ಮತ್ತೆರಡು ಸ್ಕೂಟರ್‍‍ಗಳನ್ನು ಅನಾವರಣಗೊಳಿಸಿದ ಯಮಹಾ

ಯಮಹಾ ಮೋಟಾರ್ ಇಂಡಿಯಾ ತನ್ನ ಹೊಸ ರೇ ಝಡ್‍ಆರ್ 125 ಹಾಗೂ ರೇ ಝಡ್‍ಆರ್ 125 ಸ್ಟ್ರೀಟ್ ರ್‍ಯಾಲಿ ಸ್ಕೂಟರ್‍‍ಗಳನ್ನು ಅನಾವರಣಗೊಳಿಸಿದೆ. ಹೊಸ 125 ಸಿಸಿ ಸ್ಕೂಟರ್‍‍ಗಳು ಮಾರುಕಟ್ಟೆಯಲ್ಲಿರುವ ರೇ ಝಡ್‍ಆರ್ ಸ್ಕೂಟರ್‍‍ಗಳ ಬದಲಿಗೆ ಬಿಡುಗಡೆಯಾಗಲಿವೆ.

ಮತ್ತೆರಡು ಸ್ಕೂಟರ್‍‍ಗಳನ್ನು ಅನಾವರಣಗೊಳಿಸಿದ ಯಮಹಾ

ಮಾರುಕಟ್ಟೆಯಲ್ಲಿರುವ ಯಮಹಾ ರೇ ಝಡ್‍ಆರ್ ಸ್ಕೂಟರ್‍‍ನಲ್ಲಿ 113 ಸಿಸಿಯ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 7.2 ಬಿ‍‍ಹೆಚ್‍‍ಪಿ ಪವರ್ ಹಾಗೂ 8.1 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಹೊಸ ಸ್ಕೂಟರ್‍‍ಗಳಲ್ಲಿರುವ ಎಂಜಿನ್‍‍ಗಳು 8.2 ಬಿ‍ಹೆಚ್‍‍ಪಿ ಪವರ್ ಹಾಗೂ 9.7 ಎನ್‍ಎಂ ಟಾರ್ಕ್ ಉತ್ಪಾದಿಸುತ್ತವೆ.

ಮತ್ತೆರಡು ಸ್ಕೂಟರ್‍‍ಗಳನ್ನು ಅನಾವರಣಗೊಳಿಸಿದ ಯಮಹಾ

ಯಮಹಾ ರೇ ಝಡ್‍ಆರ್ 125 ಹಾಗೂ ರೇ ಝಡ್‍ಆರ್ 125 ಸ್ಟ್ರೀಟ್ ರ್‍ಯಾಲಿ ಸ್ಕೂಟರ್‍‍ಗಳಲ್ಲಿರುವ ಹೊಸ 125 ಸಿಸಿ ಎಂಜಿನ್‍‍ಗಳು ಫ್ಯೂಯಲ್ ಇಂಜೆಕ್ಟೆಡ್ ಆಗಿದ್ದು, ಬಿ‍ಎಸ್ 6 ಮಾಲಿನ್ಯ ನಿಯಮಗಳಿಗೆ ತಕ್ಕಂತೆ ಅಭಿವೃದ್ಧಿಪಡಿಸಲಾಗಿದೆ.

ಮತ್ತೆರಡು ಸ್ಕೂಟರ್‍‍ಗಳನ್ನು ಅನಾವರಣಗೊಳಿಸಿದ ಯಮಹಾ

ಯಮಹಾ ರೇ ಝಡ್‍ಆರ್ 125 ಹಾಗೂ ರೇ ಝಡ್‍ಆರ್ 125 ಸ್ಟ್ರೀಟ್ ರ್‍ಯಾಲಿ ಸ್ಕೂಟರ್‍‍ಗಳಲ್ಲಿರುವ ಎಂಜಿನ್‍‍ಗಳು 58 ಕಿ.ಮೀ ವೇಗದಲ್ಲಿ ಹೆಚ್ಚು ಫ್ಯೂಯಲ್ ಎಫಿಶಿಯನ್ಸಿಯನ್ನು ಹೊಂದಿರಲಿವೆ ಎಂದು ಯಮಹಾ ಕಂಪನಿಯು ಹೇಳಿದೆ.

ಮತ್ತೆರಡು ಸ್ಕೂಟರ್‍‍ಗಳನ್ನು ಅನಾವರಣಗೊಳಿಸಿದ ಯಮಹಾ

ಈ ಎಂಜಿನ್‍‍ಗಳನ್ನು ವರ್ಲ್ಡ್ ಮೋಟಾರ್‍‍ಸೈಕಲ್ ಟೆಸ್ಟ್ ಸೈಕಲ್ ಸ್ಟಾಂಡರ್ಡ್‍‍ಗಳಿಗೆ ಅನುಸಾರವಾಗಿ ಪರೀಕ್ಷಿಸಲಾಗಿದೆ. ಇವುಗಳಲ್ಲಿ ಸ್ಟಾರ್ಟ್ ಅಪ್, ಅಕ್ಸೆಲೆರೇಷನ್ ಹಾಗೂ ಡಿಕ್ಸೆಲೆರೇಷನ್‍‍ಗಳು ಸೇರಿವೆ. ಹೊಸ ಯಮಹಾ ರೇ ಝಡ್‍ಆರ್ 125 ಸ್ಕೂಟರಿನಲ್ಲಿ ಎಂಜಿನ್ ಸ್ಟಾರ್ಟ್ ಸಿಸ್ಟಂ ಹಾಗೂ ಸ್ಟಾಪ್/ಸ್ಟಾರ್ಟ್ ಸಿಸ್ಟಂಗಳಿವೆ.

ಮತ್ತೆರಡು ಸ್ಕೂಟರ್‍‍ಗಳನ್ನು ಅನಾವರಣಗೊಳಿಸಿದ ಯಮಹಾ

ಸ್ಟ್ರೀಟ್ ರ್‍ಯಾಲಿ ಸ್ಕೂಟರ್‍‍ನಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹಾಗೂ ಅಗಲವಾಗಿರುವ 110 ಎಂಎಂ ಸೆಕ್ಷನ್‍‍ನ ರೇರ್ ಟಯರ್‍‍ಗಳಿವೆ. ಹೊಸ ಯಮಹಾ ರೇ ಝಡ್‍ಆರ್ 125 ಸ್ಕೂಟರ್ ಮಸ್ಕುಲರ್ ವಿನ್ಯಾಸವನ್ನು ಹೊಂದಿದೆ.

ಮತ್ತೆರಡು ಸ್ಕೂಟರ್‍‍ಗಳನ್ನು ಅನಾವರಣಗೊಳಿಸಿದ ಯಮಹಾ

ರ್‍ಯಾಲಿ ಸ್ಟ್ರೀಟ್ ಸ್ಕೂಟರ್ ಫ್ರಂಟ್ ಹಾಗೂ ರೇರ್ ಕ್ರಾಶ್ ಗಾರ್ಡ್ ಸೇರಿದಂತೆ ಹಲವಾರು ಆಕ್ಸೆಸರೀಸ್‍‍ಗಳನ್ನು ಹೊಂದಿದೆ. ಈ ಹೊಸ ಸ್ಕೂಟರ್‍‍ಗಳ ಬೆಲೆಯನ್ನು ಯಮಹಾ ಕಂಪನಿಯು ಬಹಿರಂಗಪಡಿಸದಿದ್ದರೂ, ಈ ಸ್ಕೂಟರ್‍‍ಗಳ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.85,000ದಿಂದ ರೂ.1.15 ಲಕ್ಷಗಳವರೆಗೆ ಇರುವ ಸಾಧ್ಯತೆಗಳಿವೆ.

MOST READ: ವಾಹನ ಡೀಲರ್‍‍ಗಳ ಟ್ರೇಡ್ ಸರ್ಟಿಫಿಕೇಟ್ ಅಮಾನತುಗೊಳಿಸಿದ ಸಾರಿಗೆ ಇಲಾಖೆ

ಮತ್ತೆರಡು ಸ್ಕೂಟರ್‍‍ಗಳನ್ನು ಅನಾವರಣಗೊಳಿಸಿದ ಯಮಹಾ

ಈ ಸ್ಕೂಟರ್‍‍ಗಳನ್ನು ಅನಾವರಣಗೊಳಿಸುವುದರ ಜೊತೆಗೆ ಯಮಹಾ ಕಂಪನಿಯು 2020ರ ಹೊಸ ಫಾಸಿನೊ 125 ಎಫ್‍ಐ ಸ್ಕೂಟರ್ ಅನ್ನು ಸಹ ಬಿಡುಗಡೆಗೊಳಿಸಿದೆ. ಫಾಸಿನೊ ಸ್ಕೂಟರ್ ಮಾರುಕಟ್ಟೆಯಲ್ಲಿರುವ ಹಳೆಯ ಸ್ಕೂಟರಿನ ಬದಲಿಗೆ ಬಿಡುಗಡೆಯಾಗಿದೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಮತ್ತೆರಡು ಸ್ಕೂಟರ್‍‍ಗಳನ್ನು ಅನಾವರಣಗೊಳಿಸಿದ ಯಮಹಾ

ಹೊಸ ಫಾಸಿನೊ ಸ್ಕೂಟರ್ ಅನ್ನು ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಈ ಸ್ಕೂಟರಿನಲ್ಲಿ 125 ಸಿಸಿಯ ಬ್ಲೂ ಕೋರ್ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಇದರ ಜೊತೆಗೆ ಈ ಸ್ಕೂಟರ್ 12 ಇಂಚಿನ ಅಲಾಯ್ ವ್ಹೀಲ್‍, ಮಲ್ಟಿ ಫಂಕ್ಷನ್ ಕೀ, ಸೈಡ್ ಸ್ಟಾಂಡ್ ಕಟ್ ಆಫ್‍‍ಗಳನ್ನು ಹೊಂದಿದೆ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಮತ್ತೆರಡು ಸ್ಕೂಟರ್‍‍ಗಳನ್ನು ಅನಾವರಣಗೊಳಿಸಿದ ಯಮಹಾ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹೊಸ ರೇ ಝಡ್‍‍ಆರ್ 125 ಹಾಗೂ ರೇ ಝಡ್‍ಆರ್ ರ್‍ಯಾಲಿ ಸ್ಟ್ರೀಟ್ ಸ್ಕೂಟರ್‍‍ಗಳು ಮಾರುಕಟ್ಟೆಯಲ್ಲಿರುವ ಸ್ಕೂಟರ್‍‍ಗಳು ಹೊಂದಿರುವ ವಿನ್ಯಾಸವನ್ನೇ ಹೊಂದಿವೆ. ಆದರೆ ಈ ಸ್ಕೂಟರ್‍‍ಗಳಲ್ಲಿ ವಿಭಿನ್ನವಾದ ಎಂಜಿನ್‍‍ಗಳನ್ನು ಅಳವಡಿಸಲಾಗಿದೆ.

Image Courtesy: aiymrc/Instagram

Most Read Articles

Kannada
Read more on ಯಮಹಾ yamaha
English summary
Yamaha Ray ZR 125 And ZR 125 Street Rally Unveiled: Features 125cc BS6 Compliant Engine - Read in Kannada
Story first published: Friday, December 20, 2019, 11:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X