ಮಾರ್ಚ್ 15ರಂದೇ ಬಿಡುಗಡೆಯಾಗಲಿದೆ ಯಮಹಾ ಎಂಟಿ-15 ಬೈಕ್ - ಬೆಲೆ ಎಷ್ಟು ಗೊತ್ತಾ?

ಯಮಹಾ ಸಂಸ್ಥೆಯು ತನ್ನ ಜನಪ್ರಿಯ ಎಂಟಿ-15 ಬೈಕ್ ಮಾದರಿಯನ್ನು ಬಿಡುಗಡೆಗಡೆಗೊಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತಿದ್ದು, ಕೆಲವು ಮೂಲಗಳ ಪ್ರಕಾರ ಹೊಸ ಎಂಟಿ-15 ಬೈಕ್ ಮಾದರಿಯು ಮುಂದಿನ ತಿಂಗಳು ಮಾರ್ಚ್ 15ರಂದೇ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಮಾರ್ಚ್ 15ರಂದೇ ಬಿಡುಗಡೆಯಾಗಲಿದೆ ಯಮಹಾ ಎಂಟಿ-15 ಬೈಕ್ - ಬೆಲೆ ಎಷ್ಟು ಗೊತ್ತಾ?

ಪ್ರೀಮಿಯಂ ದ್ವಿಚಕ್ರ ವಾಹನಗಳಿಗೆ ಭಾರತದಲ್ಲಿ ವಿಶೇಷ ಬೇಡಿಕೆ ಸೃಷ್ಠಿಯಾಗುತ್ತಿದ್ದು, ಈ ನಿಟ್ಟಿನಲ್ಲಿ ಯಮಹಾ ಸಂಸ್ಥೆಯು ಸಹ ಎಂಟಿ-15 ಬೈಕ್ ಮಾದರಿಯನ್ನು ಬಿಡುಗಡೆ ಮಾಡುತ್ತಿದೆ. ಈಗಾಗಲೇ ಕೆಲವು ಯಮಹಾ ಡೀಲರ್ಸ್‌ಗಳು ಆಸಕ್ತ ಗ್ರಾಹಕರಿಂದ ರೂ.5 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಕೂಡಾ ಸ್ವಿಕರಿಸುತ್ತಿದ್ದು, ಬೈಕಿನ ತಾಂತ್ರಿಕ ಅಂಶಗಳ ಮಾಹಿತಿ ಇರುವ ಕೈಪಿಡಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಟುತ್ತಿದೆ.

ಮಾರ್ಚ್ 15ರಂದೇ ಬಿಡುಗಡೆಯಾಗಲಿದೆ ಯಮಹಾ ಎಂಟಿ-15 ಬೈಕ್ - ಬೆಲೆ ಎಷ್ಟು ಗೊತ್ತಾ?

ಜಪಾನ್ ಸೇರಿದಂತೆ ಯುರೋಪಿನ ಪ್ರಮುಖ ಮಾರುಕಟ್ಟೆಗಳಲ್ಲಿ ಈಗಾಗಲೇ ಭಾರೀ ಜನಪ್ರಿಯತೆಯನ್ನು ಹೊಂದಿರುವ ಎಂಟಿ-15 ಬೈಕ್ ಮಾದರಿಯು ಭಾರತದಲ್ಲೂ ಸಹ 200 ಸಿಸಿ ಬೈಕ್ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದ್ದು, ಬಿಡುಗಡೆಯ ಸಂಬಂಧ ವಿವಿಧ ಹಂತದ ಸ್ಪಾಟ್ ಟೆಸ್ಟಿಂಗ್ ನಡೆಸಲಾಗುತ್ತಿದೆ.

ಮಾರ್ಚ್ 15ರಂದೇ ಬಿಡುಗಡೆಯಾಗಲಿದೆ ಯಮಹಾ ಎಂಟಿ-15 ಬೈಕ್ - ಬೆಲೆ ಎಷ್ಟು ಗೊತ್ತಾ?

ಸದ್ಯ ಮಾರುಕಟ್ಟೆಯಲ್ಲಿರುವ ಆರ್15 ವಿ3.0 ಬೈಕ್ ಆವೃತ್ತಿಯ ಮುಂದುವರಿದ ಭಾಗವಾಗಿರುವ ಎಂಟಿ-15 ಬೈಕ್ ಮಾದರಿಯು ಪರ್ಫಾಮೆನ್ಸ್ ಪ್ರಿಯರಿಗಾಗಿಯೇ ವಿಶೇಷವಾಗಿ ಸಿದ್ದವಾಗಿದ್ದು, ಪ್ರೀಮಿಯಂ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶ ಪಡೆಯುವುದು ಬಹುತೇಕ ಖಚಿತವಾಗಿದೆ.

ಮಾರ್ಚ್ 15ರಂದೇ ಬಿಡುಗಡೆಯಾಗಲಿದೆ ಯಮಹಾ ಎಂಟಿ-15 ಬೈಕ್ - ಬೆಲೆ ಎಷ್ಟು ಗೊತ್ತಾ?

ವಿದೇಶಿ ಮಾರುಕಟ್ಟೆಗಳಲ್ಲಿ ಈಗಾಗಲೇ ಹಲವು ಬದಲಾವಣೆಗಳೊಂದಿಗೆ ಮರುಬಿಡುಗಡೆಯಾಗಿರುವ ಎಂಟಿ-15 ಬೈಕ್ ಮಾದರಿಯು, ಕಳೆದ ಅಕ್ಟೋಬರ್‌ನಲ್ಲಿ ನಡೆದ ಇಂಡೋನೇಷ್ಯಾ ಆಟೋ ಎಕ್ಸ್‌ಪೋದಲ್ಲೂ ಹೊಸ ಡಿಸೈನ್‌ ಪ್ರೇರಿತ ಎಂಟಿ-15 ಪ್ರದರ್ಶನಗೊಂಡು ಬೈಕ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿತ್ತು.

ಮಾರ್ಚ್ 15ರಂದೇ ಬಿಡುಗಡೆಯಾಗಲಿದೆ ಯಮಹಾ ಎಂಟಿ-15 ಬೈಕ್ - ಬೆಲೆ ಎಷ್ಟು ಗೊತ್ತಾ?

ಎಂಟಿ-15 ಬೈಕ್ ಮಾದರಿಯು ಯಮಹಾ ನಿರ್ಮಾಣದ ಮತ್ತೊಂದು ದುಬಾರಿ ಬೆಲೆಯ ಎಂಟಿ-9 ಬೈಕಿನ ಡಿಸೈನ್ ಹೋಲಿಕೆಯಿದ್ದು, ಪೂರ್ಣ ಪ್ರಮಾಣದ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹಲವು ಹೊಸ ವಿನ್ಯಾಸಗಳನ್ನು ಪಡೆದುಕೊಳ್ಳಲಿದೆ.

ಮಾರ್ಚ್ 15ರಂದೇ ಬಿಡುಗಡೆಯಾಗಲಿದೆ ಯಮಹಾ ಎಂಟಿ-15 ಬೈಕ್ - ಬೆಲೆ ಎಷ್ಟು ಗೊತ್ತಾ?

ಎಂಜಿನ್ ಸಾಮರ್ಥ್ಯ

ಸೋರಿಕೆಯಾದ ಮಾಹಿತಿ ಪ್ರಕಾರ, 155.1-ಸಿಸಿ ಲಿಕ್ವಿಡ್ ಕೂಲ್ಡ್, ಫ್ಯೂಲ್ ಇಂಜೆಕ್ಷ್ಟೆಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಎಂಟಿ-15 ಬೈಕ್‌ಗಳು 6-ಸ್ಪೀಡ್ ಗೇರ್‌ಬಾಕ್ಸ್ ಸಹಾಯದೊಂದಿಗೆ 19.3-ಬಿಎಚ್‌ಪಿ ಮತ್ತು 14.7-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಮಾರ್ಚ್ 15ರಂದೇ ಬಿಡುಗಡೆಯಾಗಲಿದೆ ಯಮಹಾ ಎಂಟಿ-15 ಬೈಕ್ - ಬೆಲೆ ಎಷ್ಟು ಗೊತ್ತಾ?

ಹೀಗಾಗಿ ಎಂಟಿ-15 ಬೈಕ್‌ಗಳು ಕಡಿಮೆ ಸಾಮರ್ಥ್ಯದ ಎಂಜಿನ್ ಸೌಲಭ್ಯವನ್ನು ಹೊಂದಿದ್ದರೂ ಸಹ ಪರ್ಫಾಮೆನ್ಸ್ ವಿಚಾರದಲ್ಲಿ 200ಸಿಸಿ ಬೈಕ್‌ಗಳನ್ನು ಸಹ ಹಿಂದಿಕ್ಕುವ ಗುಣಹೊಂದಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ ವೆರಿಬಲ್ ವೆಲ್ವ್ ಆಕ್ಷನ್(ವಿವಿಎ) ಕಿಟ್ ಜೋಡಣೆ ಮಾಡಿರುವುದೇ ಇದಕ್ಕೆ ಪ್ರಮುಖ ಕಾರಣ.

ಮಾರ್ಚ್ 15ರಂದೇ ಬಿಡುಗಡೆಯಾಗಲಿದೆ ಯಮಹಾ ಎಂಟಿ-15 ಬೈಕ್ - ಬೆಲೆ ಎಷ್ಟು ಗೊತ್ತಾ?

ಹಾಗೆಯೇ ಹೊಸ ಬೈಕ್ ಮಾದರಿಯು 2,020-ಎಂಎಂ ಉದ್ದ, 800-ಎಂಎಂ ಅಗಲ, 1,070-ಎಂಎಂ ಎತ್ತರ, 1335ಎಂಎಂ ವೀಲ್ಹ್ ಬೆಸ್, 160ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದ್ದು, ಹೊಸ ಬೈಕ್ ಬರೋಬ್ಬರಿ 135 ಕೆ.ಜಿ ತೂಕ ಪಡೆದುಕೊಂಡಿದೆ ಎನ್ನಲಾಗಿದೆ.

MOST READ: ಬ್ರೇಕ್ ಫೇಲ್ ಆದಾಗ ಜೀವ ಉಳಿಸಿಕೊಳ್ಳಲು ಈ ಟಿಪ್ಸ್ ಖಂಡಿತ ನಿಮ್ಮ ಸಹಾಯಕ್ಕೆ ಬರುತ್ತೆ..!

ಮಾರ್ಚ್ 15ರಂದೇ ಬಿಡುಗಡೆಯಾಗಲಿದೆ ಯಮಹಾ ಎಂಟಿ-15 ಬೈಕ್ - ಬೆಲೆ ಎಷ್ಟು ಗೊತ್ತಾ?

ಇನ್ನು ಎಂಟಿ-15 ಬೈಕಿನ ಮುಂಭಾಗದಲ್ಲಿ ಅಪ್ ಸೈಡ್ ಡೌನ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೋಶಾರ್ಕ್ ಸಸ್ಪೆಷನ್ ಸೌಲಭ್ಯ ಹೊಂದಿದ್ದು, ಎರಡು ಚಕ್ರಗಳಲ್ಲೂ ಡಿಸ್ಕ್ ಬ್ರೇಕ್ ಜೊತೆಗೆ ಎಬಿಎಸ್(ಆ್ಯಂಟಿ ಬ್ರೇಕಿಂಗ್ ಸಿಸ್ಟಂ) ಸಹ ಸ್ಯಾಂಡರ್ಡ್ ಆಗಿ ದೊರಲಿದೆ.

ಮಾರ್ಚ್ 15ರಂದೇ ಬಿಡುಗಡೆಯಾಗಲಿದೆ ಯಮಹಾ ಎಂಟಿ-15 ಬೈಕ್ - ಬೆಲೆ ಎಷ್ಟು ಗೊತ್ತಾ?

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಆರ್15 ಬೈಕಿಗೂ ಮತ್ತು ಎಂಟಿ-9 ಬೈಕಿಗೂ ಒಂದೇ ಮಾದರಿಯ ಚಾರ್ಸಿ ಬಳಕೆ ಮಾಡಿರುವ ಯಮಹಾ ಸಂಸ್ಥೆಯು ಪ್ರೀಮಿಯಂ ಬೈಕ್ ಮಾರಾಟದಲ್ಲಿ ಹೊಸ ಆಯ್ಕೆ ನೀಡುತ್ತಿದ್ದು, ಇದು ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

MOST READ: ವಾಹನ ಸವಾರರೇ ಎಚ್ಚರ- ಪೆಟ್ರೋಲ್ ಬಂಕ್‌ಗಳಲ್ಲಿ ಹೇಗೆ ನಡೆಯುತ್ತೆ ನೋಡಿ ಹಗಲು ದರೋಡೆ..!

ಮಾರ್ಚ್ 15ರಂದೇ ಬಿಡುಗಡೆಯಾಗಲಿದೆ ಯಮಹಾ ಎಂಟಿ-15 ಬೈಕ್ - ಬೆಲೆ ಎಷ್ಟು ಗೊತ್ತಾ?

ಬೈಕಿನ ಬೆಲೆಗಳು(ಅಂದಾಜು)

ಆರ್15 ಬೈಕಿಗಿಂತಲೂ ಹೆಚ್ಚು ಪ್ರೀಮಿಯಂ ಗುಣಲಕ್ಷಣಗಳನ್ನು ಹೊಂದಿರುವ ಎಂಟಿ-15 ಬೈಕ್‌ಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.1.20 ಲಕ್ಷದಿಂದ ರೂ. 1.40 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, 200ಸಿಸಿ ಸಾಮಾರ್ಥ್ಯದ ಇತರೆ ಬೈಕಿಗಳಿಂತಲೂ ಇದು ಹೆಚ್ಚಿನ ಸುರಕ್ಷತೆ ಪಡೆದುಕೊಳ್ಳಲಿದೆ.

ಮಾರ್ಚ್ 15ರಂದೇ ಬಿಡುಗಡೆಯಾಗಲಿದೆ ಯಮಹಾ ಎಂಟಿ-15 ಬೈಕ್ - ಬೆಲೆ ಎಷ್ಟು ಗೊತ್ತಾ?

ಈ ಮೂಲಕ 200ಸಿಸಿ ಸಗ್ಮೆಂಟ್ ವಿಭಾಗದಲ್ಲಿನ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಮತ್ತು ಬಜಾಜ್ ಪಲ್ಸರ್ ಎನ್ಎಸ್ 200 ಬೈಕ್‌ಗಳಿಗೆ ತ್ರೀವ ಪೈಪೋಟಿ ನೀಡಲಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಹೊಸ ಬೈಕಿನ ಕುರಿತಾದ ಮತ್ತಷ್ಟು ತಾಂತ್ರಿಕ ಮಾಹಿತಿಗಳು ಲಭ್ಯವಾಗಲಿವೆ.

More from DriveSpark

Article Published On: Monday, February 4, 2019, 16:09 [IST]
English summary
Yamaha MT-15 To Launch In India On March 15? — Things To Know About The R15’s Naked Avatar. Read in Kannada.
Read more on ಯಮಹಾ yamaha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+