ಮೂರು ಹೊಸ ಬಣ್ಣಗಳಲ್ಲಿ ಮಿಂಚಿದ ಯಮಹಾ ಆರ್15 ವಿ3.0
ಯಮಹಾ ಸಂಸ್ಥೆಯು ಭಾರತ ಸೇರಿದಂತೆ ವಿಶ್ವದ ಮಾರುಕಟ್ಟೆಗಳಲ್ಲಿ ತನ್ನ ಜನಪ್ರಿಯ ಆರ್15 ಬೈಕ್ ಆವೃತ್ತಿಯನ್ನು ಮಾರಾಟ ಮಾಡುತ್ತಿದ್ದು, ಕಳೆದ ಕೆಲ ದಿನಗಳ ಹಿಂದಷ್ಟೇ ವಿ3.0 ಆರ್15 ಮಾದರಿಯನ್ನು ಉನ್ನತಿಕರಿಸಿದ್ದ ಯಮಹಾ ಇದೀಗ ಹೊಸ ಬಣ್ಣದ ಆಯ್ಕೆಯನ್ನು ನೀಡಿದೆ.

ಪರ್ಫಾಮೆನ್ಸ್ ಪ್ರಿಯರ ಬೇಡಿಕೆಗೆ ಅನುಗುಣವಾಗಿ ಆರ್15 ವಿ3.0 ಬೈಕಿನಲ್ಲಿ ಹೊಸ ಬಣ್ಣಗಳ ಆಯ್ಕೆಯನ್ನು ಒದಗಿಸುತ್ತಿರುವ ಯಮಹಾ ಸಂಸ್ಥೆಯು ರೇಸಿಂಗ್ ಬ್ಲೂ ಬಣ್ಣದೊಂದಿಗೆ ಹೊಸದಾಗಿ ರೇಸಿಂಗ್ ಯೆಲ್ಲೊ ಮತ್ತು ರೇಸಿಂಗ್ ಬ್ಲ್ಯಾಕ್ ಬಣ್ಣಗಳನ್ನು ಪರಿಚಯಿಸಿದೆ. ಆದ್ರೆ ಹೊಸ ಬಣ್ಣಗಳ ಆಯ್ಕೆಯನ್ನು ಇಂಡೋನೇಷ್ಯಾ ಮಾರುಕಟ್ಟೆ ಮಾತ್ರ ಲಭ್ಯವಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಭಾರತದಲ್ಲೂ ಪರಿಚಯಿಸಲಿದೆ.

ಸದ್ಯ ಭಾರತದಲ್ಲಿ ಆರ್15 ವಿ3.0 ಮೊಟೊ ಜಿಪಿ ಎಡಿಷನ್ ಮಾತ್ರವೇ ರೇಸಿಂಗ್ ಬ್ಲೂ ಬಣ್ಣದ ಆಯ್ಕೆ ನೀಡಲಾಗುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಮತ್ತೆರಡು ಹೊಸ ಬಣ್ಣದ ಆಯ್ಕೆಗಳು ಭಾರತದಲ್ಲೂ ಲಭ್ಯವಿರಲಿವೆ.

ಇದರ ಹೊರತಾಗಿ ಸಾಮಾನ್ಯ ಮಾದರಿಯ ಆರ್15 ವಿ3.0 ಬೈಕ್‌ಗಳಲ್ಲಿ ಥಂಡರ್ ಗ್ರೇ ಮತ್ತು ಡಾರ್ಕ್‌ನೈಟ್ ಎಡಿಷನ್‌ಗಳು ಕೂಡಾ ಸಾಕಷ್ಟು ಸದ್ದು ಮಾಡುತ್ತಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರ್15 ವಿ.3.0 ಬೈಕ್ ಮಾದರಿಯು ರೂ. 1.39 ಲಕ್ಷದಿಂದ ರೂ. 1.41 ಲಕ್ಷ ಬೆಲೆ ಹೊಂದಿದೆ.

ಆದ್ರೆ ಹೊಸ ಬಣ್ಣಗಳನ್ನು ಹೊಂದಿರುವ ಆರ್15 ವಿ3.0 ಬೈಕ್‌ಗಳ ಬೆಲೆಯಲ್ಲಿ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿ ಭಾರತೀಯ ಬೆಲೆಗಳ ಪ್ರಕಾರ ರೂ.1.71 ಲಕ್ಷ ಬೆಲೆ ನಿಗದಿ ಮಾಡಲಾಗಿದ್ದು, ಈ ಹಿನ್ನೆಲೆ ಹೊಸ ಬಣ್ಣದ ಆಯ್ಕೆ ಪಡೆಯುವ ಆರ್15 ವಿ3.0 ಬೈಕ್‌ಗಳು ಭಾರತದಲ್ಲಿ ರೂ.1.45 ಲಕ್ಷವಾಗಬಹುದು ಎನ್ನಲಾಗಿದೆ.

ತಾಂತ್ರಿಕವಾಗಿ ಭಾರತದಲ್ಲಿ ಆರ್15 ವಿ3.0 ಬೈಕಿಗಿಂತ ಇಂಡೋನೇಷ್ಯಾ ಮಾರುಕಟ್ಟೆಯಲ್ಲಿರುವ ಆರ್15 ವಿ3.0 ಆವೃತ್ತಿಯು ಹೆಚ್ಚಿನ ಮಟ್ಟದ ತಂತ್ರಜ್ಞಾನ ಪ್ರೇರಣೆ ಹೊಂದಿದ್ದು, ಎಂಜಿನ್ ಮಾದರಿ ಒಂದೇ ಆಗಿದ್ದರೂ ಸಹ ಭಾರತೀಯ ಆವೃತ್ತಿಗಿಂತ ಹೆಚ್ಚಿನ ಮಟ್ಟದ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಭಾರತದಲ್ಲಿರುವ ಆರ್15 ಬೈಕ್‌ಗಳು ಕನ್ವೆಂಷನೆಲ್ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೋಶಾಕ್ ಸಸ್ಫೆಷನ್ ಹೊಂದಿದ್ದರೆ, ಇಂಡೋನೇಷ್ಯಾ ಆರ್15 ಮಾದರಿಯು ಹೆಚ್ಚುವರಿಯಾಗಿ ಅಪ್-ಸೈಡ್ ಡೌನ್ ಫ್ರಂಟ್ ಫೋಕ್ಸ್ ಜೊತೆಗೆ ಕೆಲವು ಸುಧಾರಿತ ಟೆಲಿಸ್ಕೋಪಿಕ್ ಸೌಲಭ್ಯಗಳನ್ನು ಪಡೆದಿದೆ.
MOST READ: ಡ್ಯೂಕ್ 125 ನಂತರ ಆರ್‌ಸಿ 125 ಬಿಡುಗಡೆಗೆ ಸಜ್ಜಾದ ಕೆಟಿಎಂ..!

ಇದೀಗ ಹೊಸದಾಗಿ ಪರಿಚಯಿಸಲಾಗಿರುವ ರೇಸಿಂಗ್ ಬ್ಲೂ, ರೇಸಿಂಗ್ ಯೆಲ್ಲೊ ಮತ್ತು ರೇಸಿಂಗ್ ಬ್ಲ್ಯಾಕ್ ಬಣ್ಣಗಳು ಆರ್15 ವಿ3.0 ಮಾರಾಟಕ್ಕೆ ಮತ್ತಷ್ಟು ಬಲ ತುಂಬಲಿವೆ. ಇದರಲ್ಲಿ ಮತ್ತೊಂದು ಇಂಟ್ರಸ್ಟಿಂಗ್ ವಿಚಾರ ಅಂದ್ರೆ ಬೆಂಗಳೂರಿನಲ್ಲಿ ಕೆಲವು ಆಟೋ ಮಾಡಿಫೈ ಸಂಸ್ಥೆಗಳು ಯಮಹಾ ಸಂಸ್ಥೆಯು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪರಿಚಯಿಸಲಾಗಿರುವ ಬಣ್ಣಗಳನ್ನು ಈಗಾಗಲೇ ಮಾರಾಟ ಮಾಡುತ್ತಿವೆ.

ಗ್ರಾಹಕರ ಬೇಡಿಕೆಯೆಂತೆ ಗ್ರಾಫಿಕ್ಸ್ ಡಿಸೈನ್ ಮೂಲಕ ರೇಸಿಂಗ್ ಯೆಲ್ಲೊ ಮತ್ತು ರೇಸಿಂಗ್ ಬ್ಲ್ಯಾಕ್ ಬಣ್ಣಗಳನ್ನು ನೀಡುತ್ತಿರುವ ಕೆಲವು ಮಾಡಿಫೈ ಸಂಸ್ಥೆಗಳು ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಯಮಹಾ ಸಂಸ್ಥೆಯೇ ಹೊಸ ಬಣ್ಣಗಳಿಗೆ ಚಾಲನೆ ನೀಡಲಿದೆ.
MOST READ: ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಮಾಲೀಕ ಮಾಡಿದ್ದೇನು ಗೊತ್ತಾ!

ಇನ್ನು ಆರ್15 ವಿ3.0 ಬೈಕ್‌ಗಳು 155ಸಿಸಿ, ಎಸ್‍ಒಹೆಚ್‍ಸಿ, ಲಿಕ್ವಿಡ್ ಕೂಲ್ಡ್, ಫ್ಯುಯಲ್ ಇಂಜೆಕ್ಟೆಡ್ ಎಂಜಿನ್ ಹೊಂದಿದ್ದು, 6 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ 19.3 ಬಿಹೆಚ್‍ಪಿ ಮತ್ತು 15ಎನ್ಎಂ ಟಾರ್ಕ್ ಉತ್ಪಾದನೆ ಮಾಡುವುದಲ್ಲದೇ ಡ್ಯುಯಲ್ ಚಾನೆಲ್ ಎಬಿಎಸ್ ಸೇರಿದಂತೆ ಉತ್ತಮ ತಾಂತ್ರಿಕ ಸೌಲಭ್ಯ ಹೊಂದಿದೆ.


Click it and Unblock the Notifications