ಭಾರತದಲ್ಲಿ ಬಿಡುಗಡೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಯಮಹಾ ಎಂಟಿ-15

ಜಪಾನ್ ಬ್ರಾಂಡ್ ಯಮಹಾ ಸಂಸ್ಥೆಯ ದ್ವಿಚಕ್ರ ವಾಹನಗಳಿಗೆ ಭಾರತದಲ್ಲಿ ವಿಶೇಷ ಬೇಡಿಕೆಯಿದ್ದು, ಇದೀಗ ಮತ್ತೊಂದು ಹೊಚ್ಚ ಹೊಸ ಬೈಕ್ ಉತ್ಪನ್ನವೊಂದನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದೆ.

ಭಾರತದಲ್ಲಿ ಬಿಡುಗಡೆಯಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಯಮಹಾ ಎಂಟಿ-15

ಜಪಾನ್ ಸೇರಿದಂತೆ ಯುರೋಪಿನ ಪ್ರಮುಖ ಮಾರುಕಟ್ಟೆಗಳಲ್ಲಿ ಈಗಾಗಲೇ ಭಾರೀ ಜನಪ್ರಿಯತೆಯನ್ನು ಹೊಂದಿರುವ ಎಂಟಿ-15 ಎನ್ನುವ ಬೈಕ್ ಅನ್ನು ಭಾರತದಲ್ಲೂ ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಹೊಸ ಯೋಜನೆ ರೂಪಿಸಿರುವ ಯಮಹಾ ಸಂಸ್ಥೆಯು, ಮುಂದಿನ ಕೆಲವೇ ದಿನಗಳಲ್ಲಿ ಹೊಸ ಎಂಟಿ-15 ಬಿಡುಗಡೆಗೊಳಿಸುವ ಇರಾದೆಯಲ್ಲಿದೆ. ಈ ಹಿನ್ನೆಲೆ ಬೈಕ್ ಕಾರ್ಯಕ್ಷಮತೆ ಕುರಿತಾಗಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದ್ದು, 200 ಸಿಸಿ ಬೈಕ್ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದೆ.

ಭಾರತದಲ್ಲಿ ಬಿಡುಗಡೆಯಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಯಮಹಾ ಎಂಟಿ-15

ಸದ್ಯ ಮಾರುಕಟ್ಟೆಯಲ್ಲಿರುವ ಆರ್15 ಬೈಕ್ ಆವೃತ್ತಿಯ ಮುಂದುವರಿದ ಭಾಗವಾಗಿರುವ ಎಂಟಿ-15 ಬೈಕ್ ಮಾದರಿಯು ಪರ್ಫಾಮೆನ್ಸ್ ಪ್ರಿಯರಿಗಾಗಿಯೇ ವಿಶೇಷವಾಗಿ ಸಿದ್ದವಾಗಿದ್ದು, ಪ್ರೀಮಿಯಂ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶ ಪಡೆಯಲಿದೆ.

ಭಾರತದಲ್ಲಿ ಬಿಡುಗಡೆಯಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಯಮಹಾ ಎಂಟಿ-15

ವಿದೇಶಿ ಮಾರುಕಟ್ಟೆಗಳಲ್ಲಿ ಈಗಾಗಲೇ ಹಲವು ಬದಲಾವಣೆಗಳೊಂದಿಗೆ ಮರುಬಿಡುಗಡೆಯಾಗಿರುವ ಎಂಟಿ-15 ಬೈಕ್ ಮಾದರಿಯು, ಕಳೆದ ಅಕ್ಟೋಬರ್‌ನಲ್ಲಿ ಇಂಡೋನೇಷ್ಯಾ ಆಟೋ ಎಕ್ಸ್‌ಪೋದಲ್ಲೂ ಹೊಸ ಡಿಸೈನ್‌ ಪ್ರೇರಿತ ಎಂಟಿ-15 ಪ್ರದರ್ಶನಗೊಂಡು ಬೈಕ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿತ್ತು.

ಭಾರತದಲ್ಲಿ ಬಿಡುಗಡೆಯಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಯಮಹಾ ಎಂಟಿ-15

ಎಂಟಿ-15 ಬೈಕ್ ಮಾದರಿಯು ಯಮಹಾ ನಿರ್ಮಾಣದ ಮತ್ತೊಂದು ದುಬಾರಿ ಬೆಲೆಯ ಎಂಟಿ-9 ಬೈಕಿನ ಡಿಸೈನ್ ಹೋಲಿಕೆಯಿದ್ದು, ಪೂರ್ಣ ಪ್ರಮಾಣದ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹಲವು ಹೊಸ ವಿನ್ಯಾಸಗಳನ್ನು ಪಡೆದುಕೊಳ್ಳಲಿದೆ.

ಭಾರತದಲ್ಲಿ ಬಿಡುಗಡೆಯಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಯಮಹಾ ಎಂಟಿ-15

ಎಂಜಿನ್ ಸಾಮರ್ಥ್ಯ

155-ಸಿಸಿ ಲಿಕ್ವಿಡ್ ಕೂಲ್ಡ್, ಫ್ಯೂಲ್ ಇಂಜೆಕ್ಷ್ಟೆಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಎಂಟಿ-15 ಬೈಕ್‌ಗಳು 6-ಸ್ಪೀಡ್ ಗೇರ್‌ಬಾಕ್ಸ್ ಸಹಾಯದೊಂದಿಗೆ 19.3-ಬಿಎಚ್‌ಪಿ ಮತ್ತು 15-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಭಾರತದಲ್ಲಿ ಬಿಡುಗಡೆಯಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಯಮಹಾ ಎಂಟಿ-15

ಹೀಗಾಗಿ ಎಂಟಿ-15 ಬೈಕ್‌ಗಳು ಕಡಿಮೆ ಸಾಮರ್ಥ್ಯದ ಎಂಜಿನ್ ಸೌಲಭ್ಯವನ್ನು ಹೊಂದಿದ್ದರೂ ಸಹ ಪರ್ಫಾಮೆನ್ಸ್ ವಿಚಾರದಲ್ಲಿ 200ಸಿಸಿ ಬೈಕ್‌ಗಳನ್ನು ಹಿಂದಿಕ್ಕುವ ಗುಣಹೊಂದಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ ವೆರಿಬಲ್ ವೆಲ್ವ್ ಆಕ್ಷನ್(ವಿವಿಎ) ಕಿಟ್ ಜೋಡಣೆ ಮಾಡಿರುವುದೇ ಇದಕ್ಕೆ ಪ್ರಮುಖ ಕಾರಣ.

ಭಾರತದಲ್ಲಿ ಬಿಡುಗಡೆಯಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಯಮಹಾ ಎಂಟಿ-15

ಇನ್ನು ಎಂಟಿ-15 ಬೈಕಿನ ಮುಂಭಾಗದಲ್ಲಿ ಅಪ್ ಸೈಡ್ ಡೌನ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೋಶಾರ್ಕ್ ಸಸ್ಪೆಷನ್ ಸೌಲಭ್ಯ ಹೊಂದಿದ್ದು, ಎರಡು ಚಕ್ರಗಳಲ್ಲೂ ಡಿಸ್ಕ್ ಬ್ರೇಕ್ ಜೊತೆಗೆ ಎಬಿಎಸ್(ಆ್ಯಂಟಿ ಬ್ರೇಕಿಂಗ್ ಸಿಸ್ಟಂ) ಸಹ ಸ್ಯಾಂಡರ್ಡ್ ಆಗಿ ದೊರಲಿದೆ.

ಭಾರತದಲ್ಲಿ ಬಿಡುಗಡೆಯಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಯಮಹಾ ಎಂಟಿ-15

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಆರ್15 ಬೈಕಿಗೂ ಮತ್ತು ಎಂಟಿ-9 ಬೈಕಿಗೂ ಒಂದೇ ಮಾದರಿಯ ಚಾರ್ಸಿ ಬಳಕೆ ಮಾಡಿರುವ ಯಮಹಾ ಸಂಸ್ಥೆಯು ಪ್ರೀಮಿಯಂ ಬೈಕ್ ಮಾರಾಟದಲ್ಲಿ ಹೊಸ ಆಯ್ಕೆ ನೀಡುತ್ತಿದ್ದು, ಇದು ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

MOST READ: ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ?

ಭಾರತದಲ್ಲಿ ಬಿಡುಗಡೆಯಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಯಮಹಾ ಎಂಟಿ-15

ಬಿಡುಗಡೆ ಯಾವಾಗ?

ಯಮಹಾ ಸಂಸ್ಥೆಯೇ ಇದೇ ಮೊದಲ ಬಾರಿಗೆ ಎಂಟಿ-15 ಬಿಡುಗಡೆಯ ಬಗ್ಗೆ ಆಟೋ ಕಾರ್ ಸುದ್ದಿಸಂಸ್ಥೆಯ ಸಂದರ್ಶನವೊಂದರಲ್ಲಿ ಮಾಹಿತಿ ಹಂಚಿಕೊಂಡಿದ್ದು, 2019ರ ಮೊದಲ ತ್ರೈಮಾಸಿಕ ವೇಳೆಗೆ ಹೊಸ ಬೈಕ್ ಖರೀದಿಗೆ ಲಭ್ಯವಿವೆ ಎಂದಿದ್ದಾರೆ.

ಭಾರತದಲ್ಲಿ ಬಿಡುಗಡೆಯಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಯಮಹಾ ಎಂಟಿ-15

ಬೈಕಿನ ಬೆಲೆಗಳು(ಅಂದಾಜು)

ಆರ್15 ಬೈಕಿಗಿಂತಲೂ ಹೆಚ್ಚು ಪ್ರೀಮಿಯಂ ಹೊಂದಿರುವ ಎಂಟಿ-15 ಬೈಕ್‌ಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.1.25 ಲಕ್ಷದಿಂದ ರೂ. 1.35 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, 200ಸಿಸಿ ಸಾಮಾರ್ಥ್ಯದ ಇತರೆ ಬೈಕಿಗಳಿಂತಲೂ ಇದು ಹೆಚ್ಚಿನ ಸುರಕ್ಷತೆ ಪಡೆದುಕೊಳ್ಳಲಿದೆ.

MOST READ: ಕೇವಲ 40 ರೂಪಾಯಿ ಆಸೆಗೆ ಬರೋಬ್ಬರಿ 40 ಲಕ್ಷ ಕಳೆದುಕೊಂಡ ಹ್ಯುಂಡೈ ಕಾರು ಚಾಲಕ..!

ಭಾರತದಲ್ಲಿ ಬಿಡುಗಡೆಯಾಗಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಯಮಹಾ ಎಂಟಿ-15

ಈ ಮೂಲಕ 200ಸಿಸಿ ಸಗ್ಮೆಂಟ್ ವಿಭಾಗದಲ್ಲಿನ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಮತ್ತು ಬಜಾಜ್ ಪಲ್ಸರ್ ಎನ್ಎಸ್ 200 ಬೈಕ್‌ಗಳಿಗೆ ತ್ರೀವ ಪೈಪೋಟಿ ನೀಡಲಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಹೊಸ ಬೈಕಿನ ಮತ್ತಷ್ಟು ಮಾಹಿತಿಗಳು ಲಭ್ಯವಾಗಲಿವೆ.

Most Read Articles

Kannada
Read more on ಯಮಹಾ yamaha
English summary
Yamaha MT15 spotted testing in India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X