತೆಗಳನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿರುವ ಕಾರಣ, ಏರ್ ಟ್ಯಾಕ್ಸಿ ಸೇವೆಯು ಭಾರತದಲ್ಲಿ ಹೆಚ್ಚು ಜನಪ್ರಿಯವಾಗುವ ಸಾಧ್ಯತೆಗಳಿವೆ. ಮೆಲ್ಬೋರ್ನ್‍‍ನಲ್ಲಿರುವ 19 ಕಿ.ಮೀ ದೂರವನ್ನು ರಸ್ತೆ ಮೂಲಕ ತಲುಪಲು 25 ನಿಮಿಷಗಳು ಬೇಕಾದರೆ, ಅದೇ ದೂರವನ್ನು ಏರ್ ಟ್ಯಾಕ್ಸಿಯ ಮೂಲಕ ಕೇವಲ 10 ನಿಮಿಷದಲ್ಲಿ ತಲುಪಬಹುದು.

MOST READ: ಮ್ಯಾನುವಲ್ ಕಾರ್ ಡ್ರೈವಿಂಗ್ ಮಾಡದಿದ್ರೆ ಲೈಸೆನ್ಸ್ ಸಿಗೋದಿಲ್ಲ

ಉಬರ್‍ ಟ್ಯಾಕ್ಸಿಯಲ್ಲಿ ಓಡಾಡಿದ್ದು ಸಾಕು, ಇನ್ಮುಂದೆ ಹಾರಾಡಿ..!

ಉಬರ್ ಕಂಪನಿಯ ಪ್ರಕಾರ, ಭವಿಷ್ಯದಲ್ಲಿ ಏರ್ ಟ್ಯಾಕ್ಸಿ ಸೇವೆಯು ಕಾರ್ ಟ್ಯಾಕ್ಸಿ ಸೇವೆಗಿಂತಲೂ ಅಗ್ಗವಾಗಲಿದೆ. ಉಬರ್ ತನ್ನ ಏರ್ ಟ್ಯಾಕ್ಸಿ ಸೇವೆಯಲ್ಲಿ ತನ್ನದೇ ಆದ ಟೇಕ್ ಆಫ್ ಹಾಗೂ ಲ್ಯಾಂಡಿಂಗ್ ವಿಧಾನಗಳನ್ನು ಬಳಸಲಿದೆ. ಇದರಿಂದಾಗಿ ಲ್ಯಾಂಡಿಂಗ್ ಹಾಗೂ ಟೇಕ್ ಆಫ್‍‍ಗಳಿಗಾಗಿ ಕಡಿಮೆ ಸಮಯ ತಗುಲಲಿದೆ.

ಉಬರ್‍ ಟ್ಯಾಕ್ಸಿಯಲ್ಲಿ ಓಡಾಡಿದ್ದು ಸಾಕು, ಇನ್ಮುಂದೆ ಹಾರಾಡಿ..!

ಉಬರ್ ಸಂಸ್ಥೆಯು ಈ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಐದು ವಿವಿಧ ಏರ್ ಕ್ರಾಫ್ಟ್ ತಯಾರಕರ ಜೊತೆಗೆ ಕೈಜೋಡಿಸಿದ್ದು, ಎಲೆಕ್ಟ್ರಿಕ್ ವರ್ಟಿಕಲ್ ಟೇಕ್ ಆಫ್ ಹಾಗೂ ಲ್ಯಾಂಡಿಂಗ್ ( ಇ-ವಿ‍‍ಟಿ‍ಒ‍ಎಲ್)ಕಾನ್ಸೆಪ್ಟ್ ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈ ಕಾನ್ಸೆಪ್ಟ್ ಗಳನ್ನು ರೈಡ್ ಶೇರಿಂಗ್‍‍ಗಾಗಿಯೇ ನಿರ್ಮಿಸಲಾಗಿದೆ.

MOST READ: ಬೆಂಗಳೂರಿನ ಉದ್ಯಮಿ ಮದುವೆಮನೆಯಲ್ಲಿ ಐಷಾರಾಮಿ ಕಾರು‍ಗಳ ಕಲರವ..!

ಉಬರ್‍ ಟ್ಯಾಕ್ಸಿಯಲ್ಲಿ ಓಡಾಡಿದ್ದು ಸಾಕು, ಇನ್ಮುಂದೆ ಹಾರಾಡಿ..!

ಉಬರ್ ಕಂಪನಿಯು ತನ್ನ ಅವಶ್ಯಕತೆಗಾಗಿ ಸಾಮಾನ್ಯವಾದ ರೆಫೆರೆನ್ಸ್ ಅನ್ನು ಅಭಿವೃದ್ಧಿಪಡಿಸಿದ್ದು, ಕಾನ್ಸೆಪ್ಟ್ ಮಾಡೆಲ್‍‍ಗಳ ಅಭಿವೃದ್ದಿಯಲ್ಲಿ ಸಲಹೆ ನೀಡಲಿದೆ. ಉಬರ್‍‍ನ ಇ-ವಿ‍‍ಟಿ‍ಒ‍ಎಲ್ ಟ್ಯಾಕ್ಸಿಗಳು, ಒಂದು ಬಾರಿ ಚಾರ್ಜ್ ಮಾಡಿದರೆ 100 ಕಿ.ಮೀ ವರೆಗಿನ ದೂರವನ್ನು 240 ಕಿ.ಮೀ ವೇಗದಲ್ಲಿ ಕ್ರಮಿಸುವ ಸಾಮರ್ಥ್ಯವನ್ನು ಹೊಂದಲಿವೆ. ಈ ಟ್ಯಾಕ್ಸಿಯಲ್ಲಿ 4 ಪ್ರಯಾಣಿಕರು ಹಾಗೂ ಒಬ್ಬ ಪೈಲಟ್ ಕೂರುವಷ್ಟು ಸ್ಥಳವಿರಲಿದೆ.

Most Read Articles

Kannada
Read more on ಉಬರ್ uber
English summary
In future, you will be able to book a FLYING Uber cab right here in India - Read in kannada
Story first published: Wednesday, June 12, 2019, 18:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X