ಇದೇ ತಿಂಗಳು 15ರಂದು ಬಿಡುಗಡೆಯಾಗಲಿರುವ ಯಮಹಾ ಎಂಟಿ-15 ಟೀಸರ್ ಔಟ್..!

ಯಮಹಾ ಸಂಸ್ಥೆಯು ತನ್ನ ಜನಪ್ರಿಯ ಎಂಟಿ-15 ಬೈಕ್ ಮಾದರಿಯನ್ನು ಇದೇ ತಿಂಗಳು 15ರಂದು ಬಿಡುಗಡೆ ಮಾಡುತ್ತಿದ್ದು, ಹೊಸ ಬೈಕಿನ ವೈಶಿಷ್ಟ್ಯತೆಗಳ ಕುರಿತಾದ ಟೀಸರ್ ಬಿಡುಗಡೆ ಮಾಡಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಆರ್15 ವಿ3.0 ಬೈಕ್ ಆವೃತ್ತಿಯ ಮುಂದುವರಿದ ಭಾಗವಾಗಿರುವ ಎಂಟಿ-15 ಬೈಕ್ ಮಾದರಿಯು ಪರ್ಫಾಮೆನ್ಸ್ ಪ್ರಿಯರಿಗಾಗಿಯೇ ವಿಶೇಷವಾಗಿ ಸಿದ್ದವಾಗಿದ್ದು, ಪ್ರೀಮಿಯಂ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶ ಪಡೆಯುವುದು ಬಹುತೇಕ ಖಚಿತವಾಗಿದೆ.

ಇದೇ ತಿಂಗಳು 15ರಂದು ಬಿಡುಗಡೆಯಾಗಲಿರುವ ಯಮಹಾ ಎಂಟಿ-15 ಟೀಸರ್ ಔಟ್..!

ಪ್ರೀಮಿಯಂ ದ್ವಿಚಕ್ರ ವಾಹನಗಳಿಗೆ ಭಾರತದಲ್ಲಿ ವಿಶೇಷ ಬೇಡಿಕೆ ಸೃಷ್ಠಿಯಾಗುತ್ತಿದ್ದು, ಈ ನಿಟ್ಟಿನಲ್ಲಿ ಯಮಹಾ ಸಂಸ್ಥೆಯು ಸಹ ಎಂಟಿ-15 ಬೈಕ್ ಮಾದರಿಯನ್ನು ಬಿಡುಗಡೆ ಮಾಡುತ್ತಿದೆ. ಈಗಾಗಲೇ ಕೆಲವು ಯಮಹಾ ಡೀಲರ್ಸ್‌ಗಳು ಆಸಕ್ತ ಗ್ರಾಹಕರಿಂದ ರೂ.5 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಕೂಡಾ ಸ್ವಿಕರಿಸುತ್ತಿದ್ದು, ಬೈಕಿನ ತಾಂತ್ರಿಕ ಅಂಶಗಳ ಮಾಹಿತಿ ಇರುವ ಕೈಪಿಡಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಟುತ್ತಿದೆ.

ಜಪಾನ್ ಸೇರಿದಂತೆ ಯುರೋಪಿನ ಪ್ರಮುಖ ಮಾರುಕಟ್ಟೆಗಳಲ್ಲಿ ಈಗಾಗಲೇ ಭಾರೀ ಜನಪ್ರಿಯತೆಯನ್ನು ಹೊಂದಿರುವ ಎಂಟಿ-15 ಬೈಕ್ ಮಾದರಿಯು ಭಾರತದಲ್ಲೂ ಸಹ 200 ಸಿಸಿ ಬೈಕ್ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದ್ದು, ಬಿಡುಗಡೆಯ ಸಂಬಂಧ ವಿವಿಧ ಹಂತದ ಸ್ಪಾಟ್ ಟೆಸ್ಟಿಂಗ್ ನಡೆಸಲಾಗುತ್ತಿದೆ.

ವಿದೇಶಿ ಮಾರುಕಟ್ಟೆಗಳಲ್ಲಿ ಈಗಾಗಲೇ ಹಲವು ಬದಲಾವಣೆಗಳೊಂದಿಗೆ ಮರುಬಿಡುಗಡೆಯಾಗಿರುವ ಎಂಟಿ-15 ಬೈಕ್ ಮಾದರಿಯು, ಕಳೆದ ಅಕ್ಟೋಬರ್‌ನಲ್ಲಿ ನಡೆದ ಇಂಡೋನೇಷ್ಯಾ ಆಟೋ ಎಕ್ಸ್‌ಪೋದಲ್ಲೂ ಹೊಸ ಡಿಸೈನ್‌ ಪ್ರೇರಿತ ಎಂಟಿ-15 ಪ್ರದರ್ಶನಗೊಂಡು ಬೈಕ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿತ್ತು.

ಎಂಟಿ-15 ಬೈಕ್ ಮಾದರಿಯು ಯಮಹಾ ನಿರ್ಮಾಣದ ಮತ್ತೊಂದು ದುಬಾರಿ ಬೆಲೆಯ ಎಂಟಿ-9 ಬೈಕಿನ ಡಿಸೈನ್ ಹೋಲಿಕೆಯಿದ್ದು, ಪೂರ್ಣ ಪ್ರಮಾಣದ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹಲವು ಹೊಸ ವಿನ್ಯಾಸಗಳನ್ನು ಪಡೆದುಕೊಳ್ಳಲಿದೆ.

ಇದೇ ತಿಂಗಳು 15ರಂದು ಬಿಡುಗಡೆಯಾಗಲಿರುವ ಯಮಹಾ ಎಂಟಿ-15 ಟೀಸರ್ ಔಟ್..!

ಎಂಜಿನ್ ಸಾಮರ್ಥ್ಯ

ಸೋರಿಕೆಯಾದ ಮಾಹಿತಿ ಪ್ರಕಾರ, 155.1-ಸಿಸಿ ಲಿಕ್ವಿಡ್ ಕೂಲ್ಡ್, ಫ್ಯೂಲ್ ಇಂಜೆಕ್ಷ್ಟೆಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಎಂಟಿ-15 ಬೈಕ್‌ಗಳು 6-ಸ್ಪೀಡ್ ಗೇರ್‌ಬಾಕ್ಸ್ ಸಹಾಯದೊಂದಿಗೆ 19.3-ಬಿಎಚ್‌ಪಿ ಮತ್ತು 14.7-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಹೀಗಾಗಿ ಎಂಟಿ-15 ಬೈಕ್‌ಗಳು ಕಡಿಮೆ ಸಾಮರ್ಥ್ಯದ ಎಂಜಿನ್ ಸೌಲಭ್ಯವನ್ನು ಹೊಂದಿದ್ದರೂ ಸಹ ಪರ್ಫಾಮೆನ್ಸ್ ವಿಚಾರದಲ್ಲಿ 200ಸಿಸಿ ಬೈಕ್‌ಗಳನ್ನು ಸಹ ಹಿಂದಿಕ್ಕುವ ಗುಣಹೊಂದಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ ವೆರಿಬಲ್ ವೆಲ್ವ್ ಆಕ್ಷನ್(ವಿವಿಎ) ಕಿಟ್ ಜೋಡಣೆ ಮಾಡಿರುವುದೇ ಇದಕ್ಕೆ ಪ್ರಮುಖ ಕಾರಣ.

MOST READ: ಕೇವಲ 40 ರೂಪಾಯಿ ಆಸೆಗೆ ಬರೋಬ್ಬರಿ 40 ಲಕ್ಷ ಕಳೆದುಕೊಂಡ ಹ್ಯುಂಡೈ ಕಾರು ಚಾಲಕ..!

ಇದೇ ತಿಂಗಳು 15ರಂದು ಬಿಡುಗಡೆಯಾಗಲಿರುವ ಯಮಹಾ ಎಂಟಿ-15 ಟೀಸರ್ ಔಟ್..!

ಹಾಗೆಯೇ ಹೊಸ ಬೈಕ್ ಮಾದರಿಯು 2,020-ಎಂಎಂ ಉದ್ದ, 800-ಎಂಎಂ ಅಗಲ, 1,070-ಎಂಎಂ ಎತ್ತರ, 1335ಎಂಎಂ ವೀಲ್ಹ್ ಬೆಸ್, 160ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಹೊಂದಿದ್ದು, ಹೊಸ ಬೈಕ್ ಬರೋಬ್ಬರಿ 135 ಕೆ.ಜಿ ತೂಕ ಪಡೆದುಕೊಂಡಿದೆ ಎನ್ನಲಾಗಿದೆ.

ಇನ್ನು ಎಂಟಿ-15 ಬೈಕಿನ ಮುಂಭಾಗದಲ್ಲಿ ಅಪ್ ಸೈಡ್ ಡೌನ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೋಶಾರ್ಕ್ ಸಸ್ಪೆಷನ್ ಸೌಲಭ್ಯ ಹೊಂದಿದ್ದು, ಎರಡು ಚಕ್ರಗಳಲ್ಲೂ ಡಿಸ್ಕ್ ಬ್ರೇಕ್ ಜೊತೆಗೆ ಎಬಿಎಸ್(ಆ್ಯಂಟಿ ಬ್ರೇಕಿಂಗ್ ಸಿಸ್ಟಂ) ಸಹ ಸ್ಯಾಂಡರ್ಡ್ ಆಗಿ ದೊರಲಿದೆ.

MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಇದೇ ತಿಂಗಳು 15ರಂದು ಬಿಡುಗಡೆಯಾಗಲಿರುವ ಯಮಹಾ ಎಂಟಿ-15 ಟೀಸರ್ ಔಟ್..!

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಆರ್15 ಬೈಕಿಗೂ ಮತ್ತು ಎಂಟಿ-9 ಬೈಕಿಗೂ ಒಂದೇ ಮಾದರಿಯ ಚಾರ್ಸಿ ಬಳಕೆ ಮಾಡಿರುವ ಯಮಹಾ ಸಂಸ್ಥೆಯು ಪ್ರೀಮಿಯಂ ಬೈಕ್ ಮಾರಾಟದಲ್ಲಿ ಹೊಸ ಆಯ್ಕೆ ನೀಡುತ್ತಿದ್ದು, ಇದು ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬೈಕಿನ ಬೆಲೆಗಳು(ಅಂದಾಜು)

ಆರ್15 ಬೈಕಿಗಿಂತಲೂ ಹೆಚ್ಚು ಪ್ರೀಮಿಯಂ ಗುಣಲಕ್ಷಣಗಳನ್ನು ಹೊಂದಿರುವ ಎಂಟಿ-15 ಬೈಕ್‌ಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.1.20 ಲಕ್ಷದಿಂದ ರೂ. 1.40 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, 200ಸಿಸಿ ಸಾಮಾರ್ಥ್ಯದ ಇತರೆ ಬೈಕಿಗಳಿಂತಲೂ ಇದು ಹೆಚ್ಚಿನ ಸುರಕ್ಷತೆ ಪಡೆದುಕೊಳ್ಳಲಿದೆ.

Most Read Articles

Kannada
Read more on ಯಮಹಾ yamaha
English summary
Yamaha MT-15 Official Teaser Video Released. Read in Kannada.
Story first published: Saturday, March 9, 2019, 17:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X