ಎಂಟಿ15 ಬೈಕ್ ಖರೀದಿ ಮೇಲೆ ಯಮಹಾದಿಂದ ಭರ್ಜರಿ ಆಫರ್
ಯಮಹಾ ಕಂಪನಿಯು ತನ್ನ ಯಮಹಾ ಎಂಟಿ15 ಮೋಟಾರ್‍ಸೈಕಲ್‍ನ ಮಾರಾಟವನ್ನು ಉತ್ತೇಜಿಸಲು ಹಲವಾರು ಕ್ರಮಗಳನ್ನು ಕೈಗೆತ್ತಿಕೊಂಡಿದೆ. ಯಮಹಾ ಕಂಪನಿಯ, ಈ ಸ್ಟ್ರೀಟ್ ಫೈಟರ್ ಆವೃತ್ತಿಯನ್ನು ಇತ್ತೀಚಿಗಷ್ಟೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು.

ಯಮಹಾ ಕಂಪನಿಯು ಮಾರಾಟವಾಗುವ ಪ್ರತಿಯೊಂದು ಎಂಟಿ15 ಬೈಕಿನ ಜೊತೆಯಲ್ಲಿ ಹೆಲ್ಮೆಟ್ ಅಥವಾ ಎಂಟಿ ಬ್ರಾಂಡಿನ ರೈಡಿಂಗ್ ಜಾಕೆಟ್‍ಗಳನ್ನು ನೀಡಲಿದೆ. ಯಮಹಾ ಕಂಪನಿಯ ಪ್ರಕಾರ, ಬಿಡುಗಡೆಗೊಂಡ ಎರಡು ತಿಂಗಳಲ್ಲಿ ಎಂಟಿ15 ಮಾದರಿಯ 9,000 ಬೈಕುಗಳನ್ನು ಮಾರಾಟ ಮಾಡಲಾಗಿದೆ. ಮಾರಾಟಕ್ಕೆ ಉತ್ತೇಜನ ನೀಡುವ ಸಲುವಾಗಿ ಈ ಕೊಡುಗೆಗಳನ್ನು ಘೋಷಿಸಿದೆ. ಇದರ ಜೊತೆಯಲ್ಲಿ ಈಗಾಗಲೇ ಎಂಟಿ15 ಬೈಕುಗಳನ್ನು ಖರೀದಿಸಿರುವ ಮಾಲೀಕರು ಸಹ ಈ ಕೊಡುಗೆಗಳನ್ನು ಪಡೆಯಬಹುದು.

ಈ ಕೊಡುಗೆಗಳ ಪೈಕಿ ಎರಡರಲ್ಲಿ ಒಂದನ್ನು ಪಡೆಯಬಹುದಾಗಿದೆ. ಡೀಲರ್‍ಗಳು ಈ ಬೈಕಿನ ಮಾಲೀಕರನ್ನು ಸಂಪರ್ಕಿಸಿ, ಈ ಕೊಡುಗೆಗಳ ಬಗ್ಗೆ ಮಾಹಿತಿ ನೀಡಲು ಸೂಚಿಸಲಾಗಿದೆ. ಯಮಹಾ ಕಂಪನಿಯು ದೇಶದಲ್ಲಿ ಎಂಟಿ ಬೈಕಿನ ಮಾರಾಟವನ್ನು ಉತ್ತೇಜಿಸಲು ಈ ಕೊಡುಗೆಗಳನ್ನು ನೀಡುತ್ತಿದೆ.

ಯಮಹಾದ ಈ ಕೊಡುಗೆಯು ಎಂಟಿ15ನ, 10,000 ಬೈಕುಗಳನ್ನು ಮಾರಾಟ ಮಾಡುವವರೆಗೆ ಚಾಲ್ತಿಯಲ್ಲಿರಲಿದೆ. ಯಮಹಾದ ಎಂಟಿ15 ಬೈಕಿನಲ್ಲಿ 155 ಸಿಸಿ ಸಿಂಗಲ್ ಸಿಲಿಂಡರ್‍ನ ಲಿಕ್ವಿಡ್ ಕೂಲ್ ಎಂಜಿನ್ ಇದ್ದು, 19 ಬಿಹೆಚ್‍ಪಿ ಪವರ್ ಅನ್ನು 10,000 ಆರ್‍ಪಿಎಂ ನಲ್ಲಿ ಹಾಗೂ 14.7 ಎನ್‍ಎಂ ಟಾರ್ಕ್ ಅನ್ನು 8,500 ಆರ್‍ಪಿಎಂ ನಲ್ಲಿ ಉತ್ಪಾದಿಸುತ್ತದೆ.

ಈ ಎಂಜಿನ್‍ನಲ್ಲಿ 6 ಸ್ಪೀಡಿನ ಮ್ಯಾನುಯಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಯಮಹಾ ಎಂಟಿ 15 ಬೈಕಿನಲ್ಲಿ ಸಿಂಗಲ್ ಚಾನೆಲ್ ಎಬಿಎಸ್, ಎಲ್‍ಇಡಿ ಹೆಡ್‍ಲೈಟ್ಸ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕಂಸೋಲ್ ಹಾಗೂ ಫ್ಯೂಯಲ್ ಇಂಜೆಕ್ಷನ್‍ಗಳಿವೆ. ಈ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.1.36 ಲಕ್ಷಗಳಾಗಿದೆ. ಈ ವಾಹನವು ಮ್ಯಾಟ್ ಗ್ರೇ, ಬ್ಲಾಕ್ ಮೆಟಾಲಿಕ್ ಹಾಗೂ ಮ್ಯಾಟ್ ಬ್ಲೂ ಬಣ್ಣಗಳಲ್ಲಿ ದೊರೆಯುತ್ತದೆ.
MOST READ: ನಾಲ್ಕು ಸಬ್ ಬ್ರಾಂಡ್‍ಗಳನ್ನು ಬಿಡುಗಡೆ ಮಾಡಿದ ಸ್ಕೋಡಾ

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಯಮಹಾ ನೀಡುತ್ತಿರುವ ಕೊಡುಗೆಯು ನಿಜಕ್ಕೂ ಶ್ಲಾಘನೀಯ. ಯಮಹಾ ಕಂಪನಿಯು ಗ್ರಾಹಕರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವುದಾಗಿ ಹೇಳುತ್ತಾ ಬಂದಿದೆ. ಈಗಾಗಲೇ ಮಾರಾಟವಾಗಿರುವ ಬೈಕುಗಳ ಮಾಲೀಕರಿಗೂ ಸಹ ಹೆಲ್ಮೆಟ್ ಅಥವಾ ಜಾಕೆಟ್‍ಗಳನ್ನು ನೀಡುತ್ತಿರುವುದು ಇದೇ ಮೊದಲ ಸಲ.

ಯಮಹಾ, ಹೋಂಡಾ, ಸುಜುಕಿ ಕಂಪನಿಗಳು ಸುರಕ್ಷತೆಗೆ, ಚಾಲನೆಗೆ ಆದ್ಯತೆ ನೀಡುತ್ತಾ ಬಂದಿವೆ. ಯಮಹಾ ಕಂಪನಿಯು ಇನ್ನು ಮುಂದೆ ಪ್ರಿಮೀಯಂ ಮೋಟಾರ್‍ಸೈಕಲ್‍ಗಳ ಮೇಲೆ ಹೆಚ್ಚಿನ ಗಮನವನ್ನರಿಸಲಿದೆ. ಈಗ ಈ ಪ್ರಿಮೀಯಂ ಬೈಕಿನ ಜೊತೆಯಲ್ಲಿ ಸುರಕ್ಷತೆಗೆ ಆದ್ಯತೆ ನೀಡಿ ಬದ್ದತೆಯನ್ನು ಮೆರೆದಿದೆ. ಮುಂಬರುವ ದಿನಗಳಲ್ಲಿಯೂ ಇದೇ ರೀತಿ ಮುಂದುವರೆಯುವ ನಿರೀಕ್ಷೆಯಿದೆ.


Click it and Unblock the Notifications








